ವಾಟ್ಸಾಪ್ ಡೌನ್‌ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್‌ ಸ್ಪಷ್ಟನೆ!

|

ವಾಟ್ಸಾಪ್‌ ತನ್ನ ಸೇವಾ ನಿಯಮದ ಮೂಲಕ ಸಾಕಷ್ಟು ವಿವಾದವನ್ನು ಎದುರಿಸುತ್ತಿದೆ. ವಾಟ್ಸಾಪ್‌ನ ಈ ನಡೆಯ ವಿರುದ್ದ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯಿಂದ ಹೊರಗುಳಿಯುವ ಬಗ್ಗೆ ಭಾರತೀಯ ಬಳಕೆದಾರರ ಮೇಲೆ ಏಕಪಕ್ಷೀಯವಾಗಿ ನಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದು ಕಳವಳಕಾರಿ ಸಂಗತಿಯಾಗಿದ್ದು, ಇದರ ಬಗ್ಗೆ ಮಾಹಿತಿ ಕೋರಿ ವಾಟ್ಸಾಪ್‌ಗೆ ಪತ್ರವನ್ನು ಸಹ ಬರೆಯಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಅದರಲ್ಲೂ ವಾಟ್ಸಾಪ್‌ ಭಾರತದಲ್ಲಿ ಒಂದು ರೀತಿ, ಯುರೋಪಿಯನ್ನರಿಗೆ ಒಂದು ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಈ ಮೂಲಕ ವಾಟ್ಸಾಪ್‌ ಭಾರತೀಯ ಬಳಕೆದಾರರಿಗೆ ಏಕಪಕ್ಷೀಯ ಬದಲಾವಣೆಯನ್ನು ಏರುತ್ತಿದೆ ಎಂದು ಹೇಳಿದೆ. ಹಾಗಾದ್ರೆ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ಫೇಸ್‌ಬುಕ್ ಒಡೆತನದ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ವಿರುದ್ಧ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ತನ್ನ ಮಾಹಿತಿಯನ್ನು ಹಂಚಿಕೊಂಡಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಚೇತನ್ ಶರ್ಮಾ ಅವರು ಸರ್ಕಾರದ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಸದ್ಯ ಭಾರತ ಸರ್ಕಾರ ವಾಟ್ಸಾಪ್‌ನ ನಡೆಯ ವಿರುದ್ದ ಅಸಮಾಧಾನ ಹಾಗೂ ಕಳವಳ ವ್ಯಕ್ತಪಡಿಸಿದೆ. ಇನ್ನು ವಾಟ್ಸಾಪ್‌ ಅನ್ನು ಡೌನ್‌ಲೋಡ್ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿದೆ.

ವಾಟ್ಸಾಪ್

ಇದಲ್ಲದೆ ಇತರ ಎಲ್ಲ ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಬಗ್ಗೆ ಒಂದೇ ರೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿವೆ" ಎಂದು ನ್ಯಾಯಾಲಯ ಹೇಳಿದೆ. ಈ ಮೂಲಕ ಅರ್ಜಿದಾರರು ವಾಟ್ಸಾಪ್ ನೀತಿಯನ್ನು ಏಕೆ ಪ್ರಶ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದೆ. ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಸಂಸತ್ತು ಪರಿಗಣಿಸುತ್ತಿದೆ ಮತ್ತು ಮನವಿಯಲ್ಲಿ ಎದ್ದಿರುವ ವಿಷಯಗಳ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ ಎಂದು ನ್ಯಾಯಾಲಯ ಗಮನಿಸಿದೆ.

ವಾಟ್ಸಾಪ್

ಇನ್ನು ಸರ್ಕಾರಕ್ಕೆ ಸಂಬಂಧಪಟ್ಟಂತೆ, ವಾಟ್ಸಾಪ್ ತನ್ನ ಯುರೋಪಿಯನ್ ಬಳಕೆದಾರರಿಗೆ ನೀಡುವ ಗೌಪ್ಯತೆ ನೀತಿಯು ನಿರ್ದಿಷ್ಟವಾಗಿ ಕಂಪನಿಗಳ ಉದ್ದೇಶಗಳಿಗಾಗಿ ಫೇಸ್‌ಬುಕ್ ಕಂಪನಿಗಳೊಂದಿಗೆ ಹಂಚಿಕೊಂಡ ಯಾವುದೇ ಮಾಹಿತಿಯನ್ನು ಬಳಸುವುದನ್ನು ನಿಷೇಧಿಸುತ್ತದೆ. ಆದರೆ ಈ ಷರತ್ತು ಭಾರತೀಯ ನಾಗರಿಕರಿಗೆ ನೀಡುವ ಗೌಪ್ಯತೆ ನೀತಿಯಲ್ಲಿ ಕಂಡುಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ವಾಟ್ಸಾಪ್‌ ಬಳಕೆದಾರರ ಭಾರತೀಯರಿದ್ದಾರೆ ಅನ್ನೊದನ್ನು ಸಹ ಗಮನಿಸಬೇಕಿದೆ. ಇದೇ ವಿಚಾರಕ್ಕೆ ಸರ್ಕಾರ ವಾಟ್ಸಾಪ್‌ ನಿರ್ಧಾರದ ವಿರುದ್ದ ಕಳವಳ ವ್ಯಕ್ತಪಡಿಸಿದೆ.

Best Mobiles in India

English summary
whatsapp download is not mandatory: Delhi High Court.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X