ಕರ್ನಾಟಕದಲ್ಲೇ ಮೊದಲು..!! ಮೋದಿಯನ್ನು ಹಂಗಿಸಿದ ವಾಟ್ಸ್ಆಪ್ ಗ್ರೂಪ್ ಆಡ್ಮಿನ್ ಅರೆಸ್ಟ್..!!!

Written By:

ಇತ್ತೀಚೆಗಷ್ಟೆ ವಾಟ್ಸ್‌ಆಪ್ ಹಾಗೂ ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ, ರೂಮರ್ಸ್ ಹಬ್ಬಿಸುವುದು ಹೆಚ್ಚಾಗುತ್ತಿದೆ ಈ ಹಿನ್ನಲೆಯಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಗ್ರೂಪ್‌ಗಳ ಆಡ್ಮಿನ್‌ಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಆದೇಶ ಹೊರಡಿಸಿದ ಬೆನ್ನಲೇ ಪ್ರಧಾನಿ ನರೇಂದ್ರಮೋದಿಯವರನ್ನು ಅವಹೇಳನ ಮಾಡಿದ್ದ ಗ್ರೂಪ್ ವೊಂದರ ಆಡ್ಮಿನ್ ಜೈಲು ಪಾಲಾಗಿದ್ದಾರೆ.

ಕರ್ನಾಟಕದಲ್ಲೇ ಮೊದಲು..!! ಮೋದಿಯನ್ನು ಹಂಗಿಸಿದ ವಾಟ್ಸ್ಆಪ್ ಗ್ರೂಪ್ ಆಡ್ಮಿನ್ ಅರೆಸ

ಈ ಕುರಿತು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು, ಸಮಾಜದಲ್ಲಿ ಅಶಾಂತಿಯನ್ನು ಹಾಗೂ ಸುಳ್ಳು ಸುದ್ದಿಯನ್ನು ಹರಡುವ ಸಲುವಾಗಿ ಈ ಹೊಸ ನಿಮಯಗಳನ್ನು ಜಾರಿಗೆ ತರಲಾಗಿತ್ತು. ಸದ್ಯ ಅದೇ ನಿಯಮವನ್ನು ಉಲ್ಲಂಘಿಸಿದ ಗ್ರೂಪ್ ವೊಂದರ ಆಡ್ಮಿನ್ ಜೈಲು ಸೇರಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕರ್ನಾಟಕದಲ್ಲೇ ಮೊದಲ ಪ್ರಕರಣ:

ಕರ್ನಾಟಕದಲ್ಲೇ ಮೊದಲ ಪ್ರಕರಣ:

ಗ್ರೂಪ್‌ಗಳ ಆಡ್ಮಿನ್‌ಗಳನ್ನು ಜೈಲಿಗೆ ಕಳುಹಿಸಿದ ಮೊದಲ ಪ್ರಕರಣ ಕರ್ನಾಟಕದಲ್ಲಿ ನಡೆದಿರುವುದು ಬೇಸರದ ಸಂಗತಿಯಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಯ ವ್ಯಕ್ತಿಯೊಬ್ಬರು ಸದ್ಯ ಪ್ರಧಾನಿ ನರೇಂದ್ರಮೋದಿಯವರ ಕುರಿತ ಅವಹೇಳನಕಾರಿ ಫೋಟೋವೊಂದನ್ನು ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹರಿಬಿಟ್ಟು ಜೈಲು ಸೇರಿದ್ದಾರೆ.

ದ ಬಲ್ಸ್ ಬಾಯ್ಸ್ ವಾಟ್ಸ್‌ಆಪ್ ಗ್ರೂಪ್:

ದ ಬಲ್ಸ್ ಬಾಯ್ಸ್ ವಾಟ್ಸ್‌ಆಪ್ ಗ್ರೂಪ್:

ಪ್ರಧಾನಿ ನರೇಂದ್ರಮೋದಿಯವರ ಕುರಿತ ಅವಹೇಳನಕಾರಿ ಫೋಟೋವೊಂದನ್ನು ದ ಬಲ್ಸ್ ಬಾಯ್ಸ್ ಎಂಬ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಹರಿಬಿಡಲಾಗಿತ್ತು. ಈ ಸಂಬಂಧ ಕೃಷ್ಣ ಸನ್ಥಮಣ್ಣ ನಾಯಕ್ ಎಂಬ 30 ವರ್ಷದ ವ್ಯಕ್ತಿಯನ್ನು ಮುರುಡೇಶ್ವರದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಪ್ರಧಾನಿಯ ಅವಹೇಳನ:

ಪ್ರಧಾನಿಯ ಅವಹೇಳನ:

ದ ಬಲ್ಸ್ ಬಾಯ್ಸ್ ಎಂಬ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನ ಮಾಡಲಾಗಿತ್ತು ಈ ಹಿನ್ನಲೆಯಲ್ಲಿ 30 ವರ್ಷದ ಆಟೋ ಚಾಲಕ ಕೃಷ್ಣ ಸನ್ಥಮಣ್ಣ ನಾಯಕ್ ಎಂಬಾತನನ್ನು ಮುರುಡೆಶ್ವರದ ಪೋಲಿಸರು ಬಂಧಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಗಿರೀಶ್ ನಾಯಕ್ ಎಂಬುವವರನ್ನು ಬಂಧಿಸಿ ಬೆಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
A 30-year-old has reportedly been arrested in Karnataka’s Uttara Kannada district for a circulating a derogatory image of PM Narendra Modi on the WhatsApp group he is an admin of. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot