ಇನ್ಮುಂದೆ ವಾಟ್ಸಾಪ್‌ನ ಈ ಫೀಚರ್ಸ್‌ಗೆ ಯಾವುದೇ ಸಮಯದ ಮಿತಿಯಿಲ್ಲ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಈಗಾಗಲೇ ಬಳಕೆದಾರರಿಗೆ ಲಭ್ಯವಿರುವ ಅನುಕೂಲಕರ ಫೀಚರ್ಸ್‌ನಲ್ಲಿ ಅಗತ್ಯ ಬದಲಾವಣೆ ಮಾಡಿದೆ. ಸದ್ಯ ವಾಟ್ಸಾಪ್‌ ತನ್ನ 'ಡಿಲೀಟ್ ಫಾರ್ ಎವೆರಿ ಒನ್' ಫೀಚರ್ಸ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲು ವಾಟ್ಸಾಪ್‌ ಮುಂದಾಗಿದೆ. ಇಷ್ಟು ದಿನ 'ಡಿಲೀಟ್ ಫಾರ್ ಎವೆರಿ ಒನ್' ಆಯ್ಕೆಗೆ ನಿಡಿದ್ದ ಸಮಯದ ಮಿತಿಯನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ 'ಡಿಲೀಟ್ ಫಾರ್ ಎವೆರಿ ಒನ್' ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಇಷ್ಟು ದಿನ ಒಂದು ಗಂಟೆಯ ಅವಧಿ ಮಿತಿಯನ್ನು ಹೊಂದಿದ್ದ ಡಿಲೀಟ್ ಫಾರ್ ಎವೆರಿ ಒನ್ ಇನ್ಮುಂದೆ ಸಮಯದ ಮಿತಿ ಇರುವುದಿಲ್ಲ ಎನ್ನಲಾಗಿದೆ. ಇದರಿಂದ ನೀವು ಬೇರೆಯವರಿಗೆ ಸಂದೇಶ ಕಳುಹಿಸಿ ಒಂದು ಗಂಟೆಯ ಅವಧಿಯಾದ ನಂತರವೂ ಅದನ್ನು ಡಿಲೀಟ್ ಫಾರ್ ಎವೆರಿ ಒನ್ ಮೂಲಕ ಡಿಲೀಟ್‌ ಮಾಡಬಹುದು. ಇದು ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಎನಿಸಿಲಿದೆ. ಹಾಗಾದ್ರೆ ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಲೀಟ್

ವಾಟ್ಸಾಪ್‌ ಶೀಘ್ರದಲ್ಲೇ ತನ್ನ ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಲಿದೆ. ಇಷ್ಟು ದಿನ ಡಿಲೀಟ್ ಫಾರ್ ಎವೆರಿ ಒನ್ ಇದ್ದ ಸಮಯದ ಮಿತಿಯ ಬದಲಾವಣೆ ಮಾಡಲಿದೆ ಎನುವ ವರದಿಯಾಗಿದೆ. ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ 2017 ರಲ್ಲಿ ವಾಟ್ಸಾಪ್‌ಗೆ ಸೇರ್ಪಡೆ ಆಗಿತ್ತು. ಪ್ರಾರಂಭದಲ್ಲಿ ಏಳು ನಿಮಿಷಗಳ ಮಿತಿ ಹೊಂದಿದ್ದ ಈ ಫೀಚರ್ಸ್‌ ನಂತರದಲ್ಲಿ ಒಂದು ಗಂಟೆಯ ಅವಧಿಯನ್ನು ಹೊಂದಿತ್ತು. ಪ್ರಸ್ತುತ ಒಂದು ಗಂಟೆಯ ಅವಧಿಯನ್ನು ಹೊಂದಿದೆ.

ವಾಟ್ಸಾಪ್‌

ಇದು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಪರಿಚಯಿಸಿರುವ ಅತ್ಯಂತ ಉಪಯುಕ್ತ ಮತ್ತು ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿದೆ. ಈ ಆಯ್ಕೆಯ ಮೂಲಕ ನೀವು ಯಾರಿಗಾದರೂ ಅಥವಾ ಗ್ರೂಪ್‌ಗೆ ತಪ್ಪಾದ ಚಾಟ್‌ ಸಂದೇಶವನ್ನು ಕಳುಹಿಸಿದ್ದರೆ ಯಾರಿಗೂ ಕಾಣದಂತೆ ಡಿಲೀಟ್‌ ಮಾಡಲು ಅವಕಾಶ ನೀಡಲಿದೆ. ಇದರಿಂದ ನಿಮಗಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಅವಕಾಶ ಸಿಗಲಿದೆ. ಸದ್ಯ WABetaInfo ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಪ್ರಕಾರ ಕಂಪನಿಯು ಈ ಫೀಚರ್ಸ್‌ನ ಸಮಯದ ಮಿತಿಯನ್ನು ಅನಿರ್ದಿಷ್ಟ ಅವಧಿಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ವಾಟ್ಸಾಪ್‌

ಇನ್ನು ಈ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ವಾಟ್ಸಾಪ್‌ನ v2.21.23.1 ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಕಂಡುಬಂದಿದೆ. ಸದ್ಯ ಈ ಫೀಚರ್ಸ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಮತ್ತು ಎಲ್ಲಾ ಬೀಟಾ ಪರೀಕ್ಷಕರಿಗೆ ಲಭ್ಯವಾಗುವವರೆಗೆ ಯಾವುದು ಅಂತಿಮವಿಲ್ಲ ಎನ್ನುವ ಮಾಹಿತಿ ಕೂಡ ಇದೆ. ಆದರೆ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬುದರ ಬಗ್ಗೆ ಕೂಡ ಯಾವುದೇ ಖಚಿತ ಮಾಹಿತಿ ಇಲ್ಲ.

ವಾಟ್ಸಾಪ್‌

ಪ್ರಸ್ತುತ, ವಾಟ್ಸಾಪ್‌ ಬಳಕೆದಾರರು ಮೆಸೇಜಿಂಗ್ ಚಾಟ್‌ನಲ್ಲಿ ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಿಂದ ಸಂದೇಶಗಳನ್ನು ಡಿಲೀಟ್ ಫಾರ್ ಎವೆರಿ ಒನ್ ಮೂಲಕ ಅಳಿಸಿದರೆ ಅಪ್ಲಿಕೇಶನ್ ಚಾಟ್ ವಿಂಡೋದಲ್ಲಿ ಅಧಿಸೂಚನೆಯನ್ನು ಪ್ರದರ್ಶಿಸುತ್ತದೆ. ಇದರಲ್ಲಿ "ಈ ಸಂದೇಶವನ್ನು ಅಳಿಸಲಾಗಿದೆ" ಎಂದು ಹೇಳುತ್ತದೆ. ಆದಾಗ್ಯೂ, ಅಳಿಸಲಾದ ವಾಟ್ಸಾಪ್‌ ಸಂದೇಶಗಳನ್ನು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ವೀಕ್ಷಿಸುವುದಕ್ಕೂ ಕೂಡ ಅವಕಾಶವಿದೆ.

ವಾಟ್ಸಾಪ್‌

ಇದಲ್ಲದೆ, ವಾಟ್ಸಾಪ್‌ನ ಐಒಎಸ್ ಆವೃತ್ತಿಯು ಹೊಸ ವೀಡಿಯೊ ಪ್ಲೇಬ್ಯಾಕ್ ಇಂಟರ್ಫೇಸ್ ಅನ್ನು ಪಡೆದಿದೆ. ಇದರ ಮೂಲಕ, ಫುಲ್‌ಸ್ಕ್ರೀನ್‌ನಲ್ಲಿ ವೀಡಿಯೊವನ್ನು ಸ್ಟಾಪ್‌ ಅಥವಾ ಪ್ಲೇ ಮಾಡಲು ಅಥವಾ ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ವಿಂಡೋವನ್ನು ಕ್ಲೋಸ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಈ ಹೊಸ ಫಿಚರ್ಸ್ ವಾಟ್ಸಾಪ್‌‌ಅಪ್ಲಿಕೇಶನ್‌ನ v2.21.220.15 iOS ಬೀಟಾ ಆವೃತ್ತಿಯನ್ನು ಬಳಸುತ್ತಿರುವವರಿಗೆ ಲಬ್ಯವಿದೆ. ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಅಕ್ಟೋಬರ್ ತಿಂಗಳಿನಲ್ಲಿಯೇ ಪರಿಚಯಿಸಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಯ ಬಳಕೆದಾರರಿಗೆ ಹೊಸದಾಗಿ ಮೂರು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್‌ ವೆಬ್‌ ಬಳಕೆದಾರರು ಇನ್ಮುಂದೆ ಫೋಟೋಗಳನ್ನು ಎಡಿಟ್‌ ಮಾಡಬಹುದು ಮತ್ತು ಪ್ರಿವ್ಯೂ ಲಿಂಕ್ಸ್‌ ಫೀಚರ್ಸ್‌ಗಳನ್ನು ಸೇರಿಸಿರುವುದಾಗಿ ವಾಟ್ಸಾಪ್‌ ಘೋಷಣೆ ಮಾಡಿದೆ. ಇದಲ್ಲದೆ ಹೊಸ ಸ್ಟಿಕ್ಕರ್ ಸಜೇಷನ್‌ ನೀಡುವ ಫೀಚರ್ಸ್‌ ಅನ್ನು ಕೂಡ ಸೇರಿಸಿದೆ.

Best Mobiles in India

English summary
WhatsApp could increase the time limit on delete everyone feature.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X