WhatsApp 2023 Update: ಈ ವರ್ಷ ವಾಟ್ಸಾಪ್ ಸೇರಿದ ಅತ್ಯುತ್ತಮ ಫೀಚರ್ಸ್‌ಗಳ ವಿವರ ಇಲ್ಲಿದೆ!
ಮೆಟಾ ಒಡೆತನದ ವಾಟ್ಸಾಪ್ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುವಲ್ಲಿ ಸದಾ ಮುಂದಿದೆ. ಇದೇ ಕಾರಣಕ್ಕೆ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್ ಪರಿಚಯಿಸಿರುವ ವಾಟ್ಸಾಪ್ ಈ ವರ್ಷವೂ ಕೂಡ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ.
ಹೌದು, ವಾಟ್ಸಾಪ್ ಈ ವರ್ಷ ಪರಿಚಯಿಸಿರುವ ಫೀಚರ್ಸ್‌ಗಳು ಅನೇಕ ಉಪಯೋಗಗಳನ್ನು ನೀಡಲಿವೆ. ಅದರಲ್ಲೂ ನೀವು ಮರೆಯಲೇಬಾರದಂತಹ ಫೀಚರ್ಸ್‌ಗಳು ಕೂಡ ಸೇರಿವೆ. ಇದು ವಾಟ್ಸಾಪ್‌ನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಅಷ್ಟೇ ಅಲ್ಲ ವಾಟ್ಸಾಪ್ ಬಳಸುವ ವಿಧಾನವನ್ನು ಕೂಡ ಬದಲಾಯಿಸಿದೆ. ಹಾಗಾದ್ರೆ ಈ ವರ್ಷ ವಾಟ್ಸಾಪ್ ಬದಲಾವಣೆಯ ದಿಕ್ಕನ್ನೇ ಬದಲಾಯಿಸಿದಂತಹ ಪ್ರಮುಖ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಯ್ಸ್ ಸ್ಟೇಟಸ್
ವಾಟ್ಸಾಪ್ ಈ ವರ್ಷ ಪರಿಚಯಿಸಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ವಾಯ್ಸ್ ಸ್ಟೇಟಸ್ ಆಯ್ಕೆಯು ಕೂಡ ಒಂದಾಗಿದೆ. ಇದು ಟೈಪ್ ಮಾಡುವ ತೊಂದರೆಯಿಲ್ಲದೆ ನಿಮ್ಮ ಆಲೋಚನೆಗಳನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಯವುದಕ್ಕೆ ಅವಕಾಶ ನೀಡಲಿದೆ. ಆದರಿಂದ ನೀವು ನಿಮ್ಮ ಸ್ಟೇಟಸ್‌ನಲ್ಲಿ ವಾಯ್ಸ್ ಮೆಸೇಜ್‌ಗಳನ್ನು ರೆಕಾರ್ಡ್ ಮಾಡಬಹುದು, ಪೋಸ್ಟ್ ಮಾಡಬಹುದು. ಇನ್ನು ವಾಯ್ಸ್ ಸ್ಟೇಟಸ್ ಕೂಡ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಮಾದರಿಯಲ್ಲಿಯೇ 24 ಗಂಟೆಗಳ ಕಾಲ ಉಳಿಯುತ್ತವೆ.
ಪಿನ್ ಮೆಸೇಜಸ್ ಇನ್ ಚಾಟ್
ಇದೇ ವರ್ಷ ವಾಟ್ಸಾಪ್ ಪ್ಲಾಟ್‌ಫಾರ್ಮ್ ಸೇರಿದ ಪ್ರಮುಖ ಫೀಚರ್ಸ್‌ಗಳಲ್ಲಿ ಪಿನ್ ಮೆಸೇಜಸ್ ಇನ್ ಚಾಟ್ ಕೂಡ ಒಂದಾಗಿದೆ. ಇದು ನಿಮ್ಮ ಪ್ರಮುಖ ಚಾಟ್ ಅನ್ನು ಪಿನ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ನಿಮ್ಮ ಪ್ರಮುಖ ಚಾಟ್‌ಗಳನ್ನು ಮೇಲ್ಭಾಗದಲ್ಲಿ ಇರಿಸಿಕೊಳ್ಳುವುದಕ್ಕೆ ಅನುಮತಿಸಲಿದೆ. ನಿಮ್ಮ ಚಾಟ್‌ಗಳನ್ನು ಪಿನ್ ಮಾಡಬೇಕಾದರೆ ಚಾಟ್ ಅನ್ನು ಟ್ಯಾಪ್ ಮಾಡಿ ಹಿಡಿದುಕೊಳ್ಳಬೇಕಾಗುತ್ತದೆ. ನಂತರ ಆಂಡ್ರಾಯ್ಡ್‌ನಲ್ಲಿ ಪಿನ್ ಚಾಟ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಎಡಿಟ್ ಮೆಸೇಜ್
ವಾಟ್ಸಾಪ್‌ನಲ್ಲಿ ನೀವು ತಪ್ಪಾದ ಸಂದೇಶ ಕಳುಹಿಸಿ ಮುಜುಗರಕ್ಕೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಎಡಿಟ್ ಮೆಸೇಜಸ್ ಆಯ್ಕೆಯನ್ನು ನೀಡಲಾಗಿದೆ. ಇದರ ಮೂಲಕ ನೀವು ಸಂದೇಶ ಕಳುಹಿಸಿದ 15ನಿಮಿಷಗಳ ಒಳಗೆ ಸಂದೇಶವನ್ನು ಎಡಿಟ್ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ನೀವು ಒಂದು ವೇಳೆ ತಪ್ಪು ಸಂದೇಶವನ್ನು ಕಳುಹಿಸಿದ್ದರೆ ಅದನ್ನು ಕೂಡಲೇ ಎಡಿಟ್ ಮಾಡಿಬಿಡಬಹುದಾಗಿದೆ.
ಕಂಪ್ಯಾನಿಯನ್ ಮೋಡ್
ಈ ವರ್ಷ ಸೇರಿದ ಪ್ರಮುಖ ಫೀಚರ್ಸ್‌ಗಳಲ್ಲಿ ವಾಟ್ಸಾಪ್ ಕಂಪ್ಯಾನಿಯನ್ ಮೋಡ್ ಕೂಡ ಒಂದಾಗಿದೆ. ಇದರ ಮೂಲಕ ನೀವು ಒಂದಕ್ಕಿಂತ ಹೆಚ್ಚು ಫೋನ್‌ಗಳಲ್ಲಿ ವಾಟ್ಸಾಪ್ ಬಳಸುವುದಕ್ಕೆ ಸಾಧ್ಯವಾಗಲಿದೆ. ಅಂದರೆ ವಾಟ್ಸಾಪ್ ಕಂಪ್ಯಾನಿಯನ್ ಮೋಡ್ ಮೂಲಕ ವಾಟ್ಸಾಪ್ ಅಕೌಂಟ್ ಅನ್ನು ಮತ್ತೊಂದು ಫೋನ್‌ಗೆ ಲಿಂಕ್ ಮಾಡಲು ನಿಮಗೆ ಅನುಮತಿಸುತ್ತದೆ.
ಚಾಟ್ ಲಾಕ್
ನಿಮಗೆ ಅತಿ ಗೌಪ್ಯ ಎನಿಸುವ ಚಾಟ್‌ಗಳನ್ನು ಲಾಕ್ ಮಾಡುವುದಕ್ಕೆ ಈ ಫೀಚರ್ಸ್ ಅನುಮತಿಸಲಿದೆ. ನಿಮಗೆ ಪ್ರೈವೆಸಿ ಎನಿಸುವ ಚಾಟ್‌ಗಳನ್ನು ಪಾಸ್‌ವರ್ಡ್‌ನೊಂದಿಗೆ ಲಾಕ್ ಮಾಡಬಹುದು. ಅಲ್ಲದೆ ಪಾಸ್‌ಕೋಡ್, ಫೇಸ್ ಐಡಿ ಅಥವಾ ಫಿಂಗರ್‌ಪ್ರಿಂಟ್ ಮೂಲಕ ಅನ್‌ಲಾಕ್ ಮಾಡುವುದರಿಂದ ನಿಮ್ಮ ಅನುಮತಿಯಿಲ್ಲದೆ ಬೇರೆಯವರು ಚಾಟ್ ಲಾಕ್‌ಗಳನ್ನು ಪ್ರವೇಶಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಆಯ್ಕೆ
ವಾಟ್ಸಾಪ್‌ನಲ್ಲಿ ನೇರವಾಗಿ ಕಳುಹಿಸುವ ನಿಮ್ಮ ಫೋಟೋಗಳು ಮತ್ತು ವೀಡಿಯೋಗಳ ರೆಸಲ್ಯೂಶನ್ ಸಾಮಾನ್ಯವಾಗಿ ಕಡಿಮೆ ಆಗುತ್ತಿರುತ್ತದೆ. ಆದರೆ ಇದನ್ನು ನಿವಾರಿಸುವ ನಿಟ್ಟಿನಲ್ಲಿ ವಾಟ್ಸಾಪ್ ಇದೇ ವರ್ಷ ಹೆಚ್‌ಡಿ ಫೋಟೋ ಸೆಂಡ್ ಮಾಡುವ ಆಯ್ಕೆ ನೀಡಿದೆ. ಇದರಿಂದ ನೀವು ಯಾವುದೇ ಪಿಕ್ಸೆಲ್ ರೆಸಲ್ಯೂಶನ್ ಕಡಿಮೆ ಮಾಡದೆ ಫೋಟೋ ಹಾಗೂ ವೀಡಿಯೊಗಳನ್ನು ಸೆಂಡ್ ಮಾಡುವುದಕ್ಕೆ ಸಾದ್ಯವಾಗಲಿದೆ.


Click it and Unblock the Notifications








