ವಾಟ್ಸಾಪ್‌ನಿಂದ ಬಿಗ್ ಶಾಕ್! ಭಾರತದಲ್ಲಿ 4.7 ಮಿಲಿಯನ್ ಅಕೌಂಟ್ ಬ್ಯಾನ್!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭಾರತದಲ್ಲಿ ತನ್ನ ಮಾರ್ಚ್ ತಿಂಗಳ ಅನುಸರಣ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಭಾರತೀಯರಿಗೆ ಬಿಗ್ ಶಾಕ್ ನೀಡಿದ್ದು, ಮಾರ್ಚ್‌ನಲ್ಲಿ ಬರೋಬ್ಬರಿ 4.7 ಮಿಲಿಯನ್‌ಗೂ ಹೆಚ್ಚು ವಾಟ್ಸಾಪ್ ಅಕೌಂಟ್‌ಗಳನ್ನು ಬ್ಯಾನ್ ಮಾಡಿರುವುದಾಗಿ ಹೇಳಿದೆ. ಈ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚು ಎಂದು ಹೇಳಲಾಗಿದೆ.
ಹೌದು, ವಾಟ್ಸಾಪ್ ಮಾರ್ಚ್ ತಿಂಗಳ ಕುಂದುಕೊರತೆ ವರದಿಯನ್ನು ಪ್ರಕಟಿಸಿದೆ. ಅದರಂತೆ ಬಳಕೆದಾರರು ನೀಡಿದ ದೂರು ಹಾಗೂ ಸಾಮಾಜಿಕ ಮಾಧ್ಯಮಗಳ ನಿಯಮ ಉಲ್ಲಂಘನೆ ಮಾಡಿದ ವಾಟ್ಸಾಪ್ ಅಕೌಂಟ್‌ಗಳನ್ನು ಬ್ಯಾನ್ ಮಾಡಿದೆ. ಈ ಮೂಲಕ ಮಾರ್ಚ್ ತಿಂಗಳಿನಲ್ಲಿಯೂ ಕೂಡ ನಿಯಮ ಮೀರುವವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಂಡಿದೆ. ಹಾಗಾದ್ರೆ ವಾಟ್ಸಾಪ್‌ನ ಮಾರ್ಚ್ ತಿಂಗಳ ಕುಂದುಕೊರತೆ ವರದಿಯಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಮಾರ್ಚ್ ತಿಂಗಳ ಕುಂದುಕೊರತೆ ವರದಿಯಲ್ಲಿ 4.7 ಮಿಲಿಯನ್‌ಗೂ ಅಧಿಕ ವಾಟ್ಸಾಪ್ ಅಕೌಂಟ್‌ಗಳನ್ನು ಬ್ಯಾನ್ ಮಾಡಿದೆ. ಇದು ಮಾರ್ಚ್ 1 ಮತ್ತು ಮಾರ್ಚ್ 31, 2023 ರ ನಡುವೆ ತೆಗೆದುಕೊಂಡಿರುವ ಕ್ರಮವಾಗಿದೆ. ಇದನ್ನು ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ ಸ್ವೀಕರಿಸಲಾದ ಎಲ್ಲಾ ಆದೇಶಗಳನ್ನು ಅನುಸರಿಸುವ ಮೂಲಕ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ.
ವಾಟ್ಸಾಪ್ ಭಾರತದಲ್ಲಿ ಈ ಪರಿಯ ಅಕೌಂಟ್‌ಗಳನ್ನು ಬ್ಯಾನ್ ಮಾಡುವ ಮುನ್ನ ಬಳಕೆದಾರರಿಂದ ಸ್ವೀಕರಿಸಿದ ರಿಪೋರ್ಟ್, ಸಾಮಾಜಿಕ ಮಾಧ್ಯಮಗಳ ನಿಯಮ ಉಲ್ಲಂಘನೆ ಮಾಡಿದ ಅಕೌಂಟ್‌ಗಳ ವಿವರ ಇದೆಲ್ಲವನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡಿದೆ. ಇದರಲ್ಲಿ 1,659,385 ಅಕೌಂಟ್‌ಗಳನ್ನು ಯಾವುದೇ ರಿಪೋರ್ಟ್ ಇಲ್ಲದೆ ಬ್ಯಾನ್ ಮಾಡಲಾಗಿದೆ. ಇನ್ನು ಈ ಅವಧಿಯಲ್ಲಿ ವಾಟ್ಸಾಪ್ ಒಟ್ಟು 4,720 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ. ಅಲ್ಲದೆ 585 ಖಾತೆಗಳನ್ನು "ಕ್ರಮ" ಮಾಡಲಾಗಿದೆ.

ಇದಲ್ಲದೆ ವಾಟ್ಸಾಪ್ ತಾನು ಸ್ವೀಕರಿಸಿದ ಒಟ್ಟು ವರದಿಗಳಲ್ಲಿ, 4316 'ನಿಷೇಧ ಮೇಲ್ಮನವಿ'ಗೆ ಸಂಬಂಧಿಸಿವೆ ಎಂದು ಹೇಳಿದೆ. ಬಳಕೆದಾರರಿಗೆ ಗುಣಮಟ್ಟದ ಸೇವೆ ಹಾಗೂ ಸಾಮಾಜಿಕ ಸೇವಾ ನಿಯಮಗಳಿಗೆ ಅನುಗುಣವಾಗಿ ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದೆ. ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿರುವ ಹೊಸ ಐಟಿ ನಿಯಮದ ಅನ್ವಯ ವಾಟ್ಸಾಪ್ ಪ್ರತಿ ತಿಂಗಳು ಮಾಸಿಕ ಅನುಸರಣೆ ವರದಿ ಪ್ರಕಟಿಸುವುದು ಕಡ್ಡಾಯವಾಗಿದೆ.
ಇನ್ನು ವಾಟ್ಸಾಪ್ ಇತ್ತೀಚಿಗೆ ಹೊಸದಾಗಿ 'ಚಾಟ್ ಲಾಕ್' ಫೀಚರ್ ಬಿಡುಗಡೆ ಮಾಡಿದೆ. ಈ ಫೀಚರ್ಸ್ ಸಕ್ರಿಯದಿಂದ ಮೆಸೆಜ್/ ಚಾಟ್ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಬಳಕೆದಾರರು ಸಂಪೂರ್ಣ ವಾಟ್ಸಾಪ್ ಲಾಕ್ ಮಾಡದೇ, ಕೇವಲ ನಿರ್ದಿಷ್ಟ ಚಾಟ್ ಮಾತ್ರ ಲಾಕ್ ಮಾಡಬಹುದಾಗಿರುತ್ತದೆ. ಆಯ್ದ ಬಳಕೆದಾರರಿಗಾಗಿ ಹೊಸ ಚಾಟ್ ಲಾಕ್ ಫೀಚರ್ ಅನ್ನು ಪರಿಚಯಿಸಿದೆ. WaBetaInfo ಶೇರ್ ಮಾಡಿರುವ ವಿವರಗಳ ಪ್ರಕಾರ, ಸಂಸ್ಥೆಯು ಕೆಲವು ಬೀಟಾ ಪರೀಕ್ಷಕರಿಗೆ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ಮುಂಬರುವ ಕೆಲವು ವಾರಗಳಲ್ಲಿ ಈ ಫೀಚರ್ ವ್ಯಾಪಕವಾದ ಬಳಕೆದಾರರಿಗೆ ತಲುಪುತ್ತದೆ. ಆದ್ದರಿಂದ, ಈ ಫೀಚರ್ ಮುಂದಿನ ದಿನಗಳಲ್ಲಿ ಸ್ಥಿರ ಆವೃತ್ತಿಯಲ್ಲಿ (ಸಾರ್ವಜನಿಕರಿಗೆ) ಆಗಮಿಸುತ್ತದೆ ಎಂದು ನಿರೀಕ್ಷಿಸಬಹುದು.
ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಸಕ್ರಿಯಗೊಳಿಸಲು ಈ ಕ್ರಮ ಅನುಸರಿಸಿ
ಹಂತ 1: ನಿಮ್ಮ ವಾಟ್ಸಾಪ್ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗಕ್ಕೆ ಹೋಗಿ.
ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್ ಲಾಕ್ ಅನ್ನು ಟ್ಯಾಪ್ ಮಾಡಿ.
ಹಂತ 3: 'ಫಿಂಗರ್‌ಪ್ರಿಂಟ್‌ನೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಿ' ಆಯ್ಕೆಯನ್ನು ಸಕ್ರಿಯಗೊಳಿಸಿ.


Click it and Unblock the Notifications








