Home
ಸುದ್ದಿಜಾಲ

ವಾಟ್ಸಾಪ್‌ ಸೇರಿದ ಹೊಸ ಉಪಯುಕ್ತ ಫೀಚರ್ಸ್‌! ವಿಶೇಷತೆ ಏನು ಗೊತ್ತಾ?

ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್ನು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಿಗಿಂತ ಹೆಚ್ಚಿನ ಆಕರ್ಷಣೆಯನ್ನು ವಾಟ್ಸಾಪ್‌ ಪಡೆದುಕೊಂಡಿದೆ. ಸದ್ಯ ಇದೀಗ ವಾಟ್ಸಾಪ್‌ ವ್ಯೂ ಒನ್ಸ್‌ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೂ ಅಧಿಕೃತಗೊಳಿಸಿದೆ. ಕೆಲ ದಿನಗಳ ಹಿಂದೆ ಸೀಮಿತ ಸಂಖ್ಯೆಯ ಬೀಟಾ ಬಳಕೆದಾರರಿಗಾಗಿ ಪರಿಚಯಿಸಿದ್ದ ಈ ಫೀಚರ್ಸ್‌ ಇದೀಗ ಎಲ್ಲರಿಗೂ ಲಭ್ಯವಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಸದಾಗಿ ವ್ಯೂ ಒನ್ಸ್‌ ಫೀಚರ್ಸ್‌ ಅನ್ನು ಅಧಿಕೃತಗೊಳಿಸಿದೆ. ಈ ಫೀಚರ್ಸ್‌ ಸ್ವಯಂಚಾಲಿತವಾಗಿ ಒಂದು ನಿರ್ದಿಷ್ಟ ಅವಧಿಯ ನಂತರ ಸಂದೇಶಗಳನ್ನು ತೊಡೆದುಹಾಕುವ ಮೂಲಕ ಬಳಕೆದಾರರ ಗೌಪ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ವಾಟ್ಸಾಪ್ ಈ ಫೀಚರ್ಸ್‌ ಅನ್ನು ಪರಿಚಯಿಸಲು ಮುಖ್ಯ ಕಾರಣ ಫೋನ್ ಅನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು. ಇನ್ನುಳಿದಂತೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳು ಚುರುಕಾಗುವುದರಿಂದ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುವುದು ಹೆಚ್ಚು ಸಾಮಾನ್ಯವಾಗಿದೆ. ಈ ಚಿತ್ರಗಳು ನಿಮ್ಮ ಫೋನ್‌ಗಳಲ್ಲಿ ಜಾಗವನ್ನು ತೆಗೆದುಕೊಳ್ಳಬಹುದು ಮತ್ತು ನಿಮ್ಮ ಕ್ಯಾಮೆರಾ ರೋಲ್ ಅನ್ನು ಅಸ್ತವ್ಯಸ್ತಗೊಳಿಸಬಹುದು. ಇದರಿಂದ ಸ್ಟೋರೇಜ್‌ ಸ್ಪೇಸ್‌ಗೆ ಸಮಸ್ಯೆಯಾಗಬಹುದು. ಇದಕ್ಕಾಗಿ ನೀವು ನೂರಾರು ಅಥವಾ ಸಾವಿರಾರು ಫೋಟೋಗಳು ಮತ್ತು ವೀಡಿಯೊಗಳನ್ನು ಶೋಧಿಸಿ ನಂತರ ಅವುಗಳನ್ನು ತೆಗೆದುಹಾಕಬೇಕಾಗುತ್ತದೆ. ಇವುಗಳನ್ನು ಶೋದಿಸುವ ಬದಲು ವ್ಯೂ ಒನ್ಸ್‌ ಫೀಚರ್ಸ್‌ ಇದ್ದರೆ ತನ್ನಿಂದ ತಾನೆ ಒಂದು ನಿರ್ದಿಷ್ಟ ಅವಧಿಯ ನಂತರ ಫೋಟೋ, ವಿಡಿಯೋಗಳನ್ನು ಡಿಲೀಟ್‌ ಮಾಡಲಿದೆ.

ವ್ಯೂ ಒನ್ಸ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ವ್ಯೂ ಒನ್ಸ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ವಾಟ್ಸಾಪ್‌ನಲ್ಲಿ, ನೀವು ಕಣ್ಮರೆಯಾಗುವ ಸಂದೇಶವನ್ನು ಕಳುಹಿಸಿದರೆ, ನೀವು ಮಾಧ್ಯಮದಲ್ಲಿ 'ವ್ಯೂ ಒನ್ಸ್‌' ಐಕಾನ್ ಅನ್ನು ನೋಡುತ್ತೀರಿ. ನೀವು ಮೀಡಿಯಾವನ್ನು ಸ್ವೀಕರಿಸಿದಾಗ, ಪ್ರೀವ್ಯೂ ಕಾಣಿಸುವುದಿಲ್ಲ. ನೀವು ಇದನ್ನು ಒಮ್ಮೆ ನೋಡಿದ ನಂತರ, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೆಸೆಂಜರ್‌ನಂತೆ ನೀವು ಅದನ್ನು ಮತ್ತೊಮ್ಮೆ ತೆರೆಯಲು ಸಾಧ್ಯವಾಗುವುದಿಲ್ಲ.

ಒನ್ಸ್‌ ವ್ಯೂ

ವಾಟ್ಸಾಪ್‌ನಲ್ಲಿ ಒನ್ಸ್‌ ವ್ಯೂ ಫೋಟೋ ಅಥವಾ ವೀಡಿಯೋವನ್ನು ಯಾರಿಗಾದರೂ ಕಳುಹಿಸಲು, ನೀವು ಆಪ್‌ನ ಕ್ಯಾಮರಾವನ್ನು ಬಳಸಿ ಫೋಟೋ ಅಥವಾ ವೀಡಿಯೊವನ್ನು ತ್ವರಿತವಾಗಿ ಸ್ನ್ಯಾಪ್ ಮಾಡಬಹುದು. ನಂತರ (1) ಐಕಾನ್ ಅನ್ನು ಟ್ಯಾಪ್ ಮಾಡಿ ನಂತರ ನೀವು ಸೆರೆಹಿಡಿದ ಮಾಧ್ಯಮವನ್ನು ಒಮ್ಮೆ ಮಾಧ್ಯಮವಾಗಿ ವೀಕ್ಷಿಸಿ. ನೀವು ಅದನ್ನು ಕಳುಹಿಸಿದ ನಂತರ, ನಿಮ್ಮ ತುದಿಯಲ್ಲಿರುವ ಚಿತ್ರವನ್ನು ತೆರೆಯಲು ನಿಮಗೆ ಟ್ಯಾಪ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಸ್ವೀಕರಿಸುವವರು ಒಮ್ಮೆ ಮಾತ್ರ ಅದನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಫೀಚರ್ಸ್‌ ವಾರದಲ್ಲಿಯೇ ಎಲ್ಲಾ ಬಳಕೆದಾರರಿಗೆ ಬರುತ್ತಿದೆ ಎಂದು ವಾಟ್ಸಾಪ್ ಹೇಳಿದೆ.

ವಾಟ್ಸಾಪ್‌

ಇದಲ್ಲದೆ ಇತ್ತೀಚಿಗೆ ವಾಟ್ಸಾಪ್‌ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ಸ್‌ ಅನ್ನು ಬೀಟಾ ಬಳಕೆದಾರರಿಗೆ ಪರಿಚಯಿಸಿದೆ. ಈ ಮಲ್ಟಿ ಡಿವೈಸ್‌ ಸಪೋರ್ಟ್‌ ಆಯ್ಕೆಯು ಬಳಕೆದಾರರ ಫೋನ್ ಹೊರತುಪಡಿಸಿ ಇತರೆ 4 ಡಿವೈಸ್‌ಗಳಲ್ಲಿ ವಾಟ್ಸಾಪ್‌ ಖಾತೆ ಬಳಕೆಮಾಡಬಹುದಾಗಿದೆ ಎಂದು ಹೇಳಿದೆ. ಒಂದೇ ವಾಟ್ಸಾಪ್ ಖಾತೆಯನ್ನು ನೀವು ಇನ್ನೂ ಒಂದಕ್ಕಿಂತ ಹೆಚ್ಚು ಫೋನ್‌ಗಳಲ್ಲಿ ಬಳಸಲಾಗುವುದಿಲ್ಲ ಎಂದರ್ಥ. ನೀವು ಏಕಕಾಲದಲ್ಲಿ ಮ್ಯಾಕೋಸ್ ಮತ್ತು ವಿಂಡೋಸ್‌ಗಾಗಿ ವೆಬ್ ಅಥವಾ ಪಿಸಿ ಅಪ್ಲಿಕೇಶನ್‌ನಲ್ಲಿ ಮಲ್ಟಿ ಡಿವೈಸ್ ಬೆಂಬಲವನ್ನು ಬಳಸಬಹುದು.

ಡಿವೈಸ್‌

ಇನ್ನು ಮಲ್ಟಿ ಡಿವೈಸ್‌ ಖಾತೆ ಸುರಕ್ಷತೆಗಾಗಿ, ವಾಟ್ಸಾಪ್ ಬಯೋಮೆಟ್ರಿಕ್ ದೃಢೀಕರಣವನ್ನು ಹೆಚ್ಚುವರಿ ಭದ್ರತೆಯಾಗಿ ಜಾರಿಗೊಳಿಸುವುದಾಗಿ ಹೇಳಿದೆ. ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ಸಾಧನಗಳನ್ನು ಅಪ್ಲಿಕೇಶನ್‌ನಲ್ಲಿ ನೋಡಲು ಸಾಧ್ಯವಾಗುತ್ತದೆ. ವಾಟ್ಸಾಪ್ ಅವರು ಕೊನೆಯದಾಗಿ ಬಳಸಿದಾಗ ನೋಡಲು ಸಹ ಅನುಮತಿಸುತ್ತದೆ. ಬಳಕೆದಾರರು ದೂರದಿಂದಲೇ ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ.

Best Mobiles in India

English summary
WhatsApp view once, or disappearing, feature is all about ensuring your sensitive photos and videos do not come back to haunt you some time in the future.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+