ಗೂಗಲ್ ನಲ್ಲಿ zerg rush ಅಂತ ಟೈಪ್ ಮಾಡಿದ್ರೆ ?

Posted By: Varun
ಗೂಗಲ್ ನಲ್ಲಿ zerg rush ಅಂತ ಟೈಪ್ ಮಾಡಿದ್ರೆ ?
ನೀವು ಸಾಮಾನ್ಯವಾಗಿ ಏನನ್ನಾದರೂ ಆನ್ಲೈನಿನಲ್ಲಿ ಹುಡುಕಬೇಕಾದರೆ ಥಟ್ ಅಂತ ಗೂಗಲ್ ನ ಸರ್ಚ್ ಪೇಜ್ ಗೆ ಹೋಗಿ ಹುಡುಕುತ್ತೀರಾ ಅಲ್ಲವೆ? ಉದಾಹರಣೆಗೆ: ಐಪಿಎಲ್ ನ ಯಾವುದೋ ಪ್ಲೇಯರ್ ನ ಮಾಹಿತಿ ಇರಬಹುದು, ಕನ್ನಡದ ಕೋಟ್ಯಾಧಿಪತಿಯಲ್ಲಿ ಕೇಳಿರೋ "ಮನೆಗೆ ಮಹಾಲಕ್ಷ್ಮಿ" ಪ್ರಶ್ನೆಗೆ ಉತ್ತರ ಹುಡುಕಲು ಇರಬಹುದು, ಐಶೂ ಬೇಬಿ ಯಾಕೆ ದಪ್ಪಗಾದ್ಲು ಅನ್ನೋ ವಿಷಯ ತಿಳ್ಕೊಳೋ ಕುತೂಹಲ ಇರಬಹುದು, ಇಲ್ಲವೆಅಣ್ಣಾಬಾಂಡ್ ನಿಮ್ಮ ಏರಿಯಾದ ಯಾವ ಥಿಯೇಟರಿನಲ್ಲಿ ರಿಲೀಸ್ ಆಗಿದೆ ಎಂಬ ಮಾಹಿತಿ ಇರಬಹುದು. ಈ ರೀತಿ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹುಡುಕುತ್ತೀರ ಅಲ್ವಾ?

ಬರಿ ಹುಡುಕಿದರೆ ಸಾಕಾ, ಸ್ವಲ್ಪ ಮನರಂಜನೆನೂ ಇರ್ಲಿ ಅಂತ ಗೂಗಲ್ ಒಂದೊಂದು ಸಲಿ ಆಟಾನೂ ಆಡ್ಸುತ್ತೆ. ಬೇಕಾದ್ರೆ ನೀವೇ ಟ್ರೈ ಮಾಡಿ. ಗೂಗಲ್ ನ ಸರ್ಚ್ ಪೇಜ್ ಗೆ ಹೋಗಿ zerg rush ಅಂತ ಟೈ ಮಾಡಿ.ನೀವು ಟೈಪ್ ಮಾಡಿ Enter ಬಟ್ಟನ್ ಒತ್ತುತ್ತಿದ್ದಂತೆಯೇ ಗೊಗಲ್ ನ ಪೇಜ್ ನಲ್ಲಿ ಮೊಟ್ಟೆ ಆಕಾರದ ಸೊನ್ನೆಗಳು ಬೀಳುವುದಕ್ಕೆ ಶುರು ಮಾಡುತ್ತವೆ. ಹಾಗೆಯೇ ಬ್ರಿಕ್ ಗೇಮ್ ಆಡುವಾಗ ಇಟ್ಟಿಗೆಗಳು ಬೀಳುವ ಹಾಗೆ ಒಂದೊಂದೇ ಸಾಲು ಬೀಳುವುದಕ್ಕೆ ಶುರು ಮಾಡುತ್ತವೆ. ಇದೇನಾಯ್ತು ಸ್ಕ್ರೀನ್ ಗೆ ಅಂತ ಯೋಚನೆ ಮಾಡುವ ಹೊತ್ತಿಗೆ ಮತ್ತಷ್ಟು ಸೊನ್ನೆಗಳು ಎಲ್ಲಾ ಕಡೆಯಿಂದ ಬರುವುದಕ್ಕೆ ಶುರು ಮಾಡುತ್ತವೆ. ಮುಂದೆ ಏನಾಗುತ್ತೆ ಅಂತಾ ನಾನು ಹೇಳಲ್ಲ. ನೀವೇ ಟ್ರೈ ಮಾಡಿ ಹೇಗಿತ್ತು ಅಂತ ತಿಳಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot