ಇನ್ಮುಂದೆ ವಾಟ್ಸ್ಆಪ್‌ನಲ್ಲಿ ಸೇವ್ ಆಗಿರದ ನಂಬರ್‌ಗೂ ಮೆಸೇಜ್ ಕಳಿಸಿ!!

|
How to Send a WhatsApp Message Without Saving the Contact in Your Phone - GIZBOT KANNADA

ವಾಟ್ಸ್ ಆಪ್ ನಲ್ಲಿ ಮೆಸೇಜ್ ಕಳಿಸುವುದು ತುಂಬಾ ಸುಲಭ ಮತ್ತು ಸರಳ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಮತ್ತು ಕಾಂಟ್ಯಾಕ್ಟ್ ನಲ್ಲಿ ಅನವಶ್ಯಕ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಯಾವಾಗವೆಂದರೆ, ಯಾರಿಗೂ ಅಪರಿಚಿತ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ.. ಹೌದು ಇಂತಹ ಸಂದರ್ಬದಲ್ಲಿ ಆ ವ್ಯಕ್ತಿಯ ಫೋನ್ ನಂಬರ್ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ಸೇರುವ ಅಗತ್ಯವಿರುವುದಿಲ್ಲ ಆದರೆ ಮೆಸೇಜ್ ಕಳುಹಿಸುವ ಅಗತ್ಯವಿರುತ್ತೆ.

ಇನ್ಮುಂದೆ ವಾಟ್ಸ್ಆಪ್‌ನಲ್ಲಿ ಸೇವ್ ಆಗಿರದ ನಂಬರ್‌ಗೂ ಮೆಸೇಜ್ ಕಳಿಸಿ!!

ಮೇಸೇಜ್ ಕಳಿಸಲು ವಾಟ್ಸ್ಯಾಪ್ ಸುಲಭ ವಿಧಾನವಾಗಿರುವುದರಿಂದ ವಾಟ್ಸ್ ಆಪ್ ಮೆಸೇಜ್ ಕಳಿಸಲು ಮುಂದಾದರೆ, ಅವರ ನಂಬರ್ ನ್ನು ಕಾಂಟ್ಯಾಕ್ಟ್ ಪಟ್ಟಿಗೆ ಸೇರಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇಷ್ಟು ದಿನ ಇತ್ತು. ಆದರೆ ಈ ತಲೆನೋವು ಇನ್ನುಮುಂದೆ ಇರುವುದಿಲ್ಲ. ಫೇಸ್ ಬುಕ್ ಮಾಲೀಕತ್ವದ ಚಾಟ್ ಮಾಡುವ ಆಪ್ ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಟ್ಯವೊಂದು ಸೇರಿಕೊಳ್ಳಲಿದ್ದು ಅದುವೇ “ಕ್ಲಿಕ್ ಟು ಚಾಟ್” . ಇದರ ಮೂಲಕ ನಂಬರ್ ನ್ನು ಕಾಂಟ್ಯಾಕ್ಟ್ ನಲ್ಲಿ ಸೇವ್ ಮಾಡಿಕೊಳ್ಳದೇ ಇದ್ದರೂ ಮೆಸೇಜ್ ಕಳಿಸಲು ಸಾಧ್ಯವಿದೆ.

ವಾಟ್ಸ್ ಆಪ್ ಇತ್ತೀಚೆಗೆ ಹೊಸದಾಗಿ ಬಿಡುಗಡೆಗೊಳಿಸಿರುವ ತನ್ನ ಬ್ಯೂಸಿನೆಸ್ ಆಪ್ ಬಗ್ಗೆ ಭಾರೀ ಅವಲೋಕನ ಮಾಡುತ್ತಿದೆ. ಈ ಹೊಸ ವೈಶಿಷ್ಟ್ಯವನ್ನು ತನ್ನ ಹೊಸ ಬ್ಯೂಸಿನೆಸ್ ಆಪ್ ನಲ್ಲಿ ಸೇರಿಸುವ ಆಲೋಚನೆಯನ್ನು ವಾಟ್ಸ್ ಆಪ್ ಹೊಂದಿದ್ದು, ಆ ಮೂಲಕ ಬಳಕೆದಾರ ತನಗೆ ಅಗತ್ಯವಿಲ್ಲದ, ಅಪರಿಚಿತರ ಉದ್ದ ಪಟ್ಟಿಯನ್ನು ತನ್ನ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳುವ ಮತ್ತು ಅದನ್ನು ಮೈಂಟೈನ್ ಮಾಡುವ ಅಗತ್ಯತೆಯನ್ನು ನಿವಾರಿಸುತ್ತೆ.

ಈಗಾಗಲೇ, ಕ್ಲಿಕ್ ಟು ಚಾಟ್ ಆಯ್ಕೆಯು ಆಂಡ್ರಾಯ್ಡ್ ಮತ್ತು ವೆಬ್ ಬಳಕೆದಾರರಿಗೆ ಲಭ್ಯವಿದೆ. ಈ ವೈಶಿಷ್ಟ್ಯವು ಹೇಗೆ ಕೆಲಸ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದಿನ ಹಂತಗಳನ್ನು ಫಾಲೋ ಮಾಡಿ..

 ಬಳಕೆದಾರರು ಈ ಕೆಳಗಿನ ಲಿಂಕ್ ನಲ್ಲಿ ಚಾಟ್ ಲಿಂಕ್ ನ್ನು ಕ್ರಿಯೇಟ್ ಮಾಡಬೇಕು. 'https://api.whatsapp.com/send?phone='.

 ಈ ಲಿಂಕಿನ ಕೊನೆಯಲ್ಲಿ ನೀವು ಯಾರಿಗೆ ಮೆಸೇಜ್ ಕಳಿಸಬೇಕೋ ಅವರ ಫೋನ್ ನಂಬರ್ ನ್ನು ಬರೆಯಿರಿ. ಪೋನ್ ನಂಬರ್ ಸ್ಪೆಷಲ್ ಕ್ಯಾರೆಕ್ಟರ್ ಗಳನ್ನು ಒಳಗೊಂಡಿರಬಾರದು ಮತ್ತು ರಾಷ್ಟ್ರೀಯ ಕೋಡನ್ನು ಹೊಂದಿರಬೇಕು.

 ಯುಆರ್ ಎಲ್ ನ್ನು ಕ್ರೋಮ್ ನಲ್ಲಿ ಎಂಟರ್ ಮಾಡಿ ನಂತರ ಅದು ನಿಮಗೆ ಮೇಸೇಜ್ ಕಳಿಸಬೇಕು ಎಂದುಕೊಂಡಿರುವ ವ್ಯಕ್ತಿಗೆ ನೀವು ಏನು ಹೇಳಬೇಕು ಅಂದರೆ ಮೇಸೇಜ್ ನ ಸಾರಾಂಶ ಬರೆಯಲು ತಿಳಿಸುತ್ತೆ.

 ಅವನ ಅಥವಾ ಅವಳ ನಂಬರ್ ನ್ನು ಸೇವ್ ಮಾಡಿಕೊಳ್ಳದೆ ಅವರ ಜೊತೆ ಮಾತುಕತೆಯನ್ನು ಈ ಮೂಲಕ ಮುಂದುವರಿಸಬಹುದು.

ಈ ವೈಶಿಷ್ಟ್ಯದ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಾಗಿದೆ. ಭವಿಷ್ಯದಲ್ಲೂ ಇದೇ ರೀತಿ ಆಕ್ಸಿಸ್ ಮಾಡಬೇಕಾಗುತ್ತಾ ಅಥವಾ ಇನ್ನೂ ಸರಳ ವಿಧಾನವನ್ನು ಅಳವಡಿಸಲಾಗುತ್ತಾ ತಿಳಿದಿಲ್ಲ.

ಈಗಾಗಲೇ ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಹಲವು ವೈಶಿಷ್ಟ್ಯಗಳನ್ನು ಸೇರಿಸಿಕೊಂಡಿದೆ. ಇತ್ತೀಚೆಗಷ್ಟೇ ಯಾವುದೇ ಗ್ರೂಪಿನ ಮತ್ತೊಬ್ಬ ಅಡ್ಮಿನ್ ನ್ನು ಡಿಮೋಟ್ ಮಾಡುವ ಅವಕಾಶವನ್ನು ಕಲ್ಪಿಸಿದೆ. ಅವರನ್ನು ಗ್ರೂಪಿನಿಂದ ಹೊರತೆಗೆದು ಮತ್ತೆ ಸೇರಿಸಿಕೊಳ್ಳುವ ಪ್ರಮೇಯವಿಲ್ಲ,ಬದಲಾಗಿ ಗ್ರೂಪಿನಲ್ಲಿದ್ದಾಗಲೇ ಅಡ್ಮಿನ್ ಅಧಿಕಾರದಿಂದ ಒಬ್ಬ ವ್ಯಕ್ತಿಯನ್ನು ಹೊರಗಿಡುವ ಸಾಮರ್ಥ್ಯವನ್ನು ಗ್ರೂಪ್ ಅಡ್ಮಿನ್ ಗೆ ಅಥವಾ ಗ್ರೂಪಿನ ಸೃಷ್ಟಿಕರ್ತನಿಗೆ ನೀಡಲಾಗಿದೆ.

ಗ್ರೂಪ್ ಫೀಚರ್ ಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಅವಕಾಶವೂ ಇದೆ. ಗುಂಪಿನ ಯಾವೆಲ್ಲ ಸದಸ್ಯರು ಗುಂಪಿನ ಐಕಾನ್ ಮತ್ತು ವಿವರಣೆಯನ್ನು ಬದಲಿಸುವ ಅವಕಾಶವಿದೆ ಎಂಬ ಬಗ್ಗೆಯೂ ಗ್ರೂಪ್ ಅಡ್ಮಿನ್ ನಿರ್ಧರಿಸುವ ಅವಕಾಶ ನೀಡಲಾಗಿದೆ. ಗ್ರೂಪ್ ಅಡ್ಮಿನ್ ಮಾತ್ರ ಅದನ್ನು ಬದಲಿಸಬಹುದೇ ಅಥವಾ ಗ್ರೂಪಿನ ಎಲ್ಲಾ ಸದಸ್ಯರು ಬದಲಿಸಬಹುದೇ ಅಥವಾ ಗುಂಪಿನ ಕೆಲವೇ ಸದಸ್ಯರಿಗೆ ಈ ಅಧಿಕಾರ ನೀಡಬೇಕೆ ಎಂಬ ಬಗ್ಗೆ ಗುಂಪಿನ ನಾಯಕ ನಿರ್ಧರಿಸಬಹುದು. ಈ ವೈಶಿಷ್ಟ್ಯವನ್ನು ಆಕ್ಸಿಸ್ ಮಾಡಲು ಗ್ರೂಪ್ ಇನ್ಫೋ> ಗ್ರೂಪ್ ಸೆಟ್ಟಿಂಗ್ಸ್> ಎಡಿಟ್ ಗ್ರೂಪ್ ಇನ್ಫೋ ಗೆ ತೆರಳಬೇಕು.

ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಲಗ್ಗೆ!.. 144 ರೂ.ಗೆ ಅನ್‌ಲಿಮಿಟೆಡ್ ಆಫರ್!!ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಲಗ್ಗೆ!.. 144 ರೂ.ಗೆ ಅನ್‌ಲಿಮಿಟೆಡ್ ಆಫರ್!!

Best Mobiles in India

Read more about:
English summary
WhatsApp 'Click to Chat' feature lets you chat with unsaved contacts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X