ವಾಟ್ಸಾಪ್‌ನಿಂದ ಹೊಸ ಅವತಾರ್ ಸ್ಟಿಕ್ಕರ್ ಪ್ಯಾಕ್ ಬಿಡುಗಡೆ! ಏನೆಲ್ಲಾ ಲಭ್ಯ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ಸುದ್ದಿಯನ್ನು ನೀಡುತ್ತಲೇ ಬಂದಿದೆ. ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಯಲ್ಲಿ ಹೊಸ ಅವತಾರ್ ಸ್ಟಿಕ್ಕರ್ ಪ್ಯಾಕ್ ಅನ್ನು ಪರಿಚಯಿಸಿದೆ. ಈಗಾಗಲೇ ಲಭ್ಯವಿರುವ ಅವತಾರ್ ಸ್ಟಿಕ್ಕರ್ ಪ್ಯಾಕ್‌ನಲ್ಲಿ ಹೊಸ ಸ್ಟಿಕ್ಕರ್‌ಗಳನ್ನು ಸೇರ್ಪಡೆ ಮಾಡಿರುವುದಾಗಿ ವಾಟ್ಸಾಪ್ ಹೇಳಿದೆ. ಇನ್ನು ಈ ಅವತಾರ್ ಪ್ಯಾಕ್‌ನಲ್ಲಿ ಬಳಕೆದಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದಾದ ಹಲವು ಸ್ಟಿಕ್ಕರ್‌ಗಳನ್ನು ನೀಡಲಾಗಿದೆ.

ಹೌದು, ವಾಟ್ಸಾಪ್ ತನ್ನ ಅವತಾರ್ ಸ್ಟಿಕ್ಕರ್‌ಪ್ಯಾಕ್‌ನಲ್ಲಿ ಇನ್ನಷ್ಟು ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ. ಇವುಗಳ ಮೂಲಕ ಬಳಕೆದಾರರು ತಾವು ಬಯಸುವ ವೈವಿಧ್ಯಮಯ ಭಾವನೆಗಳು ಮತ್ತು ಅಭಿವ್ಯಕ್ತಿಗಳನ್ನು ವ್ಯಕ್ತಪಡಿಸಬಹುದಾಗಿದೆ. ಜೊತೆಗೆ ಕೆಲವು ಸ್ಟಿಕ್ಕರ್‌ಗಳನ್ನು ರಿ ಡಿಸೈನ್ ಮಾಡುವ ಹಾಗೂ ಬದಲಾಯಿಸುವ ಮೂಲಕ ವಾಟ್ಸಾಪ್ ಅವತಾರ್ ಸ್ಟಿಕ್ಕರ್ ಪ್ಯಾಕ್‌ನಲ್ಲಿ ಹೊಸ ಅನುಭವವನ್ನು ನೀಡಲು ಮುಂದಾಗಿದೆ. ಹಾಗಾದ್ರೆ ವಾಟ್ಸಾಪ್ ಹೊಸದಾಗಿ ಸೇರ್ಪಡೆ ಮಾಡಿರುವ ಅವತಾರ್ ಸ್ಟಿಕ್ಕರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ವಾಟ್ಸಾಪ್‌ನಲ್ಲಿ ಸೇರ್ಪಡೆ ಆಗಿರುವ ಅವತಾರ್ ಸ್ಟಿಕ್ಕರ್ ಪ್ಯಾಕ್‌ನಲ್ಲಿ ಹೊಸ ಸ್ಟಿಕ್ಕರ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಅಪ್ಲಿಕೇಶನ್ ಸೆಟ್ಟಿಂಗ್‌ಗಳಲ್ಲಿಯೇ ಅವತಾರ್ ಅನ್ನು ಕಸ್ಟಮೈಸ್ ಮಾಡಬಹುದು. ಒಮ್ಮೆ ಬಳಕೆದಾರರು ತಮ್ಮ ಅವತಾರವನ್ನು ಕ್ರಿಯೆಟ್ ಮಾಡಿದ ನಂತರ ಅದನ್ನು ಪ್ರೊಫೈಲ್ ಫೋಟೋ ಆಗಿ ಕೂಡ ಬಳಸಬಹುದಾಗಿದೆ. ಅಲ್ಲದೆ ಅವತಾರ್‌ಗಳನ್ನು ಚಾಟ್‌ಗಳು ಮತ್ತು ಗ್ರೂಪ್ ಚಾಟ್‌ಗಳೊಂದಿಗೆ ಕೂಡ ಶೇರ್ ಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್ ವಿಭಿನ್ನ ಭಾವನೆಗಳು ಮತ್ತು ರಿಯಾಕ್ಷನ್‌ಗಳಿಗೆ ಅನುಗುಣವಾಗಿ ಅವತಾರ್‌ಗಳನ್ನು ಕಸ್ಟಮೈಸ್ ಮಾಡಲಿದೆ.

ಇನ್ನು ವಾಟ್ಸಾಪ್ ನಲ್ಲಿ ಅವತಾರ್ ಅನ್ನು ಕಾನ್ಫಿಗರ್ ಮಾಡಿದ ನಂತರ ಆಟೋಮ್ಯಾಟಿಕ್ ಆಗಿ ಸ್ಟಿಕ್ಕರ್ ಪ್ಯಾಕ್ ರಚನೆಯಾಗುತ್ತದೆ . ನಂತರ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆ ಎಲ್ಲಾ ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಬಹುದು. ಇದಿಷ್ಟೇ ಅಲ್ಲದೆ, ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವಾಗಿಯೂ ಬಳಕೆ ಮಾಡಿಕೊಳ್ಳಬಹುದು. ಅವಾತರ್ ಸ್ಟಿಕ್ಕರ್ ಮೂಲಕ ತಮ್ಮ ವರ್ಚುವಲ್ ಗುರುತನ್ನು ವೈಯಕ್ತೀಕರಿಸಿಕೊಳ್ಳಲು ಬಳಕೆದಾರರಿಗೆ ಸುಲಭ ಮಾರ್ಗವಾಗಿದೆ.
ಇದಲ್ಲದೆ ವಾಟ್ಸಾಪ್ ತನ್ನ ಐಒಎಸ್ ಆವೃತ್ತಿಯಲ್ಲಿ ಗ್ರೂಪ್ ಮೆಸೇಜ್ ರಿಯಾಕ್ಷನ್ ಆಯ್ಕೆಯನ್ನು ನೀಡಲು ಮುಂದಾಗಿದೆ. ಅದರಂತೆ ಐಒಎಸ್ ಬಳಕೆದಾರರು ಅನೌನ್ಸ್‌ಮೆಂಟ್ ಗ್ರೂಪ್ ಸಂದೇಶಗಳಿಗೆ ರಿಯಾಕ್ಷನ್ ನೀಡುವ ಅವಕಾಶ ಸಿಗಲಿದೆ. ಈ ಅವಕಾಶವನ್ನು ಬಳಸಿಕೊಂಡು ಬಳಕೆದಾರರು ಅನೌನ್ಸ್‌ಮೆಂಟ್ ಗ್ರೂಪ್‌ಗಳಲ್ಲಿ ಸಂದೇಶಗಳಿಗೆ ರಿಯಾಕ್ಷನ್ ನೀಡಬಹುದಾಗಿದೆ. ಪ್ರಸ್ತುತ ಈ ಫೀಚರ್ಸ್ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಐಒಎಸ್ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

ಇದರ ನಡುವೆ ವಾಟ್ಸಾಪ್ ಈ ತಿಂಗಳ ಆರಂಭದಲ್ಲಿ ಸ್ಟೇಟಸ್ ವಿಭಾಗದಲ್ಲಿ ಹೊಸ ಬದಲಾವಣೆ ತಂದಿದ್ದು, ಈ ಮೂಲಕ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಆಯ್ದ ಗ್ರೂಪ್‌ನೊಂದಿಗೆ ಶೇರ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಹಾಗೆಯೇ ಬೇರೆಯವರ ಸ್ಟೇಟಸ್‌ಗೆ ಎಮೋಜಿಯೊಂದಿಗೆ ಪ್ರತ್ಯುತ್ತರಿಸಲು, ವಾಯ್ಸ್ ನೋಟ್ ಅನ್ನು ರೆಕಾರ್ಡ್ ಮಾಡಲು ಇದು ಅನುಮತಿಸಲಿದ್ದು, ಹೆಚ್ಚು ಆಕರ್ಷಕವಾಗಿದೆ.
ಇದಲ್ಲದೆ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್ ಮಾಡುವವರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಕಾಲಿಂಗ್ ಶಾರ್ಟ್‌ಕಟ್ ಫೀಚರ್ಸ್ ವಾಟ್ಸಾಪ್ ಅಪ್ಲಿಕೇಶನ್ ತೆರೆಯದೆಯೇ ಕಾಲ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ವಾಟ್ಸಾಪ್‌ನಲ್ಲಿ ನೀವು ಕಾಲ್ ಮಾಡಬೇಕಾದರೆ ಕಂಟ್ಯಾಕ್ಟ್ ಲಿಸ್ಟ್ ತೆಗೆದು ಹೆಸರನ್ನು ಸರ್ಚ್ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ. ಬದಲಿಗೆ ನೀವು ಶಾರ್ಟ್‌ಕಟ್ ಆಯ್ಕೆಯಲ್ಲಿರಿಸಿರುವ ಕಂಟ್ಯಾಕ್ಟ್ ಮೇಲೆ ಕ್ಲಿಕ್ ಮಾಡಿದರೆ ಅವರಿಗೆ ನೇರವಾಗಿ ಕರೆ ಹೋಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಬೇಕಾದ ಅವಶ್ಯಕತೆಯಿರುವುದಿಲ್ಲ ಅನ್ನೊದು ವಾಟ್ಸಾಪ್‌ನ ಐಡಿಯಾ ಆಗಿದೆ. ಈ ಹೊಸ ಫೀಚರ್ಸ್ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವಷ್ಟು ಸುಲಭವಾಗಿ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ.


Click it and Unblock the Notifications








