ಭಾರತದಲ್ಲಿ ವಾಟ್ಸಾಪ್‌ ಡೌನ್‌ ಆನ್‌ಲೈನ್‌ ಲಾಸ್ಟ್‌ಸೀನ್‌ ಬಗ್ಗೆ ಇಲ್ಲ ಆಪ್ಡೇಟ್‌!

|

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ಸೇವೆಯಲ್ಲಿ ಕಳೆದ ಕೆಲ ಗಂಟೆಗಳಿಂದ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾಗಿದೆ. ಭಾರತದ ವಾಟ್ಸಾಪ್‌ ಬಳಕೆದಾರರ ವಾಟ್ಸಾಪ್‌ ಸೆಟ್ಟಿಂಗ್‌ನಲ್ಲಿ ಈ ದೋಷ ಕಂಡುಬಂದಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಸರಿ ಮಾಡಲಾಗುವುದು ಎಂದು ವಾಟ್ಸಾಪ್‌ ಸಂಸ್ಥೆ ಹೇಳಿಕೊಂಡಿದೆ. ಸದ್ಯ ವಾಟ್ಸಾಪ್‌ನ ಗೌಪ್ಯತೆ ಸೆಟ್ಟಿಂಗ್‌, ಸ್ಟೆಟಸ್‌, ಆನ್‌ಲೈನ್‌ ಸ್ಥಿತಿಯಲ್ಲಿ ಭಾರಿ ತೊಂದರೆ ಉಂಟಾಗಿದೆ ಎಂದು ವರದಿ ಆಗಿದೆ.

ವಾಟ್ಸಾಪ್‌

ಸದ್ಯ ಲಭ್ಯವಾಗಿರುವ ವರದಿ ಪ್ರಕಾರ ವಾಟ್ಸಾಪ್‌ನಲ್ಲಿ ಉಂಟಾಗಿದ್ದ ತೊಂದರೆಯನ್ನ ಇದೀಗ ಸರಿ ಪಡಿಸಲಾಗಿದ್ದು ಎಲ್ಲವೂ ಸ್ಥಿರವಾಗಿದೆ ಎನ್ನಲಾಗಿದೆ. ಆದರೆ ಕೆಲ ಗಂಟೆಗಳ ಹಿಂದೆ ಭಾರತ ಮತ್ತು ವಿಶ್ವದ ಇತರೆ ಇರುವ ಲಕ್ಷಾಂತರ ಬಳಕೆದಾರ ವಾಟ್ಸಾಪ್‌ ಕಾರ್ಯನಿರ್ವಹಣೆಯಲ್ಲಿ ದೋಷ ಕಂಡುಬಂದಿದೆ. ಅದರಲ್ಲೂ ಆನ್‌ಲೈನ್‌ ಸ್ಥಿತಿ, ಲಾಸ್ಟ್‌ ಸೀನ್‌ ಮಾಹಿತಿಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗ್ತಿಲ್ಲ ಅನ್ನೊ ಮಾತು ಕೇಳಿ ಬಂದಿದೆ.ಸದ್ಯ ಆನ್‌ಲೈನ್ ಲಾಸ್ಟ್‌ ಸೀನ್‌ ಸ್ಥಿತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಾಟ್ಸಾಪ್ ಹೇಳಿಕೊಂಡಿದೆ.

ವಾಟ್ಸಾಪ್

ಇನ್ನು ಮಾನಿಟರ್ ಪೋರ್ಟಲ್ ಡೌನ್ ಡಿಟೆಕ್ಟರ್ ಪ್ರಕಾರ, ವಾಟ್ಸಾಪ್ ಡೌನ್ ವರದಿಗಳಲ್ಲಿ ಶೇಕಡಾ 66 ರಷ್ಟು ಏರಿಕೆ ಕಂಡುಬಂದಿದೆ, ಅಲ್ಲದೆ ಆನ್‌ಲೈನ್ ಲಾಸ್ಟ್‌ಸೀನ್‌ ಸ್ಥಿತಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ 28% ಸಂಪರ್ಕ ಸಮಸ್ಯೆಗಳು ಕಂಡು ಬಂದಿದೆ ಎಂದು ವರದಿ ಆಗಿದೆ. ಇದರ ಜೊತೆಗೆ ವಾಟ್ಸಾಪ್‌ "ಗೌಪ್ಯತೆ ಸೆಟ್ಟಿಂಗ್‌ಗಳನ್ನು ನವೀಕರಿಸುವಾಗ ವಾಟ್ಸಾಪ್ ಸಮಸ್ಯೆಗಳನ್ನು ಎದುರಿಸುತ್ತಿದೆ" ಎಂದು ಮೆಸೆಸಿಂಗ್ ಅಪ್ಲಿಕೇಶನ್‌ನ ಬೀಟಾ ಆವೃತ್ತಿಗಳಲ್ಲಿ ಇದು ಕಂಡು ಬಂದಿದೆ.

ವಾಟ್ಸಾಪ್‌

ಸದ್ಯ ಲಭ್ಯ ಮಾಹಿತಿ ಪ್ರಕಾರ ವಾಟ್ಸಾಪ್‌ ಬಳಕೆದಾರರ ಸ್ಟೆಟಸ್‌ನಲ್ಲಿ ಸಕ್ರಿಯ ವಾಟ್ಸಾಪ್‌ ಬಳಕೆದಾರನ ಆನ್‌ಲೈನ್‌ ಲಾಸ್ಟ್‌ ಸೀನ್‌ ಮಾಹಿತಿಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಬ್ಯವಾಗ್ತಿಲ್ಲ. ಇದು ವಾಟ್ಸಾಪ್‌ನ ಗೌಪತ್ಯ ಸೆಟ್ಟಿಗ್‌ಗಳಲ್ಲಿ ಉಂಟಾಗಿರುವ ದೋಷ ಎಂದು ಹೇಳಲಾಗಿದ್ದು, ಮುಂದಿನ ಗಂಟೆಗಳಲ್ಲಿ ಸರಿಪಡಿಸುವ ಭರವಸೆಯನ್ನ ವಾಟ್ಸಾಪ್‌ ನಿಡಿದೆ ಎನ್ನಲಾಗ್ತಿದೆ. ಸದ್ಯ ಬಳಕೆದಾರರಿಗೆ ಸಮಸ್ಯೆಗಳಿವೆ ಅಥವಾ ಇತರ ಬಳಕೆದಾರರು ಆನ್‌ಲೈನ್‌ನಲ್ಲಿದ್ದಾರೋ ಇಲ್ಲವೋ. ವಾಟ್ಸಾಪ್ ಫೀಚರ್ ಟ್ರ್ಯಾಕರ್ ಅನ್ನು ಪರಿಹರಿಸಲಾಗಿದೆ.

ವಾಟ್ಸಾಪ್

ಇನ್ನು ವಾಟ್ಸಾಪ್ ಪ್ರಕಾರ, ಲಾಸ್ಟ್‌ ಸೀನ್‌ ಮತ್ತು "ಆನ್‌ಲೈನ್" ಬಳಕೆದಾರರು ತಮ್ಮ ಸಂಪರ್ಕಗಳು ವಾಟ್ಸಾಪ್ ಅನ್ನು ಕೊನೆಯ ಬಾರಿಗೆ ಬಳಸಿದಾಗ ಅಥವಾ ಅವರು ಆನ್‌ಲೈನ್‌ನಲ್ಲಿದ್ದರೆ ಬಳಕೆದಾರರಿಗೆ ತಿಳಿಸುತ್ತಾರೆ. ಕಳೆದ ರಾತ್ರಿ, ಕೊನೆಯದಾಗಿ ನೋಡಿದ ಗೋಚರತೆ ಸೆಟ್ಟಿಂಗ್ ಅನ್ನು ಅನೇಕ ಬಳಕೆದಾರರಿಗಾಗಿ ಸ್ವಯಂಚಾಲಿತವಾಗಿ ಯಾರೂ ಎಂದು ಬದಲಾಯಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ರೀತಿಯಲ್ಲಿ ಬದಲಾಯಿಸುವ ಯಾವುದೇ ರೀತಿಯ ಅವಕಾಶ ವಾಟ್ಸಾಪ್‌ನಲ್ಲಿ ಇಲ್ಲದಿರುವುದರಿಂದ ವಾಟ್ಸಾಪ್‌ನಲ್ಲಿನ ದೋಷ ಬಹಿರಂಗವಾಗಿದೆ. ಈ ಮೂಲಕ ವಾಟ್ಸಾಪ್‌ನ ಗೌಪ್ಯತೆಯ ಸೆಟ್ಟಿಂಗ್‌ಗಳ ಬಗ್ಗೆ ಮತ್ತೆ ಆಂತಕ ಪಡುವಂತಾಗಿದೆ.

Best Mobiles in India

English summary
WhatsApp went down on Friday evening for millions of users in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X