ನೋಟಿಫಿಕೇಶನ್ ಕಲರ್‌ ಚೇಂಜ್‌ ಮಾಡುವ ನಿರ್ಧಾರ ಕೈ ಬಿಟ್ಟ ವಾಟ್ಸಾಪ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸಾಪ್‌ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಬೀಟಾ ಅಪ್ಲಿಕೇಶನ್‌ನಲ್ಲಿ ಬ್ಲೂ ಕಲರ್‌ ಅಳವಡಿಸಲು ಹೋಗಿದ್ದ ವಾಟ್ಸಾಪ್‌ ಇದೀಗ ಹಸಿರು ಬಣ್ಣದ ಅಧಿಸೂಚನೆಗಳನ್ನು ರಿ ಸ್ಟೋರ್‌ ಮಾಡಿದೆ ಎಂದು ವರದಿಯಾಗಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಬೀಟಾ ಅಪ್‌ಡೇಟ್‌ನೊಂದಿಗೆ ಗ್ರೀನ್‌ ಕಲರ್‌ ನೋಟಿಫಿಕೇಶನ್‌ ಅನ್ನು ರಿಸ್ಟೋರ್‌ ಮಾಡಿದೆ. ವಾಟ್ಸಾಪ್‌ ಹೊಸ ಬೀಟಾ ಅಪ್ಡೇಟ್‌ನಲ್ಲಿ ನೋಟಿಫಿಕೇಶನ್‌ ಅನ್ನು ಬ್ಲೂ ಕಲರ್‌ನಲ್ಲಿ ನೀಡುವುದಕ್ಕೆ ಪರೀಕ್ಷಿಸಲು ಪ್ರಾರಂಭಿಸಿತು. ಆದರೆ ಇದು ಬೀಟಾ ಬಳಕೆದಾರರಿಗೆ ಇಷ್ಟವಾಗದ ಕಾರಣ ಮತ್ತೆ ಗ್ರೀನ್‌ ಕಲರ್‌ ಅನ್ನು ರಿಸ್ಟೋರ್‌ ಮಾಡಿದೆ. ಅಪ್ಲಿಕೇಶನ್ ಹೆಸರು, ರಿಪ್ಲೆ ಮತ್ತು mark as read ಗುಂಡಿಗಳಾಗಿ ಗುರುತಿಸಲು ವಾಟ್ಸಾಪ್ ನೋಟಿಫಿಕೇಶನ್‌ಗಳಲ್ಲಿ ಈ ಬಣ್ಣವನ್ನು ಕಾಣಬಹುದು. ಹಾಗಾದ್ರೆ ವಾಟ್ಸಾಪ್‌ ನೀಲಿ ಬಣ್ಣವನ್ನು ಕೈ ಬಿಡಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ನೋಟಿಫಿಕೇಶನ್‌ ಗಳನ್ನು ಬ್ಲೂ ಕಲರ್‌ನಲ್ಲಿ ನೀಡಲು ಮುಂದಾಗಿತ್ತು. ಆದರೆ ಇದೀಗ ತನ್ನ ಮೂಲ ಬಣ್ಣ ಗ್ರೀನ್‌ ಕಲರ್‌ನಲ್ಲಿಯೇ ನೀಡಲು ನಿರ್ಧರಿಸಿದೆ. ವಾಟ್ಸಾಪ್ ಫೀಚರ್ ಟ್ರ್ಯಾಕರ್ WABetaInfo ನ ಇತ್ತೀಚಿನ ವರದಿಯ ಪ್ರಕಾರ, ಮೆಸೇಜಿಂಗ್ ಸೇವೆಯು ಆಂಡ್ರಾಯ್ಡ್‌ನಲ್ಲಿನ ಅಧಿಸೂಚನೆಗಳಿಗಾಗಿ ನೀಲಿ ಬಣ್ಣವನ್ನು ಪರೀಕ್ಷಿಸುತ್ತಿದೆ. ಅಪ್ಲಿಕೇಶನ್‌ನ ಬೀಟಾ ಆವೃತ್ತಿಯನ್ನು ಬಳಸುತ್ತಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಅಧಿಸೂಚನೆ ನೆರಳಿನಲ್ಲಿರುವ ವಾಟ್ಸಾಪ್ ಅಪ್ಲಿಕೇಶನ್ ಹೆಸರು, ‘ರಿಪ್ಲೆ' ಮತ್ತು ‘mark as read' ಆಯ್ಕೆಗಳನ್ನು ಹಸಿರು ಬದಲಿಗೆ ಗಾಡವಾದ ನೀಲಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಆದರೆ ಇದು ಸರಿ ಹೊಂದದ ಕಾರಣ ಬಣ್ಣವನ್ನು ಹಸಿರು ಬಣ್ಣಕ್ಕೆ ಹಿಂತಿರುಗಿಸಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಬೀಟಾ ಆವೃತ್ತಿಯ ಬಳಕೆದಾರರು ಹೊಸ ಬಣ್ಣವು ಅದರ ವ್ಯತಿರಿಕ್ತತೆಯಿಂದಾಗಿ ಅಧಿಸೂಚನೆಗಳಲ್ಲಿ ಸರಿಯಾಗಿ ಗೋಚರಿಸುವುದಿಲ್ಲ ಎಂದು ದೂರಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಈಗ ವಾಟ್ಸಾಪ್ ಮೂಲ ಹಸಿರು ಬಣ್ಣಕ್ಕೆ ಹಿಂತಿರುಗಲು ನಿರ್ಧರಿಸಿದೆ. ಅಧಿಸೂಚನೆಗಳಿಗಾಗಿ ನೀಲಿ ಬಣ್ಣವು ಸ್ಥಿರ ಬಿಡುಗಡೆ ಆಗುವುದಿಲ್ಲ ಎನ್ನಲಾಗಿದೆ. ಏಕೆಂದರೆ ಸಾಮಾನ್ಯವಾಗಿ ವಾಟ್ಸಾಪ್‌ ಹೊಸ ಫೀಚರ್ಸ್‌ಗಳನ್ನು ಬೀಟಾ ಆವೃತ್ತಿಯಲ್ಲಿ ಮೊದಲು ಪರೀಕ್ಷಿಸುತ್ತದೆ. ಇದರಲ್ಲಿ ಬೀಟಾ ಬಳಕೆದಾರರ ಪ್ರತಿಕ್ರಿಯೆ ಮತ್ತು ಕ್ರಿಯಾತ್ಮಕತೆಯನ್ನು ಅವಲಂಬಿಸಿ ಅವುಗಳನ್ನು ಸ್ಥಿರ ಆವೃತ್ತಿಗೆ ಬಿಡುಗಡೆ ಮಾಡುತ್ತದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚೆಗೆ, ವಾಟ್ಸಾಪ್ ಜಿಯೋ ಫೋನ್ ಮತ್ತು ಇತರ ಕೈಯೋಸ್ ಆಧಾರಿತ ಫೀಚರ್ ಫೋನ್‌ಗಳಿಗೆ ಧ್ವನಿ ಕರೆ ವೈಶಿಷ್ಟ್ಯವನ್ನು ಸೇರಿಸಿದೆ. ಇದು ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸಕ್ರಿಯ ಮೊಬೈಲ್ ಡೇಟಾ ಅಥವಾ ವೈ-ಫೈ ಸಂಪರ್ಕದ ಅಗತ್ಯವಿದೆ. ಇನ್ನು ವಾಟ್ಸಾಪ್ ಬಳಕೆದಾರರು ತಮ್ಮ ಖಾತೆಗಳಿಗೆ ತ್ವರಿತವಾಗಿ ಲಾಗ್ ಇನ್ ಮಾಡಲು ಅನುಮತಿಸುವ ಫ್ಲ್ಯಾಷ್ ಕಾಲ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು ಸಹ ವರದಿಯಾಗಿದೆ.

Best Mobiles in India

English summary
WhatsApp beta version 2.21.12.12 reportedly introduced a blue colour for notifications on Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X