Home
ಸುದ್ದಿಜಾಲ

ಇನ್ನು ಸಿಮ್ ಇಲ್ಲದೆ WhatsApp ಬಳಸಲು ಸಾಧ್ಯವಿಲ್ಲ!..ಏನಿದು ಹೊಸ ರೂಲ್ಸ್?

ಕೇಂದ್ರ ಸರ್ಕಾರವು WhatsApp ಸೇರಿದಂತೆ ಎಲ್ಲಾ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ದೂರಸಂಪರ್ಕ ಇಲಾಖೆ (DoT) ಹೊರಡಿಸಿದ ಹೊಸ ನಿರ್ದೇಶನದ ಪ್ರಕಾರ, ಮೊಬೈಲ್ ಸಂಖ್ಯೆಯಿಂದ ನೋಂದಣಿ ಮಾಡುವ ಯಾವುದೇ ಆ್ಯಪ್ ಈಗಿನಿಂದ ಸಿಮ್ ಬೈಂಡಿಂಗ್ ಕಡ್ಡಾಯವಾಗಿ ಅನುಸರಿಸಬೇಕು. ಅಂದರೆ, ಭಾರತದಲ್ಲಿ ಸಿಮ್ ಇಲ್ಲದೇ WhatsApp, Telegram ಬಳಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹಾಗಾದರೆ, ಏನಿದು ಸಿಮ್ ಬೈಂಡಿಂಗ್?, ಇದರಿಂದ ಏನೆಲ್ಲಾ ಬದಲಾವಣೆಗಳು ಆಗಲಿವೆ ಮತ್ತು ಇದು ಅತ್ಯವಶ್ಯಕ ಏಕೆ ಎಂಬುದನ್ನು ತಿಳಿಯೋಣ ಬನ್ನಿ.

ಏನಿದು ಸಿಮ್ ಬೈಂಡಿಂಗ್?
ದೂರಸಂಪರ್ಕ ಇಲಾಖೆ (DoT) ಬಿಡುಗಡೆ ಮಾಡಿದ ಹೊಸ ನಿರ್ದೇಶನದ ಪ್ರಕಾರ, ಈಗ ಮೊಬೈಲ್ ಸಂಖ್ಯೆಯನ್ನು ಬಳಸಿ ಬಳಕೆದಾರರ ಗುರುತನ್ನು ಹೊಂದಿಸುವ ಯಾವುದೇ ಮೆಸೇಜಿಂಗ್ ಆಪ್‌ಗಳು ನೋಂದಣಿ ಸಮಯದಲ್ಲಿ ಬಳಸಿದ ಸಿಮ್ ಕಾರ್ಡ್‌ಗೆ ನಿರಂತರವಾಗಿ ಲಿಂಕ್ ಆಗಿರಬೇಕು. ಇದನ್ನು ಸಿಮ್ ಬೈಂಡಿಂಗ್ ಎಂದು ಕರೆಯಲಾಗುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ, ಬಳಕೆದಾರರು ಮೆಸೇಜಿಂಗ್ ಆಪ್‌ನಲ್ಲಿ ನೋಂದಾಯಿಸಿದಾಗ ಬಳಸಿದ ಅದೇ ಭೌತಿಕ ಸಿಮ್ ಕಾರ್ಡ್ ಫೋನ್‌ನಲ್ಲಿ ಇದ್ದಾಗ ಮಾತ್ರ ಆಪ್ ಕೆಲಸ ಮಾಡಬೇಕು. ನೋಂದಣಿ ಮಾಡಿದ ಸಿಮ್ ತೆಗೆದುಹಾಕಿದಾಗ ಅಥವಾ ಅದೇ ಖಾತೆಯನ್ನು ಮತ್ತೊಂದು ಡಿವೈಸ್‌ನಲ್ಲಿ ತೆರೆಯಲು ಯತ್ನಿಸಿದರೆ, ಆಪ್ ತಕ್ಷಣ ಬಳಕೆಯನ್ನು ನಿಲ್ಲಿಸಬೇಕು ಎಂದು DoT ಸೂಚಿಸಿದೆ.

ಇನ್ನು ಸಿಮ್ ಇಲ್ಲದೆ WhatsApp ಬಳಸಲು ಸಾಧ್ಯವಿಲ್ಲ!..ಏನಿದು ಹೊಸ ರೂಲ್ಸ್?

ಈ ಹೊಸ ಬದಲಾವಣೆ ಏಕೆ?
ದೇಶದಲ್ಲಿ ಕೆಲವು ಮೆಸೇಜಿಂಗ್ ಅಪ್ಲಿಕೇಶನ್ಗಳು ಸಿಮ್ ಲಭ್ಯತೆಯಿಲ್ಲದೆ ಬಳಕೆದಾರರು ತಮ್ಮ ಸೇವೆಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತವೆ ಎಂಬುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ... ದೇಶದ ಹೊರಗಿನಿಂದ ಸೈಬರ್ ವಂಚನೆಗಳನ್ನು ಮಾಡಲು ದೂರಸಂಪರ್ಕ ಸೈಬರ್ ಭದ್ರತೆಗೆ ಸವಾಲನ್ನು ಒಡ್ಡುತ್ತಿದೆ, ಅಧಿಕಾರಿಗಳ ಪ್ರಕಾರ ವಿದೇಶಗಳಿಂದ ಭಾರತೀಯ ಮೊಬೈಲ್ ಸಂಖ್ಯೆಗಳ ಬಳಕೆಯ ಮೂಲಕ OTP ಮೋಸ, ನಕಲಿ ಖಾತೆಗಳ ಸೃಷ್ಟಿ, ಬ್ಯಾಂಕ್ ವಂಚನೆಗಳಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹೊಸ ನಿಯಮಗಳು ಜಾರಿಗೆ ಬಂದ ನಂತರ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳು ಅನುಭವಿಸಬಹುದು. ಹಾಗಾಗಿ, ಮುಂದೆ ಎದುರಾಗಬಹುದಾದ ಬದಲಾವಣೆಗಳು ಯಾವುವು ಎಂಬುದನ್ನು ಸಹ ನೋಡೋಣ.

ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಎದುರಾಗಬಹುದಾದ ಬದಲಾವಣೆಗಳು ಹೀಗಿವೆ,

  • ಡುಯಲ್ ಸಿಮ್ ಫೋನ್‌ನಲ್ಲಿ ನೋಂದಣಿ ಮಾಡಿದ ಸಿಮ್ ತೆಗೆದರೆ ಆ್ಯಪ್ ತಕ್ಷಣ ನಿಲ್ಲಬಹುದು.
  • ಫೋನ್ ಬದಲಿಸಿದರೆ ಹೊಸ ಫೋನ್‌ನಲ್ಲಿ ಅದೇ ಸಿಮ್ ಇದ್ದರೆ ಮಾತ್ರ ಖಾತೆ ಸೆಟಪ್ ಸಾಧ್ಯ.
  • WhatsApp Web ಬಳಸುವವರು ಹೆಚ್ಚಿನ ಬಾರಿ QR ಕೋಡ್ ಸ್ಕ್ಯಾನ್ ಮಾಡಬೇಕಾಗಬಹುದು.
  • ಸಿಮ್ ಪೋರ್ಟ್ ಮಾಡಿದರೆ ಅಥವಾ ಕಳೆದುಹೋದರೆ, ಮರುಪರಿಶೀಲನೆ ಪ್ರಕ್ರಿಯೆ ಅಗತ್ಯವಾಗಬಹುದು.
  • ಅನಧಿಕೃತ ಸಿಮ್ ಜಾರಿ ತಪ್ಪಿಸಲು ಕಠಿಣ KYC ಪರಿಶೀಲನೆ
  • WhatsApp Web ಸೇರಿದಂತೆ ವೆಬ್ ಆವೃತ್ತಿಗಳಿಗೆ 6 ಗಂಟೆಯ ಲಿಮಿಟ್, ಅಂದರೆ,
  • ಯಾವುದೇ ವೆಬ್ ಸೆಷನ್ ಈಗ ಗರಿಷ್ಠ ಆರು ಗಂಟೆಗಳು ಮಾತ್ರ ಸಕ್ರಿಯ ಇರಬಹುದು.
  • ಸೆಷನ್ ಆ ಸಮಯಕ್ಕೆ ಮುಗಿಯುತ್ತಿದ್ದಂತೆ, ಬಳಕೆದಾರರು ಲಾಗ್‌ಔಟ್ ಮಾಡಿಲ್ಲದಿದ್ದರೂ ಸ್ವಯಂಚಾಲಿತ ಲಾಗ್‌ಔಟ್

DoT ತನ್ನ ಪ್ರಕಟಣೆಯಲ್ಲಿ, "ಭಾರತೀಯ ಸಂಖ್ಯೆಯನ್ನು ಸಿಮ್ ಇಲ್ಲದೇಲೂ ಬಳಸಲು ಅವಕಾಶ ನೀಡುವ ಕೆಲವು ಆ್ಯಪ್‌ಗಳು ವಿದೇಶಗಳಿಂದ ದುರುಪಯೋಗಗೊಂಡು ಸೈಬರ್ ಭದ್ರತೆಯನ್ನು ಅಪಾಯಕ್ಕೆ ಒಳಪಡಿಸುತ್ತಿವೆ," ಎಂದು ಹೇಳಿದೆ. ಸರ್ಕಾರದ ಅಭಿಪ್ರಾಯದಲ್ಲಿ, ಈ ಹೊಸ ನಿಯಮಗಳು ದೇಶೀಯ ಬಳಕೆದಾರರ ಡಿಜಿಟಲ್ ಸುರಕ್ಷತೆಯನ್ನು ಬಲಪಡಿಸಲು ಅಗತ್ಯವಾಗಿದೆ. ತಜ್ಞರ ಪ್ರಕಾರ, ಈ ನಿಯಮಗಳು ದೀರ್ಘಾವಧಿಯಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The DoT has mandated SIM binding for messaging apps like WhatsApp and Telegram. The apps will now work only with the same SIM used during registration, blocking access if the SIM is removed or used on another device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+