ಸರ್ಕಾರದ ಹೊಸ ನಿಯಮ ಪಾಲಿಸಿದಿದ್ದರೆ ಭಾರತದಲ್ಲಿ ಬ್ಯಾನ್‌ ಆಗುತ್ತಾ ವಾಟ್ಸಾಪ್‌!

|

ಸಾಮಾಜಿಕ ಜಾಲತಾಣಗಳ ದುರುಪಯೋಗ, ನಕಲಿ ಸುದ್ದಿಗಳ ಹಾವಳಿ ತಡೆಗೆ ಕೇಂದ್ರ ಸರ್ಕಾರ ಹೊಸ ಮಾಹಿತಿ ತಂತ್ರಜ್ಞಾನ ನಿಯಮ ಜಾರಿಗೊಳಿಸಿದೆ. ಈ ಹೊಸ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಅನ್ನು ಒಳಗೊಂಡಿರುವ ಎಲ್ಲಾ ಹೊಸ ಮಾಹಿತಿ ತಂತ್ರಜ್ಞಾನ ನಿಯಮ 2021 ಅನ್ನು ಭಾರತ ಸರ್ಕಾರ ಇಂದು ಪ್ರಕಟಿಸಿದೆ. ಹೊಸ ನಿಯಮ ಜಾರಿಗೆ ಬರಲು ಸ್ವಲ್ಪ ಸಮಯ ಬೇಕಾದರೂ, ಸಂದೇಶದ ಮೂಲವನ್ನು ಗುರುತಿಸಲು ಸರ್ಕಾರ ದೃಡ ನಿಲುವನ್ನು ಮುಂದಿಟ್ಟಿದೆ. ಆದರೆ ಕೇಂದ್ರ ಸರ್ಕಾರದ ಹೊಸ ನಿಯಮಗಳು ವಾಟ್ಸಾಪ್‌ಗೆ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.

ಭಾರತ

ಹೌದು, ಭಾರತ ಸರ್ಕಾರ ಪ್ರಕಟಿಸಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮದ ಅನ್ವಯ ಸಂದೇಶದ ಮೂಲವನ್ನು ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ಆದರೆ ಸಂದೇಶಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸುವ ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಮ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳು ಸರ್ಕಾರದ ಹೊಸ ನಿಯಮವನ್ನು ಅನುಸರಿಸುತ್ತಿವೆ. ಆದರೆ ಈ ಹಿಂದೆಯೇ ಸಂದೇಶಗಳ ಮೂಲವನ್ನು ಗುರುತಿಸಲು ಮಾಡಿದ್ದ ಸರ್ಕಾರದ ವಿನಂತಿಗಳನ್ನು ವಾಟ್ಸಾಪ್ ಮುಂದೂಡಿದೆ. ಹಾಗಾದ್ರೆ ವಾಟ್ಸಾಪ್‌ ಹೊಸ ನಿಯಮಕ್ಕೆ ಒಪ್ಪಿಕೊಳ್ಳುತ್ತಾ ಇಲ್ಲ ಭಾರತದಲ್ಲಿ ಬ್ಯಾನ್‌ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದರ ಬಗ್ಗೆ ಇನ್ನಷ್ಟು ವಿವರಣೆಗಾಗಿ ಈ ಲೇಖನವನ್ನು ಓದಿರಿ.

ವಾಟ್ಸಾಪ್‌

ಸಂದೇಶ ಮೂಲ ಪತ್ತೆ ಹಚ್ಚುವ ಕಾರ್ಯವನ್ನು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮಾಡಲೇಬೇಕೆಂದು ಸರ್ಕಾರ ಹೇಳಿದೆ. ಆದರೆ ವಾಟ್ಸಾಪ್‌ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಹೊಂದಿದ್ದು, ಹೊಸ ನಿಯಮ ವಾಟ್ಸಾಪ್‌ನ ಖಾಸಗಿ ಸ್ವರೂಪವನ್ನು ಹಾಳು ಮಾಡುತ್ತದೆ. ಇದು ಗಂಭೀರ ದುರುಪಯೋಗದ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ವಾಟ್ಸಾಪ್ ನಾವು ಒದಗಿಸುವ ಗೌಪ್ಯತೆ ರಕ್ಷಣೆಯನ್ನು ದುರ್ಬಲಗೊಳಿಸುವುದಿಲ್ಲ ಎಂದು ವಾಟ್ಸಾಪ್ ವಕ್ತಾರರು 2018 ರಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೊಸ ನಿಯಮದ ಪ್ರಕಾರ, ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ವಾಟ್ಸಾಪ್, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಮುಂತಾದವುಗಳು ಗುರುವಾರ ಸರ್ಕಾರ ರೂಪಿಸಿರುವ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಬರಲಿವೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್

ಸದ್ಯ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಮುರಿಯದೆ ಮೂಲದ ಗುರುತನ್ನು ಹಂಚಿಕೊಳ್ಳಲು ವಾಟ್ಸಾಪ್‌ಗೆ ಸಾಧ್ಯವಾಗುತ್ತಾ ಅನ್ನೋದು ಪ್ರಶ್ನಾರ್ಥಕವಾಗಿದೆ. ಇನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಸಹ ಸರ್ಕಾರದ ಮಾಹಿತಿಯು ಈ ಅಪ್ಲಿಕೇಶನ್‌ಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಮುರಿಯಲು ಅಗತ್ಯವಿಲ್ಲ ಎಂದು ಹೇಳಿದ್ದು ಯೋಗ್ಯವಾಗಿದೆ. ಅಂದರೆ ಸಂದೇಶವನ್ನು ಹುಟ್ಟುಹಾಕಿದ ವ್ಯಕ್ತಿಯ ಗುರುತನ್ನು ಮಾತ್ರ ಸರ್ಕಾರ ಕೇಳುತ್ತಿದೆ ಮತ್ತು ಸಂದೇಶವೇ ಅಲ್ಲ ಎಂದು ಅವರು ಹೇಳಿದ್ದಾರೆ. ಸಂದೇಶಗಳ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗದ ಬಗ್ಗೆ ತಮ್ಮ ನಿಲುವಿಗೆ ವಾಟ್ಸಾಪ್ ಬದ್ದವಾಗಿರುತ್ತಾ ಅನ್ನೊದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಒಂದು ವೇಳೆ ಹೊಸ ಐಟಿ ನಿಯಮದಡಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಲು ವಾಟ್ಸಾಪ್‌ ಪಾಲಿಸದಿದ್ದಲ್ಲಿ ವೇದಿಕೆಯನ್ನು ನಿಷೇಧಿಸಲು ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡರು ಅಚ್ಚರಿಯಿಲ್ಲ.

Best Mobiles in India

English summary
WhatsApp can be banned in India after new it rules 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X