ಶೌಚಾಲಯದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ ಕೇಳಿ ನಿಮ್ಮ ತಲೆ ತಿರುಗಬಹುದು!!

|

ಮೊಬೈಲ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮೇಲೆ ಎಷ್ಟು ಕೆಟ್ಟದಾಗಿ ಅವಲಂಬನೆಯಾಗಿದ್ದಾರೆ ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮೊಬೈಲ್ ಫೋನುಗಳು ಅದರಲ್ಲೂ ಇಂದಿನ ಸ್ಮಾರ್ಟ್‌ಪೋನುಗಳು ಜನರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದ್ದು, ಶೇ. 85 ಪ್ರತಿಶತದಷ್ಟು ಜನರು ತಾವು ಶೌಚಾಲಯದಲ್ಲಿ ಇರುವಾಗಲೂ ಸಹ ಮೊಬೈಲ್ ಫೋನನ್ನು ಬಳಸುತ್ತಿರುವುದಾಗಿ ಹೇಳಿರುವುದನ್ನು 'ಶ್ಯೂರ್ ಕಾಲ್' ಎಂಬ ಸಂಸ್ಥೆಯ ಸಮೀಕ್ಷಾ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.

ಹೌದು, ಶ್ಯೂರ್ ಕಾಲ್ ಸಂಸ್ಥೆ ನಡೆಸಿರುವ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ, ಕೆಲವರು ಎಲ್ಲೆಂದರಲ್ಲಿ ತಮ್ಮ ಮೊಬೈಲ್ ಫೋನನ್ನು ಚೆಕ್ ಮಾಡುತ್ತಿದ್ದು, ಸಮೀಕ್ಷೆಗೊಳಪಟ್ಟ 1,137 ಜನರಲ್ಲಿ ಕಾಲು ಬಾಗದಷ್ಟು ಮೊಬೈಲ್ ಬಳಕೆದಾರರು ತಮ್ಮ ಬಳಿಯಲ್ಲಿ ಮೊಬೈಲ್ ಇಲ್ಲದಿದ್ದರೆ ಅದೇನೋ ಆತಂಕ ಮನಸ್ಥಿತಿ ಕಾಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶೇ.85 ಪ್ರತಿಶತದಷ್ಟು ಜನರು ತಾವು ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವುದಾಗಿ ಹೇಳಿದ್ದಾರೆ.

ಶೌಚಾಲಯದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ ಕೇಳಿ ನಿಮ್ಮ ತಲೆ ತಿರುಗಬಹುದು!!

ಶೌಚಾಲಯ ಒಂದೇ ಆಗಿದ್ದರೆ ಸರಿ. ಆದರೆ, ಕೆಲ ಸ್ಮಾರ್ಟ್‌ಫೋನ್ ಬಳಕೆದಾರರು ತಾವು ಸೆಕ್ಸ್ ವೇಳೆಯಲ್ಲೂ ಸಹ ಸ್ಮಾರ್ಟ್‌ಫೋನ್ ಚೆಕ್ ಮಾಡುವುದಾಗಿ ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಮೀಕ್ಷಾ ಮಾಹಿತಿಯ ಪ್ರಕಾರ, ಕೆಲವರು ಎಲ್ಲೆಂದರಲ್ಲಿ ತಮ್ಮ ಮೊಬೈಲ್ ಫೋನನ್ನು ಚೆಕ್ ಮಾಡುತ್ತಿರುವ ಫಲಿತಾಂಶಗಳನ್ನು ಕೆಳಿದರೆ ತಲೆ ತಿರುಗುವಂತಿದೆ. ಹಾಗಾದರೆ, ಮೊಬೈಲ್ ಬಳಕೆದಾರರು ತಮ್ಮ ಫೋನ್ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮಲಗುವ ಸಂದರ್ಭದಲ್ಲಿ ಮೊಬೈಲ್!

ಮಲಗುವ ಸಂದರ್ಭದಲ್ಲಿ ಮೊಬೈಲ್!

ಶ್ಯೂರ್ ಕಾಲ್ ಒಟ್ಟು 1,137 ಜನ ಮೊಬೈಲ್ ಬಳಕೆದಾರರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಶೇ. 75 ರಷ್ಟು ಜನರು ತಾವು ಮಲಗುವ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲೇ ಮೊಬೈಲ್ ಇರಿಸಿಕೊಳ್ಳುತ್ತಾರಂತೆ. ಈ ರೀತಿಯಾಗಿ ಮೊಬೈಲ್ ಅನ್ನು ಸದಾಕಾಲ ತಮ್ಮ ಬಳಿಯಲ್ಲೇ ಇರಿಸಿಕೊಳ್ಳುವ ಜನರು ತಮ್ಮ ಜೀವನದಲ್ಲಿ ಸಂತೃಪ್ತಿಯಿಂದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಶೌಚಾಲಯದಲ್ಲಿ ಮೊಬೈಲ್ ಬಳಕೆ!

ಶೌಚಾಲಯದಲ್ಲಿ ಮೊಬೈಲ್ ಬಳಕೆ!

ಇನ್ನು 18 ರಿಂದ 34 ವರ್ಷ ಪ್ರಾಯದವರಲ್ಲಿ ಶೇ. 85 ಪ್ರತಿಶತದಷ್ಟು ಜನರು ತಾವು ಶೌಚಾಲಯದಲ್ಲಿ ಇರುವಾಗಲೂ ಮೊಬೈಲ್ ಫೋನನ್ನು ಬಳಸುತ್ತಾರಂತೆ. ಶೌಚಾಲಯದಲ್ಲಿ ಸಮಯವನ್ನು ಕಳೆಯುವಾಗ ಮೊಬೈಲ್ ಇಲ್ಲದಿದ್ದರೆ ಏನೋ ಕಳೆದುಕೊಂಡ ಅನುಭವವಾಗಿದೆಯಂತೆ. ಇದೊಂದು ರೀತಿಯ ಚಟವಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸ್ನಾನ ಮಾಡುವ ಸಂದರ್ಭ

ಸ್ನಾನ ಮಾಡುವ ಸಂದರ್ಭ

ಸಮೀಕ್ಷೆಯ 1,137 ಜನ ಮೊಬೈಲ್ ಬಳಕೆದಾರರಲ್ಲಿ ಶೇ. 43 ಪ್ರತಿಶತ ಜನರು ತಾವು ಸ್ನಾನ ಮಾಡುವ ಸಂದರ್ಭದಲ್ಲೂ ಮೊಬೈಲ್ ಚೆಕ್ ಮಾಡುತ್ತಾರಂತೆ. ಸಂಗೀತವನ್ನು ಆಲಿಸುವ ಸಲುವಾಗಿ 35 ರಿಂದ 51 ವರ್ಷದೊಳಗಿನ ಪ್ರಾಯವರ್ಗದವರಲ್ಲಿ ಈ ರೀತಿಯ ವರ್ತನೆ ಜಾಸ್ತಿಯೆಂಬ ಅಂವನ್ನು ‘ಶ್ಯೂರ್ ಕಾಲ್'ಸಂಸ್ಥೆ ನಡೆಸಿರುವ ಈ ಸಮೀಕ್ಷೆಯಿಂದ ಬಯಲಾಗಿದೆ.

ಸೆಕ್ಸ್ ಸಂದರ್ಭದಲ್ಲೂ ಭೂಪರಿದ್ದಾರೆ!

ಸೆಕ್ಸ್ ಸಂದರ್ಭದಲ್ಲೂ ಭೂಪರಿದ್ದಾರೆ!

ವಿಚಿತ್ರವೆಂದರೆ, ಕೆಲ ಮೊಬೈಲ್ ಬಳಕೆದಾರರು ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವಾಗಲೂ ಮೊಬೈಲ್ ಅನ್ನು ಚೆಕ್ ಮಾಡುತ್ತಾರಂತೆ. ಸುಮಾರು 17 ಪ್ರತಿಶತದಷ್ಟು ಯುವಜನತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗಲೂ ತಮ್ಮಲ್ಲಿರುವ ಸ್ಮಾರ್ಟ್‌ಫೋನನ್ನು ಚೆಕ್ ಮಾಡುವುದಾಗಿ ಹೇಳಿರುವುದನ್ನು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಮೊಬೈಲ್ ಇಲ್ಲದಿದ್ದರೆ ಆತಂಕದ ಸ್ಥಿತಿ!

ಮೊಬೈಲ್ ಇಲ್ಲದಿದ್ದರೆ ಆತಂಕದ ಸ್ಥಿತಿ!

ಸಮೀಕ್ಷೆಯ 1,137 ಜನ ಮೊಬೈಲ್ ಬಳಕೆದಾರರಲ್ಲಿ ಕಾಲು ಬಾಗದಷ್ಟು ಮೊಬೈಲ್ ಬಳಕೆದಾರರು ತಮ್ಮ ಬಳಿಯಲ್ಲಿ ಮೊಬೈಲ್ ಇಲ್ಲದಿದ್ದರೆ ಅದೇನೋ ಆತಂಕ ಮನಸ್ಥಿತಿ ಕಾಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಮತ್ತು ಮೊಬೈಲ್ ನೆಟ್ವರ್ಕ್ ಲಭ್ಯವಿಲ್ಲದ ಸಂದರ್ಭದಲ್ಲಿ ಈ ಆತಂಕ ಮನಸ್ಥಿತಿಯ ಪ್ರಮಾಣ 30 ಪ್ರತಿಶತಕ್ಕೆ ಏರುತ್ತದಂತೆ.

ಸಂಬಂಧಗಳಲ್ಲಿ ಸಮಸ್ಯೆ

ಸಂಬಂಧಗಳಲ್ಲಿ ಸಮಸ್ಯೆ

ಸಮೀಕ್ಷಾ ಉಲ್ಲೇಖಿಸಿರುವ ಮಾಹಿತಿಗಳಲ್ಲಿ ಆತಂಕಕಾರಿ ವಿಚಾರವೆಂದರೆ, ಮೊಬೈಲ್ ಬಳಕೆದಾರರಯ ತಮ್ಮ ಈ ಮೊಬೈಲ್ ಗೀಳಿನಿಂದಾಗಿ ಅವರ ಕೌಟುಂಬಿಕ ಸಂಬಂಧಗಳಲ್ಲಿ ವ್ಯತ್ಯಾಸ ಆಗಿರುವ ವಿಚಾರವನ್ನು 19 ಪ್ರತಿಶತದಷ್ಟು ಜನ ಒಪ್ಪಿಕೊಂಡಿದ್ದಾರೆ ಹಾಗೂ 9 ಪ್ರತಿಶದಷ್ಟು ಜನರಿಗೆ ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಬಂಧಗಳಲ್ಲಿ ಸಮಸ್ಯೆ ಉಂಟಾಗಿದೆಯಂತೆ.

ಸುಖನಿದ್ರೆಗೆ ತೊಂದರೆ

ಸುಖನಿದ್ರೆಗೆ ತೊಂದರೆ

1,137 ಜನ ಮೊಬೈಲ್ ಬಳಕೆದಾರರಲ್ಲಿ ನಿದ್ದೆ ಮಾಡುವ ಮೊದಲು ಮೊಬೈಲ್ ಬಳಸುವುದರಿಂದ ಸುಖನಿದ್ರೆಗೆ ತೊಂದರೆಯಾಗಿದೆ ಎಂಬ ವಿಚಾರವನ್ನು 35 ಪ್ರತಿಶದಷ್ಟು ಜನ ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ. ಹಾಗೂ ಈ ರೀತಿ ಮೊಬೈಲ್ ಬಳಸುವವರು ರಾತ್ರಿ ವೇಳೆ ಕನಿಷ್ಟ ಪಕ್ಷ ಎರಡರಿಂದ ಮೂರು ಬಾರಿಯಾದರೂ ಎಚ್ಚರಗೊಳ್ಳುತ್ತಾರಂತೆ.

Best Mobiles in India

English summary
You're not alone: According to a new survey, about 85 percent of Americans admitted to using their mobile phones while in the bathroom. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X