Home
ಸುದ್ದಿಜಾಲ

ಭಾರತದಲ್ಲಿ ಇಂಟರ್‌ನೆಟ್ ಬಳಸುವವರೆಷ್ಟು?..ವಾಟ್ಸ್‌ಆಪ್/ಫೇಸ್‌ಬುಕ್ ಬಳಸುವವರೆಷ್ಟು ಗೊತ್ತಾ?!

By Bhaskar N J

ಭಾರತದಲ್ಲಿ ಸುಮಾರು 45.5 ಕೋಟಿ ಜನರು ಇಂಟರ್‌ನೆಟ್ ಬಳಕೆ ಮಾಡುತ್ತಿದ್ದು, ಇದರಲ್ಲಿ ಶೇ 95ರಷ್ಟು ಜನರು ಸ್ಮಾರ್ಟ್‌ಫೋನ್‌ ಮೂಲಕವೇ ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ ಎಂದು ಅಧ್ಯಯನಗಳು ಹೇಳಿವೆ.! ಜೊತೆಗೆ 2020ಕ್ಕೆ ಭಾರತದಲ್ಲಿ 40 ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಬಳಕೆಯಲ್ಲಿ ಇರಲಿವೆ ಎಂದು ಅಂದಾಜು ಮಾಡಿವೆ.!!

ಹೌದು, ಭಾರತದಲ್ಲಿ ಕೋಟಿಯಷ್ಟಿದ್ದ ಇಂಟರ್ನೆಟ್ ಬಳಕೆದಾರರು 10 ಕೋಟಿಯಷ್ಟಾಗಲು ದಶಕದ ಕಾಲ ತೆಗೆದುಕೊಂಡಿದ್ದು, 10 ಕೋಟಿ ಇದ್ದವರು 20 ಕೋಟಿಗೇರಲು 3 ವರ್ಷ ಬೇಕಾಯಿತು. ನಂತರ ಒಂದು ವರ್ಷದಲ್ಲಿಯೇ ಭಾರಿ ಏರಿಕೆ ಕಂಡು ಇದೀಗ 45.5 ಕೋಟಿ ಜನರು ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.!!

ಭಾರತದಲ್ಲಿ ಇಂಟರ್‌ನೆಟ್ ಬಳಸುವವರೆಷ್ಟು?..ವಾಟ್ಸ್‌ಆಪ್/ಫೇಸ್‌ಬುಕ್ ಬಳಸುವವರೆಷ್ಟು?

ಇನ್ನು ಈ ಅಧ್ಯಯನಗಳ ಪ್ರಕಾರ, ಈ ವರ್ಷದಲ್ಲಿ ಮೊಬೈಲ್ ಮೂಲಕವೇ ಇಂಟರ್ನೆಟ್ ಬಳಸುವ ಗ್ರಾಹಕರ ಸಂಖ್ಯೆ 46 ಕೋಟಿಗೇರುವ ನಿರೀಕ್ಷೆಯಿದೆ.! ಹಾಗಾದರೆ, ಮೊಬೈಲ್ ಬಗೆಗಿನ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಬಗೆಗಿನ ಕುತೋಹಲ ಅಂಶಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

50 ಕೋಟಿ ಇಂಟರ್‌ನಟ್ ಬಳಕೆದಾರರು!!

50 ಕೋಟಿ ಇಂಟರ್‌ನಟ್ ಬಳಕೆದಾರರು!!

ಈ ವರ್ಷದ ಅಂತ್ಯದ ವೇಳೆ ಭಾರತದಲ್ಲಿ ಜಾಲತಾಣ ಬಳಕೆದಾರರ ಸಂಖ್ಯೆ 50 ಕೋಟಿ ದಾಟಲಿದೆ ಎಂದು ವರದಿಗಳು ಹೇಳಿವೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಇದು ಶೇ.20 ರಷ್ಟು ಪ್ರಗತಿ ಕಾಣಲಿದೆ ಎಂದು ಅಭಿಪ್ರಾಯಪಡಲಾಗಿದೆ.!!

ವಾಟ್ಸ್ಆಪ್ ಬಳಕೆ!?

ವಾಟ್ಸ್ಆಪ್ ಬಳಕೆ!?

ವಾಟ್ಸ್ಆಪ್ ಬಳಕೆಯಲ್ಲಿ 2016ರಿಂದ ಶೇ 100ರಷ್ಟು ಹೆಚ್ಚಳವಾಗಿದ್ದು, 20 ಕೋಟಿ ಭಾರತೀಯರು ವಾಟ್ಸ್ಆಪ್ ಬಳಕೆ ಮಾಡುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದ ಶೇ.60ಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸ್‌ಆಪ್ ಬಳಕೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.!!

ಫೇಸ್‍ಬುಕ್ ಬಳಕೆ ಎಷ್ಟು?

ಫೇಸ್‍ಬುಕ್ ಬಳಕೆ ಎಷ್ಟು?

ವಾಟ್ಸ್‌ಆಪ್ ಬೆಳೆದಷ್ಟು ವೇಗವಾಗಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಏರುತ್ತಿಲ್ಲ ಎಂದು ವರದಿಗಳು ಹೇಳಿವೆ. 2016ರಿಂದ ಫೇಸ್‌ಬುಕ್ ಶೇ 70ರಷ್ಟು ಏರಿಕೆ ಕಂಡಿದ್ದು, ಪ್ರಸ್ತುತ 24.1 ಕೋಟಿ ಭಾರತೀಯರು ಫೇಸ್‌ಬುಕ್ ಬಳಸುತ್ತಿದ್ದಾರೆ ಎಂದು ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ.!!

ಇ-ಕಾಮರ್ಸ್ ಆಪ್‌ಗಳು.!!

ಇ-ಕಾಮರ್ಸ್ ಆಪ್‌ಗಳು.!!

ಕಳೆದೆರಡು ವರ್ಷ ಭಾರೀ ಹವಾ ಎಬ್ಬಸಿದ್ದ ಆನ್‌ಲೈನ್ ಮಾರಾಟ ಜಾಲತಾಣಗಳು ಇದೀಗ ಮಂಕಾಗುತ್ತಿವೆ ಎನ್ನುತ್ತಿವೆ ವರದಿಗಳು.! ಖರೀದಿಗಾಗಿ ಆಪ್‌ಗಳನ್ನು ಬಳಕೆ ಮಾಡುವವರ ಸಂಖ್ಯೆ 2017ಕ್ಕೆ 10 ಕೋಟಿ ಮಾತ್ರ ಇದೆ. ಅಂದರೆ ಫ್ಲಿಪ್‌ಕಾರ್ಟ್, ಅಮೆಜಾನ್ ಬಳಕೆದಾರರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದರ್ಥ.!!

How to save WhatsApp Status other than taking screenshots!! Kannada
ಚೀನಾ ಹಿಂದಿಕ್ಕಲಿದೆಯಾ ಭಾರತ?

ಚೀನಾ ಹಿಂದಿಕ್ಕಲಿದೆಯಾ ಭಾರತ?

ಚೀನಾದಲ್ಲಿ ಪ್ರಸ್ತುತ 60 ಕೋಟಿಗೂ ಹೆಚ್ಚು ಜನರು ಇಂಟರ್‌ನೆಟ್ ಬಳಕೆ ಮಾಡುತ್ತಿರುವುದರಿಂದ ಇಂಟರ್‌ನೆಟ್ ಬಳಕೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.! ಭಾರತದಲ್ಲಿ 2000 ರೂಪಾಯಿಗಳ 4G ಮೊಬೈಲ್‌ ಕಾಲಿಡುತ್ತಿರುವುದರಿಂದ ಚೀನಾವನ್ನು ಭಾರತ ಹಿಂದಿಕ್ಕುವ ಬೆಳವಣಿಗೆ ದರವನ್ನು ಹೊಂದಿದೆ ಎಂದು ಹೇಳಲಾಗಿದೆ.!!

Best Mobiles in India

English summary
How many people have access to the Internet in India? to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+