India

ವಾಟ್ಸಾಪ್‌ನಲ್ಲಿ ಶಾಪಿಂಗ್‌ ಮಾಡುವುದು ಇದೀಗ ಇನ್ನಷ್ಟು ಸುಲಭ!

|

ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ ವಾಟ್ಸಾಪ್‌. ಬಳಕೆದಾರರಿಗೆ ಈಆಲೇ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ವಾಟ್ಶಾಪ್‌ ಇದೀಗ ತನ್ನ ಬ್ಯುಸಿನೆಸ್‌ ವಾಟ್ಸಾಪ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಒಟ್ಟಾರೆ ಶಾಪಿಂಗ್ ಅನುಭವವನ್ನು ಹೆಚ್ಚಿಸಲು ವಾಟ್ಸಾಪ್ ಹೊಸ ಕಾರ್ಟ್ಸ್‌‌ ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಮೂಲಕ ಶಾಪಿಂಗ್‌ ಮಾಡುವ ಅವಕಾಶವನ್ನು ಈಗಾಲೇ ಪರಿಚಯಿಸಲಾಗಿದೆ. ಇದೀಗ ಶಾಪಿಂಗ್‌ ಅನುಭವವನ್ನು ಉತ್ತಮಗೊಳಿಸುವುದಕ್ಕಾಗಿ ಹೊಸ ಕಾರ್ಟ್ಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಬಳಕೆದಾರರು ಈಗ ಕ್ಯಾಟಲಾಗ್ ಬ್ರೌಸ್ ಮಾಡಲು, ಮಲ್ಟಿ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡಲು ಅವಕಾಶವನ್ನು ನೀಡಲಿದೆ. ಈ ಹೊಸ ಫೀಚರ್ಸ್‌ನಿಂದಾಗಿ ಜನರು ವಿವಿಧ ಉತ್ಪನ್ನಗಳನ್ನು ನೋಡಬಹುದು, ಕಾರ್ಟ್ಸ್‌ಗಳನ್ನು ನಿರ್ಮಿಸಬಹುದು, ಆದೇಶಗಳನ್ನು ನೀಡಬಹುದು ಮತ್ತು ಪಾವತಿಸಬಹುದು. ಹೀಗೆ ಎಲ್ಲವೂ ಒಂದೇ ಸೂರಿನಡಿ ಇರುವಂತಹ ಅಪ್ಲಿಕೇಶನ್‌ಗೆ ಪೂರ್ಣ ಪ್ರಮಾಣದ ಶಾಪಿಂಗ್ ಅನುಭವ ದೊರೆಯಲಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲು ‘ಕಾರ್ಟ್ಸ್‌' ಅನ್ನು ಪರಿಚಯಿಸಿದೆ. ಇದರಿಂದ ಶಾಪಿಂಗ್‌ ಮಾಡಲು ವ್ಯಾಪಾರಗಳು ನೀಡುವ ಕ್ಯಾಟಲಾಗ್‌ಗಳನ್ನು ಸುಲಭವಾಗಿ ಬ್ರೌಸ್ ಮಾಡಲು ಮತ್ತು ಆದೇಶಗಳನ್ನು ನೀಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡಲಿದೆ. ಈ ಹೊಸ ಫೀಚರ್ಸ್‌ನಿಂದಾಗಿ ಜನರು ವಿವಿಧ ಉತ್ಪನ್ನಗಳನ್ನು ನೋಡಬಹುದು, ಕಾರ್ಟ್ಸ್‌ಗಳನ್ನು ನಿರ್ಮಿಸಬಹುದು, ಆದೇಶಗಳನ್ನು ನೀಡಬಹುದು ಮತ್ತು ಪಾವತಿಸಬಹುದು. ಹೀಗೆ ಎಲ್ಲವೂ ಒಂದೇ ಸೂರಿನಡಿ ಇರುವಂತಹ ಅಪ್ಲಿಕೇಶನ್‌ಗೆ ಪೂರ್ಣ ಪ್ರಮಾಣದ ಶಾಪಿಂಗ್ ಅನುಭವವನ್ನು ತರುವತ್ತ ವಾಟ್ಸಾಪ್ ಒಂದು ಹೆಜ್ಜೆ ಮುಂದೆ ಸಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಬ್ಯುಸಿನೆಸ್ ಖಾತೆಯಿಂದ ಒದಗಿಸಲಾದ ಕ್ಯಾಟಲಾಗ್ ಅನ್ನು ಬ್ರೌಸ್ ಮಾಡುವಾಗ ಬಳಕೆದಾರರು ನೋಡುವ ‘ಕಾರ್ಟ್‌ಗೆ ಸೇರಿಸು' ಬಟನ್ ಅನ್ನು ತರುತ್ತದೆ. ಇದು ಬಳಕೆದಾರರಿಗೆ ಒಂದು ವ್ಯಾಪಾರಿಗಳಿಂದ ಕಾರ್ಟ್‌ಗೆ ಅನೇಕ ವಸ್ತುಗಳನ್ನು ಸೇರಿಸಲು ಮತ್ತು ಅಪ್ಲಿಕೇಶನ್‌ನ ಮೂಲಕ ನೇರವಾಗಿ ಆದೇಶವನ್ನು ಇರಿಸಲು ಮಾರಾಟಗಾರರೊಂದಿಗೆ ಹಂಚಿಕೊಳ್ಳಲು ಅನುಮತಿಸುತ್ತದೆ. ಅಲ್ಲದೆ ಯಾವುದೇ ಇ-ಕಾಮರ್ಸ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಂತೆಯೇ, ವಾಟ್ಸಾಪ್ ಈಗ ಬಳಕೆದಾರರಿಗೆ ತಮ್ಮ ಕಾರ್ಟ್ಸ್‌ಗಳಿಂದ ಒಂದು ಅಥವಾ ಹೆಚ್ಚಿನ ವಸ್ತುಗಳನ್ನು ಸೇರಿಸಲು ಅಥವಾ ತೆಗೆದುಹಾಕುವ ಆಯ್ಕೆಯನ್ನು ಒದಗಿಸುತ್ತದೆ.

ವಾಟ್ಸಾಪ್

ಇನ್ನು ವಾಟ್ಸಾಪ್ ಬಿಸಿನೆಸ್ ಖಾತೆಯ ಕ್ಯಾಟಲಾಗ್ ಅನ್ನು ಬ್ರೌಸ್ ಮಾಡುವಾಗ ಹೊಸ, ಮೀಸಲಾದ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಅವರು ತಮ್ಮ ಕಾರ್ಟ್ಸ್‌ಗಳಿಗೆ ಸೇರಿಸಿದ ವಸ್ತುಗಳನ್ನು ಸಹ ನೋಡಬಹುದು. ಈ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಿದ ನಂತರ, ಅದನ್ನು ವಾಟ್ಸಾಪ್ ಬಿಸಿನೆಸ್ ಖಾತೆಗೆ ಸಂಬಂಧಿಸಿದ ಮಾರಾಟಗಾರರೊಂದಿಗೆ ಒಂದೇ ಸಂದೇಶವಾಗಿ ಹಂಚಿಕೊಳ್ಳಬಹುದು. ಮಾರಾಟಗಾರನು ಆದೇಶವನ್ನು ದೃಡೀಕರಿಸಲು ಉತ್ತರಿಸುತ್ತಾನೆ. ಮಾರಾಟಗಾರರು ಆದೇಶವನ್ನು ಪೂರ್ಣಗೊಳಿಸಲು ಮತ್ತು ವಿತರಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಾಟ್ಸಾಪ್ ಪೇ ಬಳಸಿ ಪಾವತಿಯನ್ನು ಸ್ವೀಕರಿಸಬಹುದು.

ವಾಟ್ಸಾಪ್‌

ಈ ಮೂಲಕ ವಾಟ್ಸಾಪ್‌ ಬ್ಯುಸಿನೆಸ್‌ ಖಾತೆಯಲ್ಲಿ ಪೂರ್ಣ ಪ್ರಮಾಣದ ಶಾಪಿಂಗ್‌ ಅನುಭವ ನಿಡಲಿದೆ. ಒಂದೇ ವೇದಿಕೆಯಲ್ಲಿ ಹಲವು ವಸ್ತುಗಳನ್ನು ಆರ್ಡರ್‌ ಮಾಡುವ ಮತ್ತು ಆರ್ಡರ್‌ ಮಾಡುವ ವಸ್ತುಗಳಿಗೆ ವಾಟ್ಸಾಪ್‌ ಪೇ ಮೂಲಕ ಪಾವತಿಸುವ ಅವಕಾಶವನ್ನು ಸಹ ನೀಡಲಾಗಿದೆ. ತನ್ನ ಶಾಪಿಂಗ್‌ ವಾಟ್ಸಾಪ್ ಹೊಸ ಕಾರ್ಟ್-ವಿಷಯದ ಸ್ಟಿಕ್ಕರ್ ಅನ್ನು ತನ್ನ ‘ಓಪನ್ ಫಾರ್ ಬಿಸಿನೆಸ್' ಸ್ಟಿಕ್ಕರ್ ಪ್ಯಾಕ್‌ಗೆ ತಂದಿದ್ದು, ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಗ್ರೂಪ್‌ಗಳಲ್ಲಿ ಮತ್ತು ಚಾಟ್‌ಫಾರ್ಮ್‌ಗಳಲ್ಲಿ ಪ್ರಚಾರ ಮಾಡಲು ಪ್ರಾರಂಭಿಸಬಹುದಾಗಿದೆ.

Most Read Articles
Best Mobiles in India

English summary
Users will see an ‘Add to Cart’ button when viewing a WhatsApp Business catalogue.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X