ಆಂಗಸ್ಟ್‌ ತಿಂಗಳಲ್ಲಿ 20 ಲಕ್ಷ ಭಾರತೀಯರ ವಾಟ್ಸಾಪ್ ಅಕೌಂಟ್‌ ಬ್ಯಾನ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸಾಪ್‌ ಆಗಸ್ಟ್‌ ತಿಂಗಳಲ್ಲಿ ಭಾರತದಲ್ಲಿ 20 ಲಕ್ಷ ಖಾತೆಗಳನ್ನು ನಿಷೇದಿಸಿದೆ. ಭಾರತ ಸರ್ಕಾರದ ಹೊಸ ಐಟಿ ನಿಯಮದ ಪ್ರಕಾರ ಮಾಸಿಕ ಅನುಸರಣಾ ವರದಿಯಲ್ಲಿ ತಾನು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಮಾಸಿಕ ಅನುಸರಣೆ ವರದಿಯ ಪ್ರಕಾರ ಆಗಸ್ಟ್‌ನಲ್ಲಿ ಭಾರತದಲ್ಲಿ 20 ಲಕ್ಷ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ. ಅಲ್ಲದೆ ಆಗಸ್ಟ್ ತಿಂಗಳಲ್ಲಿ 420 ದೂರು ವರದಿಗಳನ್ನು ಪಡೆದುಕೊಂಡಿದೆ ಎಂದು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಸಂದೇಶ ಕಳುಹಿಸುವುದರಲ್ಲಿ ಅನಧಿಕೃತ ಬಳಕೆ ಹೆಚ್ಚಿರುವುದರಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ. ಹಾಗಾದ್ರೆ ವಾಟ್ಸಾಪ್‌ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸ ಐಟಿ ನಿಯಮದ ಪ್ರಕಾರ ತಮ್ಮ ಮಾಸಿಕ ಅನುಸರಣಾ ವರದಿಯನ್ನು ಬಹಿರಂಗ ಪಡಿಸಿದೆ. ಈ ವರದಿ ಪ್ರಕಾರ ಆಗಸ್ಟ್‌ ತಿಂಗಳಿನಲ್ಲಿ ವಾಟ್ಸಾಪ್‌ 20,70,000 ಖಾತೆಗಳನ್ನು ನಿಷೇದಿಸಿದೆ. ಇದಕ್ಕೆ ಪ್ರಮುಖ ಕಾರಣ ಆಟೋಮ್ಯಾಟಿಕ್‌ ಅಥವಾ ಬೃಹತ್ ಸಂದೇಶಗಳ ಅನಧಿಕೃತ ಬಳಕೆ ಎಂದು ಮಾಹಿತಿ ನೀಡಿದೆ. ಅದರಲ್ಲು ಭಾರತದಲ್ಲಿ ಶೇ 95 ರಷ್ಟು ಖಾತೆಗಳು ಸ್ವಯಂಚಾಲಿತ ಸಂದೇಶ ಕಳುಹಿಸುವಿಕೆಯಲ್ಲಿ ತೊಡಗಿವೆ ಎನ್ನಲಾಗಿದೆ.

ಪ್ರಕಾರ

ವಾಟ್ಸಾಪ್‌ನ ಮಾಸಿಕ ಅನುಸರಣಾ ವರದಿಯ ಮಾಹಿತಿಯ ಪ್ರಕಾರ, ವೇದಿಕೆಯಲ್ಲಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳಲ್ಲಿ ವ್ಯಾಪಿಸಿರುವ 420 ಬಳಕೆದಾರ ವರದಿಗಳ ಬಗ್ಗೆ ದೂರು ಬಂದಿದೆ. ವಾಟ್ಸಾಪ್ ಸ್ವೀಕರಿಸಿದ 421 ವರದಿಗಳಲ್ಲಿ 41 ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ. ಕಂಪನಿಯು ತನ್ನ ಬೆಂಬಲ ಪುಟದಲ್ಲಿ ದೂರುಗಳ ಚಾನೆಲ್ ಮೂಲಕ ಬಳಕೆದಾರರ ದೂರುಗಳನ್ನು ಪಡೆದಾಗ, ವಾಟ್ಸಾಪ್‌ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ವಾಟ್ಸಾಪ್

ಇನ್ನು ಈ ಈ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರ ದೂರುಗಳ ವಿವರಗಳನ್ನು ಹೊಂದಿದೆ. ದೂರುಗಳಿಗೆ ಅನುಗುಣವಾದ ಕ್ರಮವನ್ನು ವಾಟ್ಸಾಪ್ ತೆಗೆದುಕೊಂಡಿದೆ. ನಮ್ಮ ಉನ್ನತ ಗಮನವು ಹಾನಿಕಾರಕ ಅಥವಾ ಅನಗತ್ಯ ಸಂದೇಶಗಳನ್ನು ಪ್ರಮಾಣದಲ್ಲಿ ಕಳುಹಿಸದಂತೆ ಖಾತೆಗಳನ್ನು ತಡೆಯುವುದು ಎಂದು ವಾಟ್ಸಾಪ್‌ ಕೂಡ ಸ್ಪಷ್ಟ ಪಡಿಸಿದೆ. ಅಸಹಜವಾದ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಗುರುತಿಸಲು ನಾವು ಸುಧಾರಿತ ಸಾಮರ್ಥ್ಯಗಳನ್ನು ನಿರ್ವಹಿಸುತ್ತೇವೆ ಎಂದು ಹೇಳಿದೆ.

ವಾಟ್ಸಾಪ್‌

ಇದರಲ್ಲಿ ವಾಟ್ಸಾಪ್‌ ಕೇವಲ ನಲವತ್ತಾರು ದಿನಗಳಲ್ಲಿ ಮೂರು ದಶಲಕ್ಷ ಖಾತೆಗಳನ್ನು ನಿಷೇಧಿಸಿರುವುದಾಗಿ ವಾಟ್ಸಾಪ್ ಮೊದಲೇ ದೃಡಪಡಿಸಿದೆ. ಆನ್‌ಲೈನ್ ನಿಂದನೆಯನ್ನು ತಡೆಗಟ್ಟಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಖಾತೆಗಳನ್ನು ಜೂನ್ 16 ಮತ್ತು ಜುಲೈ 31 ರ ನಡುವೆ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಬಳಕೆದಾರರಿಗೆ ಯಾವುದೇ ರೀತಿಯ ದುಷ್ಪರಿಣಾಮ ಬಿರದಂತೆ ತಡೆಗಟ್ಟುವುದಕ್ಕೆ ಸದಾ ಮುಂದಿರುವುದಾಗಿ ಹೇಳಿದೆ.

ತಂತ್ರಜ್ಞಾನ

ಇನ್ನು "ವಾಟ್ಸಾಪ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮೆಸೇಜಿಂಗ್ ಸೇವೆ ಹೊಂದಿದ್ದು, ದುರುಪಯೋಗವನ್ನು ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿದೆ. ಆದರೂ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಹೊಸ ಮಾದರಿಯ ತಂತ್ರಜ್ಞಾನ, ಡೇಟಾ ಸೈಂಟಿಸ್ಟ್‌ ಮತ್ತು ತಜ್ಞರು ಮತ್ತು ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಹೊಸ ಪ್ರಯತ್ನ ಮಾಡುತ್ತಲೇ ಇದ್ದೇವೆ ಎಂದು ಹೇಳಿಕೊಡಿದೆ. ಇದಲ್ಲದೆ "+91" ಮೊಬೈಲ್‌ ನಂಬರ್‌ನಿಂದ ಗುರುತಿಸಲ್ಪಟ್ಟ ಭಾರತೀಯ ವಾಟ್ಸಾಪ್‌ ಅಕೌಂಟ್‌ಗಳನ್ನು ಪತ್ತೆಹಚ್ಚುವಿಕೆಯ ವಿಧಾನಗಳ ಮೂಲಕ, ಭಾರತದ ಹೊಸ ಐಟಿ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಅನ್ನೊದನ್ನ ವಾಟ್ಸಾಪ್‌ ತನ್ನ ಅನುಸರಣಾ ವರದಿಯಲ್ಲಿ ತಿಳಿಸಿದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ಬಳಕೆದಾರರು ತಮ್ಮ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಫೀಚರ್ಸ್‌ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಸಹ ಹೇಳಲಾಗಿದೆ. ಇದನ್ನು ವಾಟ್ಸಾಪ್‌ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ವಾಟ್ಸಾಪ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ಫೀಚರ್ಸ್‌ ನಲ್ಲಿ ಬಳಕೆದಾರರು ತಾವು ಕಳುಹಿಸಿದ ಚಿತ್ರವು ಸ್ಟಿಕರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕೂಡ ಅವಕಾಶ ಇರಲಿದೆ. ಸದ್ಯ ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿಯ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯವು 2.2137.3 ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೀಚರ್ಸ್‌ ಬಳಕೆಗೆ ಬಂದರೆ ಯಾವುದೇ ಥರ್ಡ್-ಪಾರ್ಟಿ ಆಪ್ ಬಳಸದೆ, ನಿಮ್ಮ ಫೋಟೋಗಳನ್ನು ನೀವೇ ಸ್ಟಿಕ್ಕರ್ ಆಗಿ ಕನ್ವರ್ಟ್‌ ಮಾಡಬಹುದಾಗಿದೆ.

Best Mobiles in India

English summary
WhatsApp had banned over 20 lakh accounts in India in August, as per WhatsApp’s monthly compliance report.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X