ಬಳಕೆದಾರರಿಗೆ ಅಚ್ಚರಿಯ ಫೀಚರ್ಸ್ ಪರಿಚಯಿಸಿದ ವಾಟ್ಸಾಪ್!
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇ್ನು ವಾಟ್ಸಾಪ್ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಬೀಟಾ ಅಪ್‌ಡೇಡ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಆದರೆ ಈ ಫೀಚರ್ಸ್‌ಗಳನ್ನು ಅಪ್ರಾಪ್ತ ವಯಸ್ಕರಿಗಾಗಿ ಪರಿಚಯಿಸಿರುವ ಬದಲಾವಣೆಗಳಾಗಿವೆ.

ಹೌದು, ವಾಟ್ಸಾಪ್ ಬಳಕೆದಾರರಿಗೆ ವಾಯ್ಸ್ ನೋಟ್ ವೇವ್‌ಫಾರ್ಮ್ಸ್‌ಗಳನ್ನು ಸೇರಿಸಿದೆ. ಲಭ್ಯ ವರದಿಯ ಪ್ರಕಾರ ಬಳಕೆದಾರರು ಈಗ ಧ್ವನಿ ಸಂದೇಶದಲ್ಲಿ ನೇರ ರೇಖೆಯ ಬದಲು ತರಂಗರೂಪವನ್ನು ನೋಡುತ್ತಾರೆ. ಇದು 2.21.13.17 ವಾಟ್ಸಾಪ್ ಆಂಡ್ರಾಯ್ಡ್ ಆವೃತ್ತಿಯಲ್ಲಿ ಎಲ್ಲಾ ಬೀಟಾ ಪರೀಕ್ಷಕರಿಗೆ ಈ ಫೀಚರ್ಸ್ ಗೋಚರಿಸುತ್ತದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ತನ್ನ ಬಳಕೆದಾರರಿಗೆ ವಾಯ್ಸ್ ನೋಟ್‌ನಲ್ಲಿ ಕೆಲವು ಬದಲಾವಣೆ ಮಾಡಿದೆ. ಇದರಿಂದ ನಿರ್ದಿಷ್ಟ ಹಂತದಿಂದ ಪ್ಲೇ ಮಾಡಲು ಮತ್ತು ವಿರಾಮಗೊಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ವಾಯ್ಸ್ ವೇವ್ ಡಾರ್ಕ್ ಮೋಡ್‌ನಲ್ಲಿ ಹೆಚ್ಚು ಗೋಚರಿಸುವುದಿಲ್ಲ ಮತ್ತು "ವಾಯ್ಸ್ ಮೆಸೇಜ್ ಮೂಲಕ ನ್ಯಾವಿಗೇಟ್ ಮಾಡುವುದು" ಸ್ವಲ್ಪ ಕಷ್ಟ. ಈ ಫೀಚರ್ಸ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅಲ್ಲದೆ ಇದರಲ್ಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿದ ನಂತರ ಅದನ್ನು ಐಒಎಸ್‌ನಲ್ಲೂ ಲಬ್ಯವಾಗುವ ಸಾದ್ಯತೆ ಇದೆ.

ಇನ್ನು ಇತ್ತೀಚಿನ ವಾಟ್ಸಾಪ್ ಬೀಟಾ ಅಪ್‌ಡೇಟ್‌ನಲ್ಲಿ ಅಪ್ಲಿಕೇಶನ್‌ನಲ್ಲಿ ಸ್ಟಿಕ್ಕರ್ ಪ್ಯಾಕ್‌ಗಳನ್ನು ಫಾರ್ವರ್ಡ್ ಮಾಡುವ ಸಾಮರ್ಥ್ಯವನ್ನು ಕೂಡ ಸೇರಿಸಿದೆ. ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ಈ ವೈಶಿಷ್ಟ್ಯವು ಈಗಾಗಲೇ ಐಫೋನ್ ಬಳಕೆದಾರರಿಗೆ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಸ್ವೀಕರಿಸಿದ್ದಾರೆಯೇ ಎಂದು ಪರಿಶೀಲಿಸಲು ಬಯಸುವವರು, ವಾಟ್ಸಾಪ್ ಸ್ಟಿಕ್ಕರ್ ಸ್ಟೋರ್‌ನಲ್ಲಿ ಸ್ಟಿಕ್ಕರ್ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು. ಮೆಸೇಜಿಂಗ್ ಅಪ್ಲಿಕೇಶನ್‌ನ ಎಮೋಜಿ ವಿಭಾಗದಲ್ಲಿ ಸ್ಟಿಕ್ಕರ್ ಸ್ಟೋರ್ ಗೋಚರಿಸುತ್ತದೆ.

ಇದಲ್ಲದೆ, ವಾಟ್ಸಾಪ್ ಇತ್ತೀಚೆಗೆ ಆಡಿಯೊ ಫೈಲ್‌ಗಳಿಗಾಗಿ ಎರಡು ಹೊಸ ಪ್ಲೇಬ್ಯಾಕ್ ವೇಗವನ್ನು ಸೇರಿಸಿದ್ದು, ಪ್ಲೇ ಮಾಡಬಹುದಾದ ವೇಗಗಳ ಸಂಖ್ಯೆಯನ್ನು ಮೂರಕ್ಕೆ ತೆಗೆದುಕೊಂಡಿದೆ. ಇವುಗಳಲ್ಲಿ 1 ಎಕ್ಸ್, ಡೀಫಾಲ್ಟ್, ಮೂಲ ಪ್ಲೇಬ್ಯಾಕ್ ವೇಗ, 1.5 ಎಕ್ಸ್ ಮತ್ತು 2 ಎಕ್ಸ್ ಸೇರಿವೆ, ಇದು ಫೈಲ್ ಅನ್ನು 5 ಅಥವಾ 100 ಪ್ರತಿಶತ ವೇಗದಲ್ಲಿ ಪ್ಲೇ ಮಾಡಲು ನಿಮಗೆ ಅನುಮತಿಸುತ್ತದೆ.


Click it and Unblock the Notifications








