2-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೇನು?..ಇಲ್ಲಿದೆ ಫುಲ್ ಡೀಟೇಲ್ಸ್!

|

ಆನ್‌ಲೈನಿನಲ್ಲಿ ನಮ್ಮ ಮಾಹಿತಿ ಕಾಪಾಡಿಕೊಳ್ಳಲು ಪಾಸ್​ವರ್ಡ್ ಒಂದೇ ಸಾಕಾಗುವುದಿಲ್ಲ ಎಂಬುದನ್ನು ಈಗ ಸಾಮಾನ್ಯ ಇಂಟರ್‌ನೆಟ್ ಬಳಕೆದಾರನು ತಿಳಿದಿದ್ದಾನೆ. ಹಾಗಾಗಿ, ಯಾವುದೇ ಆನ್‌ಲೈನ್ ಖಾತೆಗೆ ಪಾಸ್​ವರ್ಡ್ ಜತೆಗೆ ಇನ್ನೊಂದು ಹೆಚ್ಚುವರಿ ಅಂಶವನ್ನೂ ಬಳಸುವ ಅಭ್ಯಾಸ ಈಚೆಗೆ ಬೆಳೆಯುತ್ತಿದೆ. ಆನ್‌ಲೈನಿನಲ್ಲಿ ಗ್ರಾಹಕರ ಗುರುತನ್ನು ದೃಢೀಕರಿಸಲು ಎರಡು ಬೇರೆಬೇರೆ ಅಂಶಗಳನ್ನು ಬಳಸುವ ಈ ಅಭ್ಯಾಸಕ್ಕೆ '2-ಫ್ಯಾಕ್ಟರ್ ಅಥೆಂಟಿಕೇಶನ್' ಎಂದು ಹೆಸರಿಡಲಾಗಿದೆ.

ನಮ್ಮ ಪಾಸ್​ವರ್ಡನ್ನು ಬೇರೆ ಯಾರೋ ತಿಳಿದುಕೊಂಡಿದ್ದಾರೆ ಎಂದುಕೊಂಡರೂ, ಬರಿಯ ಅದೊಂದು ಅಂಶವನ್ನೇ ಬಳಸಿ ಅವರು ನಮ್ಮ ಖಾತೆ ಪ್ರವೇಶಿಸದಂತೆ ಈ ವ್ಯವಸ್ಥೆ ತಡೆಯುತ್ತದೆ. ಇಂತಹ ವ್ಯವಸ್ಥೆಗಳು ಸದ್ಯ ಹಣಕಾಸು ವ್ಯವಹಾರಗಳಿಗೇ ಹೆಚ್ಚು ಬಳಕೆಯಾಗುತ್ತಿವೆ. ಆನ್​ಲೈನ್ ಹಣ ಪಾವತಿ ಮಾಡುವಾಗ ನಮ್ಮ ಬ್ಯಾಂಕ್ ಖಾತೆಯ ಪಾಸ್​ವರ್ಡ್ ಜತೆ ಮೊಬೈಲಿಗೆ ಬರುವ ಓಟಿಪಿಯನ್ನೂ ದಾಖಲಿಸುವಂತೆ ಕೇಳುವುದನ್ನೇ 2-ಫ್ಯಾಕ್ಟರ್ ಅಥೆಂಟಿಕೇಶನ್ ಎನ್ನಲಾಗುತ್ತದೆ.

2-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೇನು?..ಇಲ್ಲಿದೆ ಫುಲ್ ಡೀಟೇಲ್ಸ್!

ಹಾಗಾಗಿ, ನಮ್ಮ ಖಾಸಗಿ ಬದುಕಿನ ಅದೆಷ್ಟೋ ವಿವರಗಳನ್ನು ತಿಳಿದ ಆನ್‌ಲೈನ್ ಜಾಲಕ್ಕೆ 2-ಫ್ಯಾಕ್ಟರ್ ಅಥೆಂಟಿಕೇಶನ್ ಬೇಕೇಬೇಕು. ಹಣಕಾಸು ವ್ಯವಹಾರಗಳ ಜೊತೆಗೆ ನಿಮ್ಮ ಸಾಮಾಜಿಕ ಜಾಲತಾಣಗಳು, ನೀವು ಭೇಟಿ ನೀಡುವ ಇ ಕಾಮರ್ಸ್ ತಾಣಗಳು ಸೇರಿದಂತೆ ನಿಮ್ಮ ಪ್ರತಿಯೊಂದು ಆನ್‌ಲೈನ್ ಚಟುವಟಿಕೆಗಳಿಗೂ ಈ 2-ಫ್ಯಾಕ್ಟರ್ ಅಥೆಂಟಿಕೇಶನ್ ಅತ್ಯಗತ್ಯ. ಹಾಗಾಗಿ, ಈ ಲೇಖನದಲ್ಲಿ '2-ಫ್ಯಾಕ್ಟರ್ ಅಥೆಂಟಿಕೇಶನ್' ಬಗೆಗಿನ ಪ್ರಮುಖ ವಿಷಯಗಳನ್ನು ನಾವು ತಿಳಿದುಕೊಳ್ಳೋಣ.

2-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೇನು?

2-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೇನು?

ಮೊದಲೇ ಹೇಳಿದಂತೆ 2-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೆ ಇದು ನಿಮ್ಮ ಅಕೌಂಟಿಗೆ ಹೆಚ್ಚುವರಿ ಭದ್ರತಾ ಪದರವನ್ನು ನೀಡುವ ಇತ್ತೀಚಿನ ಸುರಕ್ಷತಾ ಆಯ್ಕೆಗಳಲ್ಲಿ ಒಂದಾಗಿದೆ. ಅಂದರೆ ಹ್ಯಾಕರ್ ಗಳ ಪ್ರವೇಶವನ್ನು ದುಪ್ಪಟ್ಟು ತಡೆಯುವ ಸಾಮರ್ಥ್ಯ ಎಂದು ಹೇಳಬಹುದು.ಆನ್‌ಲೈನಿನಲ್ಲಿ ಗ್ರಾಹಕರ ಗುರುತನ್ನು ದೃಢೀಕರಿಸಲುಅಭ್ಯಾಸವೂ ‘2-ಫ್ಯಾಕ್ಟರ್ ಅಥೆಂಟಿಕೇಶನ್' ಆಗಿದೆ.

2-ಫ್ಯಾಕ್ಟರ್ ಅಥೆಂಟಿಕೇಷನ್ ಆಕ್ಟಿವೇಟ್ ಹೇಗೆ?

2-ಫ್ಯಾಕ್ಟರ್ ಅಥೆಂಟಿಕೇಷನ್ ಆಕ್ಟಿವೇಟ್ ಹೇಗೆ?

2-ಫ್ಯಾಕ್ಟರ್ ಅಥೆಂಟಿಕೇಷನ್ ಆಯ್ಕೆ ಹೊಂದಿರುವ ಯಾವುದೇ ಆನ್‌ಲೈನ್ ತಾಣದ ‘Security and Login' ಆಯ್ಕೆಗೆ ತೆರಳಿ. ‘Security and Login' ಇದರ ಒಳಗೆ ನೀವು ‘Change password' ಮತ್ತು ‘Login with your profile picture' ಎಂಬ ಆಯ್ಕೆಗಳನ್ನು ಗಮನಿಸುತ್ತೀರಿ.ಇದರ ಕೆಳಗೆ ‘Two-factor authentication' ಕೂಡ ಇರುತ್ತದೆ. ಇನ್ನು ನೀವು ಆಕ್ಟಿವೇಟ್ ಮಾಡಿಕೊಳ್ಳಬಹುದು.

2-ಫ್ಯಾಕ್ಟರ್ ಸೆಟ್ ಮಾಡಲು ಎರಡು ಮಾರ್ಗಗಳು

2-ಫ್ಯಾಕ್ಟರ್ ಸೆಟ್ ಮಾಡಲು ಎರಡು ಮಾರ್ಗಗಳು

2-ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ನೀವು ಸೆಟ್ ಮಾಡಲು ನಿಮಗೆ ಎರಡು ಮಾರ್ಗಗಳಿರುತ್ತದೆ. ಮೊದಲನೆಯದು ‘Text message' ಆಯ್ಕೆ ಮತ್ತು ಎರಡನೆಯದು ಅಥೆಂಟಿಕೇಷನ್ ಆಪ್ ಗಳನ್ನು ಉದಾಹರಣೆಗೆ ಗೂಗಲ್ ಅಥೆಂಟಿಕೇಷನ್ ಅಥವಾ ಡುಯೋ ಮೊಬೈಲ್ ಆಪ್ ಗಳನ್ನು ಬಳಸುವುದು. ಈ ಎರಡೂ ಆಯ್ಕೆಗಳ ಬಗ್ಗೆ ನಾವು ಮುಂದೆ ಓದಿ ತಿಳಿಯೋಣ.

'Text message’ ಆಯ್ಕೆಯಲ್ಲಿ 2-ಫ್ಯಾಕ್ಟರ್ ಸೆಟ್!

'Text message’ ಆಯ್ಕೆಯಲ್ಲಿ 2-ಫ್ಯಾಕ್ಟರ್ ಸೆಟ್!

‘Two-factor authentication' ಆಯ್ಕೆಯನ್ನು ಒಪ್ಪಿಕೊಳ್ಳುವಾಗ ನೀವು ಯಾವಾಗ ‘Text message' ಆಯ್ಕೆಯನ್ನು ಸೆಲೆಕ್ಟ್ ಮಾಡಿದಿರೋ ಆಗ 6 ಡಿಜಿಟ್‌ನ ಕೋಡ್ ಅನ್ನು ನಿಮ್ಮ ರಿಜಿಸ್ಟ್ರರ್ ಆಗಿರುವ ಮೊಬೈಲ್ ನಂಬರಿಗೆ ಕಳುಹಿಸಿಕೊಡಲಾಗುತ್ತೆ. ಆ ನಂಬರ್ ಅನ್ನು ನೀವು ಎಂಟರ್ ಮಾಡಿ ವೆರಿಫಿಕೇಷನ್ ಅನ್ನು ಪೂರ್ಣಗೊಳಿಸಿದರೆ ನಿಮ್ಮ 2-ಫ್ಯಾಕ್ಟರ್ ಕೆಲಸ ಆದಂತೆ.

 ಆಪ್ ಬಳಸಿ 2-ಫ್ಯಾಕ್ಟರ್ ಹೇಗೆ ಮಾಡುವುದು?

ಆಪ್ ಬಳಸಿ 2-ಫ್ಯಾಕ್ಟರ್ ಹೇಗೆ ಮಾಡುವುದು?

ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಲ್ಲದೇ ಇದ್ದಲ್ಲಿ ಅಥವಾ ಮೇಲಿನ ಆಯ್ಕೆಯನ್ನು ನೀವು ಬಳಸಲು ಇಚ್ಚಿಸದೇ ಇದ್ದಲ್ಲಿ ನೀವು ಎರಡನೇ ವಿಧಾನವನ್ನು ಕೂಡ ಬಳಕೆ ಮಾಡಬಹುದು. ಗೂಗಲ್ ಅಥೆಂಟಿಕೇಷನ್ ಅಥವಾ ಡುಯೋ ಆಪ್‌ಗಳನ್ನು ಡೌನ್‌ಲೋಡ್ ಮಾಡಿದಾಗ ಕೋಡ್ ನಿಮ್ಮ ಆಪ್‌ಗೆ ಬರಲಿದೆ. ಹೀಗೆ 2-ಫ್ಯಾಕ್ಟರ್ ಅನ್ನು ಸೆಟ್ ಮಾಡಬಹುದು.

Best Mobiles in India

English summary
Two-factor authentication adds an additional layer of security to the authentication process by making it harder for attackers to gain access to a person's devices. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X