Home
ಸುದ್ದಿಜಾಲ

ಒಮ್ಮೆ ನಿಮ್ಮ 'ವಾಟ್ಸ್ಆಪ್' ಅಪ್‌ಡೇಟ್ ಮಾಡಿ ನೋಡಿ!!

2018ನೇ ವರ್ಷದ ಆರಂಭದಿಂದಲೂ ಹತ್ತಾರು ಹೊಸ ಹೊಸ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬಂದಿರುವ ವಾಟ್ಸ್ಆಪ್ ಈಗ ಮತ್ತಷ್ಟು ಅಪ್‌ಡೇಟ್‌ಗಳನ್ನು ತಂದಿದೆ. ಬಹಳ ದಿನಗಳ ಹಿಂದಿನಿಂದಲೇ 'ಸ್ವೈಪ್ ಟು ರಿಪ್ಲೈ' ವೈಶಿಷ್ಟ್ಯತೆಯನ್ನು ಐಓಎಸ್ ಬಳಕೆದಾರರು ಬಳಸುತ್ತಿದ್ದು, ಈಗ ಆಂಡ್ರಾಯ್ಡ್ ಬಳಕೆದಾರರೂ ಕೂಡ ವಾಟ್ಸ್ಆಪ್‌ನಲ್ಲಿ ಈ ಆಯ್ಕೆಯನ್ನು ಪಡೆದಿದ್ದಾರೆ.

ವಾಟ್ಸ್ಆಪ್​ನಲ್ಲಿ 'ಸ್ವೈಪ್ ಟು ರಿಪ್ಲೈ' ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್​ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. ಈ ಹೊಸ ಫೀಚರ್​​ನಿಂದ ನೀವು ಮೆಸೇಜ್​ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ಮಾಡಬಹುದಾಗಿದ್ದು, ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್​ಗೆ ಹೋಗಿ ಮೆಸೇಜ್​ ಟೈಪ್​ ಮಾಡುವ ಕಷ್ಟ ಇನ್ನು ತಪ್ಪಲಿದೆ.

ಒಮ್ಮೆ ನಿಮ್ಮ 'ವಾಟ್ಸ್ಆಪ್' ಅಪ್‌ಡೇಟ್ ಮಾಡಿ ನೋಡಿ!!

ಆದರೆ, ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿ ಈ ವೈಶಿಷ್ಟ್ಯತೆಯನ್ನು ಸದ್ಯಕ್ಕೆ ಎಲ್ಲಾ ಆಂಡ್ರಾಯ್ಡ್ ಬಳಕೆದಾರರು ಬಳಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸ್ಆಪ್ ತಿಳಿಸಿದೆ. ಹಾಗಾದರೆ, ವಾಟ್ಸ್ಆಪ್ ಪರಿಚಯಿಸಿರುವ ಇನ್ನಿತರ ಫೀಚರ್ಸ್ ಯಾವುವು? ಎಲ್ಲರಿಗೂ 'ಸ್ವೈಪ್ ಟು ರಿಪ್ಲೈ' ಬಳಸಲು ಅವಕಾಶ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಐಓಎಸ್ ನಲ್ಲಿರುವಂತೆ ಆಂಡ್ರಾಯ್ಡ್ ನಲ್ಲೂ ಲಭ್ಯ:

ಐಓಎಸ್ ನಲ್ಲಿರುವಂತೆ ಆಂಡ್ರಾಯ್ಡ್ ನಲ್ಲೂ ಲಭ್ಯ:

ಬಹಳ ದಿನಗಳ ಹಿಂದಿನಿಂದಲೇ ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆಯನ್ನು ಐಓಎಸ್ ಬಳಕೆದಾರರು ಬಳಸುತ್ತಿದ್ದಾರೆ. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಇದನ್ನು ಬಿಡುಗಡೆಗೊಳಿಸುವ ಮುನ್ನ ವಾಟ್ಸ್ ಆಪ್ ಈ ಫೀಚರ್ ನಲ್ಲಿ ಕೆಲವು ಬದಲಾವಣೆಗಳನ್ನು ತರಲು ಇಚ್ಛಿಸುತ್ತಿದೆ ಎಂದು ಈ ಹಿಂದಿನ ವರದಿಗಳು ತಿಳಿಸಿದ್ದವು.ಆ ದರೆ ಇದೀಗ ಬಿಡುಗಡೆಗೊಂಡಿರುವುದನ್ನು ಗಮನಿಸಿದರೆ ಹೆಚ್ಚುಕಡಿಮೆ ಐಓಎಸ್ ಬಳಕೆದಾರರು ಬಳಸುತ್ತಿರುವಂತೆಯೇ ಇದು ಕೂಡ ಕಾಣಿಸುತ್ತದೆ.

ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆ ಎಂದರೇನು?

ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆ ಎಂದರೇನು?

ವಾಟ್ಸ್ ಆಪ್ ನಲ್ಲಿ ಸಾಂಪ್ರದಾಯಿಕವಾಗಿ ರಿಪ್ಲೈ ಮಾಡುವ ಪದ್ದತಿಗಿಂತ ಈ ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆಯಲ್ಲಿ ಹೆಚ್ಚು ವೇಗವಾಗಿ ರಿಪ್ಲೈ ಮೆಸೇಜ್ ಗಳನ್ನು ಕಳುಹಿಸಬಹುದು.ನೀವು ಕೇವಲ ಮೆಸೇಜ್ ನ್ನು ಸೈಡ್ ವೇಗೆ ಸ್ವೈಪ್ ಮಾಡಿದರೆ ಖಾಲಿಯಿರುವ ರಿಪ್ಲೈ ಬಾಕ್ಸ್ ನಿಮಗೆ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವೇನು ಬರೆಯಬೇಕು ಎಂದುಕೊಳ್ಳುತ್ತೀರೋ ಅದನ್ನು ಬರೆದು ಕಳುಹಿಸಬಹುದು.

ಪಿಐಪಿ ಮೋಡ್ ಕೂಡ ಆರಂಭ

ಪಿಐಪಿ ಮೋಡ್ ಕೂಡ ಆರಂಭ

ಇಂದಿನಿಂದ ವಾಟ್ಸ್ ಆಪ್ ನಲ್ಲಿ ಪಿಐಪಿ ಮೋಡ್ ಕೂಡ ಆರಂಭವಾಗುತ್ತಿದೆ. ಈ ವೈಶಿಷ್ಟ್ಯತೆ ಕೂಡ ಕೇವಲ ಆಂಡ್ರಾಯ್ಡ್ ಬೇಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತಿದ್ದು, ಈ ಆಯ್ಕೆ ನಿಮಗೆ ಇನ್ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯುಟ್ಯೂಬ್ ವೀಡಿಯೋಗಳನ್ನು ವಾಟ್ಸ್ಆಪ್ ನ ಒಳಗೆ ಪ್ಲೇ ಮಾಡಲು ಅವಕಾಶ ನೀಡುತ್ತದೆ.ಇದರಿಂದ ವಾಟ್ಸ್ಆಪ್‌ನಲ್ಲಿ ಬಂತಂತಹ ಲಿಂಕ್ ತೆರೆಯಲು ಈಗ ಸಮಯ ವ್ಯರ್ಥವಾಗುವುದಿಲ್ಲ.

ಪಿಐಪಿ ಮೋಡ್ ಬಳಸಲು ಏನು ಮಾಡಬೇಕು?

ಪಿಐಪಿ ಮೋಡ್ ಬಳಸಲು ಏನು ಮಾಡಬೇಕು?

ನಿಮ್ಮ ವಾಟ್ಸ್ ಆಪ್ ನ್ನು ವಾಟ್ಸ್ ಆಪ್ 2.18.301 ಆಂಡ್ರಾಯ್ಡ್ ಬೇಟಾ ವರ್ಷನ್ ಗೆ ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ಪಿಐಪಿ ಮೋಡ್ ನ್ನು ಬಳಕೆ ಮಾಡಬಹುದು. ಈ ಮೋಡ್ ನಿಮಗೆ ಇನ್ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯುಟ್ಯೂಬ್ ವೀಡಿಯೋಗಳನ್ನು ವಾಟ್ಸ್ ಆಪ್ ನ ಒಳಗೆ ಪ್ಲೇ ಮಾಡಲು ಅವಕಾಶ ನೀಡುತ್ತದೆ. ಅಂದರೆ ನೀವು ಚಾಟ್ ಮಾಡುತ್ತಲೇ ವೀಡಿಯೋ ಕೂಡ ನೋಡಬಹುದು.

ಡಾರ್ಕ್ ಮೋಡ್ ವೈಶಿಷ್ಟ್ಯತೆ:

ಡಾರ್ಕ್ ಮೋಡ್ ವೈಶಿಷ್ಟ್ಯತೆ:

ವಾಟ್ಸ್ ಆಪ್ ಡಾರ್ಕ್ ಮೋಡ್ ವೈಶಿಷ್ಟ್ಯತೆಯ ಬಗ್ಗೆ ಕೂಡ ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಿದೆ. ಈ ಮೋಡ್ ಈಗಾಗಲೇ ಟ್ವೀಟರ್ ಮತ್ತು ಯುಟ್ಯೂಬ್ ಗಳಲ್ಲಿ ಲಭ್ಯವಿದೆ. ಕಡಿಮೆ ಬೆಳಕಿನ ಪ್ರದೇಶಗಳಲ್ಲಿ ಈ ಡಾರ್ಕ್ ಮೋಡ್ ವೈಶಿಷ್ಟ್ಯತೆಯನ್ನು ವಾಟ್ಸ್ ಆಪ್ ನಲ್ಲಿ ಅನೇಬಲ್ ಮಾಡಿಕೊಳ್ಳಬಹುದಾಗಿದೆ. ಆ ಮೂಲಕ ಕಡಿಮೆ ಬೆಳಕಿನ ಪ್ರದೇಶದಲ್ಲಿ ವಾಟ್ಸ್ ಆಪ್ ನಿಂದ ನಿಮ್ಮ ಕಣ್ಣುಗಳಿಗೆ ಆಗುವ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

ಎಲ್ಲರಿಗೂ ಯಾಕೆ ಲಭ್ಯವಿಲ್ಲ:

ಎಲ್ಲರಿಗೂ ಯಾಕೆ ಲಭ್ಯವಿಲ್ಲ:

ವಾಟ್ಸ್ ಆಪ್ ಬೀಟಾಇನ್ಫೋ ವರದಿಯ ಪ್ರಕಾರವೆ ಹೇಳುವುದಾದರೆ ಈ ವೈಶಿಷ್ಟ್ಯತೆಗಳಲ್ಲಿ ಇನ್ನು ಹೆಚ್ಚಿನ ಡೆವಲಪ್ ಮೆಂಟ್ ಅಂಶಗಳಿದ್ದು, ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮೊದಲು ಅವುಗಳನ್ನು ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಿದೆ. ಮತ್ತು ಸದ್ಯ ಬೇಟಾ ಬಳಕೆದಾರರಿಗೆ ಇದನ್ನು ಬಿಡುಗಡೆಗೊಳಿಸಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂಬ ಅಭಿಪ್ರಾಯವನ್ನು ವಾಟ್ಸ್ ಆಪ್ ವ್ಯಕ್ತಪಡಿಸಿದೆ.

Best Mobiles in India

English summary
The new feature will let WhatsApp users quickly reply to a message using a swiperight gesture. It essentially means you will no longer need to tap and hold the message to get the Reply button.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+