Home
ಸುದ್ದಿಜಾಲ

ಭಾರತೀಯರಿಗೆ ಬಿಗ್‌ ಶಾಕ್‌! ಭಾರತದ 18 ಲಕ್ಷಕ್ಕೂ ಅಧಿಕ ವಾಟ್ಸಾಪ್‌ ಅಕೌಂಟ್ ಬ್ಯಾನ್‌!

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಕಾರಣದಿಂದಾಗಿ ಭಾರತದಲ್ಲಿಯೂ ಕೂಡ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಸದ್ಯ ಇದೀಗ ವಾಟ್ಸಾಪ್‌ ಜನವರಿ ತಿಂಗಳ ಅವಧಿಯ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ಮಾಸಿಕ ವರದಿಯ ಪ್ರಕಾರ ವಾಟ್ಸಾಪ್‌ ಜನವರಿ ತಿಂಗಳಿನಲ್ಲಿ ಭಾರತದ 18,58,000 ವಾಟ್ಸಾಪ್‌ ಅಕೌಂಟ್‌ಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ. ಐಟಿ ನಿಯಮಗಳಿಗೆ ಅನುಸಾರವಾಗಿ ಈ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಐಟಿ ನಿಯಮದ ಅನುಸರವಾಗಿ ಜನವರಿ ತಿಂಗಳ ಮಾಸಿಕವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಐಟಿ ನಿಯಮಗಳನ್ನು ಉಲ್ಲಂಘಿಸಿದ 18,58,000 ಅಕೌಂಟ್‌ಗಳನ್ನು ಬ್ಯಾನ್‌ ಮಾಡಿದೆ. ವಾಟ್ಸಾಪ್ ನೀತಿಗಳ ಉಲ್ಲಂಘನೆಯಿಂದಾಗಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗಿದೆಯಾದರೂ, ಭಾರತದಲ್ಲಿನ ಇತರ ಬಳಕೆದಾರರು ವರದಿ ಮಾಡುವ ಕುಂದುಕೊರತೆಗಳ ಮೇಲೆ ಅಕೌಂಟ್‌ ಬ್ಯಾನ್‌ ಮಾಡುವ ಕ್ರಮ ತೆಗೆದುಕೊಳ್ಳುತ್ತದೆ. ಹಾಗಾದ್ರೆ ವಾಟ್ಸಾಪ್‌ ಜನವರಿ ತಿಂಗಳ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಭಾರತದಲ್ಲಿ ಜನವರಿ ತಿಂಗಳ ಮಾಸಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಹಲವು ಅಚ್ಚರಿಯ ಅಂಶಗಳು ಬಹಿರಂಗಗೊಂಡಿವೆ. ಸೊಶೀಯಲ್‌ ಮೀಡಿಯಾ ನಿಯಮ ಉಲ್ಲಂಘನೆ ಜೊತೆಗೆ ವಾಟ್ಸಾಪ್‌ನಿಯಮಗಳನ್ನು ಉಲ್ಲಂಘಿಸಿರುವವರ ಖಾತೆಗಳನ್ನು ನಿಷೇದಿಸಲಾಗಿದೆ. ಅಲ್ಲದೆ ವಾಟ್ಸಾಪ್‌ನಲ್ಲಿ ಬಳಕೆದಾರರು ಮಾಡುವ ರಿಪೋರ್ಟ್‌ ಆಧಾರದ ಮೇಲೂ ಕೂಡ ಅನೇಕ ಅಕೌಂಟ್‌ಗಳನ್ನು ಬ್ಯಾನ್‌ ಮಾಡಿದೆ. ಇನ್ನು ಕುಂದುಕೊರತೆ ಪರಿಹಾರದ ಭಾಗವಾಗಿ, ವಾಟ್ಸಾಪ್‌ ಒಟ್ಟು 285 ರಿಕ್ವೆಸ್ಟ್‌ಗಳನ್ನು ಸ್ವೀಕರಿಸಿದೆ. ಈ ರಿಕ್ವೆಸ್ಟ್‌ಗಳಲ್ಲಿ ಒಟ್ಟು 24 ಖಾತೆಗಳನ್ನು ನಿಷೇಧ ಮಾಡಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಕುಂದುಕೊರತೆ ಪರಿಹಾರದಲ್ಲಿ ಹಿಂದಿನ ಟಿಕೆಟ್‌ನ ನಕಲು ಎಂದು ಪರಿಗಣಿಸಲಾದ ಪ್ರಕರಣಗಳನ್ನು ಹೊರತುಪಡಿಸಿ, ಸ್ವೀಕರಿಸಿದ ಎಲ್ಲಾ ಕುಂದುಕೊರತೆಗಳನ್ನು ವಾಟ್ಸಾಪ್‌ ಪರಿಗಣಿಸಿದೆ. ಈ ದೂರಿನ ಪರಿಣಾಮವಾಗಿ ಖಾತೆಯನ್ನು ಬ್ಯಾನ್ ಮಾಡಿದಾಗ ಅಥವಾ ಹಿಂದೆ ನಿಷೇಧಿತ ಖಾತೆಯನ್ನು ರಿಸ್ಟೋರ್‌ ಮಾಡಿದಾಗ ಖಾತೆಯನ್ನು 'ಆಕ್ಷನ್‌' ತೆಗೆದುಕೊಳ್ಳುತ್ತದೆ. ಸದ್ಯ ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಕೂಡ ಕುಂದುಕೊರತೆಯ ವರದಿ ನೀಡುವುದು ಕಡ್ಡಾಯವಾಗಿದೆ. ಅದರಂತೆ ವಾಟ್ಸಾಪ್‌ ಜನವರಿ ತಿಂಗಳ ಅವಧಿಯಲ್ಲಿ ತಾನು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವರದಿಯಲ್ಲಿ ತಿಳಿಸಿದೆ.

ಕುಂದುಕೊರತೆಗಳನ್ನು ಹೇಗೆ ವರದಿ ಮಾಡಲಾಗಿದೆ?

ಕುಂದುಕೊರತೆಗಳನ್ನು ಹೇಗೆ ವರದಿ ಮಾಡಲಾಗಿದೆ?

ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಕುಂದುಕೊರೆತೆಗಳನ್ನು ನೋಂದಾಯಿಸಲು ಎರಡು ಮಾರ್ಗಗಳಿವೆ. ಅವುಗಳು ಈ ಕೆಳಗಿನಂತಿವೆ.
* ಮೊದಲನೆಯದಾಗಿ ಇ-ಮೇಲ್ ಮೂಲಕ [email protected] ಗೆ ವಾಟ್ಸಾಪ್‌ ಸೇವಾ ನಿಯಮಗಳ ಉಲ್ಲಂಘನೆ ಅಥವಾ ವಾಟ್ಸಾಪ್‌ನಲ್ಲಿನ ಖಾತೆಗಳ ಕುರಿತು ಪ್ರಶ್ನೆಗಳನ್ನು ಸಹಾಯ ಕೇಂದ್ರದಲ್ಲಿ ಪ್ರಕಟಿಸಲಾಗಿರುತ್ತದೆ
* ಎರಡನೆಯದಾಗಿ, ಪೋಸ್ಟ್‌ ಮೂಲಕ ವಾಟ್ಸಾಪ್‌ನ ಭಾರತದ ಕುಂದುಕೊರತೆ ಅಧಿಕಾರಿಗೆ ಕಳುಹಿಸುವ ಮೇಲ್‌ಗಳು.

ಇನ್ನು ವಾಟ್ಸಾಪ್‌ನ ದುರ್ಬಳಕೆ ಪತ್ತೆಯು ಖಾತೆಗಳನ್ನು ನಿಷೇಧಿಸಲು ಬಳಸುವ ಪ್ರಾಥಮಿಕ ಮಾನದಂಡವಾಗಿದೆ. ನಿಂದನೆ ಪತ್ತೆಯು ಖಾತೆಯ ಜೀವನಶೈಲಿಯ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ. ಪ್ರತಿಕ್ರಿಯೆಯನ್ನು ಬಳಕೆದಾರರ ವರದಿಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ಸ್ವೀಕರಿಸಲಾಗುತ್ತದೆ.

ನಿಮ್ಮ ಖಾತೆಯನ್ನು ನಿಷೇಧಿಸಿದರೆ ಏನು ಮಾಡಬೇಕು?

ನಿಮ್ಮ ಖಾತೆಯನ್ನು ನಿಷೇಧಿಸಿದರೆ ಏನು ಮಾಡಬೇಕು?

ಒಂದು ವೇಳೆ ವಾಟ್ಸಾಪ್‌ ನಿಮ್ಮ ಖಾತೆಯನ್ನು ನಿಷೇಧಿಸಿದರೆ, ವಾಟ್ಸಾಪ್‌ ಅನ್ನು ಪ್ರವೇಶಿಸಲು ಪ್ರಯತ್ನಿಸುವಾಗ "ನಿಮ್ಮ ಫೋನ್ ಸಂಖ್ಯೆಯನ್ನು ವಾಟ್ಸಾಪ್‌ ಬಳಸುವುದನ್ನು ನಿಷೇಧಿಸಲಾಗಿದೆ. ಸಹಾಯಕ್ಕಾಗಿ ಬೆಂಬಲವನ್ನು ಸಂಪರ್ಕಿಸಿ." ಎಂಬ ಸಂದೇಶ ಕಾಣಬಹುದು. ನಿಮ್ಮ ಖಾತೆಯನ್ನು ಏಕೆ ನಿಷೇಧಿಸಲಾಗಿದೆ ಎಂಬುದಕ್ಕೆ ಯಾವುದೇ ಕಾರಣ ನಿಮಗೆ ದೊರೆತಿಲ್ಲ ಎಂದಾದರೆ ನೀವು ವಾಟ್ಸಾಪ್‌ ಸಪೋರ್ಟ್‌ ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ವಾಟ್ಸಾಪ್‌ ಅಪ್ಲಿಕೇಶನ್‌ಗೆ ಇಮೇಲ್ ಕಳುಹಿಸಬಹುದಾಗಿದೆ.

Best Mobiles in India

English summary
Whatsapp bans a whopping 18.58 lakh accounts in India: Checkout the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+