Home
ಸುದ್ದಿಜಾಲ

ವಾಟ್ಸಾಪ್‌ನ ಬಹುನಿರೀಕ್ಷಿತ ಕುತೂಹಲಕಾರಿ ಫೀಚರ್ಸ್‌ ಅಧಿಕೃತವಾಗಿ ಬಿಡುಗಡೆ !

ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಇನ್‌ಸ್ಟಂಟ್‌ ಮೆಸೇಜ್‌ ಆಪ್‌ ವಾಟ್ಸಾಪ್. ಸದ್ಯ ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಹೊಸ ಅಪ್‌ಡೇಟ್ ಆವೃತ್ತಿಯಲ್ಲಿ ಮೆಸೇಜ್ ಡಿಸ್‌ಅಪಿಯರ್ ಫೀಚರ್ಸ್‌ ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಈ ಫೀಚರ್ಸ್‌ನಲ್ಲಿ ವಾಟ್ಸಾಪ್‌ನಲ್ಲಿ ಬಂದ ನೂತನ ಮೆಸೇಜ್‌ಗಳು ಏಳು ದಿನಗಳ ನಂತರ ತಾನಾಗಿಯೇ ಕಣ್ಮರೆಯಾಗುತ್ತದೆ(disappear). ಇನ್ನು ಈ ಆಯ್ಕೆಯು ಗ್ರೂಪ್‌ ಮೆಸೇಜ್‌ ಹಾಗೂ ವೈಯಕ್ತಿಕ ಮೆಸೇಜ್‌ ಎರಡಕ್ಕೂ ಲಭ್ಯವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರು ನಿರೀಕ್ಷಿಸುತ್ತಿದ್ದ ಮೆಸೇಜ್ ಡಿಸ್‌ಅಪಿಯರ್ ಫೀಚರ್ಸ್‌ ಅನ್ನು ಅಧಿಕೃತವಾಗಿ ಪರಿಚಯಸಿದೆ. ವಾಟ್ಸಾಪ್ ಕಳೆದ ಕೆಲವು ತಿಂಗಳುಗಳಿಂದ ಮೆಸೇಜ್ ಡಿಸ್‌ಅಪಿಯರ್ ಫೀಚರ್ಸ್ ಬಗ್ಗೆ ಕಾರ್ಯನಿರ್ವಹಿಸುತ್ತಿದೆ, ಇದೀಗ ಆದರ ಪರೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ಸ್‌ಗೆ ಸಂಬಂಧಿಸಿದಂತೆ ಕಂಪನಿಯು FAQ ಪುಟವನ್ನು ನವೀಕರಿಸಿದೆ. ಇನ್ನು ಈ ಫೀಚರ್ಸ್‌ನಲ್ಲಿ ವೈಯಕ್ತಿಕ ಮೆಸೇಜ್‌ನಲ್ಲಿ ಈ ಆಯ್ಕೆಯನ್ನು ಆನ್‌- ಆಫ್‌ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು? ಇದನ್ನು ಬಳಸುವುದು ಹೇಗೆ ಅನ್ನೊದನ್ನ ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್

ವಾಟ್ಸಾಪ್ ಮೆಸೇಜ್ ಡಿಸ್‌ಅಪಿಯರ್ ಫೀಚರ್ಸ್ ಹೊಸ ಮೆಸೇಜ್‌ಗಳನ್ನು ಕಣ್ಮರೆಯಾಗುವಂತೆ ಮಾಡಲು 7 ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ. ಬಳಕೆದಾರರು ಅದನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಪಡೆಯುವುದಿಲ್ಲ, ಅಂದರೆ, ಬಳಕೆದಾರರಿಗೆ ತಮಗಿಷ್ಟದ ಸಮಯವನ್ನು ಸೆಟ್‌ ಮಾಡಲು ಸಾಧ್ಯವಾಗುವುದಿಲ್ಲ. ಈ ಫೀಚರ್ಸ್‌ ಅನ್ನು ಸೆಟ್‌ ಮಾಡಿದ ನಂತರ, ಎಲ್ಲಾ ಹೊಸ ಸಂದೇಶಗಳು 7 ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ. ಆದರೆ ಸಂದೇಶಗಳನ್ನು ಫಾರ್ವರ್ಡ್ ಮಾಡುವಲ್ಲಿ ಈ ಫೀಚರ್ಸ್‌ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಡಿಸ್‌ಅಪಿಯರ್

ಇದಲ್ಲದೆ, ಮೆಸೇಜ್ ಡಿಸ್‌ಅಪಿಯರ್ ಫೀಚರ್ಸ್ ಅನ್ನು ಕಾಪಿ-ಪೇಸ್ಟ್ ಮೂಲಕ ಬಳಸಲು ಬಯಸಿದರೆ ಅದು ಕಾರ್ಯನಿರ್ವಹಿಸುವುದಿಲ್ಲ. ಏಳು ದಿನಗಳ ಅವಧಿಯಲ್ಲಿ ಬಳಕೆದಾರರು ವಾಟ್ಸಾಪ್ ತೆರೆಯದಿದ್ದರೆ, ಸಂದೇಶವು ಕಣ್ಮರೆಯಾಗುತ್ತದೆ. ಇನ್ನು ಮೆಸೇಜ್ ಡಿಸ್‌ಅಪಿಯರ್ ಫೀಚರ್ಸ್ ಐಒಎಸ್, ಆಂಡ್ರಾಯ್ಡ್, ಕೈಯೋಸ್ ಮತ್ತು ವೆಬ್ / ಡೆಸ್ಕ್‌ಟಾಪ್ ಬಳಕೆದಾರರಿಗೆ ಲಭ್ಯವಿರುತ್ತದೆ. ಅಲ್ಲದೆ ಈ ಫೀಚರ್ಸ್‌ ತಾನಾಗೆ ಆಕ್ಟಿವ್‌ ಆಗುವುದಿಲ್ಲ ವಾಟ್ಸಪ್‌ನಲ್ಲಿ ಬಳಕೆದಾರರು ತಮ್ಮ ಕೈಯಾರೆ ತಾವೇ ಸಕ್ರಿಯಗೊಳಿಸಬೇಕಾಗುತ್ತದೆ.

ಮೆಸೇಜ್ ಡಿಸ್‌ಅಪಿಯರ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಮೆಸೇಜ್ ಡಿಸ್‌ಅಪಿಯರ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ವಾಟ್ಸಾಪ್ ಚಾಟ್ ತೆರೆಯಿರಿ
ಹಂತ:2 ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ
ಹಂತ:3 ಮೆಸೇಜ್ ಡಿಸ್‌ಅಪಿಯರ್ ಟ್ಯಾಪ್ ಮಾಡಿ
ಹಂತ:4 ನಂತರ ಕಂಟಿನ್ಯೂ ಟ್ಯಾಪ್ ಮಾಡಿ
ಹಂತ:5 ಆನ್ ಆಯ್ಕೆಮಾಡಿ

Best Mobiles in India

English summary
The Disappearing Messages feature will be available for iOS, Android, KaiOS and web / desktop users. This feature will not be enabled by default WhatsApp.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+