WhatsApp: ವಾಟ್ಸಾಪ್ ಚಾನಲ್‌ನಲ್ಲಿ ಇದೀಗ ಇನ್ನಷ್ಟು ಆಯ್ಕೆಗಳು! ಬಳಕೆದಾರರಿಗೆ ಭಾರಿ ಅನುಕೂಲ!
ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಇತ್ತೀಚಿಗೆ ಚಾನಲ್‌ಗಳನ್ನು ಪರಿಚಯಿಸಿತ್ತು. ಇದೀಗ ತನ್ನ ಚಾನಲ್‌ಗಳಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವುದಕ್ಕೆ ಮುಂದಾಗಿದೆ. ಅಂದರೆ ಚಾನಲ್ ಫೀಚರ್ಸ್ ನಲ್ಲಿ ಇನ್ನಷ್ಟು ಹೊಸ ಟೂಲ್‌ಗಳನ್ನು ನೀಡುವುದಕ್ಕೆ ಮೆಟಾ ಕಂಪೆನಿ ಮುಂದಾಗಿದೆ. ಅದರಂತೆ ಇನ್ಮುಂದೆ ವಾಟ್ಸಾಪ್ ಚಾನಲ್‌ನಲ್ಲಿ ಪೊಲಿಂಗ್ ಆಯ್ಕೆ ನೀಡಲಿದೆ ಎನ್ನಲಾಗಿದೆ.
ಹೌದು, ವಾಟ್ಸಾಪ್ ಚಾನಲ್‌ಗಳು ಶೀಘ್ರದಲ್ಲೇ ಮತದಾನದ ವೈಶಿಷ್ಟ್ಯ, ವಾಯ್ಸ್ ನೋಟ್‌ಗಳು ಮತ್ತು ಚಾನಲ್ ಅಪ್ಡೇಟ್ ಸ್ಟೇಟಸ್ ಶೇರ್ ಮಾಡುವ ಸಾಮರ್ಥ್ಯ ಪಡೆದುಕೊಳ್ಳಲಿವೆ . ಈ ವಿಚಾರವನ್ನು ಖುದ್ದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಹೊಸ ಚಾನೆಲ್ ಫೀಚರ್ಸ್‌ಗಳನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ ವಾಟ್ಸಾಪ್ ಚಾನಲ್ ಸೇರಲಿರುವ ಹೊಸ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ವಾಟ್ಸಾಪ್ ಚಾನಲ್‌ಗೆ ಬರಲಿರುವ ಹೊಸ ಅಪ್‌ಡೇಟ್‌ಗಳು ಚಾನಲ್‌ಗಳಿಗೆ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ತರುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ವಾಟ್ಸಾಪ್ ಚಾನಲ್‌ನಲ್ಲಿ ಅಡ್ಮಿನ್‌ಗಳು ಸದಸ್ಯರಿಗೆ ಸಮೀಕ್ಷೆಗಳನ್ನು ಕಳುಹಿಸುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಲ್ಲದೆ ಚಾನಲ್ ಅಡ್ಮಿನ್‌ಗಳು ಇದೀಗ ವಾಯ್ಸ್ ನೋಟ್‌ಗಳ ಮೂಲಕವೇ ಅಪ್ಡೇಟ್‌ಗಳನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ.
ಇನ್ನು WhatsApp ಚಾನೆಲ್ ಅಪ್ಡೇಟ್‌ಗಳನ್ನು ಇದೀಗ ಸ್ಟೇಟಸ್‌ನಲ್ಲಿ ಹಂಚಿಕೊಳ್ಳಬಹುದು. ಬಳಕೆದಾರರು ಶೇರ್ ಮಾಡಲು ಬಯಸುವ ಚಾನೆಲ್ ಅಪ್‌ಡೇಟ್ ಅನ್ನು ಲಾಂಗ್‌ಪ್ರೆಸ್ ಮಾಡುವ ಮೂಲಕ ಶೇರ್ ಮಾಡಬಹುದು. ಅಲ್ಲದೆ 'ಫಾರ್ವರ್ಡ್' ಅನ್ನು ಆಯ್ಕೆ ಮಾಡಿ ಮತ್ತು ನಂತರ 'ಮೈ ಸ್ಟೇಟಸ್' ಆಯ್ಕೆ ಮಾಡುವ ಮೂಲಕ ಕೂಡ ಸ್ಟೇಟಸ್‌ನಲ್ಲಿ ವಾಟ್ಸಾಪ್ ಚಾನಲ್ ಅಪ್ಡೇಟ್ ಅನ್ನು ಶೇರ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಏಕಮುಖ ಸಂವಹನ ಸಾಧನವಾಗಿ ಕಾರ್ಯನಿರ್ವಹಿಸುವ ಚಾನೆಲ್‌ಗಳು, ಇನ್ಮುಂದೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಮೂಲಕ ಬಳಕೆದಾರರ ಇನ್ನಷ್ಟು ಎಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಸದ್ಯ ವಾಟ್ಸಾಪ್ ಚಾನಲ್‌ಗಳು ಪರಿಚಯವಾದ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. WhatsApp ಚಾನೆಲ್‌ಗಳು ಪ್ರಾರಂಭವಾದ ಮೊದಲ ಏಳು ವಾರಗಳಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ದಾಟಿದೆ ಎಂದು ಜುಕರ್‌ಬರ್ಗ್ ಕೂಡ ಹೇಳಿದ್ದಾರೆ.
ವಾಟ್ಸಾಪ್ ಚಾನಲ್ ಎಂದರೇನು ಗೊತ್ತಾ?
ವಾಟ್ಸಾಪ್ ಚಾನೆಲ್‌ಗಳು ಏಕಮುಖ ಪ್ರಸಾರ ಡಿವೈಸ್ ಆಗಿ ಕಾರ್ಯನಿರ್ವಹಿಸಲಿವೆ. ಚಾನಲ್ ಅಡ್ಮಿನ್‌ಗಳ ಪಠ್ಯ ಸಂದೇಶಗಳು, ಫೋಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ರವಾನಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ತಮ್ಮ ಆಸಕ್ತಿಯನ್ನು ಕೆರಳಿಸುವ ಚಾನಲ್‌ಗಳನ್ನು ಹುಡುಕುವಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ಹೊಸ ಡೈರೆಕ್ಟರಿಯನ್ನು ರಚಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಡೈರೆಕ್ಟರಿಯಲ್ಲಿ, ಬಳಕೆದಾರರು ತಮ್ಮ ಹವ್ಯಾಸಗಳು, ಕ್ರೀಡಾ ತಂಡಗಳಿಗೆ ಸಂಬಂಧಿಸಿದ ಚಾನಲ್‌ಗಳನ್ನು ಕಾಣಬಹುದಾಗಿದೆ. ಇದಲ್ಲದೆ, ಚಾಟ್‌ಗಳು, ಇಮೇಲ್‌ಗಳು ಅಥವಾ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಇನ್ವೈಟ್ ಲಿಂಕ್‌ಗಳನ್ನು ಅನುಸರಿಸುವ ಮೂಲಕ ಬಳಕೆದಾರರು ವಾಟ್ಸಾಪ್ ಚಾನಲ್‌ಗಳಿಗೆ ಸೇರುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.

ವಾಟ್ಸಾಪ್ ಚಾನಲ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್ ವೆಬ್ ಅನ್ನು ತೆರೆಯಿರಿ
* ಇದರಲ್ಲಿ ಚಾನಲ್‌ಗಳ ಐಕಾನ್ ಕ್ಲಿಕ್ ಮಾಡುವ ಮೂಲಕ ಚಾನಲ್‌ಗಳಿಗೆ ಹೋಗಿ
* ಇದೀಗ + ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಚಾನಲ್ ಕ್ರಿಯೆಟ್ ಮಾಡಲು ಹೋಗಿ
* ಇದರಲ್ಲಿ ಕಂಟಿನ್ಯೂ ಕ್ಲಿಕ್ ಮಾಡಿ
* ನಂತರ ಸ್ಕ್ರೀನ್ ಮೇಲೆ ಕಾಣುವ ಪ್ರಾಂಪ್ಟ್‌ಗಳ ಮೂಲಕ ಮುಂದುವರಿಯಿರಿ.
* ಇದೀಗ ನಿಮ್ಮ ಚಾನಲ್ಗೆ ಒಂದು ಹೆಸರನ್ನು ನೀಡಿರಿ
* ನಂತರ ನಿಮ್ಮ ಚಾನಲ್ ಅನ್ನು ಕಸ್ಟಮೈಸ್ ಮಾಡಿ, ಅಂದರೆ ಚಾನಲ್ ಬಗ್ಗೆ ವಿವರಣೆ ಮತ್ತು ಐಕಾನ್ ಅನ್ನು ಸೇರಿಸುವ ಮೂಲಕ ನಿಮ್ಮ ಚಾನಲ್ ಅನ್ನು ಕಸ್ಟಮೈಸ್ ಮಾಡಬಹುದು
* ಇದೀಗ ಚಾನಲ್ ವಿವರಣೆಯನ್ನು ಸೇರಿಸಿ
* ಚಾನಲ್ ಐಕಾನ್ ಸೇರಿಸಿ
* ಇದೀಗ ಚಾನಲ್ ಕ್ರಿಯೆಟ್ ಕ್ಲಿಕ್ ಮಾಡಿದರೆ ನಿಮ್ಮ ಚಾನಲ್ ಕ್ರಿಯೆಟ್ ಆಗಿರಲಿದೆ.


Click it and Unblock the Notifications








