ವಾಟ್ಸಾಪ್‌ನ ಈ ಫೀಚರ್ಸ್‌ಗಳು ನಿಮಗೆ ಸಾಕಷ್ಟು ಉಪಕಾರಿ ಎನಿಸಲಿವೆ!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಕಾಲಕಾಲಕ್ಕೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ವಾಟ್ಸಾಪ್‌ ಇತ್ತೀಚಿನ ದಿನಗಳಲ್ಲಿ ತನ್ನ ಪ್ಲಾಟ್‌ಫಾರ್ಮ್ಗೆ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಆದರೂ ಕೆಲವೊಂದು ಫೀಚರ್ಸ್‌ಗಳ ಬಗ್ಗೆ ನಿಮಗೆ ತಿಳಿದಿಲ್ಲದಿರುವ ಸಾಧ್ಯತೆ ಕೂಡ ಇದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಆದರೆ ಎಲ್ಲಾ ಫೀಚರ್ಸ್‌ಗಳ ಬಗ್ಗೆ ಎಲ್ಲರಿಗೂ ಕೂಡ ಮಾಹಿತಿ ಇರುವುದಕ್ಕೆ ಸಾಧ್ಯವಿಲ್ಲ. ಕೆಲವು ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದು ಕೆಲವರಿಗೆ ತಿಳಿದೆ ಇರುವುದಿಲ್ಲ. ವಾಟ್ಸಾಪ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಪರಿಚಯಿಸಿರುವ ಅನೇಕ ಫೀಚರ್ಸ್‌ಗಳು ನಿಮಗೆ ತಿಳಿಯದೆ ಇರುವ ಸಾಧ್ಯತೆ ಕೂಡ ಇದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಇತ್ತೀಚಿಗೆ ಸೇರಿದ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಲ್ಟಿ ಡಿವೈಸ್‌ ಫೀಚರ್ಸ್‌

ಮಲ್ಟಿ ಡಿವೈಸ್‌ ಫೀಚರ್ಸ್‌

ವಾಟ್ಸಾಪ್‌ ತನ್ನ ಮಲ್ಟಿ ಡಿವೈಸ್‌ ಬೀಟಾ ಪ್ರೋಗ್ರಾಂ ಅನ್ನು ಈಗಾಗಲೇ ಪರಿಚಯಿಸಿದೆ. ಈ ಫೀಚರ್ಸ್‌ ಸೆಟ್ಟಿಂಗ್ಸ್‌ > ಲಿಂಕ್ಡ್ ವಿಭಾಗದಲ್ಲಿ ಗೋಚರಿಸುತ್ತದೆ. ಈ ಫೀಚರ್ಸ್‌ ಬಳಸಿಕೊಂಡು ವಾಟ್ಸಾಪ್‌ ಬಳಕೆದಾರರು ಫೋನ್‌ ಕನೆಕ್ಟ್‌ ಮಾಡದೆ ಹೋದರೂ, ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಒಬ್ಬರು ತಮ್ಮ ಖಾತೆಗೆ ನಾಲ್ಕು ಡಿವೈಸ್‌ಗಳನ್ನು ಲಿಂಕ್ ಮಾಡಬಹುದು. ಇದರಲ್ಲಿ ಬ್ರೌಸರ್‌ಗಳು ಮತ್ತು ಇತರ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ನೀವು ಕನೆಕ್ಟ್‌ ಮಾಡಿರುವ ಫೋನ್‌ನಲ್ಲಿ ಸಕ್ರಿಯ ಇಂಟರ್ನೆಟ್ ಇಲ್ಲದೆ ಹೋದರೂ ವಾಟ್ಸಾಪ್‌ ವೆಬ್, ಡೆಸ್ಕ್‌ಟಾಪ್ ಮತ್ತು ಪೋರ್ಟಲ್ ಅನ್ನು ಬಳಸಲು ಸಾಧ್ಯವಾಗಲಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ 14 ದಿನಗಳವರೆಗೆ ಸಂಪರ್ಕ ಕಡಿತಗೊಂಡಿದ್ದರೆ, ಲಿಂಕ್ ಮಾಡಲಾದ ಡಿವೈಸ್‌ಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ.

ಕಸ್ಟಮೈಸ್ ಸ್ಟಿಕ್ಕರ್‌

ಕಸ್ಟಮೈಸ್ ಸ್ಟಿಕ್ಕರ್‌

ವಾಟ್ಸಾಪ್‌ ಇತ್ತೀಚಿಗೆ ಕಸ್ಟಮೈಸ್‌ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಸ್ಟಿಕ್ಕರ್ ಮೇಕರ್ ಟೂಲ್‌ ಬಳಸಿಕೊಂಡು ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಲು ವಾಟ್ಸಾಪ್‌ ಅನುಮತಿಸುತ್ತದೆ. ಈ ಫೀಚರ್ಸ್‌ ಅನ್ನು ನೀವು ಸುಲಭವಾಗಿ ಪ್ರವೇಶಿಸಬಹುದಾಗಿದ್ದು, ವಾಟ್ಸಾಪ್‌ನ ಸ್ಟಿಕ್ಕರ್ ವಿಭಾಗದಲ್ಲಿ ಇದನ್ನು ಕಾಣಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ವಾಟ್ಸಾಪ್‌ ಚಾಟ್ ಅನ್ನು ತೆರೆಯಬೇಕು, ನಂತರ ಪೇಪರ್‌ಕ್ಲಿಪ್ ಐಕಾನ್ ಮೇಲೆ ಕ್ಲಿಕ್ ಮಾಡಿ, ತದನಂತರ "ಸ್ಟಿಕ್ಕರ್" ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ನಿಮ್ಮ ಕಸ್ಟಮ್ ಸ್ಟಿಕ್ಕರ್ ಅನ್ನು ಕ್ರಿಯೆಟ್‌ ಮಾಡಲು ನೀವು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬಹುದಾಗಿದೆ. ಇದಲ್ಲದೆ ವಾಟ್ಸಾಪ್‌ ನಿಮಗೆ ಫೋಟೋವನ್ನು ಸ್ಟಿಕ್ಕರ್‌ನಲ್ಲಿ ಕ್ರಾಪ್ ಮಾಡಲು ಮತ್ತು ಎಮೋಜಿಗಳನ್ನು ಸೇರಿಸಲು ಅನುಮತಿಸುತ್ತದೆ. ಇದು ಪ್ರಸ್ತುತ ವಾಟ್ಸಾಪ್‌ನ ವೆಬ್ ಆವೃತ್ತಿಗೆ ಲಭ್ಯವಿದೆ.

ವಾಟ್ಸಾಪ್‌ ಇಮೇಜ್‌ಗಳನ್ನು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿ

ವಾಟ್ಸಾಪ್‌ ಇಮೇಜ್‌ಗಳನ್ನು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿ

ನೀವು ವಾಟ್ಸಾಪ್‌ನಲ್ಲಿ ಇಮೇಜ್‌ಗಳ ಗ್ರೂಪನ್ನು ಸ್ವೀಕರಿಸಿದ್ದರೆ ಅದನ್ನು ನೇರವಾಗಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಟೋರೇಜ್‌ ಮಾಡಲು ಅವಕಾಶವಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ವೆಬ್‌ ಅನ್ನು ಬಳಸಿಕೊಂಡು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್‌ ವೆಬ್ ಲಿಂಕ್ ಅನ್ನು ತೆರೆಯಿರಿ, ನಂತರ ಯಾವುದೇ ಚಾಟ್‌ಗೆ ಹೋಗಿ, ಗ್ರೂಪ್‌ನ ಹೆಸರಿನ ಮೇಲೆ ಕ್ಲಿಕ್ ಮಾಡಿ, ಇಲ್ಲಿ ನಿಮಗೆ "ಮೀಡಿಯಾ" ವಿಭಾಗವನ್ನು ತೋರಿಸುತ್ತದೆ. ಇದಾದ ನಂತರ, ನಿಮ್ಮ ಕರ್ಸರ್ ಅನ್ನು ಫೋಟೋದಲ್ಲಿ ಸರಿಸಿ, ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ, ಈಗ ಎಲ್ಲಾ ಫೋಟೋಗಳನ್ನು ಆಯ್ಕೆ ಮಾಡುವ ಮೂಲಕ ಡೌನ್‌ಲೋಡ್ ಮಾಡಬಹುದು.

ವ್ಯೂ ಒನ್ಸ್‌ ಮೀಡಿಯಾ

ವ್ಯೂ ಒನ್ಸ್‌ ಮೀಡಿಯಾ

ಇನ್ನು ವಾಟ್ಸಾಪ್‌ ಇತ್ತಿಚಿಗೆ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ವ್ಯೂ ಒನ್ಸ್ ಮೀಡಿಯಾ ಫೀಚರ್ಸ್‌ ಕೂಡ ಸೇರಿದೆ. ಇದರಿಂದಾಗಿ ನೀವು ಸ್ವಿಕರಿಸುವ ವಾಟ್ಸಸಾಪ್‌ ಸಂದೇಶದ ಫೋಟೋಗಳು ಚಾಟ್‌ನಿಂದ ಹೊರಬಂದ ನಂತರ ಕಣ್ಮರೆಯಾಗುತ್ತದೆ. ಅಂದರೆ ವ್ಯೂ ಒನ್ಸ್‌ ಮೀಡಿಯಾ ಫೀಚರ್ಸ್‌ ಅನ್ನು ನೀವು ಬಳಸಿದರೆ ನೀವು ಕಳುಹಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಸ್ವೀಕರಿಸುವವರ ಫೋಟೋಗಳು ಅಥವಾ ಗ್ಯಾಲರಿಯಲ್ಲಿ ಉಳಿಸಲಾಗುವುದಿಲ್ಲ. ಆದರಿಂದ ನೀವು ಒಮ್ಮೆ ಫೋಟೋ ಅಥವಾ ವೀಡಿಯೊವನ್ನು ಒನ್ಸ್‌ ವ್ಯೂ ನಲ್ಲಿ ಕಳುಹಿಸಲು ಬಯಸಿದರೆ ಪ್ರತಿ ಬಾರಿಯೂ ವ್ಯೂ ಒನ್ಸ್‌ ಮೀಡಿಯಾವನ್ನು ಆಯ್ಕೆ ಮಾಡಬೇಕಾಗುತ್ತದೆ.

ರಿ ಡಿಸೈನ್‌ ಚಾಟ್ ಬಬಲ್ಸ್‌

ರಿ ಡಿಸೈನ್‌ ಚಾಟ್ ಬಬಲ್ಸ್‌

ವಾಟ್ಸಾಪ್ ಇತ್ತೀಚೆಗೆ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬೀಟಾ ಬಳಕೆದಾರರಿಗಾಗಿ ಆವೃತ್ತಿ 2.21.200.11 ಅಪ್‌ಡೇಟ್ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಬಳಕೆದಾರರು ರಿ ಡಿಸೈನ್‌ ಮಾಡಲಾದ ಬಬಲ್ಸ್‌ ಅನ್ನು ವೀಕ್ಷಿಸಲು ಅನುಮತಿಸುತ್ತದೆ. ಹಳೆಯ ಚಾಟ್ ಬಬಲ್‌ಗೆ ಹೋಲಿಸಿದರೆ ಬೀಟಾ ಬಳಕೆದಾರರು ಈಗ ದುಂಡಾದ, ದೊಡ್ಡದಾದ ಮತ್ತು ಹೆಚ್ಚು ವರ್ಣರಂಜಿತ ಚಾಟ್ ಬಬಲ್‌ಗಳನ್ನು ಕಾಣಬಹುದಾಗಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯ.

ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌

ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌

ವಾಟ್ಸಾಪ್ ಅಭಿವೃದ್ದಿ ಪಡಿಸುತ್ತಿರುವ ಹೊಸ ಫೀಚರ್ಸ್‌ಗಳಲ್ಲಿ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಕೂಡ ಸೇರಿದೆ. ಇದು ನಿಮಗೆ ಎಮೋಜಿಗಳೊಂದಿಗೆ ಮೆಸೇಜ್‌ ರಿಯಾಕ್ಷನ್‌ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಈಗಾಗಲೇ ಇದೇ ರೀತಿಯ ಫಿಚರ್ಸ್‌ ಅನ್ನು ನೀವು ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನ ಡೈರೆಕ್ಟ್‌ ಮೆಸೇಜ್‌ನಲ್ಲಿ ಕಾಣಬಹುದಾಗಿದೆ. ಇದು ಬಳಕೆದಾರರಿಗೆ ಟಚ್‌ ಮಾಡಲು ಮತ್ತು ರೆಸ್ಪಾನ್ಸ್‌ ಮಾಡಲು ಬಯಸುವ ಸಂದೇಶವನ್ನು ಹಿಡಿದಿಟ್ಟುಕೊಂಡು ಸೂಕ್ತ ಎಮೋಜಿಗೆ ಎಳೆಯಲು ಅನುಮತಿಸುತ್ತದೆ.

ಆಟೋ ಡೌನ್‌ಲೋಡ್ ಕಾನ್ಫಿಗರ್ ಮಾಡಿ

ಆಟೋ ಡೌನ್‌ಲೋಡ್ ಕಾನ್ಫಿಗರ್ ಮಾಡಿ

ವಾಟ್ಸಾಪ್‌ ಆಟೋಮ್ಯಾಟಿಕ್‌ ಆಗಿ ನಿಮ್ಮ ಸೆಲ್ಯುಲಾರ್ ಕನೆಕ್ಟ್‌ ಮೂಲಕ ಇಮೇಜ್‌ಗಳನ್ನು ಡೌನ್‌ಲೋಡ್ ಮಾಡುತ್ತದೆ. ನೀವು ಸಾಕಷ್ಟು ಅನಗತ್ಯ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಗುಂಪಿನಲ್ಲಿದ್ದರೆ, ಆಟೋ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬಹುದು. ಇದರಿಂದ ನಿಮ್ಮ ಸ್ಟೋರೇಜ್‌ ಅನ್ನು ಉಳಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ಆಟೋ ಫೋಟೋ, ವೀಡಿಯೋ ಅಥವಾ ಆಡಿಯೋ ಡೌನ್‌ಲೋಡ್ ಅನ್ನು ಕಾನ್ಫಿಗರ್ ಮಾಡಲು, ವಾಟ್ಸಾಪ್‌ ತೆರೆಯಿರಿ> ಮೂರು-ಚುಕ್ಕೆಗಳ ಬಟನ್ ಮೇಲೆ ಟ್ಯಾಪ್ ಮಾಡಿ> ಸೆಟ್ಟಿಂಗ್‌ಗಳು> ಸಂಗ್ರಹಣೆ ಮತ್ತು ಡೇಟಾ> ಮೀಡಿಯಾ ಆಟೋ-ಡೌನ್‌ಲೋಡ್ ಆಯ್ಕೆ ಮಾಡಬಹುದು.

Best Mobiles in India

English summary
WhatsApp offers a lot of features and the messaging platform recently added quite a few features too.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X