ಆಪಲ್‌ ಐಒಎಸ್‌ನಲ್ಲಿ ಬಂತು ವಾಟ್ಸ್‌ಆಪ್ ಫಾರ್‌ವರ್ಡ್‌ ಮಿತಿ..!

By GizBot Bureau
|

ವಾಟ್ಸ್ಆಪ್ ನಿಂದಾಗಿ ಸುಳ್ಳು ಸುದ್ದಿಗಳು ಹೆಚ್ಚಿನ ವೇಗವಾಗಿ ದೇಶದಲ್ಲಿ ಹಬ್ಬುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇದರಿಂದಾಗಿ ದೊಡ್ಡ ಮಟ್ಟ ಅನಾಹುತಗಳು ಜರುಗುತ್ತಿವೆ, ಇದಕ್ಕೆ ತಡೆಯನ್ನು ಒಡ್ಡು ಸಲುವಾಗಿ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ಸಾಕಷ್ಟು ಪರಿಶ್ರಮ ಪಡುತ್ತಿದೆ. ಇದೇ ಹಿನ್ನಲೆಯಲ್ಲಿ ಸುಳ್ಳು ಸುದ್ದಿಯನ್ನು ಹೆಚ್ಚಿನ ಮಂದಿಗೆ ಫಾರ್ವಡ್ ಮಾಡದೆ ಇರುವಂತೆ ತಡೆಯುವ ಸಲುವಾಗಿ ಫಾರ್ವಡ್ ಲೈಬಲ್ ಅನ್ನು ತನ್ನ ಚಾಟಿಂಗ್ ನಲ್ಲಿ ಅಳವಡಿಸಲು ಮುಂದಾಗಿದೆ.

ಇದರಿಂದಾಗಿ ಬಳಕೆದಾರರು ಯಾವುದು ಫಾರ್ವಡ್ ಮೇಸೆಜ್ ಎಂಬುದನ್ನು ಕಂಡುಕೊಳ್ಳಬಹುದಾಗಿದ್ದು, ಫಾರ್ವಡ್ ಮಸೇಜ್ ಗಳನ್ನು ಸುಮ್ಮನೆ ನಂಬಿಕೊಂಡು ತಾವು ಇನ್ನಷ್ಟು ಮಂದಿಗೆ ಕಳುಹಿಸುವುದನ್ನು ತಡೆಯಬಹುದಾಗಿದೆ. ಇದು ಸುಳ್ಳು ಸುದ್ದಿಗಳನ್ನು ಮತ್ತು ರೂಮರ್ ಗಳನ್ನು ತಡೆಯಲು ವಾಟ್ಸ್ಆಪ್ ತೆಗೆದುಕೊಂಡಿರುವ ನಿರ್ಧಾರವಾಗಿರಲಿದೆ.

ಆಪಲ್‌ ಐಒಎಸ್‌ನಲ್ಲಿ ಬಂತು ವಾಟ್ಸ್‌ಆಪ್ ಫಾರ್‌ವರ್ಡ್‌ ಮಿತಿ..!

ಇದರೊಂದಿಗೆ ಸದ್ಯ iOS ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದ್ದು, ಫಾರ್ವರ್ಡ್ ಮೇಸೆಜ್ ಗಳನ್ನು ಒಮ್ಮೆಗೆ ಎಲ್ಲರಿಗೂ ಕಳುಹಿಸುವುದನ್ನು ತಡೆಯುವ ಸಲುವಾಗಿ ಒಮ್ಮೆಗೆ ನಿರ್ಧಿಷ್ಟ ಸಂಖ್ಯೆಯ ಮಂದಿಗೆ ಮಾತ್ರವೇ ಫಾರ್ವಡ್ ಮಾಡುವ ರೀತಿಯಲ್ಲಿ ನಿರ್ಭಂಧಿಸಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಒಮ್ಮೆಗೆ ತಮ್ಮ ಎಲ್ಲಾ ಕಾಂಟೆಕ್ಟ್ ಗಳಿಗೆ ರೂಮರ್ ಗಳು ಹರಡುವುದನ್ನು ತಡೆಯಬಹುದಾಗಿದೆ.

ದೇಶದಲ್ಲಿ ವಾಟ್ಸ್ಆಪ್ ನಿಂದ ಹರಡುವ ಮೇಸೆಜ್ ಗಳಿಂದಾಗಿ ಜರುಗುತ್ತಿರುವ ಅನಾಹುತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರಕಾರಗಳು ಇದನ್ನು ನಿಯಂತ್ರಿಸುವಂತೆ ವಾಟ್ಸ್ಆಪ್ ಮೇಲೆ ಒತ್ತಡವನ್ನು ಹೇರುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರನ್ನು ಎಚ್ಚರಿಸುವ ಸಲುವಾಗಿ ಅವರಿಗೆ ಸುಳ್ಳು ಸುದ್ದಿಯನ್ನು ಗುರುತಿಸಲು ಸಹಾಯವನ್ನು ಮಾಡಲು ಈ ಮಾದರಿಯಲ್ಲಿ ನಿರ್ಭಂದವನ್ನು ಹೇರುವಂತಹ ಕಾರ್ಯಕ್ಕೆ ಮುಂದಾಗಿದೆ.

ಸದ್ಯ ಫಾರ್ವಡ್ ಮಸೇಜ್ ಲೀಮಿಟ್ ಆಯ್ಕೆಯೂ ಆಪಲ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಒಮ್ಮೆಗೆ ಕೇವಲ 20 ಮಂದಿಗೆ ಮಾತ್ರವೇ ಒಂದು ಮೇಸೆಜ್ ಅನ್ನು ಕಳುಹಿಸಲು ಸಾಧ್ಯವಾಗಲಿದೆ. ಇದಾದ ನಂತರದಲ್ಲಿ ಮತ್ತೆ ಕಳುಹಿಸಬೇಕಾಗುತ್ತಿದೆ. ಇದರಿಂದಾಗಿ ಫಾರ್ವಡ್ ಮೇಸೆಜ್ಗಳು ಹೆಚ್ಚು ಜನರಿಗೆ ತಲುಪುವುದನ್ನು ತಡೆಯಬಹದಾಗಿದೆ.

ಆಪಲ್‌ ಐಒಎಸ್‌ನಲ್ಲಿ ಬಂತು ವಾಟ್ಸ್‌ಆಪ್ ಫಾರ್‌ವರ್ಡ್‌ ಮಿತಿ..!

ಶೀಘ್ರವೇ ಈ ನಿರ್ಭಂದವು ಆಂಡ್ರಾಯ್ಡ್ ಬಳಕೆದಾರರಿಗೂ ದೊರೆಯಲಿದೆ ಎನ್ನಲಾಗಿದೆ. ಈಗಾಗಲೇ ದೇಶದಲ್ಲಿ ಸುಮಾರು 200 ಮಿಲಿಯನ್ ಮಂದಿ ವಾಟ್ಸ್ಆಪ್ ಬಳಕೆದಾರರಿದ್ದು, ಇದರಿಂದಾಗಿ ಹೆಚ್ಚಿನ ವೇಗದಲ್ಲಿ ಸುದ್ದಿಗಳು ಇದರಲ್ಲಿ ಹರಡುತ್ತವೆ. ದೇಶದ ವಿವಿಧ ಭಾಗಗಳಲ್ಲಿ ಈ ಸುಳ್ಳು ಸುದ್ದಿಗಳು ಹಲವು ಮಂದಿ ಜೀವನ್ನು ಬಲಿಪಡೆದಿರುವ ಘಟನೆಗಳು ನಡೆದಿದೆ ಎನ್ನಲಾಗಿದೆ. ನಮ್ಮ ರಾಜ್ಯದಲ್ಲಿಯೂ ಒಂದು ಘಟನೆ ವರದಿಯಾಗಿದೆ.
Best Mobiles in India

English summary
WhatsApp Forward limits feature is now available on iOS platform. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X