ವಾಟ್ಸಾಪ್‌ಗೆ ಸೇರ್ಪಡೆ ಆಯ್ತು ಹೊಸ ಆಯ್ಕೆ! ಉಪಯೋಗ ಕೇಳಿದ್ರೆ ಬೆರಗಾಗ್ತೀರಾ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ 'ಪ್ರೊಟೆಕ್ಟ್ IP ಅಡ್ರೆಸ್ ಇನ್ ಕಾಲ್ಸ್ (Protect IP address in calls)ಫೀಚರ್ಸ್ ಸೇರ್ಪಡೆ ಮಾಡಿದೆ. ಇದರಿಂದ ಬಳಕೆದಾರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಯಾವುದೇ ಕರೆಗಳನ್ನು ಸ್ವೀಕರಿಸುವಾಗ ಬಳಕೆದಾರರ ಪ್ರೈವೆಸಿಯನ್ನು ಹೆಚ್ಚಿಸಲಿದೆ.
ಹೌದು, ವಾಟ್ಸಾಪ್ Protect IP address in calls ಫೀಚರ್ಸ್ ಪರಿಚಯಿಸಿದೆ. ಇದು ವಾಟ್ಸಾಪ್ ಕಾಲ್‌ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರಕ್ಷಣೆ ಮಾಡಲಿದೆ. ಅಂದರೆ ಕರೆಗಳನ್ನು ಮಾಡುವಾಗ ನಿಮ್ಮ IP ಅಡ್ರೆಸ್ ಅನ್ನು ಮರೆಮಾಡುವ ಆಯ್ಕೆ ನೀಡಲಿದೆ. ಇದರಿಂದ ನಿಮ್ಮ ಕರೆಗಳನ್ನು ಇತರ ವ್ಯಕ್ತಿಗೆ ನೇರವಾಗಿ ಸಂಪರ್ಕಿಸುವ ಬದಲು ಕಂಪನಿಯ ಸರ್ವರ್‌ಗಳ ಮೂಲಕ ಪ್ರಸಾರ ಮಾಡುತ್ತದೆ. ಹಾಗಾದ್ರೆ ವಾಟ್ಸಾಪ್‌ನ ಈ ಫೀಚರ್ಸ್‌ನ ಕಾರ್ಯವೈಖರಿ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ಗೆ ಸೇರ್ಪಡೆ ಆಗಿರುವ Protect IP address in calls ಫೀಚರ್ಸ್ ಹೆಸರೇ ಸೂಚಿಸುವಂತೆ ನಿಮ್ಮ ಐಪಿ ಅಡ್ರೆಸ್ ಅನ್ನು ಸೆಕ್ಯುರ್ ಮಾಡಲಿದೆ. ಇದು ಇಬ್ಬರು ಬಳಕೆದಾರರ ನಡುವಿನ ಕರೆಗಳನ್ನು WhatsApp ನಲ್ಲಿ ಹೇಗೆ ಸಂಪರ್ಕಿಸಲಾಗಿದೆ ಎಂಬುದನ್ನು ಬದಲಾಯಿಸುತ್ತದೆ. ಇದರಿಂದ ನೀವು ಕರೆ ಮಾಡಿದರು ಅಥವಾ ಕರೆ ಸ್ವೀಕರಿಸಿದರೂ ಕೂಡ ನಿಮ್ಮ ಐಪಿ ಅಡ್ರೆಸ್ ಕಾಣುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ವಾಟ್ಸಾಪ್ ಎಲ್ಲಾ ಕರೆಗಳನ್ನು ಕಂಪನಿಯ ಸರ್ವರ್‌ಗಳ ಮೂಲಕ ಪ್ರಸಾರ ಮಾಡಲಿದ್ದು, ಪೀರ್-ಟು-ಪೀರ್ ಸಂಪರ್ಕವನ್ನು ಹೊಂದಿಸಲಿದೆ.
ಇದರಿಂದ ನಿಮ್ಮ IP ಅಡ್ರೆಸ್ ಅನ್ನು ಹೈಡ್ ಮಾಡಲು ಸಾದ್ಯವಾಗಲಿದ್ದು, ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತದೆ. ಆದರೆ ಈ ಕರೆಯ ಸಂಭಾಷಣೆಗಳು ಕೂಡ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರಲಿದೆ. ಸದ್ಯ ಈ ಹೊಸ ಆಯ್ಕೆಯನ್ನು ಆಕ್ಟಿವ್ ಮಾಡುವ ಸೆಟ್ಟಿಂಗ್ iOS ಮತ್ತು Android ನಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಇನ್ನು ಈ ಹೊಸ ಫೀಚರ್ಸ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ವಾಟ್ಸಾಪ್‌ನಲ್ಲಿ 'ಕಾಲ್‌ಗಳಲ್ಲಿ IP ವಿಳಾಸವನ್ನು ರಕ್ಷಿಸಿ' ಫೀಚರ್ಸ್ ಸಕ್ರಿಯಗೊಳಿಸುವುದು ಹೇಗೆ?
* ಮೊದಲಿಗೆ ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿ.
* ನಂತರ ವಾಟ್ಸಾಪ್ ಸೆಟ್ಟಿಂಗ್ಸ್ ಮೆನು ತೆರೆಯಿರಿ ಮತ್ತು ಗೌಪ್ಯತೆ ಟ್ಯಾಪ್ ಮಾಡಿ.
* ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅಡ್ವಾನ್ಸಡ್ ಟ್ಯಾಪ್ ಮಾಡಿ.
* ನಂತರ ಹೊಸ ಪ್ರೈವೆಸಿ ಫೀಚರ್ಸ್ ಅನ್ನು ಸಕ್ರಿಯಗೊಳಿಸಲು ಕರೆಗಳ ಸ್ವಿಚ್‌ನಲ್ಲಿ IP ವಿಳಾಸವನ್ನು ರಕ್ಷಿಸಿ ಟ್ಯಾಪ್ ಮಾಡಿ.
ವಾಟ್ಸಾಪ್‌ನಲ್ಲಿ ಅನಗತ್ಯ ಎನಿಸುವ ನಂಬರ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್ ತೆರೆಯಿರಿ.
* ಇದೀಗ ನಿಮಗೆ ಅನಗತ್ಯ ಎನಿಸುವ ಸಂಖ್ಯೆಯ ಚಾಟ್ ತೆರೆಯಿರಿ
* ಇದರಲ್ಲಿ ಚಾಟ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಡಾಟ್‌ಗಳನ್ನು ಟ್ಯಾಪ್ ಮಾಡಿ
* ಈಗ ಇನ್ನಷ್ಟು ಟ್ಯಾಪ್ ಮಾಡಿ ಮತ್ತು ಬ್ಲಾಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
* ಇದನ್ನು ಖಚಿತಪಡಿಸಲು ಮತ್ತೊಮ್ಮೆ ಬ್ಯಾನ್ ಆಯ್ಕೆಯನ್ನು ಟ್ಯಾಪ್ ಮಾಡಿ.

ನೀವು ಇನ್ನೊಂದು ವಿಧಾನವನ್ನು ಬಳಸಿಕೊಂಡು ಕೂಡ ವಾಟ್ಸಾಪ್ ನಂಬರ್ ಬ್ಲಾಕ್ ಮಾಡಬಹುದು
* ಮೊದಲಿಗೆ ವಾಟ್ಸಾಪ್ ತೆರೆಯಿರಿ
* ನಂತರ ಸೆಟ್ಟಿಂಗ್ಸ್ > ಪ್ರೈವೆಸಿ> ಬ್ಲಾಕ್ ಕಂಟ್ಯಾಕ್ಟ್‌ಗಳಿಗೆ ಹೋಗಿ
* ಇದರಲ್ಲಿ ಆಡ್ ಟ್ಯಾಪ್ ಮಾಡಿ
* ಇದೀಗ ನಿಮಗೆ ಅನಗತ್ಯ ಎನಿಸುವ ಸಂಖ್ಯೆಯನ್ನು ಹುಡುಕಿ ಮತ್ತು ಅದನ್ನು ಆಯ್ಕೆ ಮಾಡಲು ಟ್ಯಾಪ್ ಮಾಡಿ
* ನಂತರ ಖಚಿತಪಡಿಸಲು ಬ್ಲಾಕ್ ಅನ್ನು ಟ್ಯಾಪ್ ಮಾಡಿ
ಈ ಮೂಲಕ ನೀವು ವಾಟ್ಸಾಪ್‌ನಲ್ಲಿ ಅನಗತ್ಯ ಸಂಖ್ಯೆಗಳನ್ನು ಬ್ಲಾಕ್ ಮಾಡಬಹುದಾಗಿದೆ.


Click it and Unblock the Notifications








