Subscribe to Gizbot

DL, PAN ಮತ್ತು ಆಧಾರ್ ಸೇವೆ ಪಡೆಯಲು ಇದೊಂದು ಆಪ್ ಸಾಕು..!

Written By:

ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಕೇಂದ್ರ ಸರಕಾರವೂ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ. ಅದರಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿರುವ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚಿನ ಸೇವಾ ಸೌಲಭ್ಯಗಳನ್ನು ಅವರ ಬೆರಳ ತುದಿಗೆ ನೀಡಲಿಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಭಾರತ ಸರಕಾರವೂ ಒಂದು ಆಪ್ ಅನ್ನು ಲಾಂಚ್ ಮಾಡಿದೆ.

DL, PAN ಮತ್ತು ಆಧಾರ್ ಸೇವೆ ಪಡೆಯಲು ಇದೊಂದು ಆಪ್ ಸಾಕು..!

ಸರ್ಕಾರದ ಸಾರ್ವಜನಿಕರ ಸೇವೆಗಳನ್ನು ಒಂದೇ ಒಂದು ಆಪ್ ಮೂಲಕ ತಲುಪಿಸುವ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ಈ ಆಪ್ ಮೂಲಕ ನೀವು ಸರ್ಕಾರದ ಸೇವೆಗಳನ್ನು ಆರಾಮವಾಗಿ ಪಡೆಯಬಹುದಾಗಿದ್ದು, ಸರ್ಕಾರದ ಸುಮಾರು 160ಕ್ಕೂ ಹೆಚ್ಚಿನ ಸೇವೆಗಳನ್ನು ಉಮಾಂಗ್ ಆಪ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಮಾಂಗ್ ಆಪ್:

ಉಮಾಂಗ್ ಆಪ್:

Unified Mobile Application for New age Governance - UMANG ಹೆಸರಿನ ಈ ಆಪ್ ಅನ್ನು ಭಾರತ ಸರಕಾರ ಲಾಂಚ್ ಮಾಡಿದ್ದು, ಇದು ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಒಂದೇ ವೇದಿಕೆಯಲ್ಲಿ ನೂರಾರು ಸೇವೆಗಳನ್ನು ನೀಡಲಿದೆ.

ಉಮಾಂಗ್ ಆಪ್ ಡೌನ್ ಲೋಡ್ ಮಾಡಿ:

ಉಮಾಂಗ್ ಆಪ್ ಡೌನ್ ಲೋಡ್ ಮಾಡಿ:

ಉಮಾಂಗ್ ಆಪ್ ಅನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಕೆ ಮಾಡಿಕೊಳ್ಳಲು 97183 97183 ನಂಬರ್ ಗೆ ಮಿಸ್ ಕಾಲ್ ಕೊಟ್ಟರೆ ನಿಮಗೆ ಡೌನ್‌ಲೋಡ್ ಮಾಡಲು ಲಿಂಕ್ ದೊರೆಯುತ್ತದೆ. ಅಲ್ಲದೇ ಗೂಗಲ್ ಪ್ಲೇಸ್ಟೋರ್, ಆಪ್ ಸ್ಟೋರ್ & ವಿಂಡೋಸ್ ಸ್ಟೋರ್ ನಲ್ಲಿಯೂ ಅಧಿಕೃತ ಆಪ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಉಮಾಂಗ್ ಕಾರ್ಯ ವಿಶೇಷತೆ:

ಉಮಾಂಗ್ ಕಾರ್ಯ ವಿಶೇಷತೆ:

ಕೇಂದ್ರ ಸರ್ಕಾರದ ಸೇವೆಗಳಾದ ಆಧಾರ್ , ಪಾನ್ ಕಾರ್ಡ್, GST, EPF ಮಾಹಿತಿ, ಪಾಸ್ ಫೋರ್ಟ್ ಅರ್ಜಿ, LPG ಬುಕ್ಕಿಂಗ್ & ಸಬ್ಸಿಡಿ, ಪಿಂಚಣಿ ಹಣ, ವಾಹನದ ದಾಖಲೆ ಪತ್ರಗಳು, ರೈತರ ಸೇವೆಗಳು, ವಿದ್ಯಾರ್ಥಿ ವೇತನ, ಉದ್ಯೋಗ ಮಾಹಿತಿ ಹಾಗೂ ಕರೆಂಟ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್ ಹಾಗೂ ಆದಾಯ ತೆರಿಗೆ ಸಂದಾಯ ಸೇರಿದಂತೆ ಸುಮಾರು 160ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ.

 ಹಂತ 01

ಉಮಾಂಗ್ ಆಪ್ ಬಳಸಿಕೊಳ್ಳುವುದು ಹೇಗೆ?

ಆಪ್ ಡೌನ್‌ಲೋಡ್ ಮಾಡಿಕೊಂಡ ನಂತರದಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಿ, ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡಿ ಲಾಗ್ ಇನ್ ಆಗಿರಿ.

ಹಂತ 02

ಹಂತ 02

ನಂತರ 4 ಅಂಕೆಗಳ ಪಿನ್ ನಂಬರ್ ನೀಡಿ ಸೆಕ್ಯೂರ್ ಮಾಡಿಕೊಳ್ಳಿ. ನಂತರ ನೀವು ನಿಮ್ಮ ಮಾಹಿತಿಯನ್ನು ನೀಡಿ ನೊಂದಣಿಯಾಗಿರಿ.

ಹಂತ 03:

ಹಂತ 03:

ಇದಾದ ನಂತರದಲ್ಲಿ ಸೇವೆಗಳ ಮೆನು ಕಾಣಿಸಿಕೊಳ್ಳಿದೆ. ಇಲ್ಲಿ ಕೇಂದ್ರ ಸರ್ಕಾರ & ರಾಜ್ಯ ಸರ್ಕಾರದ ಸೇವೆಗಳನ್ನು ಕಾಣಬಹುದಾಗಿದೆ. ಅವುಗಳ ಮೇಲೆ ಕ್ಲಿಕ್ ಮಾಡಿ ಅವಶ್ಯ ಮಾಹಿತಿಗಳನ್ನು ನೀಡಿ ಸೇವೆಯನ್ನು ಪಡೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
What is UMANG app? All you need to know. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot