Home
ಸುದ್ದಿಜಾಲ

ರಾತ್ರೋರಾತ್ರಿ WhatsAppನಲ್ಲಿ 3 ಪ್ರಮುಖ ಬದಲಾವಣೆ.. ಈಗ 32 ಜನರು ಭಾಗಿ, ಆಡಿಯೋ ಜೊತೆ ಸ್ಕ್ರೀನ್‌ ಶೇರ್!

ವಾಟ್ಸಪ್ ತನ್ನ ಬಳಕೆದಾರರಿಗೆ ಮೂರು ಭರ್ಜರಿ ಸಿಹಿ ಸುದ್ದಿ ನೀಡಿದೆ. ಮೆಟಾ ಕಂಪನಿಯು ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ಆಗಿರುವ WhatsAppನಲ್ಲಿ ಆಗಾಗ್ಗೆ ಹೊಸ ಹೊಸ ಅಪ್‌ಗ್ರೇಡ್‌ ಫೀಚರ್‌ಗಳನ್ನು ಪರಿಸಯಿಸುತ್ತಲೇ ಬಂದಿದೆ. ಇದೀಗ, WhatsAppನಲ್ಲಿ ಮೂರು ಪ್ರಮುಖ ಅಪ್ಡೇಟ್‌ಗಳನ್ನು ಹೊರತರುತ್ತಿದೆ. ಈ 3 ಫೀಚರ್‌ಗಳು WhatsApp ವಿಡಿಯೋ ಕರೆಗೆ ಸಂಬಂಧಿಸಿದ ಅಪ್ಡೇಟ್‌ಗಳಾಗಿವೆ. ಮುಂದಿನ ಕೆಲವೇ ವಾರಗಳಲ್ಲಿ ಎಲ್ಲಾ ಫೀಚರ್‌ಗಳು ಬಳಕೆದಾರರಿಗೆ ಲಭ್ಯವಾಗಲಿದೆ. ಏನಿದು ಹೊಸ ಮೂರು ಅಪ್ಡೇಟ್‌? ಇದರಿಂದ ನಿಮಗೇನು ಲಾಭ? ಎಂಬ ಕುತೂಹಲವಿದೆಯೇ? ಹಾಗಿದ್ರೆ, ಈ ಸ್ಟೋರಿ ಸಂಪೂರ್ಣವಾಗಿ ಓದಿ.

WhatsApp ತನ್ನ ಪ್ಲಾಟ್‌ಫಾರ್ಮ್‌ನಾದ್ಯಂತ 3 ಪ್ರಮುಖ ಅಪ್ಡೇಟ್‌ಗಳನ್ನು ತರಲು ಮುಂದಾಗಿದೆ. WhatsApp ಅನ್ನು ಬೆಂಬಲಿಸುವ ಎಲ್ಲಾ ಮೊಬೈಲ್‌ಗಳಲ್ಲಿ ಇದು ಲಭ್ಯವಾಗಲಿದೆ. ಈ ಎಲ್ಲಾ 3 ಅಪ್ಡೇಟ್‌ಗಳು ಸಹ WhatsApp ಕರೆಗೆ ಸಂಬಂಧಿಸಿದ ಫೀಚರ್‌ಗಳಾಗಿವೆ. ಈ ಅಪ್ಡೇಟ್‌ಗಳು WhatsApp ಕಾಲ್‌ಗಳನ್ನು ಹೆಚ್ಚು (ದೊಡ್ಡ) ಮತ್ತು ಉತ್ತಮ ಮಾಡುವ ಗುರಿಯನ್ನು ಹೊಂದಿವೆ. WhatsApp ಕಂಪನಿಯ ಪ್ರಕಾರ, ಈ ನವೀಕರಣಗಳು WhatsApp ಮುಂದಿನ ಕೆಲವು ವಾರಗಳಲ್ಲಿ ಎಲ್ಲಾ ಕಾರ್ಯರೂಪಕ್ಕೆ ಬರಲಿವೆ.

WhatsApp: ರಾತ್ರೋರಾತ್ರಿ WhatsAppನಲ್ಲಿ 3 ಪ್ರಮುಖ ಬದಲಾವಣೆ: ಏನದು?

2015 ರಲ್ಲಿ WhatsApp ಕಾಲ್ ಫೀಚರ್‌ ಅನ್ನು ಪರಿಚಯಿಸಿದಾಗಿನಿಂದ, ಬಳಕೆದಾರರು ಗ್ರೂಪ್ ಕಾಲ್‌ಗಳು, ವೀಡಿಯೊ ಕಾಲ್‌ಗಳು ಮತ್ತು ಮಲ್ಟಿ-ಪ್ಲಾಟ್‌ಫಾರ್ಮ್ ಬೆಂಬಲದೊಂದಿಗೆ WhatsApp ಕಾಲ್ ಫೀಚರ್‌ ಅನ್ನು ಸುಧಾರಿಸುವುದನ್ನು ಮುಂದುವರಿದೆ. ಇದೀಗ ಬಳಕೆದಾರರ ಅನುಕೂಲಕ್ಕಾಗಿ 3 ಹೊಸ ಅಪ್ಡೇಟ್‌ಗಳನ್ನು ಸೇರಿಸಲಾಗುತ್ತಿದೆ ಎಂದು WhatsApp ಹೇಳಿದೆ.

ಆಡಿಯೋದೊಂದಿಗೆ ಸ್ಕ್ರೀನ್ ಹಂಚಿಕೆ, ವಿಡಿಯೋ ಕಾಲ್‌ಗಳಲ್ಲಿ ಹೆಚ್ಚು ಜನರು ಭಾಗವಹಿಸುವುದು ಮತ್ತು ಸ್ಪೀಕರ್ ಸ್ಪಾಟ್‌ಲೈಟ್ ಸೇರಿದಂತೆ ಕರೆ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಮೆಟಾ MLow ಕೊಡೆಕ್ ಅನ್ನು ಪ್ರಾರಂಭಿಸಿತು. ಇದೀಗ, ಬರೋಬ್ಬರಿ 32 ಜನರು ವಿಡಿಯೋ ಕರೆಯಲ್ಲಿ ಭಾಗವಹಿಸಬಹುದಾದ ಅಪ್ಡೇಟ್‌ ಅನ್ನು WhatsApp ಪರಿಚಯಿಸುತ್ತಿದೆ.

1. Screen sharing with audio: (ಆಡಿಯೋದೊಂದಿಗೆ ವಿಡಿಯೋ ಹಂಚಿಕೆ): ಇದು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವಿಡಿಯೋಗಳನ್ನು ವೀಕ್ಷಿಸಲು ನಿಮಗೆ ಸಹಾಯ ಮಾಡುವ ಫೀಚರ್‌ ಆಗಿದೆ. ಮತ್ತು ಈಗ ಇದು WhatsApp ಬಳಕೆದಾರರಿಗೆ ತಮ್ಮ ಸ್ಕ್ರೀನ್ ಮತ್ತು ಆಡಿಯೋವನ್ನು ಹಂಚಿಕೊಳ್ಳಲು ಅನುಮತಿ ನೀಡುತ್ತದೆ.

2. More participants in a video call: ವಿಡಿಯೋ ಕಾಲ್‌ಗಳಲ್ಲಿ ಹೆಚ್ಚು ಜನರು ಭಾಗವಹಿಸಬಹುದು. ಹೌದು, ಈಗ 32 ಜನರು WhatsApp ವಿಡಿಯೋ ಕರೆಯಲ್ಲಿ ಭಾಗವಹಿಸಬಹುದು ಎಂದು WhatsApp ಹೇಳಿದೆ. ಐಫೋನ್‌ಗಳು, Android, ವೆಬ್ ಆವೃತ್ತಿ ಮತ್ತು PC ಗಳಂತಹ ಸಾಧನಗಳಲ್ಲಿ ಈ ಅಪ್ಡೇಟ್‌ ಲಭ್ಯವಿದೆ.

3. Speaker spotlight: ಇದು ಯಾರು ಮಾತನಾಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯುವ ಫೀಚರ್‌ ಆಗಿದೆ. ವಿಡಿಯೋ ಕಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸುವಾಗ, ನಿರ್ದಿಷ್ಟ ಸಮಯದಲ್ಲಿ ಯಾರು ಮಾತನಾಡುತ್ತಿದ್ದಾರೆಂದು ಗುರುತಿಸಲು ಕೆಲವೊಮ್ಮೆ ಸಮಸ್ಯೆಯಾಗಬಹುದು. ಈ ಅಪ್ಡೇಟ್‌ ಆ ಸಮಸ್ಯೆಯನ್ನು ಪರಿಹರಿಸುತ್ತದೆ. ಇದು ಸ್ವಯಂಚಾಲಿತವಾಗಿ ಸ್ಪೀಕರ್ ಅನ್ನು ಹೈಲೈಟ್ ಮಾಡುತ್ತದೆ ಮತ್ತು ಯಾರು ಮಾತನಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಅದನ್ನು ಡಿಸ್ಲ್ಪೇ ಮೇಲೆ ಪ್ರದರ್ಶಿಸುತ್ತದೆ.

ಈ 3 ಫೀಚರ್‌ಗಳು ಯಾರಿಗೆಲ್ಲಾ ಲಭ್ಯ?

ಇನ್ನೂ, ಮೊದಲೇ ಹೇಳಿದಂತೆ WhatsApp ತಂದಿರುವ ಈ 3 ಪ್ರಮುಖ ಅಪ್ಡೇಟ್‌ಗಳು iPhoneಗಳು, Android, Web ಮತ್ತು PC ಗಳಂತಹ ಎಲ್ಲಾ WhatsApp ಹೊಂದಿರುವ ಸಾಧನಗಳಿಗೆ ಲಭ್ಯವಿದೆ. ನಾವು WhatsApp ನಲ್ಲಿ ಕಾಲ್‌ ಮಾಡುವ ಆಯ್ಕೆಯನ್ನು ಸುಧಾರಿಸುವುದನ್ನು ಮುಂದುವರಿಸುತ್ತೇವೆ. ಆದ್ದರಿಂದ ನೀವು ಜಗತ್ತಿನಲ್ಲಿ ಎಲ್ಲೇ ಇದ್ದರೂ ಉತ್ತಮ ಗುಣಮಟ್ಟದ, ಹೆಚ್ಚು ವೈಯಕ್ತಿಕ ಕರೆಗಳನ್ನು ಮಾಡಬಹುದು ಎಂದು WhatsApp ಭರವಸೆ ನೀಡಿದೆ.

WhatsAppನಲ್ಲಿ ಈ ಫೀಚರ್‌ಗಳೂ ಇರಲಿವೆ

WhatsApp ತನ್ನ ಪ್ಲಾಟ್‌ಫಾರ್ಮ್ ಅನ್ನು ವಿನೂತನ ಫೀಚರ್‌ಗಳ ಮೂಲಕ ನಿರಂತರವಾಗಿ ಅಪ್‌ಗ್ರೇಡ್‌ ಮಾಡುತ್ತಿದೆ. ಈ ಪೈಕಿ ಸ್ಟೇಟಸ್ ಅಪ್‌ಡೇಟ್‌ಗಳ ವಿಭಾಗದಲ್ಲಿ ಖಾಸಗಿ ಟ್ಯಾಗ್ ಸಂಪರ್ಕಗಳು ಎಂಬ ಫೀಚರ್, AI ತಂತ್ರಜ್ಞಾನವನ್ನು ಬಳಸಿಕೊಂಡು ಫೋಟೋಗಳನ್ನು ಎಡಿಟ್ ಮಾಡುವ ಮತ್ತು ಕ್ಯಾಮೆರಾಕ್ಕಾಗಿ ಹೊಸ ಜೂಮ್ ನಿಯಂತ್ರಣ ಫೀಚರ್‌ಗಳಂತಹ ವೈಶಿಷ್ಟ್ಯಗಳನ್ನು ಪರಿಚಯಿಸಿರುವುದನ್ನು ಗಮನಿಸಬೇಕಾದ ಸಂಗತಿಯಾಗಿದೆ.

ಇದಕ್ಕೂ ಮೊದಲು, WhatsAppಗೆ ಹೊಸ ಫೀಚರ್‌ ಅನ್ನು ಸೇರಿಸಲಾಗಿದೆ. ಇದು ಇತ್ತೀಚೆಗೆ ಆನ್‌ಲೈನ್‌ನಲ್ಲಿರುವ ಸಂಪರ್ಕಗಳ ಪಟ್ಟಿಯನ್ನು ತೋರಿಸುತ್ತದೆ (ಸಂಪರ್ಕಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿವೆ). ಅಂದರೆ ಇತ್ತೀಚೆಗೆ WhatsApp ಪ್ಲಾಟ್‌ಫಾರ್ಮ್‌ನಲ್ಲಿ ಯಾರು ಸಕ್ರಿಯರಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ನೀವು ಬಯಸಿದರೆ ಈ ಫೀಚರ್‌ ಪ್ರಯೋಜನವಾಗಲಿದೆ. ಇದಲ್ಲದೇ, ಆಡಿಯೋ ಮತ್ತು ವಿಡಿಯೋ ಕಾಲ್ ಗುಣಮಟ್ಟ ಹೆಚ್ಚಿಸಲು ಇತ್ತೀಚೆಗೆ MLow ಕೊಡೆಕ್ ಅನ್ನು ಆರಂಭಿಸಲಾಗಿದೆ.

Best Mobiles in India

English summary
WhatsApp announces 3 major calling features. 32 participants in video calls, screen sharing with audio, and more major updates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+