ವಾಟ್ಸಾಪ್‌ ಪ್ರಾರಂಭವಾಗಿ ಇಂದಿಗೆ 12 ವರ್ಷ!..ಪ್ರಾರಂಭದಲ್ಲಿ ವಾಟ್ಸಾಪ್‌ ಹೇಗಿತ್ತು?

|

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌. ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಸಾಕ್ಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಸಂದೇಶ, ವಿಡಿಯೋ ಕಾಲ್‌, ವಾಯ್ಸ್‌ ಕಾಲ್‌ ಪ್ರತಿಯೊಂದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವಾಟ್ಸಾಪ್‌ ಅನ್ನು ಬಳಸುತ್ತಿದ್ದಾರೆ. ಇಷ್ಟೆಲ್ಲಾ ಪ್ರಸಿದ್ಧಿ ಪಡೆದುಕೊಂಡಿರುವ ವಾಟ್ಸಾಪ್‌ ಇಂದು 12 ನೇ ವರ್ಷಕ್ಕೆ ಕಾಲಿಟ್ಟಿದೆ. ಅಂದರೆ ವಾಟ್ಸಾಪ್‌ ಪ್ರಾರಂಭವಾಗಿ ಇಂದಿಗೆ ಬರೋಬ್ಬರಿ 12 ವರ್ಷಗಳಾಗಿದೆ.

ವಾಟ್ಸಾಪ್

ಹೌದು, ಜನಪ್ರಿಯ ಇನ್ಸಟಂಟ್‌ ಸೇಜಿಂಗ್ ಆಪ್‌ ವಾಟ್ಸಾಪ್ ತನ್ನ 12 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆ. ಅಷ್ಟೇ ಅಲ್ಲ ಈ 12 ವರ್ಷಗಳ ಅವಧಿಯಲ್ಲಿ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿರುವ ವಾಟ್ಸಾಪ್‌ ಪ್ರತಿದಿನ ಒಂದು ಶತಕೋಟಿಗೂ ಹೆಚ್ಚು ಕರೆಗಳನ್ನು ನಿರ್ವಹಿಸುತ್ತದೆ ಎಂದು ಹೇಳಿಕೊಂಡಿದೆ. ಹಾಗಾದ್ರೆ ವಾಟ್ಸಾಪ್‌ನ ಈ 12 ವರ್ಷಗಳ ಹಾದಿ ಹೇಗಿತ್ತು. ಪ್ರಸ್ತುತ ವಾಟ್ಸಾಪ್‌ನ ಜನಪ್ರಿಯತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ಯಾಹೂ ಸಂಸ್ಥೆಯ ಮಾಜಿ ಉದ್ಯೋಗಿಗಳಾದ ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೌಮ್ ಅವರು 2009 ರಲ್ಲಿ ಹುಟ್ಟುಹಾಕಿದ ವಾಟ್ಸಾಪ್‌ ಇಂದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಫೆಬ್ರವರಿ 2009 ರಲ್ಲಿ ಪ್ರಾರಂಭವಾದ ವಾಟ್ಸಾಪ್‌ ಇಂದಿಗೆ ತನ್ನ ಹನ್ನೆರಡನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಮೂಲತಃ ಅದರ ಬಳಕೆದಾರರ ನಡುವೆ ಸ್ಥಿತಿಗತಿಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾಗಿತ್ತು. ಆದಾಗ್ಯೂ, ಇದು ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫಿಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತಾ ಸಾಗಿತ್ತಲ್ಲದೆ, ಪೂರ್ಣ ಪ್ರಮಾಣದ ಸಂದೇಶ ಕಳುಹಿಸುವ ಅಪ್ಲಿಕೇಶನ್‌ ಆಗಿ ಮಾರ್ಪಟ್ಟಿತು. ಅಂತಿಮವಾಗಿ ಸಾಂಪ್ರದಾಯಿಕ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಸಹ ಬೆಂಬಲಿಸಲು ಪ್ರಾರಂಭಿಸಿತು. ಅಲ್ಲದೆ ಬಳಕೆದಾರರಿಗೆ ಪಾವತಿಗಳನ್ನು ಮಾಡಲು ಮತ್ತು ಸ್ಟಿಕ್ಕರ್‌ಗಳನ್ನು ಕಳುಹಿಸಲು ಸಹ ಅನುಮತಿಸುತ್ತಿದೆ.

ವಾಟ್ಸಾಪ್

ಸದ್ಯ ತನ್ನ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಪೋಸ್ಟ್ ಮಾಡಿರುವ ವಾಟ್ಸಾಪ್ ಪ್ರತಿನಿತ್ಯ 100 ಬಿಲಿಯನ್ ಸಂದೇಶಗಳನ್ನು ಕಳುಹಿಸುವ ಎರಡು ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ ಸೇರಿದಂತೆ ಈ ಹಿಂದೆ ಘೋಷಿಸಲಾದ ಕೆಲವು ಅಂಕಿಅಂಶಗಳ ಬಗ್ಗೆ ಹೇಳಿಕೆ ನೀಡಿದೆ. ಅಲ್ಲದೆ ವಾಟ್ಸಾಪ್‌ ಪ್ರತಿದಿನವೂ ಒಂದು ಶತಕೋಟಿಗೂ ಹೆಚ್ಚು ಕರೆಗಳನ್ನು ಸಂಪರ್ಕಿಸುತ್ತದೆ ಎಂದು ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ. ಇನ್ನು ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಗೌಪ್ಯತೆ ನೀತಿಯನ್ನು ಸೇರಿಸುವ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಾದವನ್ನು ಸಹ ಎದುರಿಸುತ್ತಿದೆ.

ವಾಟ್ಸಾಪ್‌

ವಾಟ್ಸಾಪ್‌ ಹಂತಹಂತವಾಗಿ ಬೆಳವಣಿಗೆ ಕಂಡಿದೆ. 2015 ರ ಫೆಬ್ರವರಿಯಲ್ಲಿ ವಾಯ್ಸ್‌ ಕಾಲ್‌ ಫಿಚರ್ಸ್‌ ಪರಿಚಯಿಸಿದ ವಾಟ್ಸಾಪ್‌, ನವೆಂಬರ್ 2016 ರಲ್ಲಿ ವೀಡಿಯೊ ಕರೆಯನ್ನು ಸಹ ಪರಿಚಯಿಸಿತ್ತು. ಜೊತೆಗೆ ಇದು ಆಗಸ್ಟ್ 2018 ರಲ್ಲಿ ಗ್ರೂಪ್‌ ವಾಯ್ಸ್‌ ಮತ್ತು ವೀಡಿಯೊ ಕಾಲ್‌ ಬೆಂಬಲವನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸಿದೆ. ಕರೆ ಮಾಡುವುದರ ಹೊರತಾಗಿ, ಬಳಕೆದಾರರಿಗೆ ಏಕ-ತ್ವರಿತ ಸಂದೇಶ ಪರಿಹಾರವಾಗಿ ಸೇವೆ ಸಲ್ಲಿಸಲು ಪಾವತಿ ಮತ್ತು ಸ್ಟಿಕ್ಕರ್‌ಗಳು ಮತ್ತು ಜಿಐಎಫ್‌ಗಳ ಹಂಚಿಕೆ ಸೇರಿದಂತೆ ವೈಶಿಷ್ಟ್ಯಗಳನ್ನು ವಾಟ್ಸಾಪ್ ನೀಡುತ್ತಿದೆ.

ವಾಟ್ಸಾಪ್

ಇನ್ನು ವಾಟ್ಸಾಪ್ ಅನ್ನು ಫೆಬ್ರವರಿ 2014 ರಲ್ಲಿ ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿತು. ಆದಾಗ್ಯೂ, ಇದು ವಾಟ್ಸಾಪ್ನ ಗೌಪ್ಯತೆ ಮತ್ತು ಫೇಸ್‌ಬುಕ್ ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ಬಳಕೆದಾರರ ಡೇಟಾವನ್ನು ಹೇಗೆ ಹಂಚಿಕೊಳ್ಳುತ್ತಿದೆ ಎಂಬ ಪ್ರಶ್ನೆಗಳನ್ನೂ ಸಹ ಹುಟ್ಟುಹಾಕಿದೆ. ಸದ್ಯ ವಾಟ್ಸಾಪ್ ಬಗ್ಗೆ ಬಳಕೆದಾರರ ಗೌಪ್ಯತೆ ಕುರಿತ ಚರ್ಚೆಯು ಇತ್ತೀಚಿನ ದಿನಗಳಲ್ಲಿ ಹೊಸ ಮಟ್ಟವನ್ನು ತಲುಪಿದೆ. ಅದರ ಹೊಸ ಗೌಪ್ಯತೆ ನೀತಿಯನ್ನು ಪರಿಚಯಿಸುವುದರೊಂದಿಗೆ ವಾಟ್ಸಾಪ್‌ ಬಳಕೆದಾರರ ಅಸಮಾಧಾನಕ್ಕೆ ಕೂಡ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ವಾಟ್ಸಾಪ್‌ ಇದೆಲ್ಲವನ್ನು ಹೇಗೆ ನಿಭಾಯಿಸಲಿದೆ ಅನ್ನೊದನ್ನ ಕಾದು ನೊಡಬೇಕಿದೆ.

Best Mobiles in India

English summary
WhatsApp completes 12 years; handles 12 billion calls every day.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X