ಒಂದು ಕಡೆ ಕಚ್ಚಿರುವ ರೀತಿಯಲ್ಲಿ ಆಪಲ್ ಲೋಗೊ ತಯಾರಾಗಿದ್ದು ಏಕೆ? ಇಲ್ಲಿದೆ ಉತ್ತರ!!

10 ವರ್ಷಗಳನ್ನು ಪೂರೈಸಿದ ಆಪಲ್ ಕಂಪೆನಿಯ ಲೋಗೊ ಹೇಗೆ ಹುಟ್ಟಿ ಬೆಳೆದುಬಂದಿತು. ಲೋಗೊ ಏಕೆ ಅಷ್ಟು ಹೆಸರಾಯಿತು.? ಒಂದು ಕಡೆ ಕಚ್ಚಿರುವ ರೀತಿಯಲ್ಲಿ ಏಕೆ ಲೋಗೊ ತಯಾರಾಯಿತು ಎಂಬ ಹಲವು ಕತೋಹಲಕಾರಿ ವಿಷಯಗಳನ್ನು ನಿಮಗೆ ಹೇಳುತ್ತೇವೆ.

|

ನಂಬರ್ ಒನ್ ಸ್ಮಾರ್ಟ್‌ಫೋನ್ ಕಂಪೆನಿ ಆಪಲ್ ಅತ್ಯುತ್ತಮ ತಂತ್ರಜ್ಞಾನ ರೂಪಿಸುವುದರಲ್ಲಿ ಯಾವಾಗಲೂ ಮುಂದು. ಹಾಗಾಗಿಯೇ ಆಪಲ್ ಕಂಪೆನಿ ಪ್ರಪಂಚದಾದ್ಯಂತ ಇಷ್ಟು ಹೆಸರಾಗಿರುವುದು. ಜೂನ್ 29 ಕ್ಕೆ 10 ವರ್ಷಗಳನ್ನು ಪೂರೈಸಿದ ಆಪಲ್ ಕಂಪೆನಿಗೆ ಮುಂದಿನ 10 ವರ್ಷದವರೆಗೂ ಯಾರೂ ಸೆಡ್ಡು ಹೊಡೆಯಲು ಸಾಧ್ಯವಿಲ್ಲಾ ಎನ್ನುವ ರಿಪೋರ್ಟ್ ಒಂದು ಹೊರಬಿದ್ದಿದೆ.!!

ಆದರೆ, ನಾವು ಇಂದು ಹೇಳುತ್ತಿರುವ ವಿಷಯ ಇದಲ್ಲ.!! 10 ವರ್ಷಗಳನ್ನು ಪೂರೈಸಿದ ಆಪಲ್ ಕಂಪೆನಿಯ ಲೋಗೊ ಹೇಗೆ ಹುಟ್ಟಿ ಬೆಳೆದುಬಂದಿತು. ಲೋಗೊ ಏಕೆ ಅಷ್ಟು ಹೆಸರಾಯಿತು.? ಒಂದು ಕಡೆ ಕಚ್ಚಿರುವ ರೀತಿಯಲ್ಲಿ ಏಕೆ ಲೋಗೊ ತಯಾರಾಯಿತು ಎಂಬ ಹಲವು ಕತೋಹಲಕಾರಿ ವಿಷಯಗಳನ್ನು ನಿಮಗೆ ಹೇಳುತ್ತೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಏನು ಎಂಬುದನ್ನು ತಿಳಿಯಿರಿ.!!

ಸ್ಟೀವ್ ಜಾಬ್ಸ್ ಶುರು ಮಾಡಿದ್ದು.!!

ಸ್ಟೀವ್ ಜಾಬ್ಸ್ ಶುರು ಮಾಡಿದ್ದು.!!

ಜೂನ್ 29 ನೇ ತಾರೀಖು 2007 ರಲ್ಲಿ ಹುಟ್ಟಿಕೊಂಡ ಆಪಲ್ ಕಂಪೆನಿ ಕೇವಲ ಹತ್ತು ವರ್ಷದಲ್ಲಿ ಪ್ರಪಂಚದ ನಂಬರ್ ಒನ್ ಮೊಬೈಲ್ ಕಂಪೆನಿ ಎಂದು ಹೆಸರಾಯಿತು.!! ಅತ್ಯುತ್ತಮ ತಂತ್ರಜ್ಞಾನದ ಮೂಲಕ ಇಂದು ಹೆಸರಾಗಿರುವ ಆಪಲ್ ಕಂಪೆನಿಯನ್ನು ಸ್ಟೀವ್ ಜಾಬ್ಸ್ ಸ್ಥಾಪಿಸಿದರು. ಮತ್ತು ಪ್ರಸ್ತುತ ಟಿಮ್ ಕುಕ್ ಈ ಕಂಪೆನಿಗೆ ಸಿಇಓ ಆಗಿದ್ದಾರೆ.!!

ಲೋಗೊ ಕ್ರಿಯೇಟ್ ಆದ ಅಸಲಿ ಕಥೆ?

ಲೋಗೊ ಕ್ರಿಯೇಟ್ ಆದ ಅಸಲಿ ಕಥೆ?

ಸ್ಟೀವ್ ಜಾಬ್ಸ್ ಆಪೆಲ್ ಕಂಪ್ಯೂಟರ್ಸ್ ಕಂಪೆನಿಯನ್ನು ಶುರುಮಾಡಿದ ನಂತರ ಕಂಪೆನಿಗೆ ಲೋಗೋ ಕ್ರಿಯೇಟ್ ಮಾಡಲು ರೊನಾಲ್ಡ್ ವಾಯೆನ್ ಎಂಬ ಗ್ರಾಫಿಕ್ ಡಿಸೈನರ್‌ ಅನ್ನು ಸಂಪರ್ಕಿಸಿದರು. ರೊನಾಲ್ಡ್ ವಾಯೆನ್ ಐಸಾಕ್ ನ್ಯೂಟನ್ ಆಪಲ್ ಮರದ ಕೆಳಗೆ ಕುಳಿತಿದ್ದಾಗ ಆತನ ತಲೆ ಮೇಲೆ ಆಪೆಲ್ ಒಂದು ಬೀಳುತ್ತದೆ. ಇದನ್ನೇ ಆತ ಲೋಗೋ ಆಗಿ ಬರೆದ.!! ಆದರೆ ಅದು ಸ್ಟೀವ್‌ಗೆ ಇಷ್ಟವಾಗಲಿಲ್ಲ.!!

ಫೈನಲ್ ಲೋಗೊ ಕ್ರಿಯೇಟ್ ಆಗಿದ್ದು ಇವನಿಂದ!!

ಫೈನಲ್ ಲೋಗೊ ಕ್ರಿಯೇಟ್ ಆಗಿದ್ದು ಇವನಿಂದ!!

ರೊನಾಲ್ಡ್ ವಾಯೆನ್ ಆಪಲ್ ಲೋಗೋ ಸ್ಟೀವ್‌ಗೆ ಇಷ್ಟವಾಗಲಿಲ್ಲ. ಹಾಗಾಗಿ, ಸ್ಟೀವ್ ಜಾಬ್ಸ್ ಮತ್ತೊರ್ವ ಗ್ರಾಫಿಕ್ ಡಿಸೈನರ್ 'ರಾಬ್ ಜನೋಫ್' ಎಂಬುವವನನ್ನು ಸಂಪರ್ಕಿಸಿದ. ರಾಬ್ ಜನೋಫ್ ಅದೇ ಆಪಲ್ ಕಾನ್ಸೆಪ್ಟ್ ಹಿಡಿದು ಹಸಿರು ಬಣ್ಣದ ಆಪೆಲ್‌ನ್ನು ಸ್ವಲ್ಪ ಕಚ್ಚಿದಂತೆ ಬರೆದರು. ಈ ಡಿಸೈನ್ ಸ್ಟೀವ್‌‍ಗೆ ಇಷ್ಟವಾಯಿತು. ನಂತರ ಲೋಗೋದಲ್ಲಿ ಕಾಮನಬಿಲ್ಲು ಬಣ್ಣಗಳನ್ನು ಸೇರಿಸಿದರು. ಆ ಬಳಿಕ ಬಣ್ಣಗಳು ಹೋಗಿ ಪ್ಲೆಯಿನ್ ಬಣ್ಣಕ್ಕೆ ಆಪೆಲ್ ಲೋಗೋ ಬದಲಾಯಿತು.!!

ಸ್ವಲ್ಪ ಕಚ್ಚಿದಂತೆ ಯಾಕಿದೆ ಆಪಲ್ ಲೋಗೊ?

ಸ್ವಲ್ಪ ಕಚ್ಚಿದಂತೆ ಯಾಕಿದೆ ಆಪಲ್ ಲೋಗೊ?

ರಾಬ್ ಜನೋಫ್ ಆಪೆಲ್ ಲೋಗೊವನ್ನು ಕಚ್ಚಿದಹಾಗೆ ಯಾಕೆ ಡಿಸೈನ್ ಮಾಡಿದರು ಎಂಬುದಕ್ಕೆ ಅವರೇ ಉತ್ತರ ನೀಡಿದರು. ಆಪಲ್ ಲೋಗೋವನ್ನು ಸಾಮಾನ್ಯವಾಗಿ ನೋಡಿದರೆ ಅದು ಕೇವಲ ಒಂದು ಟ್ಯೋಮ್ಯಾಟೊ ತರಹ ಕಾಣಿಸುತ್ತಿತ್ತು. ಹಾಗಾಗಿ, ನೋಡುವವರು ಅದನ್ನು ಟೊಮ್ಯಾಟೋ ಅಂದುಕೊಳ್ಳುತ್ತಾರೆ. ಹಾಗಾಗಿ ಆಪೆಲನ್ನು ಸ್ವಲ್ಪ ಕಚ್ಚಿದಂಗೆ ವಿನ್ಯಾಸ ಮಾಡಿದೆ ಎಂದು ರಾಬ್ ಹೇಳಿದರು.! ಹೇಗಿದೆ ಅಲ್ವಾ ಕಾನ್ಸೆಪ್ಟ್!!

<strong>ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡೋಕೆ 2 ನಿಮಿಷ ಸಾಕು!! ಹೇಗೆ?</strong>ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡೋಕೆ 2 ನಿಮಿಷ ಸಾಕು!! ಹೇಗೆ?

Best Mobiles in India

English summary
It seems Steve Jobs wasn’t a big fan of the first logo of Apple by Ronald Wayne.ro know more visit t0 kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X