GST ಇಳಿಕೆಯಾದರು ಹೋಟೆಲ್ ದರ ಇಳಿಕೆಯಾಗಿಲ್ಲವೇ..? ತಕ್ಷಣ ಮೊಬೈಲ್‌ನಲ್ಲೇ ಕಂಪ್ಲೇಂಟ್ ಮಾಡಿ.!

|

ಕೇಂದ್ರ ಸರಕಾರವೂ GST ಜಾರಿ ಮಾಡಿದ ಸಂದರ್ಭದಲ್ಲಿ ಮೊದಲಿಗೆ ಗ್ರಾಹಕರಿಗೆ ಹೊಡೆತ ನೀಡಿದ್ದು ಹೋಟೆಲ್‌ಗಳು. GST ಹೆಸರು ಹೇಳಿಕೊಂಡು ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಿದ್ದವು. ಇದರಿಂದ ಜನರು ಹೋಟೆಲ್‌ಗಳನ್ನು ಶಪಿಸುವುದಲ್ಲದೇ ಕೇಂದ್ರ ಸರಕಾರವನ್ನು ಶಪಿಸಲು ಶುರು ಮಾಡಿದೆ. ಆದರೆ ಸದ್ಯ GST ದರವನ್ನು ಸರಕಾರ ಇಳಿಕೆ ಮಾಡಿದೆ. ಆದರೆ ಕೆಲವು ಹೋಟೆಲ್‌ಗಳು ತಮ್ಮ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

GST ಇಳಿಕೆಯಾದರು ಹೋಟೆಲ್ ದರ ಇಳಿಕೆಯಾಗಿಲ್ಲವೇ..? ತಕ್ಷಣ ಕಂಪ್ಲೇಂಟ್ ಮಾಡಿ.!

ಸರಕಾರವು GST ದರವನ್ನು ಕಡಿತಗೊಳಿಸಿದ್ದು, ಬಹುತೇಕ ರೆಸ್ಟೊರೆಂಟ್‌ಗಳು ಮತ್ತು ಹೋಟೆಲ್‌ಗಳು ಈಗಾಗಲೇ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರೂ, ಇನ್ನೂ ಕೆಲವು ಕಡೆಗಳಲ್ಲಿ ರೆಸ್ಟೊರೆಂಟ್‌ಗಳು ಮೂಲ ದರವನ್ನೇ ಏರಿಸಿ, ವಂಚಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ.

ಓದಿರಿ: ಒಲಾದಿಂದ ಕೇವಲ ರೂ. 5ಕ್ಕೆ ಹೊಸ ಸೇವೆ...!

ಈ ಹಿನ್ನಲೆಯಲ್ಲಿ ಗ್ರಾಹಕರು 'ಗ್ರಾಹಕರ ವ್ಯವಹಾರ ಇಲಾಖೆ'ಯನ್ನು ಸಂಪರ್ಕಿಸಿ ದೂರು ನೀಡಬಹುದು. ಆನ್‌ಲೈನ್‌ ಮೂಲಕ ಕೂಡ ದೂರು ಸಲ್ಲಿಸಬಹುದು. ಇದು ಹೇಗೆ ಎಂಬುದನ್ನು ತಿಳಿಸಿಕೊಡವ ಪ್ರಯತ್ನ ಇದಾಗಿದೆ.

ವಾದ ಮಾಡಕ್ಕೆ ಹೋಗಬೇಡಿ:

ವಾದ ಮಾಡಕ್ಕೆ ಹೋಗಬೇಡಿ:

ಕೆಲವೊಮ್ಮೆ ರೆಸ್ಟೊರೆಂಟ್‌ಗಳಲ್ಲಿ ಬೆಲೆ ಇಳಿಕೆ ಮಾಡದ ಸಂದರ್ಭದಲ್ಲಿ ಗ್ರಾಹಕರು ವಾದಕ್ಕೆ ನಿಂತರೆ ಸುಮ್ಮನೆ ಟೈಮ್ ವೆಸ್ಟ್. ಜಿಎಸ್‌ಟಿ ಹೆಸರಿನಲ್ಲಿ ನಿಮಗೆ ವಂಚನೆಯಾಗುತ್ತಿದ್ದರೆ ನೀವು ನೇರವಾಗಿ ಕಂಪ್ಲೆಂಟ್ ಮಾಡಬಹುದು. ಅದು ಹೇಗೆ ಮುಂದಿದೇ ನೋಡಿ.

ದೂರು ಸಲ್ಲಿಸುವುದೇಲ್ಲಿ..?

ದೂರು ಸಲ್ಲಿಸುವುದೇಲ್ಲಿ..?

ರೆಸ್ಟೊರೆಂಟ್‌ಗಳು, ಹೋಟೆಲ್‌ಗಳಲ್ಲಿ ಜಿಎಸ್‌ಟಿ ನೆಪದಲ್ಲಿ ವಂಚನೆ ಮಡುತ್ತಿದ್ದರೇ ನಾನಾ ವಿಧಗಳಲ್ಲಿ ದೂರು ನೀಡಬಹುದು. ಗ್ರಾಹಕ ವ್ಯವಹಾರ ಇಲಾಖೆಗೆ ತಮ್ಮ ದೂರು ಸಲ್ಲಿಸಬಹುದು.

CBEC GST ವೆಬ್‌ ಪೋರ್ಟಲ್:

CBEC GST ವೆಬ್‌ ಪೋರ್ಟಲ್:

ನೀವು https://cbec-gst.gov.in ವೆಬ್‌ ತಾಣಕ್ಕೆ ಭೇಟಿ ನೀಡುವ ಮೂಲಕ ಹೋಟೆಲ್‌ಗಳ ಮೇಲೆ ದೂರು ದಾಖಲಿಸಬಹುದು. ಅಲ್ಲಿ ದೂರು ಸಲ್ಲಿಸಬಹುದು ರೆಸ್ಟೊರೆಂಟ್‌, ಹೋಟೆಲ್‌ ಹೆಸರು, ವಿಳಾಸ, ಇತ್ಯಾದಿ ವಿವರಗಳನ್ನೂ ತಿಳಿಸಿ. ಇದರ ಆಧಾರದ ಮೇಲೆ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನಿಮಗೆ ಇ-ಮೇಲ್‌ ಮೂಲಕ ಮಾಹಿತಿಯನ್ನು ನೀಡಲಿದೆ.

ಇ-ಮೇಲ್‌ ಮಾಡಬಹುದಾಗಿದೆ:

ಇ-ಮೇಲ್‌ ಮಾಡಬಹುದಾಗಿದೆ:

ನೀವು [email protected] ಮೂಲಕ ಕೂಡ ನಿಮ್ಮ ದೂರುಗಳನ್ನು ದಾಖಲಿಸಬಹುದು. cbecಯ ಉಚಿತ ಕರೆ ಸಂಖ್ಯೆ 18001200232ಕ್ಕೆ ಕೂಡ ಕರೆ ಮಾಡಿ ದೂರು ಸಲ್ಲಿಸಬಹುದು.

ಟ್ವಿಟರ್‌ ಮೂಲಕವೂ ದೂರು ದಾಖಲಿಸಿ:

ಟ್ವಿಟರ್‌ ಮೂಲಕವೂ ದೂರು ದಾಖಲಿಸಿ:

ರೆಸ್ಟೊರೆಂಟ್‌ಗಳು, ಹೋಟೆಲ್‌ಗಳಲ್ಲಿ ಜಿಎಸ್‌ಟಿ ನೆಪದಲ್ಲಿ ವಂಚನೆ ಮಾಡುವ ಸಂದರ್ಭದಲ್ಲಿ ಟ್ವಿಟರ್ ಮೂಲಕವೂ ದೂರು ದಾಖಲಿಸಬಹುದು. (askGST_Goi) ಹಾಗೂ (@FinMinIndia) ಎಂಬ ಟ್ವಿಟರ್‌ ಖಾತೆಗೆ ದೂರು ಸಲ್ಲಿಸಬಹುದು ಎನ್ನಲಾಗಿದೆ.

Best Mobiles in India

English summary
What Is In Your Hand If Restaurant Overcharges After Low GST Rate. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X