ವಾಟ್ಸಾಪ್‌ನಿಂದ ಹೊಸ ಸೆಕ್ಯುರಿಟಿ ಫೀಚರ್ಸ್ ಬಿಡುಗಡೆ! ಏನೆಲ್ಲಾ ಉಪಯೋಗ!
ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಹೊಸ ಸೆಕ್ಯುರಿಟಿ ಫೀಚರ್ಸ್ ಅನ್ನು ಪ್ರಕಟಿಸಿದೆ. ಈ ಮೂಲಕ ಬಳಕೆದಾರರಿಗೆ ಹೊಸ ಮಾದರಿಯ ಪ್ರೈವೆಸಿ ಮತ್ತು ಸೆಕ್ಯುರಿಟಿಯನ್ನು ನೀಡಲು ಮುಂದಾಗಿದೆ. ಈಗಾಗಲೇ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಹೊಂದಿರುವ ವಾಟ್ಸಾಪ್ ಹೊಸದಾಗಿ ಮೂರು ಸೆಕ್ಯುರಿಟಿ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ.
ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಪ್ರೈವೆಸಿ ಆಂಡ್ ಸೆಕ್ಯುರಿಟಿ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಹೊಸ ಸೆಕ್ಯುರಿಟಿ ಫೀಚರ್ಸ್‌ಗಳು ಬಳಕೆದಾರರಿಗೆ ಹೊಸ ಅನುಭವದ ಜೊತೆಗೆ ಇನ್ನಷ್ಟು ಪರಿಣಾಮಕಾರಿಯಾದ ಸುರಕ್ಷತೆಯನ್ನು ನೀಡಲಿವೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಸೆಕ್ಯುರಿಟಿ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಕೌಂಟ್ ಪ್ರೊಟೆಕ್ಟ್
ವಾಟ್ಸಾಪ್ ಪರಿಚಯಿಸಿರುವ ಹೊಸ ಸೆಕ್ಯುರಿಟಿ ಫೀಚರ್ಸ್‌ನಲ್ಲಿ ಅಕೌಂಟ್ ಪ್ರೊಟೆಕ್ಟ್ ಕೂಡ ಒಂದಾಗಿದೆ. ಇದರಿಂದ ಬಳಕೆದಾರರು ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್‌ಗೆ ಬದಲಾಯಿಸುವುದನ್ನು ಪ್ರೊಟೆಕ್ಟ್ ಮಾಡಲು ಮುಂದಾಗಿದೆ. ನೀವು ಬೇರೆ ಡಿವೈಸ್‌ಗೆ ವಾಟ್ಸಾಪ್ ಅಕೌಂಟ್ ಅನ್ನು ಬದಲಾಯಿಸಿದಾಗ ಹ್ಯಾಕರ್‌ಗಳು ಪ್ರವೇಶಿಸದಂತೆ ರಕ್ಷಣೆ ನೀಡಲಿದೆ. ಇದಕ್ಕಾಗಿ ಹೆಚ್ಚುವರಿ ಭದ್ರತಾ ಪರಿಶೀಲನೆಗಾಗಿ ತಮ್ಮ ಹಳೆಯ ಡಿವೈಸ್‌ನಲ್ಲಿದ್ದ ನಿಮ್ಮ ಗುರುತನ್ನು ಕೇಳಲಿದೆ. ಆದರಿಂದ ಈ ಫೀಚರ್ಸ್ ನಿಮ್ಮ ಅಕೌಂಟ್ ಅನ್ನು ಅನಧಿಕೃತ ಪ್ರಯತ್ನದ ಕುರಿತು ಎಚ್ಚರಿಸಲಿದೆ ಎಂದು ಹೇಳಲಾಗಿದೆ.
ಡಿವೈಸ್ ವೆರಿಫಿಕೇಷನ್
ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಲ್ಲಿ ಮಾಲ್‌ವೇರ್‌ಗಳ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತವೆ. ಇಂತಹ ಮಾಲ್‌ವೇರ್‌ಗಳ ವಿರುದ್ದ ಸುರಕ್ಷತೆ ನೀಡುವುದಕ್ಕಾಗಿಯೇ ಹೊಸದಾಗಿ ಡಿವೈಸ್ ವೆರಿಫಿಕೇಷನ್ ಫೀಚರ್ಸ್ ಅನ್ನು ಸೇರ್ಪಡೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್ ಯಾವುದೇ ಸಹಾಯದ ಅಗತ್ಯವಿಲ್ಲದೆ ಬಳಕೆದಾರರ ಖಾತೆಗಳನ್ನು ದೃಢೀಕರಿಸಲು ಸಹಾಯ ಮಾಡಲು ಚೆಕ್‌ಗಳನ್ನು ಸೇರಿಸಿದೆ. ಇದು ಯಾರಾದರೂ ಸಂದೇಶವನ್ನು ಸ್ವೀಕರಿಸಿದಾಗ ಅವರ ವಾಟ್ಸಾಪ್ ಕ್ಲೈಂಟ್ ಎಚ್ಚರಗೊಂಡು ವಾಟ್ಸಾಪ್ ಸರ್ವರ್‌ನಿಂದ ಆಫ್‌ಲೈನ್ ಸಂದೇಶವನ್ನು ಹಿಂಪಡೆಯಲಿದೆ. ಇದರಿಂದ ಮಾಲ್‌ವೇರ್‌ಗಳು ನಿಮ್ಮ ಡಿವೈಸ್ ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಆಟೋಮ್ಯಾಟಿಕ್ ಸೆಕ್ಯೂರಿಟಿ ಕೋಡ್ಸ್
ವಾಟ್ಸಾಪ್ ತನ್ನ ಬಳಕೆದಾರರಿಗೆ ಆಟೋಮ್ಯಾಟಿಕ್ ಸೆಕ್ಯೂರಿಟಿ ಕೋಡ್ಸ್ ಆಯ್ಕೆಯನ್ನು ಕೂಡ ನೀಡಿದೆ. ಇದು "ಕೀ ಪಾರದರ್ಶಕತೆ" ಎಂಬ ಪ್ರಕ್ರಿಯೆಯ ಆಧಾರದ ಮೇಲೆ ಪರಿಚಯಿಸಲಾಗಿದೆ. ಈ ಫೀಚರ್ಸ್ ಬಳಕೆದಾರರು ಸುರಕ್ಷಿತ ಸಂಪರ್ಕವನ್ನು ಹೊಂದಿದ್ದಾರೆಯೇ ಅನ್ನೊದನ್ನ ಸ್ವಯಂಚಾಲಿತವಾಗಿ ಪರಿಶೀಲಿಸಲು ಅನುಮತಿಸಲಿದೆ. ನೀವು ವಾಟ್ಸಾಪ್ ಎನ್‌ಕ್ರಿಪ್ಶನ್ ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ, ನಿಮ್ಮ ವೈಯಕ್ತಿಕ ಸಂಭಾಷಣೆಯು ಸುರಕ್ಷಿತವಾಗಿದೆಯೇ ಅನ್ನೊದನ್ನು ತಿಳಿಸಿಕೊಡಲಿದೆ.
ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದು ವಾಟ್ಸಾಪ್ ಬಳಕೆದಾರರಿಗೆ ಡೈರೆಕ್ಟ್ ಆಗಿ ಹೊಸ ಕಂಟ್ಯಾಕ್ಟ್‌ಗಳನ್ನು ಸೇರ್ಪಡೆ ಮಾಡುವ ಮತ್ತು ಅವುಗಳನ್ನು ಸೇವ್ ಮಾಡುವ ಅವಕಾಶ ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ಸ್ ಬೀಟಾ ಪರೀಕ್ಷೆಗೆ ಪ್ರವೇಶವಿರುವವರಿಗೆ ಲಭ್ಯವಾಗಲಿದೆ. ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಚಾಟ್ ಮಾಡಬೇಕಾದರೆ ಫೋನ್‌ಬುಕ್‌ನಲ್ಲಿ ಕಂಟ್ಯಾಕ್ಟ್ ಅನ್ನು ಸೇವ್ ಮಾಡುವುದು ಅವಶ್ಯಕವಾಗಿದೆ. ಕಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸೇವ್ ಮಾಡಿದ ನಂತರ ವಾಟ್ಸಾಪ್‌ಗೆ ತೆರಳಿ ಚಾಟ್ ಮಾಡಬಹುದು. ಆದರೆ ಇದೀಗ ವಾಟ್ಸಾಪ್ ಪರಿಚಯಿಸುತ್ತಿರುವ ಈ ಸಮಸ್ಯೆಗೆ ಮುಕ್ತಿ ಆಡಲಿದೆ. ಅಂದರೆ ಇನ್ಮುಂದೆ ಹೊಸ ಕಂಟ್ಯಾಕ್ಟ್‌ಗಳನ್ನು ವಾಟ್ಸಾಪ್‌ನಿಂದ ಹೊರಹೋಗಿ ಸೇವ್ ಮಾಡಬೇಕಾಗಿಲ್ಲ. ಬದಲಿಗೆ ವಾಟ್ಸಾಪ್‌ನಲ್ಲಿಯೇ ಹೊಸ ಕಂಟ್ಯಾಕ್ಟ್‌ಗಳನ್ನು ಸೇವ್ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ಬಯಸುವ ಯಾವುದೇ ಕಂಟ್ಯಾಕ್ಟ್‌ಗಳನ್ನು ಫೋನ್‌ಬುಕ್‌ನಲ್ಲಿ ಸೇವ್ ಮಾಡಲೇಬೇಕಾದ ಅನಿವಾರ್ಯತೆಯನ್ನು ದೂರಮಾಡಲಿದೆ. ವಾಟ್ಸಾಪ್ ಬಳಸುವಾಗ ನಂಬರ್ ಸೇವ್ ಮಾಡುವುದಕ್ಕಾಗಿ ಅಪ್ಲಿಕೇಶನ್‌ನಿಂದ ಹೊರಹೋಗುವುದನ್ನು ತಪ್ಪಿಸಲಿದೆ. ವಾಟ್ಸಾಪ್‌ನಲ್ಲಿರುವಾಗಲೇ ಕಂಟ್ಯಾಕ್ಟ್‌ಗಳನ್ನು ಸೇವ್ ಮಾಡುವ ಅವಕಾಶ ದೊರೆಯುವುದರಿಂದ ಹೆಚ್ಚುವರಿ ಅಪ್ಲಿಕೇಶನ್ ತೆರೆಯುವ ಸಾಧ್ಯತೆ ದೂರವಾಗಲಿದೆ. ಇದು ವಾಟ್ಸಾಪ್‌ನಲ್ಲಿಯೇ ಕಂಟ್ಯಾಕ್ಟ್ ಅನ್ನು ಸೇವ್ ಮಾಡುವುದಕ್ಕೆ ಅವಕಾಶ ನೀಡಿರುವುದರಿಂದ ಸುಲಭವಾಗಿ ವಾಟ್ಸಾಪ್ ಚಾಟ್ ನಡೆಸಬಹುದಾಗಿದೆ.


Click it and Unblock the Notifications








