ಇನ್ಮುಂದೆ ಉದ್ಯೋಗ ಪಡೆಯಲು ಕೇವಲ ಎಂಜಿನಿಯರಿಂಗ್ ಮಾಡಿದರೆ ಸಾಕಾಗಲ್ಲ!

|

ವಿಶ್ವದಾದ್ಯಂತ ಇಂದು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣ ವೈವಿಧ್ಯಮಯವಾಗಿ ಶರವೇಗದಲ್ಲಿ ಚಲಿಸುತ್ತಿದೆ. ಸಂಶೋಧಕರು ಕೃತಕ ಬುದ್ಧಿಮತ್ತೆಯನ್ನು "ನಾಲ್ಕನೆಯ ಕೈಗಾರಿಕಾ ಕ್ರಾಂತಿ' ಎಂದು ಈಗಾಗಲೇ ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 78,000 ಮಂದಿ ಸಂಶೋಧಕರು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋದನೆ ನಡೆಸುತ್ತಿದ್ದರೆ, ಚೀನದಲ್ಲಿ 40,000 ಮಂದಿ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಜೊತೆಗೆ 2030ರಲ್ಲಿ ಚೀನವು ಕೃತಕ ಬುದ್ಧಿಮತ್ತೆಯಲ್ಲಿ ಜಗತ್ತಿನ "ಸೂಪರ್‌ ಪವರ್‌' ಪಟ್ಟವೇರಲು ಈಗಾಗಲೇ ತಾಲೀಮು ನಡೆಸಿದೆ.

ಅಮೆರಿಕಾದ, ಚೀನಾದ ಜೊತೆ ಐರೋಪ್ಯ ಒಕ್ಕೂಟ, ಜಪಾನ್‌, ಫ್ರಾನ್ಸ್‌, ಇಂಗ್ಲೆಂಡ್‌ ಮುಂತಾದ ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಪಾರ ಬಂಡ‌ವಾಳವನ್ನು ವಿನಿಯೋಗಿಸುತ್ತಿವೆ. ಇದು ವಿಶ್ವ ಕೃತಕ ಬುದ್ಧಿಮತ್ತೆಯ ಬೆಳವಣಿಗೆ ವೇಗವಾದರೆ, ನಮ್ಮ ದೇಶದ ನೀತಿ ಆಯೋಗ "ಭಾರತದ ಸರ್ವರಿಗೂ ಕೃತಕ ಬುದ್ಧಿಮತ್ತೆ' ಅನ್ನುವ ಧ್ಯೇಯ ವಾಕ್ಯವನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಹಾಗೆಯೇ ಒಂದು ಮಾತು ನಾವು ಇಲ್ಲಿ ಒಪ್ಪಿಕೊಳ್ಳಲೇ ಬೇಕು. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಶ್ವವ್ಯಾಪಿ ಕ್ರಾಂತಿ ನಡೆಯುತ್ತಲಿದೆ.

ಇನ್ಮುಂದೆ ಉದ್ಯೋಗ ಪಡೆಯಲು ಕೇವಲ ಎಂಜಿನಿಯರಿಂಗ್ ಮಾಡಿದರೆ ಸಾಕಾಗಲ್ಲ!

ಈ ಸಮಯದಲ್ಲಿ ನಾವು ಉದ್ಯೋಗ ಪಡೆಯಬೇಕು ಎಂದರೆ ಕೇವಲ ಎಂಜಿನಿಯರಿಗ್ ಮಾಡಿದರೆ ಸಾಕಾಗುವುದಿಲ್ಲ. ಬದಲಾಗಿ ಕೃತಕ ಬುದ್ಧಿಮತ್ತೆ ಎಂಬ ಅಂಗಳಕ್ಕೆ ಕಾಲಿಡಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಐಟಿ)ದಲ್ಲಿ ಕಂಪ್ಯೂಟರ್ ಅನ್ನು ನಿರ್ವಹಿಸುವ ಕಲೆ ಮಾತ್ರವಲ್ಲದೆ, ಅದನ್ನು ಆಟವಾಡಿಸುವ ಕೆಲಯನ್ನು ಕಲಿಯಬೇಕು. ಅಂತಹ ಒಂದು ಕಲೆಯೇ ಅಟೊಮೇಶನ್‌ ಮತ್ತು ರೋಬೋಟಿಕ್ಸ್. ಇಂದಿನ ಈ ಲೇಖನದಲ್ಲಿ ಈ ಕೋರ್ಸ್ ಕುರಿತ ವಿವರ ಇಲ್ಲಿದೆ.

ಆಟೊಮೇಶನ್ ಆಂಡ್‌ ರೋಬೋಟಿಕ್ಸ್ ಕ್ಷೇತ್ರ!

ಆಟೊಮೇಶನ್ ಆಂಡ್‌ ರೋಬೋಟಿಕ್ಸ್ ಕ್ಷೇತ್ರ!

ತಂತ್ರಜ್ಞಾನ ಸುಧಾರಣೆಯಾದಂತೆ ಅದಕ್ಕೆ ಪೂರಕವಾದ ಶಿಕ್ಷಣ ಕ್ಷೇತ್ರ, ಕೋರ್ಸ್‌ಗಳು ಆರಂಭಗೊಳ್ಳುತ್ತವೆ. ಇವುಗಳು ಹೊಸ ಪ್ರಯೋಗಕ್ಕೆ ವಿದ್ಯಾರ್ಥಿಗಳು ತಮ್ಮನ್ನು ತಾವು ಒಡ್ಡಿಕೊಳ್ಳಲು ಅವಕಾಶ ನೀಡುತ್ತವೆ. ಈ ಮೂಲಕ ಬದಲಾದ ಕಾಲಘಟ್ಟದಲ್ಲಿನ ಹೊಸ ಉದ್ಯೋಗಕ್ಕೆ ಬೇಕಾದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತದೆ. ಈ ರೀತಿ ದಿನೇ ದಿನೇ ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವ ಶಿಕ್ಷಣ ಕ್ಷೇತ್ರಗಳ ಪೈಕಿ ಈ ಅಟೊಮೇಶನ್ ಆಂಡ್‌ ರೋಬೋಟಿಕ್ಸ್ ಕೂಡ ಒಂದು.

ಎಂಜಿನಿಯರಿಂಗ್ ಶಿಕ್ಷಣದ ಭಾಗ

ಎಂಜಿನಿಯರಿಂಗ್ ಶಿಕ್ಷಣದ ಭಾಗ

ಈ ಅಟೊಮೇಶನ್ ಆಂಡ್‌ ರೋಬೋಟಿಕ್ಸ್ ಎಂದರೆ ಮಹಾನ್ ವಿಧ್ಯೆ ಎಂದು ತಿಳಿಯಬೇಕಿಲ್ಲ. ಬದಲಾಗಿ ಇದು ಕೂಡ ಎಂಜಿನಿಯರಿಂಗ್ ಶಿಕ್ಷಣದ ಭಾಗವಾಗಿದೆ. ಇದು ಇಲೆಕ್ಟ್ರೋ -ಮೆಕ್ಯಾನಿಕ್ಸ್‌, ರೋಬೋಟಿಕ್‌ ಸೆನ್ಸಾರ್‌ಗಳು, ಅಟೋಮೆಟಿಕ್‌ ಸಿಸ್ಟಂ ಮತ್ತು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ್ನು ಒಳಗೊಂಡಿದೆ. ಈ ಕೋರ್ಸ್‌ನಲ್ಲಿ ರೋಬೋಗಳ ವಿನ್ಯಾಸ, ನಿರ್ವಹಣೆ, ಹೊಸ ಅಪ್ಲಿಕೇಶನ್‌ಗಳನ್ನು ಡೆವಲಪ್‌ ಮಾಡುವುದು ಅಟೋಮೇಶನ್‌ ಸಿಸ್ಟಂನಲ್ಲಿ ಸಂಶೋಧನೆಯ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.

ಏನನ್ನು ಹೊಂದಿರಲಿದೆ ಈ ಕೋರ್ಸ್?

ಏನನ್ನು ಹೊಂದಿರಲಿದೆ ಈ ಕೋರ್ಸ್?

ಎಂಜಿನಿಯರಿಂಗ್ ಶಿಕ್ಷಣದ ಭಾಗವಾಗಿರುವ ಈ ಆಂಡ್‌ ರೋಬೋಟಿಕ್ಸ್ ಕೋರ್ಸ್. ಇಲೆಕ್ಟ್ರೋ -ಮೆಕ್ಯಾನಿಕ್ಸ್‌, ರೋಬೋಟಿಕ್‌ ಸೆನ್ಸಾರ್‌ಗಳು, ಅಟೋಮೆಟಿಕ್ ಸಿಸ್ಟಂ ಮತ್ತು ಆರ್ಟಿಫಿಶಿಯಲ ಇಂಟೆಲಿಜೆನ್ಸ್‌ಗಳನ್ನು ಒಳಗೊಂಡಿದೆ. ರೋಬೋಗಳ ವಿನ್ಯಾಸ, ನಿರ್ವಹಣೆ, ಹೊಸ ಅಪ್ಲಿಕೇಶನ್‌ಗಳನ್ನು ಡೆವಲಪ್ ಮಾಡುವುದು ಅಟೋಮೇಶನ್ ಸಿಸ್ಟಂನಲ್ಲಿ ಸಂಶೋಧನೆಯ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಸಹಕಾರಿ.

ಪರಿಣತಿ ಪಡೆದರೆ ಮಾತ್ರ ಉದ್ಯೋಗ

ಪರಿಣತಿ ಪಡೆದರೆ ಮಾತ್ರ ಉದ್ಯೋಗ

ಅಟೊಮೇಶನ್‌ ಮತ್ತು ರೋಬೋಟಿಕ್ ಎಂಜಿನಿಯರ್‌ಗಳ ಬೇಡಿಕೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಭವಿಷ್ಯದಲ್ಲಿ ಮಾನವನ ಬುದ್ದಿಮತ್ತೆ ಶ್ರಮವನ್ನು ಸಹ ಕಡಿಮೆ ಮಾಡುವ ಹಾಗೂ ಗಣಿಗಾರಿಕೆ ಸೇರಿದಂತೆ ಹಲವು ಕಠಿಣ ಶ್ರಮದ ಉದ್ಯೋಗ ಕ್ಷೇತ್ರದಲ್ಲೂ ಮಾನವ ಸಂಪನ್ಮೂಲದ ಬಳಕೆಯ ಬದಲಾಗಿ ರೋಬೋಟ್ ಮತ್ತು ಅಟೊಮೇಶನ್ ಸಿಸ್ಟಂ ಬಳಕೆ ಹೆಚ್ಚಾಗಲಿದೆ. ಇದರಲ್ಲಿ ಪರಿಣತಿ ಪಡೆದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಸಂಬಳದ ಉದ್ಯೋಗ ಸಿಗಲಿದೆ.

ಕೋರ್ಸ್ ಹಂತದಲ್ಲೇ ದಾಪುಗಾಲನ್ನಿಡಿ!

ಕೋರ್ಸ್ ಹಂತದಲ್ಲೇ ದಾಪುಗಾಲನ್ನಿಡಿ!

ಹಲವು ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡಿ ಎಂದು ಕೇಳಿಕೊಂಡಿದ್ದರಿಂದ ಇಂತಹದೊಂದು ಲೇಖನ ಬರೆಯಲು ಸಾಧ್ಯವಾಗಿದೆ. ಖಂಡಿತವಾಗಿ ಅಟೊಮೇಶನ್ ಮತ್ತು ರೋಬೋಟಿಕ್ ಕೋರ್ಸ್ ಮಾಡಿದವರಿಗೆ ಅಪಾರ ಉದ್ಯೋಗಾವಕಾಶ ಒದಗಿಸಲಿದೆ.ಇದನ್ನು ಸರಿಯಾಗಿ ಅರ್ಥೈಸಿಕೊಂಡು ಕೋರ್ಸ್ ಹಂತದಲ್ಲೇ ಅಟೊಮೇಶನ್ ಮತ್ತು ರೋಬೋಟಿಕ್ಸ್‌ನ ಎಲ್ಲಾ ಆಯಾಮಗಳ ಬಗ್ಗೆ ಜ್ಞಾನ ಸಂಪಾದಿಸಿ ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಮನೆಯವರ ಮನವೊಲಿಸಲು ಯತ್ನಿಸಿ.

Best Mobiles in India

English summary
Future Scope of Robotic Process Automation. Career Options in Robotics - Career Opportunities in Robotics. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X