ಸದ್ಯದಲ್ಲೇ ಉಚಿತ ಧ್ವನಿ ಕರೆ ಸೌಲಭ್ಯ ವಾಟ್ಸಾಪ್‌ನಿಂದ

Written By:

ಹೆಚ್ಚು ನಿರೀಕ್ಷಿತ ವೆಬ್ ಕ್ಲೈಂಟ್ ಅನ್ನು ವಾಟ್ಸಾಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ನೀಡಿದ ಬೆನ್ನಲ್ಲೇ ಉಚಿತ ಧ್ವನಿ ಕರೆ (ಫ್ರಿ ವಾಯ್ಸ್ ಕಾಲ್) ಫೀಚರ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಒದಗಿಸಲಿದೆ.

ಸದ್ಯದಲ್ಲೇ ಉಚಿತ ಧ್ವನಿ ಕರೆ ಸೌಲಭ್ಯ ವಾಟ್ಸಾಪ್‌ನಿಂದ

ವಾಯ್ಸ್ ಕಾಲಿಂಗ್ ಫೀಚರ್ ಇರುವ ಸ್ಕ್ರೀನ್ ಶಾಟ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಿಕೊಂಡು ಆಂಡ್ರಾಯ್ಡ್ ಫೋನ್‌ನಲ್ಲಿ ಪ್ರವೇಶಿಸಬಹುದಾಗಿದೆ. ಗೂಗಲ್ ನೆಕ್ಸಸ್ 5 ಡಿವೈಸ್‌ನಲ್ಲಿರುವ ಲಾಲಿಪಪ್ 5.0.1 ನಲ್ಲೂ ಇದು ಲಭ್ಯವಾಗಲಿದೆ.

ಸದ್ಯದಲ್ಲೇ ಉಚಿತ ಧ್ವನಿ ಕರೆ ಸೌಲಭ್ಯ ವಾಟ್ಸಾಪ್‌ನಿಂದ

ಇನ್ನು ವಾಟ್ಸಾಪ್ ಧ್ವನಿ ಕರೆಯನ್ನು ಬಳಸಲು ಫೋನ್‌ಗೆ ಕರೆಮಾಡುವ ವ್ಯಕ್ತಿ ಈ ಫೀಚರ್ ಅನ್ನು ಒಳಗೊಂಡಿರುವುದು ಅತ್ಯವಶ್ಯಕವಾಗಿದೆ. ಆಂಡ್ರಾಯ್ಡ್ ಫೋನ್ ಅವರಲ್ಲಿರಬೇಕು ಅಂತೆಯೇ ಅತ್ಯಾಧುನಿಕ ವಾಟ್ಸಾಪ್ ಫೀಚರ್ ಅನ್ನು ನೀವು ಹೊಂದಿರುವುದು ಅತೀ ಅಗತ್ಯವಾಗಿದೆ. ಇದರ ಪರೀಕ್ಷೆ ಇನ್ನೂ ನಡೆಯುತ್ತಿದ್ದು ಸರ್ವವಿಧದಲ್ಲೂ ಪ್ರವೇಶಕ್ಕೆ ಅನುಕೂಲಕರವಾಗುವಂತೆ ವಾಟ್ಸಾಪ್ ತನ್ನ ಹೊಸ ಫೀಚರ್ ಅನ್ನು ಬಳಕೆದಾರರಿಗೆ ಒದಗಿಸಿಕೊಡಲಿದೆ.

ಸದ್ಯದಲ್ಲೇ ಉಚಿತ ಧ್ವನಿ ಕರೆ ಸೌಲಭ್ಯ ವಾಟ್ಸಾಪ್‌ನಿಂದ

ಚಾಟ್ ಮತ್ತು ಸಂಪರ್ಕಗಳನ್ನು ಒಳಗೊಂಡಿರುವ ಹೊಸ ಕರೆಗಳ ಟ್ಯಾಬ್ ಅನ್ನು ಮೇಲ್ಭಾಗದಲ್ಲಿ ಕಾಣಬಹುದಾಗಿದ್ದು, ಮೇಲ್ಭಾಗದಲ್ಲಿನ 'ನ್ಯೂ ಕಾಲ್' ಬಟನ್ ಅನ್ನು ಬಳಸಿಕೊಂಡು ತಮ್ಮ ವಾಟ್ಸಾಪ್ ಸಂಪಗಳಲ್ಲಿರುವ ಒಬ್ಬರಿಗೆ ಕರೆಮಾಡಬಹುದಾಗಿದೆ.

English summary
This article tells about WhatsApp Free Voice Calling Feature Reportedly Starts Rolling Out.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot