Home
ಸುದ್ದಿಜಾಲ

ಭಾರತೀಯರಿಗೆ ಬಿಗ್‌ ಶಾಕ್‌ ನೀಡಿದ ವಾಟ್ಸಾಪ್‌!..45 ಲಕ್ಷಕ್ಕೂ ಹೆಚ್ಚು ಖಾತೆ ಬ್ಯಾನ್‌!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಭಾರತೀಯರಿಗೆ ಅತಿ ದೊಡ್ಡ ಶಾಕ್‌ ನೀಡಿದೆ. ಹೊಸ ಐಟಿ ನಿಯಮದ ಅನ್ವಯ ಪ್ರತಿ ತಿಂಗಳ ವರದಿ ನೀಡುವ ವಾಟ್ಸಾಪ್‌ ಇದೀಗ ಫೆಬ್ರವರಿ 2023ರ ಮಾಸಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಭಾರತೀಯರಿಗೆ ಬಿಗ್‌ ಶಾಕ್‌ ಎದುರಾಗಿದ್ದು, 45 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇದ ಮಾಡಿರುವುದಾಗಿ ಹೇಳಿದೆ.

ಹೌದು, ವಾಟ್ಸಾಪ್‌ ಫೆಬ್ರವರಿ 2023ರ ಬಳಕೆದಾರರ ಸುರಕ್ಷತೆಯ ವರದಿಯನ್ನು ಬಿಡುಗಡೆ ಮಾಡಿದೆ. ಹಿಂದೆಂದಿಗಿಂತಲೂ ಈ ಭಾರಿಯ ಮಾಸಿಕ ವರದಿಯಲ್ಲಿ ಭಾರತೀಯರ ವಾಟ್ಸಾಪ್‌ ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಷೇದಿಸಲಾಗಿದೆ. ಹಾಗಾದ್ರೆ ಫೆಬ್ರವರಿ ತಿಂಗಳ ಸುರಕ್ಷತೆಯ ವರದಿಯಲ್ಲಿ ವಾಟ್ಸಾಪ್‌ ಏನೆಲ್ಲಾ ವಿವರಗಳನ್ನು ಬಹಿರಂಗಪಡಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯರಿಗೆ ಬಿಗ್‌ ಶಾಕ್‌ ನೀಡಿದ ವಾಟ್ಸಾಪ್‌!45 ಲಕ್ಷಕ್ಕೂ ಹೆಚ್ಚು ಖಾತೆ ಬ್ಯಾನ್‌

ಹೊಸ ಐಟಿ ನಿಯಮ 2021 ರ ನಿಯಮ 4(1)(ಡಿ) ಯ ಅನುಸಾರವಾಗಿ ವಾಟ್ಸಾಪ್‌ 45 ಲಕ್ಷಕ್ಕೂ ಅಧಿಕ ಖಾತೆಗಳನ್ನು ಬ್ಲಾಕ್‌ ಮಾಡಿದೆ. ಇದು ಜನವರಿ 1 ರಿಂದ ಫೆಬ್ರವರಿ 28, 2023 ರ ನಡುವೆ 4,597,400 ಭಾರತೀಯ ಬಳಕೆದಾರರನ್ನು ನಿಷೇಧಿಸಿದೆ. ಹೀಗೆ ಬ್ಲಾಕ್‌ ಮಾಡಿದ ಖಾತೆಗಳಲ್ಲಿ ಬಳಕೆದಾರರಿಂದ ಸ್ವೀಕರಿಸಿದ ಕುಂದುಕೊರತೆಗಳ ರಿಪೋರ್ಟ್‌ಗಳು ಕೂಡ ಸೇರಿವೆ. ಬಳಕೆದಾರರಿಂದ ಪಡೆದ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ಈ ಖಾತೆಗಳನ್ನು ನಿಷೇದಿಸಲಾಗಿದೆ ಎಂದು ವರದಿ ಮಾಡಿದೆ.

ಇನ್ನು ವಾಟ್ಸಾಪ್‌ ನಿಷೇಧಿಸಿದ 4,597,400 ಖಾತೆಗಳ ಪೈಕಿ ಸುಮಾರು 1,298,000 ಖಾತೆಗಳನ್ನು ಯಾವುದೇ ರಿಪೋರ್ಟ್‌ ಸ್ವೀಕರಿಸದೆ ಬ್ಲಾಕ್‌ ಮಾಡಲಾಗಿದೆ. ಹಾಗೆಯೇ ಇದೇ ಅವಧಿಯಲ್ಲಿ ವಾಟ್ಸಾಪ್ 2,804 ಕಂಪ್ಲೇಟ್‌ ರಿಪೋರ್ಟ್ಸ್‌ಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ಜೊತೆಗೆ ಇದರಲ್ಲಿ, 12,548 ನಿಷೇಧದ ಮೇಲ್ಮನವಿಗಳನ್ನು ಮಾಡಲಾಗಿದೆ ಂದು ಹೇಳಲಾಗಿದೆ.

ಇದರಲ್ಲಿ ವಾಟ್ಸಾಪ್‌ ಕೇವಲ 495 ಅಕೌಂಟ್‌ಗಳ ವಿರುದ್ದ ಕ್ರಮ ತೆಗೆದುಕೊಂಡಿದೆ. ಇದರೊಂದಿಗೆ ವಾಟ್ಸಾಪ್‌ ಸುರಕ್ಷತೆಗೆ ಸಂಬಂಧಿಸಿದಂತೆ 14 ವರದಿಗಳನ್ನು ಸಹ ಸ್ವೀಕರಿಸಿದೆ ಎಂದು ಈ ವರದಿಯಲ್ಲಿ ಬಹಿರಂಗವಾಗಿದೆ. ವಾಟ್ಸಾಪ್‌ ಜನವರಿಯಲ್ಲಿ ಬ್ಲಾಕ್‌ ಮಾಡಿದ ಖಾತೆಗಳಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಬ್ಲಾಕ್‌ ಮಾಡಿದ ಖಾತೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಬಳಕೆದಾರರ ಸುರಕ್ಷತೆಗಾಗಿ ತಾವು ಸದಾ ಮುಂದು ಅನ್ನೊದನ್ನ ವಾಟ್ಸಾಪ್‌ ಹೇಳಿಕೊಂಡಿದೆ.

ಭಾರತೀಯರಿಗೆ ಬಿಗ್‌ ಶಾಕ್‌ ನೀಡಿದ ವಾಟ್ಸಾಪ್‌!45 ಲಕ್ಷಕ್ಕೂ ಹೆಚ್ಚು ಖಾತೆ ಬ್ಯಾನ್‌

ವಾಟ್ಸಾಪ್‌ನಲ್ಲಿ ಖಾತೆಗಳನ್ನು ವರದಿ ಮಾಡುವುದು ಹೇಗೆ?

ವಾಟ್ಸಾಪ್‌ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಭಾವಿಸುವ ವಾಟ್ಸಾಪ್‌ ಅಕೌಂಟ್‌ಗಳ ಬಗ್ಗೆ ನೀವು ರಿಪೋರ್ಟ್‌ ಮಾಡಬಹುದು. ಇದಕ್ಕಾಗಿ ವಾಟ್ಸಾಪ್‌ ಸೆಟ್ಟಿಂಗ್ಸ್‌> ಟ್ಯಾಪ್‌ ಹೆಲ್ಪ್‌ > ನಮ್ಮನ್ನು ಸಂಪರ್ಕಿಸಿ ಟ್ಯಾಪ್ ಮಾಡುವ ಮೂಲಕ ನಿಮ್ಮ ರಿಪೋರ್ಟ್‌ ಅನ್ನು ಸಲ್ಲಿಸಬಹುದಾಗಿದೆ.

ವಾಟ್ಸಾಪ್‌ ಪ್ರತಿ ತಿಂಗಳು ನೀಡುವ ತನ್ನ ಮಾಸಿಕ ವರದಿಯಲ್ಲಿ ಲಕ್ಷಗಟ್ಟಲೇ ಭಾರತೀಯ ಖಾತೆಗಳನ್ನು ಬ್ಯಾನ್‌ ಮಾಡುತ್ತಲೇ ಬಂದಿದೆ. ದುರುಪಯೋಗವನ್ನು ತಡೆಗಟ್ಟುವ ಹಾಗೂ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಮೆಸೇಜಿಂಗ್‌ ಸೇವೆ ನೀಡುವ ಭಾಗವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ವಾಟ್ಸಾಪ್‌ ಹೇಳಿದೆ. ನಾವು ಬಳಕೆದಾರರ ಪ್ರತಿಕ್ರಿಯೆಗೆ ಹೆಚ್ಚು ಗಮನ ನೀಡುತ್ತೇವೆ ಮತ್ತು ತಪ್ಪು ಮಾಹಿತಿಯನ್ನು ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ವಾಟ್ಸಾಪ್‌ ಸ್ಪಷ್ಟಪಡಿಸಿದೆ.

ಭಾರತೀಯರಿಗೆ ಬಿಗ್‌ ಶಾಕ್‌ ನೀಡಿದ ವಾಟ್ಸಾಪ್‌!45 ಲಕ್ಷಕ್ಕೂ ಹೆಚ್ಚು ಖಾತೆ ಬ್ಯಾನ್‌

ಇನ್ನು ವಾಟ್ಸಾಪ್‌ ಶೀಘ್ರದಲ್ಲೇ ಎಡಿಟ್‌ ಸೆಂಡ್‌ ಮೆಸೇಜ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್‌ ಮಾಡಿರುವ ಮೆಸೇಜ್‌ ಅನ್ನು ಎಡಿಟ್‌ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್‌ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಕಳುಹಿಸಿದ ಸಮದೇಶದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಎಡಿಟ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಆದರಿಂದ ನಿಮಗೆ ಆಗಬಹುದಾದ ಮುಜುಗರವನ್ನು ತಪ್ಪಿಸುವುದಕ್ಕೆ ಅವಕಾಶ ನೀಡಲಿದೆ.

Best Mobiles in India

English summary
WhatsApp banned over 45 lakh accounts between February 1 and February 28.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+