Home
ಸುದ್ದಿಜಾಲ

ಇಂತಹ ಫೀಚರ್ಸ್‌ ಅನ್ನು ವಾಟ್ಸಾಪ್‌ನಿಂದ ಮಾತ್ರ ನಿರೀಕ್ಷಿಸಲು ಸಾಧ್ಯ! ಏನೆಲ್ಲಾ ಉಪಯೋಗವಿದೆ ಗೊತ್ತಾ?

ಮೆಟಾ ಒಡೆತನದ ವಾಟ್ಸಾಪ್‌ನಲ್ಲಿ ಇದೀಗ ಮತ್ತೊಂದು ಹೊಸ ಸೇರ್ಪಡೆ ಆಗಿದೆ. ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಈ ಹೊಸ ಫೀಚರ್ಸ್‌ ಅನ್ನು ಅನಾವರಣಗೊಳಿಸಿದ್ದಾರೆ. ಇನ್ನು ಈ ಹೊಸ ಫೀಚರ್ಸ್‌ ಮೂಲಕ ನಿಮ್ಮ ವಾಟ್ಸಾಪ್‌ ಚಾಟ್‌ಗಳನ್ನು ಕ್ಲೌಡ್‌ಗೆ ಅಪ್‌ಲೋಡ್‌ ಮಾಡದಯೇ ಮತ್ತೊಂದು ಡಿವೈಸ್‌ಗೆ ಟ್ರಾನ್ಸಫರ್‌ ಮಾಡಬಹುದಾಗಿದೆ.

ಹೌದು, ನಿಮ್ಮ ಹಳೆ ಮೊಬೈಲ್‌ನಲ್ಲಿರುವ ವಾಟ್ಸಾಪ್‌ ಚಾಟ್‌ಗಳನ್ನು ಹೊಸ ಮೊಬೈಲ್‌ಗೆ ವರ್ಗಾವಣೆ ಮಾಡಿಕೊಳ್ಳುವುದು ಇದೀಗ ಸುಲಭವಾಗಲಿದೆ. ಇದಕ್ಕಾಗಿಯೇ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದರಲ್ಲಿ ನೀವು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕವೇ ನಿಮ್ಮ ಚಾಟ್‌ಗಳನ್ನು ಟ್ರಾನ್ಸಫರ್‌ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ ಸೇರಿರುವ ಹೊಸ ಫೀಚರ್ಸ್‌ ಹೇಗಿದೆ? ಇದರ ಕಾರ್ಯನಿರ್ವಹಣೆ ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇಂತಹ ಫೀಚರ್ಸ್‌ ಅನ್ನು ವಾಟ್ಸಾಪ್‌ನಿಂದ ಮಾತ್ರ ನಿರೀಕ್ಷಿಸಲು ಸಾಧ್ಯ!

ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಒಂದಲ್ಲ ಒಂದು ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಇದಕ್ಕೆ ಲೇಟೆಸ್ಟ್‌ ಸೇರ್ಪಡೆ ಹೊಸ ನೇರ ಚಾಟ್‌ ವರ್ಗಾವಣೆ ವಿಧಾನವಾಗಿದೆ. ಈ ಫೀಚರ್ಸ್‌ನಲ್ಲಿ ನೀವು ಗೂಗಲ್‌ ಡ್ರೈವ್‌ ಮೂಲಕ ನಿಮ್ಮ ಚಾಟ್‌ಗಳನ್ನು ಬ್ಯಾಕಪ್‌ ಮಾಡುವ ಅವಶ್ಯಕತೆ ಬರುವುದಿಲ್ಲ. ನೀವು ಬೇರೆ ಫೋನ್‌ಗೆ ಚಾಟ್‌ ವರ್ಗಾಯಿಸುವುದು ಇನ್ನಷ್ಟು ಸುಲಭವಾಗಿದೆ. ಇದಕ್ಕಾಗಿ ನೀವು ಒಂದು ಫೋನ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಸಾಕು ನಿಮ್ಮ ಚಾಟ್‌ ವರ್ಗಾವಣೆ ಆಗಲಿದೆ.

ಅಂದರೆ ಯಾವುದೇ ಡ್ರೈವ್‌ನಲ್ಲಿ ನಿಮ್ಮ ಚಾಟ್‌ಗಳನ್ನು ಸೇವ್‌ ಮಾಡದಯೇ ನೇರವಾಗಿ ಬೇರೊಂದು ಮೊಬೈಲ್‌ಗೆ ನಿಮ್ಮ ಚಾಟ್‌ಗಳನ್ನು ವರ್ಗಾಯಿಸಬಹುದಾಗಿದೆ. ಇದರಿಂದ ಬಳಕೆದಾರರು ಎರಡು ಸಾಧನಗಳಿಂದ ಡೇಟಾ ಬಿಡದೆಯೇ ಚಾಟ್‌ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಈ ಹೊಸ ಆಯ್ಕೆಯು ಕ್ಲೌಡ್ ಸೇವೆಗಳಿಗಿಂತ ಹೆಚ್ಚು ಖಾಸಗಿಯಾಗಿರಲಿದ್ದು, ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೆಟಾ ಸಂಸ್ಥೆ ಹೇಳಿಕೊಂಡಿದೆ.

ಅದರಲ್ಲೂ ದೊಡ್ಡ ಪ್ರಮಾಣ ಮೀಡಿಯಾ ಫೈಲ್‌ ಟ್ರಾನ್ಸಫರ್‌ ವಿಚಾರಕ್ಕೆ ಬಂದಾಗ ಈ ವಿಧಾನವು ಸಾಕಷ್ಟು ಉಪಯುಕ್ತವಾಗಿದೆ. ಯಾಕೆಂದರೆ ಹೊಸ ವಿಧಾನದಲ್ಲಿ ನೀವು ಚಾಟ್‌ಗಳು ಮತ್ತು ಮೀಡಿಯಾ ಹಿಸ್ಟರಿ ಎರಡನ್ನೂ ಕೂಡ ವರ್ಗಾಯಿಸಬಹುದಾಗಿದೆ. ನೀವು ಟ್ರಾನ್ಸಫರ್‌ ಮಾಡುವಾಗ ನಿಮ್ಮ ಯಾವುದೇ ಚಾಟ್‌ ಅಥವಾ ಮೀಡಿಯಾ ಫೈಲ್‌ಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.

ಇಂತಹ ಫೀಚರ್ಸ್‌ ಅನ್ನು ವಾಟ್ಸಾಪ್‌ನಿಂದ ಮಾತ್ರ ನಿರೀಕ್ಷಿಸಲು ಸಾಧ್ಯ!

ವಾಟ್ಸಾಪ್‌ನಲ್ಲಿ ಹೊಸ ನೇರ ಚಾಟ್‌ ವರ್ಗಾವಣೆ ವಿಧಾನವನ್ನು ಬಳಸುವುದು ಹೇಗೆ?
* ಮೊದಲಿಗೆ ನಿಮ್ಮ ಎರಡೂ ಫೋನ್‌ಗಳು ವೈ-ಫೈಗೆ ಸಂಪರ್ಕಗೊಂಡಿವೆಯಾ ಎಂದು ಖಚಿತಪಡಿಸಿಕೊಳ್ಳಿ.
* ಇದೀಗ ನಿಮ್ಮ ಹಳೆಯ ಫೋನ್‌ನಲ್ಲಿ, ಸೆಟ್ಟಿಂಗ್‌ಗಳು > ಚಾಟ್‌ಗಳು > ಚಾಟ್ ವರ್ಗಾವಣೆಗೆ ಹೋಗಿ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
* ತಕ್ಷಣವೆ ನಿಮ್ಮ ಮೊಬೈಲ್‌ನಲ್ಲಿನ ವಾಟ್ಸಾಪ್‌ ಚಾಟ್‌ಗಳ ವರ್ಗಾವಣೆ ಪ್ರಾರಂಭವಾಗಲಿದೆ.

ಇನ್ನು ಇತ್ತೀಚಿನ ಸುದ್ದಿಗಳಲ್ಲಿ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ವೀಡಿಯೊ ಕಾಲ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 32ಕ್ಕೆ ಏರಿಸಿದೆ. ಇದರಿಂದ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿಯೂ ಸಹ ಹೆಚ್ಚಿನ ಜನರು ವಾಟ್ಸಾಪ್‌ ವಿಡಿಯೊ ಕರೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಈ ವಿಚಾರದ ಬಗ್ಗೆ ವಾಬೇಟಾಇನ್ಫೋ ವೆಬ್‌ಸೈಟ್‌ ಮಾಹಿತಿ ಹಂಚಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಈ ಹೊಸ ಆಯ್ಕೆಯು ವಾಟ್ಸಾಪ್ ಬೀಟಾ ಅಪ್‌ಡೇಟ್ 2.23.24.1.0 ಹೊಂದಿರುವ ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಎನ್ನಲಾಗಿದೆ.

ಇದಿಷ್ಟೇ ಅಲ್ಲ ವಾಟ್ಸಾಪ್‌ ತನ್ನ ಬಳಕೆದಾರರಿಗೇ ಸಂದೇಶವನ್ನು ಪಿನ್‌ ಮಾಡುವ ಆಯ್ಕೆಯನ್ನು ಸಹ ಪರಿಚಯಿಸಿದೆ. ಇದರಿಂದ ನೀವು ನಿಮ್ಮ ವೈಯುಕ್ತಿಕ ಅಥವಾ ಗ್ರೂಪ್‌ ಚಾಟ್‌ನಲ್ಲಿ ಬಹುಮುಖ್ಯವಾದ ಸಂದೇಶಗಳನ್ನು ಪಿನ್‌ ಮಾಡಬಹುದಾಗಿದೆ. ಇದರ ಮೂಲಕ ಬಳಕೆದಾರರು ಪಿನ್ ಚಾಟ್ ಫೀಚರ್ಸ್‌ನಂತೆಯೇ ಪ್ರಮುಖ ಮೆಸೆಜ್‌ಗಳನ್ನು ಕೂಡ ಪಿನ್‌ ಮಾಡುವ ಮೂಲಕ ಹೈಲೈಟ್‌ ಮಾಡಬಹುದಾಗಿದೆ.

Best Mobiles in India

English summary
WhatsApp has a announced new direct chat transfer method
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+