Home
ಸುದ್ದಿಜಾಲ

WhatsApp Ban: ಏಕಕಾಲಕ್ಕೆ 7 ಮಿಲಿಯನ್ ವಾಟ್ಸಪ್ ಖಾತೆಗಳು ನಿಷೇಧ:​ ನಿಮ್ಮ ಅಕೌಂಟ್‌ ಕೂಡ ಬ್ಯಾನ್ ಆಗಬಹುದು!

ವಾಟ್ಸಪ್ (WhatsApp) ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋಟ್ಯಂತರ ಜನರು ವಾಟ್ಸಪ್ ಮೂಲಕ ಚಾಟ್ ​ಮಾಡ್ತಿದ್ದಾರೆ. WhatsApp ತನ್ನ ಬಳಕೆದಾರರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಹಲವು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಈ ಮಧ್ಯೆ ವಾಟ್ಸಪ್, ಕೆಲವು ಆಕ್ಷೇಪಾರ್ಹ WhatsApp ಅಕೌಂಟ್‌ಗಳನ್ನು ಬ್ಯಾನ್ (WhatsApp Ban) ಮಾಡಿದೆ. ಈ ಆದೇಶದಲ್ಲಿ, ಏಪ್ರಿಲ್ 2024ರಲ್ಲಿ ಸುಮಾರು 7.1 ಮಿಲಿಯನ್ ಭಾರತೀಯರ ವಾಟ್ಸಪ್ ಖಾತೆಗಳನ್ನು ನಿಷೇಧಿಸಿದೆ. ಸ್ವಲ್ಪ ಯಾಮಾರಿದ್ರೂ ತಪ್ಪಿದ್ರೂ, ನಿಮ್ಮ ಖಾತೆಯೂ ಬ್ಯಾನ್ ಆಗುತ್ತೆ ಹುಷಾರ್!

ಹೌದು, ವಾಟ್ಸಪ್​ (WhatsApp) ಬಳಕೆದಾರರಿಗೆ ಗೌಪ್ಯತೆಯನ್ನು ಸುಧಾರಿಸುವ ಉದ್ದೇಶದಿಂದ ಈ ಖಡಕ್ ನಿರ್ಧಾರಗಳನ್ನು ಕೈಗೊಂಡಿದೆ. ಇದರ ಭಾಗವಾಗಿ, ನಿಯಮಗಳನ್ನು ಉಲ್ಲಂಘಿಸುವ WhatsApp ಅಕೌಂಟ್‌ಗಳನ್ನು ನಿಷೇಧಿಸುತ್ತದೆ. ನಿಯಮಗಳನ್ನು ಉಲ್ಲಂಘಿಸುವ ಖಾತೆಗಳ ವಿಷಯದಲ್ಲಿ WhatsApp ತುಂಬಾ ಕಟ್ಟುನಿಟ್ಟಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಮತ್ತು ಮಾರ್ಗಸೂಚಿಗಳು ಹಾಗೂ ಕಾನೂನುಗಳನ್ನು ಅನುಸರಿಸದ ವಾಟ್ಸಪ್ ಅಕೌಂಟ್‌ಗಳು ಶಾಶ್ವತವಾಗಿ ಬ್ಯಾನ್ (WhatsApp Ban) ಆಗೋದು ಗ್ಯಾರಂಟಿ.

WhatsApp Ban: 7 ಮಿಲಿಯನ್ ವಾಟ್ಸಪ್ ಖಾತೆಗಳು ಬ್ಯಾನ್!

ಇತ್ತೀಚಿನ ವರದಿಯ ಪ್ರಕಾರ, WhatsApp ಏಪ್ರಿಲ್ 1 ಮತ್ತು ಏಪ್ರಿಲ್ 30, 2024ರ ನಡುವೆ 7,182,000 WhatsApp ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 1,302,000 ಅಕೌಂಟ್‌ಗಳು ಯಾವುದೇ ಬಳಕೆದಾರ ವರದಿ ಅಥವಾ ದೂರು ನೀಡುವ ಮೊದಲೇ ಪೂರ್ವಭಾವಿಯಾಗಿ ಬ್ಯಾನ್ ಮಾಡಲಾಗಿದೆ. ದುರ್ಬಳಕೆಯನ್ನು ತಡೆಯಲು ಮತ್ತು ವಿಶೇಷವಾಗಿ ಭದ್ರತಾ ಕ್ಷೇತ್ರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವುದು WhatsAppನ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ. ಇದಲ್ಲದೇ, ದುರುಪಯೋಗ ಮಾದರಿಗಳನ್ನು ಪತ್ತೆಹಚ್ಚಲು ಸಹ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಇನ್ನೂ, ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಏಪ್ರಿಲ್ ತಿಂಗಳಲ್ಲಿ 10,554 ಬಳಕೆದಾರರ ವರದಿಗಳನ್ನು ಸ್ವೀಕರಿಸಿದೆ. ಅಕೌಂಟ್‌ ಸಪೋರ್ಟ್‌, ನಿಷೇಧ ಮನವಿಗಳು, ಪ್ರೊಡಕ್ಟ್‌ ಅಸಿಸ್ಟೆನ್ಸ್ (product assistance) ಮತ್ತು ಸುರಕ್ಷತೆಯ ದೃಷ್ಟಿಗಳಂತಹ ವಿವಿಧ ಸಮಸ್ಯೆಗಳನ್ನು ಪರಿಹರಿಸಿದೆ. ಹೆಚ್ಚಿನ ಸಂಖ್ಯೆಯ ವರದಿಗಳ ಹೊರತಾಗಿಯೂ, ಈ ದೂರುಗಳ ಆಧಾರದ ಮೇಲೆ ಕೇವಲ 6 ವಾಟ್ಸಪ್ (WhatsApp) ಖಾತೆಗಳ ಮೇಲೆ ಮಾತ್ರ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಕಂಟಿನ್ಯೂ ಆದ್ರೆ, ಲೈಫ್‌ ಲಾಂಗ್ ಬ್ಯಾನ್‌ ಎಂದು ಎಚ್ಚರಿಸಿದೆ.

ವಾಟ್ಸಪ್ ಖಾತೆ ನಿಷೇಧಕ್ಕೆ ಕಾರಣಗಳೇನು?

ವಾಟ್ಸಪ್​ ಬಳಕೆದಾರರಿಗೆ ಗೌಪ್ಯತೆಯನ್ನು ಸುಧಾರಿಸುವ ಉದ್ದೇಶದಿಂದ ಈ ನಿರ್ಧಾರಗಳನ್ನು ಕೈಗೊಂಡಿದೆ. ನಿಯಮಗಳನ್ನು ಉಲ್ಲಂಘಿಸುವ ಖಾತೆಗಳ ವಿಷಯದಲ್ಲಿ WhatsApp ತುಂಬಾ ಕಟ್ಟುನಿಟ್ಟಾಗಿದೆ. ಇದರ ಭಾಗವಾಗಿ, ನಿಯಮಗಳನ್ನು ಉಲ್ಲಂಘಿಸುವ ಖಾತೆಗಳನ್ನು WhatsApp ನಿಷೇಧಿಸುತ್ತದೆ. ಒಂದು ವೇಳೆ ನಿಯಮ ಉಲ್ಲಂಘನೆಯಾದ್ರೆ ವಾಟ್ಸಾಪ್​ ಖಾತೆಗಳು ಪರ್ಮನೆಂಟ್​ ಆಗಿ ಬ್ಯಾನ್​ ಮಾಡಲಾಗುತ್ತದೆ. ಭಾರತೀಯ ಐಟಿ ಕಾಯಿದೆ 2021ರ ನಿಬಂಧನೆಗಳನ್ನು ಉಲ್ಲಂಘಿಸಿದ ಅಕೌಂಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ವರದಿಯಲ್ಲಿ ತಿಳಿಸಿದೆ.

ಹ್ಯಾಕರ್‌ಗಳು, ವಂಚಕರ ಸಂಖ್ಯೆಯೂ ಹೆಚ್ಚಳ

WhatsApp ಭಾರತದಲ್ಲಿ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ. ಫ್ರೆಂಡ್ಸ್, ಫ್ಯಾಮಿಲಿ ಮೆಂಬರ್ಸ್, ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಇದನ್ನು ಬಳಸಲಾಗುತ್ತದೆ. ವಾಟ್ಸಪ್ (WhatsApp) ಮೂಲಕ ಇತ್ತೀಚೆಗೆ ಅಮಾಯಕರನ್ನು ವಂಚಿಸಲು ಹ್ಯಾಕರ್‌ಗಳು ಮತ್ತು ಸೈಬರ್ ವಂಚಕರ ಸಂಖ್ಯೆಯೂ ಹೆಚ್ಚುತ್ತಿದೆ. ವಾಟ್ಸಪ್‌ ಗ್ರೂಪ್‌ನಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ವಂಚನೆ ನಡೆಯುತ್ತಿದೆ. ಇದಲ್ಲದೆ, ಇತ್ತೀಚಿಗೆ ವಾಟ್ಸಪ್‌ನಲ್ಲಿ ಸೆಕ್ಸ್‌ಟಾರ್ಶನ್ ವಿಡಿಯೋ ಕಾಲ್ ಹಗರಣ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ.

ಎಚ್ಚರ..! ಕಾಲ್ ಎತ್ತಿದ್ರೆ ಬಲೆಗೆ ಬೀಳುತ್ತೀರಿ

ಈ ಹಗರಣದಲ್ಲಿ ಬಳಕೆದಾರರು ತಮ್ಮ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಲೀಕ್​ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಾರೆ. ಹಣಕ್ಕೆ ಬೇಡಿಕೆಯಿಡುವ ಮೊದಲು ವಿಡಿಯೋ ಕರೆಗಳನ್ನು ಮಾಡಲಾಗುತ್ತದೆ. ನೀವು ಕಾಲ್ ಎತ್ತಿದರೆ ಲೈಂಗಿಕ ದೌರ್ಜನ್ಯದ ಬಲೆಗೆ ಬೀಳುವುದು ಗ್ಯಾರಂಟಿ. ಕೇಳಿದಷ್ಟು ದುಡ್ಡು ಕೊಡದಿದ್ರೆ ಅಥವಾ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದ್ರೆ ಬಳಕೆದಾರರ ವೈಯಕ್ತಿಕ ಮಾಹಿತಿ ಅಥವಾ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವುದಾಗಿ ಕರೆ ಮಾಡುವವರು ಧಮ್ಕಿ ಹಾಕುತ್ತಾರೆ.

WhatsApp Ban: 7 ಮಿಲಿಯನ್ ವಾಟ್ಸಪ್ ಖಾತೆಗಳು ಬ್ಯಾನ್!

ನಿಮ್ಮ ಖಾತೆಯೂ ಬ್ಯಾನ್ ಆಗಬಹುದು!

ವಾಟ್ಸಪ್‌ನಲ್ಲಿ ಒಂದು ಸಣ್ಣ ತಪ್ಪಾದರೂ ನಿಮ್ಮ WhatsApp ಖಾತೆ ನಿಷೇಧ ಗ್ಯಾರಂಟಿ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ತಿಂಗಳು ಮಿಲಿಯನ್ ವಾಟ್ಸಪ್‌ ಅಕೌಂಟ್ ಬ್ಯಾನ್ ಆಗುತ್ತಿವೆ. ವಾಟ್ಸಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಮೆಸೇಜ್‌ಗಳನ್ನು ಕಳುಹಿಸಿದ್ರೆ ನಿಮ್ಮನ್ನು WhatsApp Ban ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.

ಒಟ್ನಲ್ಲಿ, WhatsApp ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಿದೆ. ಜೊತೆಗೆ, ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಮುಖ್ಯವಾಗಿ, ಭದ್ರತಾ ಕ್ಷೇತ್ರದಲ್ಲಿ ಅನೇಕ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವರದಿ ಪ್ರಕಾರ, ಏಪ್ರಿಲ್ 2024ರಲ್ಲಿ 71 ಲಕ್ಷ ವಾಟ್ಸಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವಾಟ್ಸಪ್ ಖಾತೆಯಗಳನ್ನು ನಿಷೇಧಿಸಲಾಗಿದೆ.

Best Mobiles in India

English summary
WhatsApp bans 7.1 million Indian accounts in April 2024 to safeguard platform integrity and curb misuse. The company proactively banned 1.3 million accounts and leverages advanced technology to detect suspicious behavior patterns.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+