65 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸಾಪ್ ಅಕೌಂಟ್ ಬ್ಯಾನ್! ಕಾರಣ ಇಲ್ಲಿದೆ!
ಪ್ರಸ್ತುತ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಕೇವಲ ಯಾವುದೋ ಒಂದು ಪ್ಲಾಟ್‌ಫಾರ್ಮ್‌ಗೆ ಸೀಮಿತವಾಗಿಲ್ಲ. ಎಲ್ಲಾ ರೀತಿಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವಂಚಕರ ಜಾಲ ಸಕ್ರಿಯವಾಗಿದೆ. ಇದರಲ್ಲಿ ವಾಟ್ಸಾಪ್ ಕೂಡ ಸೇರಿಕೊಂಡಿದ್ದು, ವಂಚಕರು ವಾಟ್ಸಾಪ್ ಮೂಲಕ ವಂಚಿಸುವವರ ಪ್ರಮಾಣ ಹೆಚ್ಚಾಗಿದೆ.
ಹೌದು, ವಾಟ್ಸಾಪ್‌ನಲ್ಲಿ ವಂಚಕರ ಜಾಲ ಹೆಚ್ಚಾದಂತೆ, ಅಂತಹ ಅಕೌಂಟ್‌ಗಳನ್ನು ಬ್ಯಾನ್ ಮಾಡುವ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ವಾಟ್ಸಾಪ್ ತನ್ನ ಮೇ 2023ರ ಮಾಸಿಕ ಅನುಸರಣಾ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರ ದೂರುಗಳ ಆಧಾರದ ಮೇಲೆ 65 ಲಕ್ಷಕ್ಕೂ ಹೆಚ್ಚು ಭಾರತೀಯ ಬಳಕೆದಾರರ ವಾಟ್ಸಾಪ್ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗಿದೆ. ಹಾಗಾದ್ರೆ ವಾಟ್ಸಾಪ್ ಮೇ 2023ರ ಮಾಸಿಕ ವರದಿಯಲ್ಲಿ ಏನೆಲ್ಲಾ ಉಲ್ಲೇಖ ಮಾಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಮೇ 2023ರ ಮಾಸಿಕ ಅನುಸರಣಾ ವರದಿ ಬಿಡುಗಡೆ ಮಾಡಿದೆ. ಅದರಂತೆ ಮೇ ತಿಂಗಳಿನಲ್ಲಿ 65 ಲಕ್ಷಕ್ಕೂ ಹೆಚ್ಚು ಭಾರತೀಯ ಬಳಕೆದಾರರನ್ನು ಬ್ಯಾನ್ ಮಾಡಿದೆ. ಭಾರತ ಸರ್ಕಾರದ ಹೊಸ ಐಟಿ ನಿಯಮ 2021ರ ಅನ್ವಯ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಇನ್ನು ಈ ಅವಧಿಯಲ್ಲಿ ವಾಟ್ಸಾಪ್ ಬಳಕೆದಾರರು ಸಲ್ಲಿಸಿದ ಎಲ್ಲಾ ವರದಿಗಳ ಆಧಾರದ ಮೇಲೆ ಈ ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಸ್ಪ್ಯಾಮ್, ಸ್ಕ್ಯಾಮ್‌ಗಳು ಮತ್ತು ವಾಟ್ಸಾಪ್ ಬಳಕೆದಾರರ ಸುರಕ್ಷತೆಗೆ ಅಪಾಯವನ್ನುಂಟು ಖಾತೆಗಳು ಸೇರಿವೆ.
ಇನ್ನು ಈ ಅವಧಿಯಲ್ಲಿ ಮೇ 1 ರಿಂದ ಮೇ 31 ರವರೆಗಿನ ಡೇಟಾವನ್ನು ಒಳಗೊಂಡಿದೆ. ಅದರಂತೆ ವಾಟ್ಸಾಪ್ ಭಾರತದಲ್ಲಿ 6,508,000 ಅಕೌಂಟ್‌ಗಳನ್ನು ಬ್ಯಾನ್ ಮಾಡಿರುವುದಾಗಿ ವರದಿಯಾಗಿದೆ. ಇದರಲ್ಲಿ 2,420,700 ಅಕೌಂಟ್‌ಗಳನ್ನು ಬಳಕೆದಾರರು ವರದಿ ಮಾಡುವ ಮೊದಲೇ ಬ್ಯಾನ್ ಮಾಡಲಾಗಿದೆ. ಇವುಗಳನ್ನು ತಡೆಗಟ್ಟುವಿಕೆ ಮತ್ತು ಪತ್ತೆ ಕ್ರಮಗಳ ಮೂಲಕ ಗುರುತಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದಲ್ಲದೆ ವಾಟ್ಸಾಪ್ ಈ ಸಮಯದಲ್ಲಿ ಬಳಕೆದಾರರಿಂದ 3,912 ಕುಂದುಕೊರತೆಗಳ ವರದಿಗಳನ್ನು ಸ್ವೀಕರಿಸಿದೆ. ಇದರಲ್ಲಿ ವಾಟ್ಸಾಪ್ 297 ಖಾತೆಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನು ವಾಟ್ಸಾಪ್ ದುರುಪಯೋಗ ಪತ್ತೆಗಾಗಿ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅದರಂತೆ ರಿಜಿಸ್ಟರ್ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ ಕ್ರಮ ತೆಗೆದುಕೊಳ್ಳಲಿದೆ. ಅಷ್ಟೇ ಅಲ್ಲ ಬಳಕೆದಾರರ ರಿಪೋರ್ಟ್‌ಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ನಾವು ಕ್ರಮ ತೆಗೆದುಕೊಳ್ಳುವುದಾಗಿ ವಾಟ್ಸಾಪ್ ಹೇಳಿದೆ.

ಇನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ಒಂದಿಲ್ಲೊಂದು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದಕ್ಕೆ ಇಂಬು ನೀಡುವಂತೆ ಇದೀಗ ನೇರ ಚಾಟ್ ವರ್ಗಾವಣೆ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಒಂದು ಡಿವೈಸ್‌ನಿಂದ ಮತ್ತೊಂದು ಡಿವೈಸ್‌ಗೆ ಚಾಟ್ ವರ್ಗಾವಣೆ ಮಾಡುವುದು ಸುಲಭವಾಗಲಿದೆ. ಅಷ್ಟೇ ಅಲ್ಲ ಯಾವುದೇ ಕ್ಲೌಡ್ ಇಲ್ಲದೆ ಇದ್ದರೂ ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೇ ನಿಮ್ಮ ಚಾಟ್‌ಗಳನ್ನು ಟ್ರಾನ್ಸಫರ್ ಮಾಡಬಹುದಾಗಿದೆ.
ವಾಟ್ಸಾಪ್‌ನಲ್ಲಿ ನೇರ ಚಾಟ್ ವರ್ಗಾವಣೆ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಎರಡೂ ಫೋನ್‌ಗಳು ವೈ-ಫೈಗೆ ಸಂಪರ್ಕಗೊಂಡಿರಬೇಕು.
ಹಂತ:2 ನಂತರ ಚಾಟ್ ಇರುವ ನಿಮ್ಮ ಹಳೆಯ ಫೋನ್‌ನಲ್ಲಿ, ಸೆಟ್ಟಿಂಗ್‌ಗಳು > ಚಾಟ್‌ಗಳು > ಚಾಟ್ ವರ್ಗಾವಣೆಗೆ ಹೋಗಿ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡಿರಿ.
ಹಂತ:3 ಕೂಡಲೇ ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಚಾಟ್‌ಗಳ ವರ್ಗಾವಣೆ ಪ್ರಾರಂಭವಾಗಲಿದೆ.


Click it and Unblock the Notifications








