Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ನಿಮ್ಮ ವಾಹನದ ಇನ್ಶೂರೆನ್ಸ್‌ ಮಾಹಿತಿ ತಿಳಿಯಲು ಹೀಗೆ ಮಾಡಿ!

ವಾಹನ ಸವಾರರು ಅಗತ್ಯವಾಗಿ ಹೊಂದಿರಲೇಬೇಕಾದ ದಾಖಲೆಗಳಲ್ಲಿ ವೆಹಿಕಲ್‌ ಇನ್ಶೂರೆನ್ಸ್‌ ಕೂಡ ಒಂದಾಗಿದೆ. ಒಂದು ವೇಳೆ ವೆಹಿಕಲ್‌ ಇನ್ಶೂರೆನ್ಸ್‌ ಅವಧಿ ಮುಗಿದು ಹೋಗಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆದರಿಂದ ಎಲ್ಲಾ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಇನ್ಶೂರೆನ್ಸ್‌ ಮಾಡಿಸುತ್ತಾರೆ.

ಹೌದು, ವಾಹನಗಳಿಗೆ ವೆಹಿಕಲ್‌ ಇನ್ಶೂರೆನ್ಸ್ ಮಾಡಿಸುವುದು ಕಡ್ಡಾಯವಾಗಿದೆ. ನೀವು ವೆಹಿಕಲ್‌ ಇನ್ಶೂರೆನ್ಸ್‌ ಮಾಡಿಸಿದ್ದರೂ ಕೆಲವು ಸಂದರ್ಭದಲ್ಲಿ ಅದು ,ಲ್ಯಾಪ್ಸ್‌ ಆಗಿರುತ್ತದೆ. ಇದರ ಬಗ್ಗೆ ತಿಳಿಯದೇ ವಾಹನ ಓಡಿಸುವಾಗ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದರೆ ಅನಗತ್ಯವಾಗಿ ದಂಡಪಾವತಿಸಬೇಕಾಗುತ್ತದೆ. ಆದರಿಂದ ಆಗಾಗ ನಿಮ್ಮ ವೆಹಿಕಲ್‌ ಇನ್ಶೂರೆನ್ಸ್ ಸ್ಟೆಟಸ್‌ ಚೆಕ್‌ ಮಾಡಿಕೊಳ್ಳುವುದು ಒಳ್ಳೆಯದು. ಹಾಗಾದ್ರೆ ಆನ್‌ಲೈನ್‌ನಲ್ಲಿ ನಿಮ್ಮ ವಾಹನದ ಇನ್ಶೂರೆನ್ಸ್‌ ಸ್ಟೆಟಸ್‌ ಚೆಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆನ್‌ಲೈನ್‌ನಲ್ಲಿ ನಿಮ್ಮ ವಾಹನದ ಇನ್ಶೂರೆನ್ಸ್‌ ಮಾಹಿತಿ ತಿಳಿಯಲು ಹೀಗೆ ಮಾಡಿ!

ವಾಹನ ವಿಮೆ ಎಂದರೇನು?

ನೀವು ಯಾವುದೇ ವಾಹನವನ್ನು ಹೊಂದಿದ್ದರೂ ವೆಹಿಕಲ್‌ ಇನ್ಶೂರೆನ್ಸ್ ಹೊಂದಿರುವುದು ಅತ್ಯಗತ್ಯವಾಗಿದೆ. ವೆಹಿಕಲ್‌ ಇನ್ಶೂರೆನ್ಸ್ ನಿಮ್ಮ ವಾಹನಕ್ಕೆ ಒಂದು ರಕ್ಷಾ ಕವಚವಾಗಿ ಕಾರ್ಯನಿರ್ವಹಿಸಲಿದೆ. ಅಂದರೆ ನಿಮ್ಮ ವಾಹನವು ಅಪಘಾತಗಳು, ಕಳ್ಳತನ, ಮೂರನೇ ವ್ಯಕ್ತಿಗೆ ಉಂಟಾದ ಹಾನಿಯ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆಯನ್ನು ವೆಹಿಕಲ್‌ ಇನ್ಶೂರೆನ್ಸ್‌ ನೀಡಲಿದೆ. ಆದರಿಂದ ನಿಮ್ಮ ವೆಹಿಕಲ್‌ ಇನ್ಶೂರೆನ್ಸ್ ರನ್ನಿಂಗ್‌ನಲ್ಲಿ ಇದೆಯಾ? ಲ್ಯಾಪ್ಸ್‌ ಆಗಿದೆಯಾ ಅಂತಾ ಆಗಾಗ ಪರಿಶೀಲಿಸಿಕೊಳ್ಳುವುದು ಸೂಕ್ತವಾಗಿದೆ.

ಇನ್ನು ವೆಹಿಕಲ್‌ ಇನ್ಶೂರೆನ್ಸ್ ಸ್ಟೆಟಸ್‌ ಅನ್ನು ಆನ್‌ಲೈನ್‌ ಪರಿಶೀಲಿಸುವುದು ತುಂಬಾ ಸುಲಭವಾಗಿದೆ. ನೀವು ವೆಹಿಕಲ್‌ ಇನ್ಶೂರೆನ್ಸ್ ಮಾಡಿಸಿರುವ ನಿಮ್ಮ ವಿಮಾ ಕಂಪನಿ ಅಥವಾ ಸಂಬಂಧಿತ ಸರ್ಕಾರಿ ಏಜೆನ್ಸಿ ಒದಗಿಸಿದ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸ್ಟೆಟಸ್‌ ಪರಿಶೀಲಿಸಬಹುದು.

ನಿಮ್ಮ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಅನ್ನು ಹೇಗೆಲ್ಲಾ ಚೆಕ್‌ ಮಾಡಬಹುದು ಗೊತ್ತಾ?

* ಐಐಬಿ ಮೂಲಕ ಆನ್‌ಲೈನ್‌ನಲ್ಲಿ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಪರಿಶೀಲಿಸಬಹುದು
* ವಾಹನ್ ವೆಬ್‌ಸೈಟ್ ಮೂಲಕ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಆನ್‌ಲೈನ್‌ನಲ್ಲಿ ಪರಿಶೀಲಿಸಿ
* mParivahan ಅಪ್ಲಿಕೇಶನ್ ಬಳಸಿಕೊಂಡು ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಪರಿಶೀಲಿಸಿ
* QR ಕೋಡ್ ಬಳಸಿ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಪರಿಶೀಲಿಸಿ
* RTO ನಲ್ಲಿ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಪರಿಶೀಲಿಸಿ
ಇನ್ಶೂರೆನ್ಸ್‌ ಇನಫರ್‌ಮೇಶನ್‌ ಬ್ಯೂರೊ

ಆನ್‌ಲೈನ್‌ನಲ್ಲಿ ನಿಮ್ಮ ವಾಹನದ ಇನ್ಶೂರೆನ್ಸ್‌ ಮಾಹಿತಿ ತಿಳಿಯಲು ಹೀಗೆ ಮಾಡಿ!

IIB (ಇನ್ಶೂರೆನ್ಸ್‌ ಇನಫರ್‌ಮೇಶನ್‌ ಬ್ಯೂರೊ)ಮೂಲಕ ವೆಹಿಕಲ್‌ ಇನ್ಶೂರೆನ್ಸ್ ಪಾಲಿಸಿಯ ಸ್ಟೆಟಸ್‌ ಪರಿಶೀಲಿಸುವುದು ಹೇಗೆ?

* ಮೊದಲಿಗೆ IIBಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ಇದರಲ್ಲಿ 'ಕ್ವಿಕ್ ಲಿಂಕ್ಸ್' ಆಯ್ಕೆಯನ್ನು ಆಯ್ಕೆಮಾಡಿ
* ನಂತರ 'ವಿ-ಸೇವಾ' ಆಯ್ಕೆಯನ್ನು ಟ್ಯಾಪ್‌ ಮಾಡಿ
* ಇದೀಗ 'ಆಕ್ಸಿಡೆಂಟ್ ವೆಹಿಕಲ್ ಇನ್ಫಾರ್ಮೆಶನ್ ರಿಟ್ರೈವಲ್ ಸಿಸ್ಟಮ್' ಅನ್ನು ಸ್ಕ್ರೀನ್‌ ಮೇಲೆ ಡಿಸ್‌ಪ್ಲೇ ಆಗಲಿದೆ
* ಇದರಲ್ಲಿ ನಿಮ್ಮ ಹೆಸರು, ವಾಹನ ನೋಂದಣಿ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವಿಳಾಸ, ಅಪಘಾತ ದಿನಾಂಕ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
* ನಂತರ ಸ್ಕ್ರೀನ್‌ ಮೇಲೆ ಗೋಚರಿಸುವ ಸರಿಯಾದ ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿ
* ಈಗ 'ಸಬ್ಮಿಟ್‌' ಕ್ಲಿಕ್ ಮಾಡಿ
* ಇದೀಗ ನಿಮ್ಮ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಕಾಣಿಸಲಿದೆ.

ವಾಹನ್ ವೆಬ್‌ಸೈಟ್ ಮೂಲಕ ಕಾರ್ ಇನ್ಶೂರೆನ್ಸ್ ಪಾಲಿಸಿಯ ಸ್ಟೆಟಸ್‌ ಪರಿಶೀಲಿಸುವುದು ಹೇಗೆ?

* ಮೊದಲಿಗೆ ಅಧಿಕೃತ ವಾಹನ್ ಇ-ಸರ್ವಿಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಇದರಲ್ಲಿ ಟಾಪ್ ಮೆನು ಬಾರ್‌ನಲ್ಲಿ ಲಭ್ಯವಿರುವ 'ನಿಮ್ಮ ವಾಹನದ ವಿವರಗಳನ್ನು ತಿಳಿಯಿರಿ' ಆಯ್ಕೆಯನ್ನು ಟ್ಯಾಪ್‌ ಮಾಡಿ
* ಸಿಟಿಜನ್‌ ಲಾಗಿನ್ ಪೇಜ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ ಸೇರಿದಂತೆ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
* ನಂತರ ನಿಮ್ಮ ಕಾರಿನ ನೋಂದಣಿ ಸಂಖ್ಯೆ ನಮೂದಿಸಿ
* ಇದೀಗ ನಿಮ್ಮ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿ ಕೋಡ್ ಅನ್ನು ಭರ್ತಿ ಮಾಡಿ
* ನಂತರ ಸ್ಕ್ರೀನ್‌ ಮೇಲೆ ವೆಹಿಕಲ್‌ ಇನ್ಶೂರೆನ್ಸ್‌ ಸ್ಟೆಟಸ್‌ ಕಾಣಿಸಲಿದೆ.

ಆನ್‌ಲೈನ್‌ನಲ್ಲಿ ನಿಮ್ಮ ವಾಹನದ ಇನ್ಶೂರೆನ್ಸ್‌ ಮಾಹಿತಿ ತಿಳಿಯಲು ಹೀಗೆ ಮಾಡಿ!

ನಿಮ್ಮ ವೆಹಿಕಲ್‌ ಇನ್ಶೂರೆನ್ಸ್‌ ಲ್ಯಾಪ್ಸ್‌ ಆದರೆ ಏನು ಮಾಡಬೇಕು?

ನಿಮ್ಮ ವೆಹಿಕಲ್‌ ಇನ್ಶೂರೆನ್ಸ್‌ ಲ್ಯಾಪ್ಸ್‌ ಆಗಿದ್ದರೆ ಕೂಡಲೇ ಅದನ್ನು ರಿನಿವಲ್ ಮಾಡಿಸಬೇಕು. ಇನ್ಶೂರೆನ್ಸ್‌ ನವೀಕರಣ ಪ್ರಕ್ರಿಯೆಗಾಗಿ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಬೇಕು. 90 ದಿನಗಳ ತನಕ ಇರುವ ಗ್ರೇಸ್ ಅವಧಿಯಲ್ಲಿ ಲ್ಯಾಪ್ಸ್‌ ಆಗಿರುವ ನಿಮ್ಮ ವೆಹಿಕಲ್‌ ಇನ್ಶೂರೆನ್ಸ್‌ ಅನ್ನು ರಿನಿವಲ್‌ ಮಾಡಿಸಬಹುದಾಗಿದೆ.

Best Mobiles in India

English summary
What is Vehicle Insurance? How to Check Your Vehicle Insurance Status online?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+