ಏನಿದು ವರ್ಚುವಲ್ RAM? ಇದರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಏನಾದರೂ ಲಾಭವಿದೆಯಾ?
ಇತ್ತೀಚಿನ ದಿನಗಳಲ್ಲಿ ಲಭ್ಯವಾಗುತ್ತಿರುವ ಫೋನ್‌ಗಳಲ್ಲಿ ವರ್ಚುವಲ್ RAM ಅನ್ನೊದು ಸಾಮಾನ್ಯ ಸಂಗತಿಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ RAM ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಇದು ಬೆಸ್ಟ್ ಸರ್ ಅಂತಾ ಮೊಬೈಲ್ ಅಂಗಡಿ ಅವನು ಹೇಳಿದ ತಕ್ಷಣ ನಿಮ್ಮ ಮುಖ ಅರಳಿ ಬಿಡುತ್ತದೆ. ಆದರೆ ವರ್ಚುವಲ್ RAM ಅಂದರೆ ಏನು ಅಂತಾ ಅವರು ಹೇಳೋದು ಇಲ್ಲ.
ಹೌದು, ಸ್ಮಾರ್ಟ್‌ಫೋನ್ ಕಂಪೆನಿಗಳು ಪ್ರಸ್ತುತ ದಿನಗಳಲ್ಲಿ RAM ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡುತ್ತಿವೆ. RAM ಸಾಮರ್ಥ್ಯ ಹೆಚ್ಚಿರುವಷ್ಟು ಸ್ಮಾರ್ಟ್‌ಫೋನ್ ಸ್ಪೀಡ್ ಆಗಿ ಕಾರ್ಯನಿರ್ವಹಿಸಲಿದೆ ಅನ್ನೊ ಮಾತಿದೆ. ಆದರೆ ಮೊಬೈಲ್‌ನಲ್ಲಿ ವರ್ಚುವಲ್ RAM ಹೇಗೆ ಕೆಲಸ ಮಾಡಲಿದೆ. ಇದು ನಿಜಕ್ಕೂ ಉಪಯುಕ್ತವಾಗಿದೆಯಾ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ನಲ್ಲಿ ವರ್ಚುವಲ್ RAM ಎಲ್ಲಿರಲಿದೆ?
ಮೊಬೈಲ್ ಖರೀದಿಸುವ ಮುನ್ನ ವರ್ಚುವಲ್ RAM ಬಗ್ಗೆ ನೀವು ತಿಳಿಯಬೇಕಾದ ವಿಚಾರ ಸಾಕಷ್ಟಿದೆ. ವರ್ಚುವಲ್ RAM ಅನ್ನೊದು ಹೆಸರೇ ಸೂಚಿಸುವಂತೆ ನಿಮ್ಮ ಮೊಬೈಲ್ ಇಂಟರ್ ಸ್ಟೋರೇಜ್‌ನಲ್ಲಿ ಉಳಿದಿರುವ ಸ್ಟೋರೇಜ್ ಅನ್ನು RAM ಆಗಿ ಬದಲಾಯಿಸಿಕೊಳ್ಳುವುದು ಅಷ್ಟೇ. ಅಂದರೆ ನಿಮ್ಮ ಫೋನ್‌ನ ಇಂಟರ್ ಸ್ಟೋರೇಜ್‌ನಲ್ಲಿ ಪ್ರಿಸೆಟ್ ಪೋಷನ್‌ನಲ್ಲಿ ತಾತ್ಕಾಲಿಕ ಫೈಲ್‌ಗಳನ್ನು ಸ್ಟೋರೇಜ್ ಮಾಡಲಿದೆ. ಒಂದು ವೇಳೆ ಹೆಚ್ಚಿನ RAM ಅಗತ್ಯವಿದೆ ಎಂದಾಗ RAM ಕರ್ತವ್ಯಗಳನ್ನು ರಿಸರ್ವ್ ಮಾಡಲಿದೆ.
ವರ್ಚುವಲ್ RAM ಉದ್ದೇಶ ಏನು?
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ RAM ಸಾಮರ್ಥ್ಯ ಹೆಚ್ಚಿದಷ್ಟು ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್ ಕಂಪೆನಿಗಳು ಕೂಡ ಹೆಚ್ಚಿನ RAM ಸಾಮರ್ಥ್ಯದ ಫೋನ್‌ಗಳಿಗೆ ಒತ್ತನ್ನು ನೀಡುತ್ತಿವೆ. ಇದರ ನಡುವೆ ವರ್ಚುವಲ್ RAM ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿವೆ. ಇದಕ್ಕಾಗಿ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ RAMನ ಬಹುಭಾಗವನ್ನು ಬಳಸಿ ನಿಮಗೆ ಮತ್ತೆ RAM ಅವಶ್ಯಕತೆ ಇದ್ದಾಗ ಅದನ್ನು ವಿಸ್ತರಿಸಬಹುದಾಗಿದೆ. ಇದರಿಂದ ನಿಮ್ಮ ಹಳೆಯ ಅಪ್ಲಿಕೇಶನ್‌ಗಳಿಗೆ ವಾಪಸ್ ಆದರೆ ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ನಿಮ್ಮ ಇಂಟರ್ ಸ್ಟೋರೇಜ್‌ನಿಂದ RAM ಗೆ ರಿವರ್ಸ್ ಮಾಡಲಿದೆ.
ವರ್ಚುವಲ್ RAM ಹೇಗೆ ಭಿನ್ನವಾಗಿದೆ?
ವರ್ಚುವಲ್ RAM ಇಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಸೀಮಿತವಾದ RAM ಮಾತ್ರಬಳಸುವುದಕ್ಕೆ ಸಾಧ್ಯವಿದೆ. ಆದರೆ ವರ್ಚುವಲ್ RAM ಒಳಗೊಂಡ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಅಪ್ಲಿಕೇಶನ್ ತೆರೆಯಲು RAM ಅವಶ್ಯಕತೆಯಿದ್ದರೆ ವರ್ಚುವಲ್ RAM ಸಹಾಯಕ್ಕೆ ಬರಲಿದೆ. ವರ್ಚುವಲ್ RAM ಇಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಅಪ್ಲಿಕೇಶನ್ ತೆರೆಯಬೇಕಾದರೆ ಆಂಡ್ರಾಯ್ಡ್‌ನ ಆಪ್ಟಿಮೈಸೇಶನ್ ಬ್ಯಾಕ್‌ಗ್ರೌಂಡ್‌ನಲ್ಲಿ ಅಪ್ಲಿಕೇಶನ್‌ನ ತಾತ್ಕಾಲಿಕ ಫೈಲ್‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದನ್ನು RAM ಆಪ್ಟಿಮೈಸೇಶನ್ ಎನ್ನಲಾಗುತ್ತದೆ.
ಆದರೆ ವರ್ಚುವಲ್ RAM ವಿಸ್ತರಿಸುವ ಅವಕಾಶವಿರುವ ಸ್ಮಾರ್ಟ್‌ಫೋನ್‌ನಲ್ಲಿ ನೀವು ಹೊಸ ಆಪ್‌ಗಳನ್ನು ಸುಲಭವಾಗಿ ಬಳಸುವುದಕ್ಕೆ ಸಾಧ್ಯವಿದೆ. ಅಲ್ಲದೆ ನೀವು ಹಳೆಯ ಅಪ್ಲಿಕೇಶನ್‌ಗಳಿಗೆ ಹಿಂತಿರುಗಿದಾಗ ಅಪ್ಲಿಕೇಶನ್ ರಿಸ್ಟಾರ್ಟ್ ಆಗಲಿದೆ. ಆದರೆ ನೀವು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆನೆಂದರೆ ವರ್ಚುವಲ್ RAM ಡಿವೈಸ್‌ನಲ್ಲಿರುವ ಒಟ್ಟು RAM ಗಾತ್ರವನ್ನು ಹೆಚ್ಚಿಸುವುದಿಲ್ಲ. ಬದಲಿಗೆ ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ಸೇವ್ ಮಾಡುವುದಕ್ಕೆ ಅವಕಾಶ ನೀಡಲಿದೆ ಅಷ್ಟೇ.

ವರ್ಚುವಲ್ RAM ಉಪಯುಕ್ತವಾಗಿದೆಯಾ?
ಒಂದೇ ಮಾತಿನಲ್ಲಿ ಹೇಳುವುದಾರೆ ವರ್ಚುವಲ್ RAM ನಿಜವಾದ RAM ಸ್ಟೋರೇಜ್‌ನಂತೆ ವರ್ಕ್ ಮಾಡುವುದಿಲ್ಲ. RAM ಸ್ಟೋರೇಜ್ ಹೆಚ್ಚಿರುವಾಗ ಮೊಬೈಲ್ ಸ್ಪೀಡ್ ಆಗಿ ಕಾರ್ಯನಿರ್ವಹಿಸಲಿದೆ ನಿಜ. ಆದರೆ ವರ್ಚುವಲ್ RAM ಅನ್ನು ಬಳಸಿದಾಗ, RAM ನಿಂದ ಇಂಟರ್ ಸ್ಟೋರೇಜ್ ಮತ್ತು ಬ್ಯಾಕ್‌ಗ್ರೌಂಡ್‌ಗೆ ಸಾಕಷ್ಟು ಡೇಟಾವನ್ನು ವರ್ಗಾಯಿಸಲಾಗುತ್ತದೆ. ಇದರಿಂದ RAM ಮಾಡ್ಯೂಲ್ ಒಳಗೆ ನಡೆಯುವ ವರ್ಗಾವಣೆಗಳಿಗಿಂತ ನಿಧಾನಗತಿಯಲ್ಲಿ ಕಾರ್ಯನಿರ್ವಹಲಿಸಲಿದೆ. ಒಂದು ಬೇಲೆ ನೀವು ನಿಮ್ಮ ಮೊಬೈಲ್‌ನ ಒಟ್ಟು ಇಂಟರ್ ಸ್ಟೋರೆಜ್ ಸ್ಪೇಸ್ ಅನ್ನು ಬಳಸಿಕೊಂಡಿದ್ದರೆ ಯಾವುದೇ ಹೆಚ್ಚುವರಿ RAM ಅನ್ನು ವಿಸ್ತರಣೆ ಮಾಡುವುದಕ್ಕೆ ಅವಕಾಶವೇ ಸಿಗುವುದಿಲ್ಲ.


Click it and Unblock the Notifications








