ವಾಟ್ಸ್‌ಆಪ್ ಗ್ರೂಪ್‌ ಅಡ್ಮಿನ್ಗೆ ಹೊಸ ಅಧಿಕಾರ..! ಗುಂಪಿನ ಸದಸ್ಯರ ಮೆಸೇಜ್ ನಿರ್ಬಂಧಿಸಬಹುದು!!

By GizBot Bureau
|

ಗುಂಪು ಅಂದ ಮೇಲೆ ಅಲ್ಲಿ ಎಲ್ಲರೂ ಒಂದೇ ಮನಸ್ಥಿತಿಯ ವ್ಯಕ್ತಿಗಳು ಇರಲು ಸಾಧ್ಯವಿಲ್ಲ. ಕೆಲವರು ತೀರಾ ಮಾತುಗಾರರಾಗಿದ್ದರೆ ಮತ್ತೂ ಕೆಲವರು ಮೌನಿಗಳಾಗಿರಬಹುದು. ಕೆಲವರು ಜೋಕ್ ಮೆಸೇಜ್ ಕಳಿಸುವವರಾಗಿದ್ದರೆ ಮತ್ತೂ ಕೆಲವರು ಸೆಕ್ಸಿ ಮೆಸೇಜ್ ಫಾರ್ವಡ್ ಮಾಡುವ ಮಂದಿ ಇರಬಹುದು. ಆದರೆ ಈ ವಾಟ್ಸ್ ಆಪ್ ಗುಂಪು, ಗುಂಪಿನ ಎಲ್ಲಾ ಸದಸ್ಯರನ್ನು ಒಂದುಗೂಡಿಸಿ ಇಟ್ಟಿರುತ್ತೆ ಅನ್ನುವುದೇನೋ ನಿಜ.

ಆದರೆ ಹೀಗೆ ಗುಂಪಿನ ಎಲ್ಲಾ ಸದಸ್ಯರನ್ನು ಒಟ್ಟಾಗಿ ಇಡಬೇಕು ಅಂದರೆ ಗುಂಪಿನ ಮಾಲೀಕನಿಗೆ ಕೆಲವೊಮ್ಮೆ ತಲೆನೋವಿನ ವಿಚಾರ. ಆತನಿಗೆ ಅದೆಷ್ಟು ಅಧಿಕಾರಗಳಿದ್ದರೂ ಸಾಕಾಗುವುದಿಲ್ಲ. ರಾಜನ ಪವರ್ ಹೆಚ್ಚಿದ್ದಾಗಲೇ ತಾನೆ ಎಲ್ಲಾ ಸೈನಿಕರು ಕಾರ್ಯೋನ್ಮುಖರಾಗಿರಲು ಸಾಧ್ಯ. ಈ ತತ್ವ ವಾಟ್ಸ್ ಆಪ್ ಸಂಸ್ಥೆಗೂ ತಿಳಿದಿದೆ. ಅದೇ ಕಾರಣಕ್ಕೆ ವಾಟ್ಸ್ ಆಪ್ ಗುಂಪಿನ ಮಾಲೀಕನಿಗೆ ಇನ್ನಷ್ಟು ಪವರ್ ಬರುವ ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸಿದೆ.

ವಾಟ್ಸ್‌ಆಪ್ ಗ್ರೂಪ್‌ ಅಡ್ಮಿನ್ಗೆ ಹೊಸ ಅಧಿಕಾರ..!

ಇತ್ತೀಚೆಗೆ ವಾಟ್ಸ್ ಗುಂಪಿಗಾಗಿ ಹಲವು ವೈಶಿಷ್ಟ್ಯತೆಗಳನ್ನು ಸೃಷ್ಟಿಸಲು ವಾಟ್ಸ್ ಆಪ್ ಸಂಸ್ಥೆ ಪ್ರಯತ್ನಿಸುತ್ತಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿತ್ತು.. ಇತ್ತೀಚೆಗಷ್ಟೇ ಗ್ರೂಪ್ ವೀಡಿಯೋ ಕಾಲಿಂಗ್ ಅವಕಾಶವನ್ನು ವಾಟ್ಸ್ ಆಪ್ ಕಲ್ಪಿಸಿದೆ. ಜೊತೆಗೆ ಗುಂಪು ಹಲವು ನಿರ್ಬಂಧನೆಗೆ ಒಳಪಡಲು ಏನು ಮಾಡಬೇಕು ಎಂಬ ಬಗ್ಗೆ ಕೂಡ ವಾಟ್ಸ್ ಆಪ್ ಕೆಲಸ ಮಾಡುತ್ತಿತ್ತು. ಈಗ ಆ ವೈಶಿಷ್ಟ್ಯತೆ ಬಿಡುಗಡೆಗೊಂಡಂತೆ ಕಾಣುತ್ತಿದೆ. ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್ ನ ಬಳಕೆದಾರರು ಈ ವೈಶಿಷ್ಟ್ಯತೆಯ ಉಪಯೋಗ ಪಡೆಯಬಹುದಾಗಿದೆ..

ಈ ವೈಶಿಷ್ಟ್ಯದ ಅನುಸಾರ ವಾಟ್ಸ್ ಆಪ್ ಗುಂಪಿನ ಮಾಲೀಕ ತನ್ನ ಗುಂಪಿನ ಸದಸ್ಯರು ಕಳಿಸುವ ಮೆಸೇಜ್ ಗಳನ್ನು ರಿಸ್ಟ್ರಿಕ್ಟ್ ಮಾಡಬಹುದು ಅಂದರೆ ನಿರ್ಬಂಧಿಸಬಹುದು. ಸದ್ಯ ಈ ವೈಶಿಷ್ಟ್ಯವು ವಾಟ್ಸ್ ಆಪ್ ನ ಆಂಡ್ರಾಯ್ಡ್ ಬೆಟಾ ವರ್ಷನ್ 2.18.201 ರಲ್ಲಿ ಲಭ್ಯವಿದೆ. WABetaInfo ವರದಿಯು ನೀಡಿರುವ ಸುಳಿವಿನ ಪ್ರಕಾರ iOS ವರ್ಷನ್ 2.18.70 ನ್ನೂ ಕೂಡ ಇದೇ ವೈಶಿಷ್ಟ್ಯ ಲಭ್ಯವಿದೆ. ಇದರ ಸ್ಥಿರ ಆವೃತ್ತಿಯು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಈ ವೈಶಿಷ್ಟ್ಯವು 'Send Messages' ಎಂಬ ಹೆಸರಿನಲ್ಲಿ ಬಿಡುಗಡೆಗೊಂಡಿದೆ ಮತ್ತು ಇದು ಗ್ರೂಪ್ ಇನ್ಫೋ ಒಳಗೆ ಗ್ರೂಪ್ ಸೆಟ್ಟಿಂಗ್ಸ್ ಆಯ್ಕೆಯಲ್ಲಿ ಲಭ್ಯವಿರುತ್ತದೆ. ನೀವು ಒಂದು ವೇಳೆ ಗುಂಪಿನ ಅಡ್ಮಿನ್ ಆಗಿದ್ದರೆ, ನೀವು ಆ ಗುಂಪಿನ ಸೆಟ್ಟಿಂಗ್ಸ್ ಗೆ ತೆರಳಬೇಕು. ಸೆಟ್ಟಿಂಗ್ಸ್ ನಲ್ಲಿ ಸಬ್-ಮೆನು ಇದ್ದು ಅದರಲ್ಲಿ ಎರಡು ಆಯ್ಕೆಗಳಿರುತ್ತದೆ. ಎಡಿಟ್ ಗ್ರೂಪ್ ಇನ್ಫೋ ಮತ್ತು ಸೆಂಡ್ ಮೆಸೇಜ್.

ನೀವು ರಿಸ್ಟ್ರಿಕ್ಟ್ ಗ್ರೂಪ್ ಸ್ಥಾಪಿಸಲು, ನೀವು ಸೆಂಡ್ ಮೆಸೇಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು ಮತ್ತು ಒನ್ಲಿ ಅಡ್ಮಿನ್ ಎಂಬುದನ್ನ ಹಿಟ್ ಮಾಡಬೇಕು.ಡೀಫಾಲ್ಟ್ ಆಗಿ, ಎಲ್ಲಾ ಭಾಗೀದಾರರ ಆಯ್ಕೆಯೂ ಅನೇಬಲ್ ಆಗಿರುತ್ತದೆ. ಅಡ್ಮಿನ್ ನ್ನು ಮಾತ್ರ ಅಲ್ಲಿ ಆಯ್ಕೆ ಮಾಡುವುದರಿಂದಾಗಿ ಕೇವಲ ಅಡ್ಮಿನ್ ಮಾತ್ರ ಗುಂಪಿಗೆ ಮೆಸೇಜ್ ಕಳಿಸಲು ಸಾಧ್ಯವಾಗುತ್ತದೆ. ಗುಂಪಿನ ಉಳಿದ ಸದಸ್ಯರು ಯಾರೂ ಕೂಡ ಮೆಸೇಜ್ ಕಳುಹಿಸಲು ಗುಂಪಿನಲ್ಲಿ ಅವಕಾಶವಿರುವುದಿಲ್ಲ.

ವಾಟ್ಸ್ ಆಪ್ ನ ಗುಂಪಿನಲ್ಲಿ ಸದಸ್ಯರಿಗೆ ಇದರ ಬಗ್ಗೆ ನೋಟಿಫಿಕೇಷನ್ ಕೂಡ ಸಿಗಲಿದೆ ಮತ್ತು ಅವರು ಇನ್ನು ಮುಂದೆ ಗುಂಪಿನಲ್ಲಿ ಮೆಸೇಜ್ ಕಳಿಸಲು ಸಾಧ್ಯವಾಗುವುದಿಲ್ಲ ಎಂಬುದು ಅವರಿಗೆ ತಿಳಿಯಲಿದೆ. ಅಡ್ಮಿನ್ ಗೆ ಯಾವುದೇ ಸಂದರ್ಬದಲ್ಲಿ ಬೇಕಾದರೂ ಈ ಆಯ್ಕೆಯನ್ನು ಬದಲಾಯಿಸುವ ಅವಕಾಶವಿದ್ದು, ತನಗೆ ಬೇಕಾದ ಸದಸ್ಯರಿಗೆ ಮಾತ್ರ ಗುಂಪಿನಲ್ಲಿ ಮೆಸೇಜ್ ಕಳಿಸಲು ಅವಕಾಶ ನೀಡುವ ಅಧಿಕಾರವಿರುತ್ತದೆ.

ಸ್ಪ್ಯಾಮ್ ಮೆಸೇಜ್ ಗಳಿಗೆ ಬೀಳಲಿದೆ ಕಡಿವಾಣ

ವಾಟ್ಸ್ ಆಪ್ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಂಡಿರುವ ಒಂದು ಅತ್ಯದ್ಭುತ ವೈಶಿಷ್ಟ್ಯ ಇದಾಗಿದೆ. ಇದರಿಂದಾಗಿ ಗುಂಪಿನಲ್ಲಿ ಕಳುಹಿಸಲಾಗುವ ಸ್ಪ್ಯಾಮ್ ಮೆಸೇಜ್ ಗಳನ್ನು ನಿಗ್ರಹಿಸಲು ಸಾಧ್ಯವಾಗುವ ಲಕ್ಷಣಗಳಿದೆ. ಅದರಲ್ಲೂ ಪ್ರಮುಖವಾಗಿ ಯಾವ ಗುಂಪಿನ ಮಾಲೀಕನು ಶೈಕ್ಷಣಿಕ ಮತ್ತು ಕೇಂದ್ರಗಳಿಗೆ ಸಂಬಂಧಿಸಿದ ಗುಂಪನ್ನು ಸ್ಥಾಪಿಸಿರುತ್ತಾರೋ ಅವರಿಗೆ ಬಹಳವಾಗಿ ಅನುಕೂಲಕರವಾಗಿದೆ.

ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸದಂತೆ ಅಥವಾ ಗುಂಪುಗಳಲ್ಲಿ ಅನಗತ್ಯ ಸಂದೇಶಗಳನ್ನು ಕಳುಹಿಸದಂತೆ ಸದಸ್ಯರನ್ನು ವಿನಂತಿಸುವ ಗುಂಪುಗಳ ಮಾಲೀಕರು ಹಲವರಿದ್ದಾರೆ ಮತ್ತು ಅವರಿಗೆ ಅಂತಹ ಸದಸ್ಯರನ್ನು ಗುಂಪಿನಲ್ಲಿ ನಿಭಾಯಿಸುವ ಇಷ್ಟು ದಿನ ಕಷ್ಟಸಾಧ್ಯವಾಗುತ್ತಿತ್ತು. ಇನ್ನು ಸದಸ್ಯರನ್ನು ವಿನಂತಿಸುವ ಬದಲು ಜಸ್ಟ್ ಕೇವಲ ಒಂದು ಬಟನ್ ಮೂಲಕ ಅವರನ್ನು ನಿರ್ಬಂಧಿಸಿ ಬಿಡಬಹುದು.

ಭವಿಷ್ಯದ ಕೆಲವೇ ದಿನಗಳಲ್ಲಿ ಗುಂಪಿನ ಸದಸ್ಯರನ್ನು ಹೀಗೆ ನಿರ್ಬಂಧಿಸಿಕೊಳ್ಳುವ ಅಧಿಕಾರವು ನಾಯಕನಿಗೆ ಲಭ್ಯವಾಗಲಿದೆ.

Best Mobiles in India

English summary
WhatsApp group admins can restrict members from sending messages. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X