ವಾಟ್ಸಾಪ್‌ನ ಬಹುನಿರೀಕ್ಷಿತ ಫೀಚರ್ಸ್ ಇದೀಗ ಎಲ್ಲರಿಗೂ ಲಭ್ಯ! ಇದರಿಂದ ನಿಮಗೆ ಏನು ಲಾಭ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಹು ನಿರೀಕ್ಷಿತ ಚಾಟ್ ಲಾಕ್ ಫೀಚರ್ಸ್ ಅನ್ನು ರೂಲ್ ಔಟ್ ಮಾಡಿದೆ. ಸದ್ಯ ಈ ಫೀಚರ್ಸ್ ಇಂದಿನಿಂದ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಇನ್ನು ಈ ಫೀಚರ್ಸ್ ವಾಟ್ಸಾಪ್ ಬಳಕೆದಾರರಿಗೆ ತಮ್ಮ ಪರ್ಸನಲ್ ಚಾಟ್ ಅನ್ನು ಲಾಕ್ ಮಾಡಲು ಅನುಮತಿಸಲಿದೆ.
ಹೌದು, ವಾಟ್ಸಾಪ್ ಇತ್ತೀಚಿಗೆ ಘೋಷಣೆ ಮಾಡಿದ್ದ ಚಾಟ್ ಲಾಕ್ ಫೀಚರ್ಸ್ ಇದೀಗ ಎಲ್ಲರಿಗೂ ಲಭ್ಯವಿದೆ. ಈ ಮೂಲಕ ಬಳಕೆದಾರರಿಗೆ ಇನ್ನಷ್ಟು ಗೌಪ್ಯತೆ ಮತ್ತು ಭದ್ರತೆಯನ್ನು ಒದಗಿಸಿದೆ. ಈಗಾಗಲೇ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಹೊಂದಿರುವ ವಾಟ್ಸಾಪ್ ಚಾಟ್ ಲಾಕ್ ಮೂಲಕ ಇನ್ನಷ್ಟು ಸುರಕ್ಷತೆಯನ್ನು ಬಳಕೆದಾರರಿಗೆ ನೀಡುತ್ತುದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ವಾಟ್ಸಾಪ್ ಚಾಟ್‌ಲಾಕ್?
ವಾಟ್ಸಾಪ್ ಸೇರಿರುವ ಹೊಸ ಚಾಟ್ ಲಾಕ್ ಫೀಚರ್ಸ್ ಹೆಸರೇ ಸೂಚಿಸವಂತೆ ನಿಮ್ಮ ಚಾಟ್ ಅನ್ನು ಲಾಕ್ ಮಾಡಲು ಅನುಮತಿಸಲಿದೆ. ಅಂದರೆ ನೀವು ಯಾವ ಚಾಟ್ ಅನ್ನು ಲಾಕ್ ಮಾಡಿರುತ್ತೀರಿ ಅದನ್ನು ಬೇರೆಯವರು ತೆರೆಯಲು ಸಾಧ್ಯವಿಲ್ಲ. ಅಲ್ಲದೆ ಚಾಟ್ ಲಾಕ್ ಮಾಡಿರುವ ಚಾಟ್ ಅನ್ನು ತೆರೆಯಬೇಕಾದರೆ ನಿಮ್ಮ ಫಿಂಗರ್‌ಪ್ರಿಂಟ್ ಇಲ್ಲವೇ ಪಾಸ್‌ವರ್ಡ್ ಅನ್ನು ಬಳಸಬೇಕಾಗುತ್ತದೆ. ಇದರಿಂದ ಬೇರೆಯವರು ನಿಮ್ಮ ವಾಟ್ಸಾಪ್ ತೆರೆದರೂ ಕೂಡ ನೀವು ಚಾಟ್ ಲಾಕ್ ಮಾಡಿರುವ ಚಾಟ್ ಅನ್ನು ತೆರೆಯಲು ಸಾಧ್ಯವಾಗುವುದಿಲ್ಲ.
ಇನ್ನು ನೀವು ಚಾಟ್ ಅನ್ನು ಲಾಕ್ ಮಾಡಿದ ನಂತರ ಆ ಚಾಟ್ ಸಂದೇಶಗಳ ನೋಟಿಫಿಕೇಶನ್ ಕೂಡ ಹೈಡ್ ಆಗಲಿದೆ. ಇದರಿಂದ ನಿಮ್ಮ ಚಾಟ್‌ಗಳಿಗೆ ರಕ್ಷಣೆ ಸಿಗಲಿದೆ ಎಂದು ವಾಟ್ಸಾಪ್ ಹೇಳಿದೆ. ಇದಲ್ಲದೆ ಚಾಟ್‌ಲಾಕ್ ಅನ್ನು ನೀವು ಒಬ್ಬರ ಚಾಟ್, ಇಲ್ಲವೇ ಗುಂಪಿನ ಹೆಸರನ್ನು ಟ್ಯಾಪ್ ಮಾಡುವ ಮೂಲಕ ಲಾಕ್ ಆಯ್ಕೆಯನ್ನು ಆರಿಸಿಕೊಂಡು ಚಾಟ್‌ಲಾಕ್ ಮಾಡಬಹುದಾಗಿದೆ. ಅಲ್ಲದೆ ಲಾಕ್ ಆಗಿರುವ ಚಾಟ್‌ಗಳನ್ನು ಪರಿಶೀಲಿಸಲು, ನೀವು ವಾಟ್ಸಾಪ್‌ನ ಮೇನ್ ಸ್ಕ್ರೀನ್ ಅನ್ನು ಕೆಳಗೆ ಸ್ಕ್ರಾಲ್ ಮಾಡಿದರೆ ತಿಳಿಯಲಿದೆ.

ವಾಟ್ಸಾಪ್ ಚಾಟ್‌ಲಾಕ್ ಅನ್ನು ಸೆಟ್‌ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್ ತೆರೆಯಿರಿ
* ನಂತರ ನೀವು ಲಾಕ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆ ಮಾಡಿ
* ಚಾಟ್‌ನ ಪ್ರೊಫೈಲ್ ಚಿತ್ರದ ಪಕ್ಕದಲ್ಲಿರುವ ವೈಯಕ್ತಿಕ ಅಥವಾ ಗುಂಪಿನ ಹೆಸರನ್ನು ಟ್ಯಾಪ್ ಮಾಡಿ
* ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಲಾಕ್ ಚಾಟ್" ಟ್ಯಾಪ್ ಮಾಡಿ
* ನಂತರ ನಿಮ್ಮ ಪಾಸ್‌ವರ್ಡ್/ ಫಿಂಗರ್‌ಪ್ರಿಂಟ್ ಮೂಲಕ ಚಾಟ್ ಅನ್ನು ಲಾಕ್ ಮಾಡಿ.
ಹೀಗೆ ನೀವು ಚಾಟ್ ಅನ್ನು ಲಾಕ್ ಮಾಡಿದ ನಂತರ ನೀವು ಚಾಟ್ ಲಾಕ್ ತೆರೆಯಲು ನಿಮ್ಮ ಪಾಸ್‌ವರ್ಡ್ ಇಲ್ಲವೇ ಫಿಂಗರ್‌ಪ್ರಿಂಟ್ ಬಳಸಬೇಕಾಗುತ್ತದೆ. ಇನ್ನು ನೀವು ಲಾಕ್ ಮಾಡಿರುವ ಚಾಟ್‌ಗಳು ವಾಟ್ಸಾಪ್‌ನ ಹೋಮ್‌ಸ್ಕ್ರೀನ್ ಅನ್ನು ಸ್ಕ್ರಾಲ್ ಮಾಡಬೇಕಾಗುತ್ತದೆ.

ಇದಲ್ಲದೆ ವಾಟ್ಸಾಪ್ ಮ್ಯಾಕ್‌ಒಎಸ್ ಡಿವೈಸ್ ಬಳಕೆದಾರರಿಗೆ ಗ್ರೂಪ್ ಕಾಲ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದರಿಂದ ಆಯ್ದ ಸಂಖ್ಯೆಯ ಬಳಕೆದಾರರು ಗ್ರೂಪ್ ಕಾಲ್‌ನಲ್ಲಿ ಭಾಗವಹಿಸಲು ಸಾದ್ಯವಾಗಲಿದೆ. ಇದರಿಂದ ಮ್ಯಾಕ್‌ಒಎಸ್ ಬಳಕೆದಾರರು ಕೂಡ ವಾಟ್ಸಾಪ್ ಗ್ರೂಪ್ ಕಾಲ್ ಅನ್ನು ಬಳಸಬಹುದಾಗಿದೆ. ವಾಟ್ಸಾಪ್ ಗ್ರೂಪ್ ಕಾಲ್ ಫೀಚರ್ಸ್ ಅನ್ನು ಈಗಾಗಲೇ ಪರಿಚಯಿಸಿದೆ. ಆದರೆ ಮ್ಯಾಕ್‌ಒಎಸ್ ಡಿವೈಸ್‌ನಲ್ಲಿ ಈ ಫೀಚರ್ಸ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದಾಗ್ಯೂ, ವಾಟ್ಸಾಪ್ ಬೀಟಾದ ಇತ್ತೀಚಿನ ಅಪ್‌ಡೇಟ್‌ನಲ್ಲಿ ಕಾಲ್ ಬಟನ್‌ಗಳು ಲಭ್ಯವಿದೆ. ಈ ಹೊಸ ಫೀಚರ್ಸ್ ಒಂದೇ ಗುಂಪಿನಲ್ಲಿಲ್ಲದ ಜನರೊಂದಿಗೆ ಹೊಸ ಗ್ರೂಪ್ ಕಾಲ್ ಅನ್ನು ಕ್ರಿಯೆಟ್ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ ಎಂದು ವರದಿಯಾಗಿದೆ.


Click it and Unblock the Notifications








