ನಿಮ್ಮ ಫೋನಿಗೆ ಟೆಂಪರ್ ಗ್ಲಾಸ್ ಹಾಕಿಸಬೇಕಾ?..ಇಲ್ಲಿದೆ ಫುಲ್ ಡೀಟೇಲ್ಸ್!
ನಾವೆಷ್ಟೇ ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೆಲವೊಮ್ಮೆ ನಮ್ಮ ಸ್ಮಾರ್ಟ್‌ಫೋನ್ ಅಕಸ್ಮಾತ್ತಾಗಿ ಕೈಜಾರಿ ಬಿದ್ದು ಒಡೆದುಹೋಗುತ್ತದೆ. ಅದರಲ್ಲೂ ಬಿದ್ದ ತಕ್ಷಣ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಬಹುಬೇಗ ಒಡೆದು ಹಾಳಾಗಿಬಿಡುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್‌ಗಳಿಗೆ ಟೆಂಪರ್x ಗ್ಲಾಸ್ ಹಾಕಿಸಿಕೊಳ್ಳಬೇಕು. ಆದರೆ, ಜನರು ಟೆಂಪರ್ ಗ್ಲಾಸ್ ಅನ್ನು ನಿರ್ಲಕ್ಷ್ಯ ಮಾಡುವುದು ಸೇರಿದಂತೆ, ಟೆಂಪರ್x ಗ್ಲಾಸ್ ಹಾಕಿಸಿಕೊಳ್ಳುವಲ್ಲಿಯೂ ಹಲವು ತಪ್ಪುಗಳನ್ನು ಮಾಡುತ್ತಿದ್ದಾರೆ.
ಹೌದು, ಮೊಬೈಲ್‌ನ ಪರದೆಯ ರಕ್ಷಣೆಗೆ ಟೆಂಪರ್x ಗ್ಲಾಸ್ ಹಾಕಿಕೊಳ್ಳುವುದು ಬಹಳ ಉಪಕಾರಿ. ಸ್ಕ್ರೀನ್ ಗಾರ್ಡ್‌ಗಳೇ ಬೇರೆ. ಟೆಂಪರ್x ಗ್ಲಾಸ್‌ಗಳೇ ಬೇರೆ. ಸ್ಕ್ರೀನ್ ಗಾರ್ಡ್ ನಿಮ್ಮ ಮೊಬೈಲ್‌ನ ಪರದೆಯ ಮೇಲೆ ಸಣ್ಣಪುಟ್ಟ ಗೀರುಗಳಾಗದಂತೆ ಅಲ್ಪಪ್ರಮಾಣದ ರಕ್ಷಣೆ ನೀಡುತ್ತದೆ ಅಷ್ಟೇ. ಟೆಂಪರ್x ಗ್ಲಾಸ್ ಹಾಕಿದರೆ ಗೀರುಗಳಾಗುವುದೇ ಇಲ್ಲ. ಇದು ಇಲ್ಲಿ ಅತಿ ಮುಖ್ಯ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನಿಗೆ ಉತ್ತಮವಾದ ಟೆಂಪರ್ ಗ್ಲಾಸ್ ಬೇಕೇಬೇಕು.

ಉತ್ತಮ ಗುಣಮಟ್ಟದ ಟೆಂಪರ್x ಗ್ಲಾಸ್ ಅನ್ನು ಡಿಸ್‌ಪ್ಲೇ ಮೇಲೆ ಹಾಕಿಸಿಕೊಂಡರೆ ನಿಮ್ಮ ಜೇಬಿನಲ್ಲಿನ ಕೀಗಳು, ಪೆನ್ನುಗಳು, ನಾಣ್ಯಗಳು ಮೊಬೈಲ್‌ಗೆ ತಗುಲಿ ಉಜ್ಜಿದರೂ ಆ ಟೆಂಪರ್x ಗಾಜಿನ ಮೇಲೆ ಸಹ ಒಂದು ಗೀರು ಸಹ ಆಗುವುದಿಲ್ಲ. ಇದರಿಂದ ನಿಮ್ಮ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಹೊದರಂತೆಯೇ ಇರುತ್ತದೆ. ನಿಮ್ಮ ಜೇಬಿನಿಂದ ಮೊಬೈಲ್ ದ್ದು ಟೆಂಪರ್x ಗಾಜು ಬಿರುಕು ಬಿಟ್ಟು ಒಡೆದುಹೋದರೂ, ಸ್ಮಾರ್ಟ್‌ಫೋನಿನ ಒರಿಜಿನಲ್ ಗಾಜು ಸುರಕ್ಷಿತವಾಗಿರುತ್ತದೆ.
ಹಾಗಾದರೆ ಉತ್ತಮ ಟೆಂಪರ್x ಗ್ಲಾಸ್ ಯಾವುದು? ಎಂದು ನಿಮ್ಮ ಪ್ರಶ್ನೆಯಾದರೆ, ನಿಲ್‌ಕಿನ್ ಎಂಬ ಕಂಪೆನಿಯ ಟೆಂಪರ್x ಗಾಜುಗಳು ಬಹಳ ಉತ್ತಮ ಗುಣಮಟ್ಟದ್ದಾಗಿರುತ್ತವೆ. ಆನ್‌ಲೈನಿನಲ್ಲಿ ಜನಪ್ರಿಯ ಇ ಕಾಮರ್ಸ್ ಜಾಲತಾಣ ಅಮೆಜಾನ್.ಇನ್ ಅಥವಾ ಫ್ಲಿಪ್‌ಕಾರ್ಟ್ ತೆರೆದು ನಿಮ್ಮ ಮೊಬೈಲ್ ನ ಹೆಸರು ಹಾಕಿ ನಿಲ್‌ಕಿನ್ ಟೆಂಪರ್x ಗ್ಲಾಸ್ ಎಂದು ಹುಡುಕಿದರೆ ಸಿಗುತ್ತದೆ. ಇವುಗಳ ದರ 600 ರೂ.ಗಳಿಂದ 1000 ರೂ.ಗಳವರೆಗೂ ಇರುತ್ತದೆ.

ನೀವು ಮಾಡುವ ಮೊದಲ ತಪ್ಪು ಅಂದರೆ, ನೀವು ಟೆಂಪರ್x ಗ್ಲಾಸುಗಳನ್ನು ಆನ್‌ಲೈನಿನಲ್ಲಿ ತರಿಸಿಕೊಂಡು ಅದನ್ನು ನೀವೇ ಸ್ಮಾರ್ಟ್‌ಫೋನಿಗೆ ಹಾಕಿಕೊಳ್ಳಲು ಮುಂದಾಗುವುದು. ಆದರೆ, ಈ ತಪ್ಪನ್ನು ಮಾಡಬೇಡಿ. ಉತ್ತಮ ಮೊಬೈಲ್ ಶಾಪ್‌ಗಳಿಗೆ ತೆರಳಿ ನುರಿತವರಿಂದ ಟೆಂಪರ್x ಹಾಕಿಸಿ. ಅವರು ನೀಟಾಗಿ ಟೆಂಪರ್x ಗ್ಲಾಸುಗಳನ್ನು ಹಾಕಿಕೊಡುತ್ತಾರೆ. ಇನ್ನೊಂದು ವಿಷಯ ಎಂದರೆ, ಒಟ್ಟರ್ ಬಾಕ್ಸ್, ಟೆಕ್ ಆರ್ಮರ್ ಮತ್ತು ಟ್ರೂ ಡಿಸೈರ್ ಸೇರಿದಂತೆ ಹಲವು ಉತ್ತಮ ಟೆಂಪರ್x ಗ್ಲಾಸ್‌ಗಳು ಸಹ ಲಭ್ಯವಿವೆ.


Click it and Unblock the Notifications








