ಭಾರತೀಯರಿಗೆ ಬಿಗ್ ಶಾಕ್ ಕೊಟ್ಟ ವಾಟ್ಸಾಪ್! ಒಂದೇ ತಿಂಗಳಲ್ಲಿ 71.1 ಲಕ್ಷ ಅಕೌಂಟ್ ಬ್ಯಾನ್!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಸೆಪ್ಟೆಂಬರ್ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಹೊಸ ಐಟಿ ನಿಯಮಗಳ ಪ್ರಕಾರ ಮಾಸಿಕ ಅನುಸರಣಾ ವರದಿಯನ್ನು ಪ್ರತಿ ತಿಂಗಳು ಬಿಡುಗಡೆ ಮಾಡುವುದು ಕಡ್ಡಾಯವಾಗಿದೆ. ಇನ್ನು ವಾಟ್ಸಾಪ್ ಪ್ರಕಟಿಸಿರುವ ವರದಿಯ ಪ್ರಕಾರ ಸೆಪ್ಟೆಂಬರ್‌ನಲ್ಲಿ ವಾಟ್ಸಾಪ್ ಭಾರತದಲ್ಲಿ 71.1 ಲಕ್ಷ ಖಾತೆಗಳನ್ನು ನಿಷೇಧಿಸಿದೆ.
ಹೌದು, ವಾಟ್ಸಾಪ್ ಭಾರತದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 71.1 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ಹೇಳಿದೆ. ಭಾರತದ ಐಟಿ ನಿಯಮಗಳ ಅನ್ವಯ ಈ ಕ್ರಮ ಕೈಗೊಂಡಿರುವುದಾಗಿ ವಾಟ್ಸಾಪ್ ಹೇಳಿಕೊಂಡಿದೆ. ಇದು ಸೆಪ್ಟೆಂಬರ್ 1-30 ರ ನಡುವಿನ ವರದಿ ಎಂದು ವಾಟ್ಸಾಪ್ ಹೇಳಿಕೊಂಡಿದೆ. ಹಾಗಾದ್ರೆ ವಾಟ್ಸಾಪ್ ಈ ಪರಿಯ ಅಕೌಂಟ್‌ಗಳನ್ನು ಬ್ಯಾನ್ ಮಾಡಿರುವುದಕ್ಕೆ ನೀಡಿರುವ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಭಾರತದ ಐಟಿ ನಿಯಮಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಕೂಡ ಅನುಸರಣಾ ವರದಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಅದರಂತೆ ಒಂದು ತಿಂಗಳ ಅವಧಿಯಲ್ಲಿ ಬಳಕೆದಾರರಿಗೆ ಸ್ವಿಕರಿಸಿದ ದೂರುಗಳು, ಅದಕ್ಕೆ ತಾನು ತೆಗೆದುಕೊಂಡ ಕ್ರಮಗಳೇನು? ಐಟಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ತಾನು ಯಾವೆಲ್ಲಾ ಅಕೌಂಟ್‌ಗಳನ್ನು ಬ್ಯಾನ್ ಮಾಡಿದ್ದೇವೆ ಎಂಬೆಲ್ಲಾ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಅದರಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 71.1 ಲಕ್ಷ ಅಕೌಂಟ್‌ಗಳನ್ನು ಬ್ಯಾನ್ ಮಾಡಿದೆ.
ಇದರಲ್ಲಿ 25.7 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ರಿಪೋರ್ಟ್ ಸ್ವೀಕರಿಸದೆ ಪೂರ್ವಭಾವಿಯಾಗಿ ಬ್ಯಾನ್ ಮಾಡಿರುವುದಾಗಿ ಹೇಳಿದೆ. ಇದು ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ಅಂದರೆ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ಎದುರಿಸಲು ವಾಟ್ಸಾಪ್‌ನ ಸ್ವಂತ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ.

ಈ ಕ್ರಮವು ಸೆಪ್ಟೆಂಬರ್ 1-30 ರ ನಡುವೆ ತೆಗೆದುಕೊಂಡ ನಿರ್ಧಾರವಾಗಿದೆ. ಇನ್ನು ಈ ಅವಧಿಯಲ್ಲಿ ವಾಟ್ಸಾಪ್ ಪ್ಲಾಟ್‌ಫಾರ್ಮ್ ದೂರುಗಳ ಮೇಲ್ಮನವಿ ಸಮಿತಿಯಿಂದ ಆರು ಆದೇಶಗಳನ್ನು ಸ್ವೀಕರಿಸಿದೆ. ಅಲ್ಲದೆ ಈ ಎಲ್ಲಾ ಆರು ಆದೇಶಗಳನ್ನು ಅನುಸರಿಸಲಾಗಿದೆ. ಅಂದರೆ ಸೆಪ್ಟೆಂಬರ್‌ನಲ್ಲಿ ಖಾತೆ ಬೆಂಬಲ 1,031, ಬ್ಯಾನ್ ಮೇಲ್ಮನವಿ 7,396, ಇತರ ಬೆಂಬಲ 1,518, ಉತ್ಪನ್ನ ಬೆಂಬಲ 370 ಮತ್ತು ಸುರಕ್ಷತೆ 127 ಎಲ್ಲವನ್ನು ಸೇರಿ ಒಟ್ಟು 10,442 ಬಳಕೆದಾರರ ವರದಿಗಳನ್ನು ಸ್ವೀಕರಿಸಿರುವುದಾಗಿ ವಾಟ್ಸಾಪ್ ಹೇಳಿದೆ.
ಈ ಅವಧಿಯಲ್ಲಿ 85 ಖಾತೆಗಳ ಮೇಲೆ ಬಂದ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ "ಅಕೌಂಟ್ಸ್ ಆಕ್ಷನ್ಡ್" ವರದಿಯನ್ನು ಆಧರಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ವಾಟ್ಸಾಪ್ ವಿವರಿಸಿದೆ. ಸದ್ಯ ಬ್ಯಾನ್ ಆಗಿರುವ ವಾಟ್ಸಾಪ್ ಅಕೌಂಟ್‌ಗಳನ್ನು ಮತ್ತೆ ಪ್ರವೇಶಿಸಬೇಕಾದರೆ ಬಳಕೆದಾರ ವಿನಂತಿಸಿದ ಮರುಸ್ಥಾಪನೆ ಮತ್ತು ವಿನಂತಿಯ ನಿರಾಕರಣೆ ಮೂಲಕ ವರದಿಗಳನ್ನು ಪರಿಶೀಲಿಸಿರಬಹುದು.

ಇನ್ನು ಇತ್ತೀಚಿಗೆ ಒಂದು ಸ್ಮಾರ್ಟ್‌ಫೋನ್‌ನಲ್ಲಿಯೇ ಎರಡು ವಾಟ್ಸಾಪ್ ಅಕೌಂಟ್‌ಗಳಿಗೆ ಲಾಗ್ ಇನ್ ಆಗಬಹುದು ಅಂತಾ ವಾಟ್ಸಾಪ್ ಹೇಳಿದೆ. ಈ ಮೂಲಕ ಏಕಕಾಲದಲ್ಲಿ ಎರಡು ಆಕ್ಟಿವ್ ವಾಟ್ಸಾಪ್ ಅಕೌಂಟ್‌ಗಳನ್ನು ಲಾಗಿನ್ ಆಗಬಹುದು. ಇದಕ್ಕಾಗಿ ನೀವು ಯಾವುದೇ ವಾಟ್ಸಾಪ್ ಅಕೌಂಟ್‌ನಿಂದ ಲಾಗ್‌ಔಟ್ ಆಗಬೇಕಾದ ಅವಶ್ಯಕತೆಯಿಲ್ಲ ಎಂದು ಸಹ ಮೆಟಾ ಕಂಪೆನಿ ಸ್ಪಷ್ಟಪಡಿಸಿದೆ.
ಇನ್ನು ವಾಟ್ಸಾಪ್‌ನ ಈ ಹೊಸ ಆಯ್ಕೆಯಂತೆ ನಿಮ್ಮ ಮೊಬೈಲ್‌ನಲ್ಲಿ ಎರಡು ಅಕೌಂಟ್‌ಗಳನ್ನು ಸೆಟ್ ಮಾಡಲು, ಬಳಕೆದಾರರಿಗೆ ಎರಡನೇ ಫೋನ್ ಸಂಖ್ಯೆ ಮತ್ತು SIM ಕಾರ್ಡ್ ಅಥವಾ ಮಲ್ಟಿ-ಸಿಮ್ ಬೆಂಬಲಿಸುವ ಫೋನ್ ಅಗತ್ಯವಿದೆ. ನಿಮ್ಮ ಮೊಬೈಲ್ ಡ್ಯುಯಲ್ ಸಿಮ್ ಬೆಂಬಲಿಸುತ್ತಿದ್ದರೆ ನೀವು ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ ಸೆಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ವಾಟ್ಸಾಪ್ ಸೆಟ್ಟಿಂಗ್ಸ್ ತೆರೆಯಬೇಕು, ನಂತರ ಅವರ ಹೆಸರಿನ ಮುಂದಿನ ಬಾಣದ ಮೇಲೆ ಟ್ಯಾಪ್ ಮಾಡಿ ಮತ್ತು "ಖಾತೆಯನ್ನು ಸೇರಿಸಿ" ಕ್ಲಿಕ್ ಮಾಡಿ. ಇದರಲ್ಲಿ ದ್ವಿತೀಯ ಫೋನ್ ಸಂಖ್ಯೆಯನ್ನು ಬಳಸಿಕೊಂಡು, ಎರಡನೇ ವಾಟ್ಸಾಪ್ ಅಕೌಂಟ್ ಅನ್ನು ಸೆಟ್ ಮಾಡಬಹುದು.


Click it and Unblock the Notifications








