Subscribe to Gizbot

ಆಂಡ್ರಾಯ್ಡ್ ಎನ್‌ಗಾಗಿ ಸೂಚಿಸಲಾದ ವಿನೋದಮಯ ಹೆಸರುಗಳು

Written By:

ಎಲ್ಲಾ ವರ್ಷಗಳಂತೆ ಈ ಬಾರಿಯೂ ಗೂಗಲ್ ಹೊಸ ಆಂಡ್ರಾಯ್ಡ್ ಓಎಸ್‌ ಅನ್ನು ಬಿಡುಗಡೆ ಮಾಡುತ್ತಿದೆ. ತನ್ನ ನೆಕ್ಸಸ್ ಡಿವೈಸ್‌ಗಳಿಗಾಗಿ ಎನ್ ಓಎಸ್ ಅನ್ನು ಗೂಗಲ್ ಹೊರತಂದಿದೆ.

ಇನ್ನು ಈ ಎನ್‌ಗೆ ಹೆಸರಿಡುವ ಸುಸಂದರ್ಭ ಒದಗಿ ಬಂದಿದೆ. ಹೇಗೆ ಆಂಡ್ರಾಯ್ಡ್ ಎಮ್‌ಗೆ ಮಾರ್ಶ್ ಮಲ್ಲೊ ಎಂಬ ಹೆಸರನ್ನು ಇಡಲಾಗಿತ್ತು ಅಂತೆಯೇ ಎನ್‌ ಕೂಡ ಯಾವುದಾದರೂ ಅನರೂಪ ಮತ್ತು ಅಪರೂಪದ ಹೆಸರನ್ನು ಪಡೆದುಕೊಳ್ಳಲಿದೆ. ಹಾಗಿದ್ದರೆ ಆಂಡ್ರಾಯ್ಡ್ ಎನ್ ಯಾವ ಹೆಸರಿನಿಂದ ಬಿರುದಾಂಕಿತಗೊಳ್ಳಲಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚು ನಿರೀಕ್ಷಿತ ಹೆಸರು

ನ್ಯೂಟೆಲ್ಲಾ

ಹೆಚ್ಚು ನಿರೀಕ್ಷಿತ ಹೆಸರು ಆಂಡ್ರಾಯ್ಡ್ ಎನ್‌ಗೆ ನ್ಯೂಟೆಲ್ಲಾ ಎಂದಾಗಿದೆ. ಎನ್‌ಗೆ ಈ ಹೆಸರು ಸೂಕ್ತವಾಗಿ ಹೊಂದುತ್ತಿದೆ ಎಂಬುದೇ ಆಂಡ್ರಾಯ್ಡ್ ಅಭಿಮಾನಿಗಳ ಹೇಳಿಕೆಯಾಗಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ನಾಮಕರಣ ಮಾಡಿದ ನಂತರ ತುಸು ಮೋಜಿನ ಹೆಸರುಗಳನ್ನು ನೀಡಲು ಗೂಗಲ್ ಎತ್ತಿದ ಕೈ ಎಂದೆನಿಸಿದೆ.

ಅಧಿಕೃತವಾಗಿ ತಿಳಿಸಲಾಗಿದೆ

ನ್ಯೂಯಾರ್ಕ್ ಚೀಸ್ ಕೇಕ್

ಆಂಡ್ರಾಯ್ಡ್ ಎನ್‌ಗೆ ನ್ಯೂಯಾರ್ಕ್ ಚೀಸ್ ಕೇಕ್ ಎಂಬ ಹೆಸರನ್ನು ನೀಡುವುದಾಗಿ ಅಧಿಕೃತವಾಗಿ ತಿಳಿಸಲಾಗಿದೆ. ಕಿಟ್‌ಕ್ಯಾಟ್‌ಗಾಗಿ ಲೈಮ್ ಪೀ, ಮಾರ್ಶ್ ಮಲ್ಲೊಗಾಗಿ ಮ್ಯಾಕ್‌ಡಾಮಿಯಾ ನಟ್ ಕುಕೀ ಎಂಬ ಹೆಸರನ್ನು ನೀಡಿರುವುದರ ಹಿನ್ನಲೆಯಲ್ಲಿ ನ್ಯೂಯಾರ್ಕ್ ನಟ್ ಕುಕೀ ಎಂಬ ಹೆಸರನ್ನು ಎನ್‌ಗಾಗಿ ನಾವು ಸಲಹೆ ಮಾಡಬಹುದಾಗಿದೆ.

ಹೆಚ್ಚಿನ ಮತ

ನಾನ್‌ಕಟಾಯ್

ಭಾರತೀಯ ಸಿಹಿತಿಂಡಿಗಳಲ್ಲಿ ನಾನ್‌ಕಟಾಯ್ ಹೆಸರನ್ನೂ ಕೂಡ ಆಂಡ್ರಾಯ್ಡ್ ಎನ್‌ಗಾಗಿ ನಾವು ಸೂಚಿಸಬಹುದಾಗಿದೆ. ಈ ಹೆಸರಿಗೆ ಹೆಚ್ಚಿನ ಮತಗಳನ್ನು ನಾವು ನಿರೀಕ್ಷಿಸಬಹುದಾಗಿದೆ. ವಿಶ್ವದಾದ್ಯಂತ ಹೆಚ್ಚಿನ ಜನರು ಆಂಡ್ರಾಯ್ಡ್ ಅನ್ನು ಬಳಸುತ್ತಿದ್ದು ಅದಾಗ್ಯೂ ಎನ್‌ಗೆ ಇಂಗ್ಲೀಷ್ ಹೆಸರೇ ಸಲಹೆ ಮಾಡಿದರೆ ಉತ್ತಮವಾಗಿರುತ್ತದೆ ಅಲ್ಲವೇ?

ಅದ್ಭುತ ಖಾದ್ಯ

ನಾಕೋಸ್

ನಾಕೋಸ್ ಸ್ನ್ಯಾಕ್ಸ್ ಅನ್ನು ಆಂಡ್ರಾಯ್ಡ್‌ ಎನ್‌ಗಾಗಿ ಇರಿಸಬಹುದಾಗಿದೆ. ಗೂಗಲ್ ನಾಕೋಸ್ ಹೆಸರನ್ನು ಎನ್‌ಗಾಗಿ ಇಟ್ಟರೂ ಇಡಬಹುದು. ಇಷ್ಟರವರೆಗೆ ಗೂಗಲ್ ತನ್ನ ಓಎಸ್‌ಗಳಿಗೆಲ್ಲಾ ಅದ್ಭುತ ಖಾದ್ಯಗಳ ಹೆಸರನ್ನೇ ಇರಿಸಿರುವುದರಿಂದ ನಾಕೋಸ್ ಅನ್ನು ಇಲ್ಲಿ ನಿರೀಕ್ಷಿಸಬಹುದಾಗಿದೆ.

ಇದು ಸೂಕ್ತ

ನಟ್ಸ್

ಇದು ಯಾವುದೇ ಬ್ರ್ಯಾಂಡ್ ಹೆಸರು ಆಗಿಲ್ಲದೇ ಇದ್ದರೂ ಗೂಗಲ್‌ಗೆ ಇದು ಸೂಕ್ತವಾದುದು ಎಂಬುದು ನಮ್ಮ ಅನಿಸಿಕೆಯಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಬಜೆಟ್ ಬೆಲೆಯಲ್ಲಿ ಟಾಪ್ 10 ಟ್ಯಾಬ್ಲೆಟ್ಸ್
ಗಗನಯಾತ್ರಿ 'ಕಲ್ಪನಾ ಚಾವ್ಲಾ'ರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?
ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Just like every other year, Google is expected to launch a new iteration of their Android OS at the Google Developer I/O in May. The Search Engine giant introduced the developer version of the OS, Android N for their Nexus devices last week.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot