ಇನ್ಮುಂದೆ ವಾಟ್ಸಾಪ್‌ನಲ್ಲಿ ಈ ಕಾಟ ಇರುವುದಿಲ್ಲ: ವಾಟ್ಸಾಪ್‌ನ ದಿಟ್ಟ ನಡೆಗೆ ಥ್ಯಾಂಕ್ಯು ಹೇಳಲೇಬೇಕು!
ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ವಾಟ್ಸಾಪ್ ಮೂಲಕ ನಕಲಿ ಲಿಂಕ್‌ಗಳನ್ನು ಕಳುಹಿಸುವ ಪ್ರಕರಣಗಳು ಹೆಚ್ಚುತ್ತಿವೆ. ಫಿಶಿಂಗ್ ಸ್ಕ್ಯಾಮ್‌ಗಳಿಂದ ಲಕ್ಷಾಂತರ ಜನರು ಹಣ ಮತ್ತು ತಮ್ಮ ಪರ್ಸನಲ್ ಡೇಟಾವನ್ನು ಕಳೆದುಕೊಂಡಿರುವ ಘಟನೆಗಳು ವರದಿಯಾಗಿವೆ. ಇದೀಗ ಈ ರೀತಿಯ ಪ್ರಯತ್ನಗಳಿಗೆ ತಡೆ ಹಾಕುವುದಕ್ಕೆ ವಾಟ್ಸಾಪ್ ಹೊಸ ಫೀಚರ್ಸ್ ಅಭಿವೃದ್ದಿಪಡಿಸಿದೆ.
ಹೌದು, ವಾಟ್ಸಾಪ್ ಫಿಶಿಂಗ್ ಸ್ಕ್ಯಾಮ್‌ಗಳನ್ನು ತಡೆಗಟ್ಟುವುದಕ್ಕಾಗಿ ಹೊಸ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಹೊಸ ಫೀಚರ್ಸ್ ಅನ್ನು ಅಭಿವೃದ್ಧಿ ಪಡಿಸಿದ್ದು, ಫಿಶಿಂಗ್ ಸಂದೇಶವನ್ನು ತೆರೆಯದೆಯೇ ಸಂಪರ್ಕವನ್ನು ತ್ವರಿತವಾಗಿ ನಿರ್ಬಂಧಿಸಲು ಬಳಕೆದಾರರಿಗೆ ಸುಲಭಗೊಳಿಸುತ್ತದೆ. ಹಾಗಾದ್ರೆ ಈ ಹೊಸ ಫೀಚರ್ಸ್ ವಾಟ್ಸಾಪ್‌ನಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್ ಅನ್ನು ಪರಿಚಯಿಸಲಾಗಿದೆ. ಇದರಿಂದ ಫಿಶಿಂಗ್ ಪ್ರಯತ್ನವನ್ನು ಹೇಗೆ ಗುರುತಿಸುವುದು, ಕಾಗುಣಿತ ಅಥವಾ ವ್ಯಾಕರಣ ತಪ್ಪುಗಳು, ಲಿಂಕ್ ಅನ್ನು ಕ್ಲಿಕ್ ಮಾಡಲು ಬಳಕೆದಾರರನ್ನು ಕೇಳುವುದು, ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಬಳಕೆದಾರರನ್ನು ಕೇಳುವುದು ಇಂತಹ ಸಂದೇಶಗಳ ಬಗ್ಗೆ ಅರಿವು ಶಿಕ್ಷಣ ನೀಡುವ ಕೆಲಸ ಮಾಡಲಿದೆ. ಅಲ್ಲದೆ ಹಣಕಾಸಿನ ಲಾಭಕ್ಕಾಗಿ ಸಂದೇಶವನ್ನು ಫಾರ್ವರ್ಡ್ ಮಾಡಲು ಕೇಳುವುದು ಹೇಗೆ ಎಂಬುದರ ಕುರಿತು ವಾಟ್ಸಾಪ್ ಬಳಕೆದಾರರಿಗೆ ಅರಿವು ಮೂಡಿಸಲಿದೆ.
ವಾಟ್ಸಾಪ್‌ನಲ್ಲಿ ಫಿಶಿಂಗ್ ಮತ್ತು ಸ್ಮಿಶಿಂಗ್ ಪ್ರಯತ್ನಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದರಲ್ಲಿ ಸೈಬರ್ ಅಪರಾಧಿಗಳು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಹುಮಾನ, ಹಣವನ್ನು ನೀಡುವ ಆಮಿಷವನ್ನು ಒಡ್ಡುವ ಮೂಲಕ ಬಳಕೆದಾರರನ್ನು ಲಿಂಕ್ ಕ್ಲಿಕ್ ಮಾಡಲು ಪ್ರಚೋದಿಸುತ್ತಾರೆ. ಇಂತಹ ಆಮಿಷಗಳಿಗೆ ಬಲಿಯಾಗುವ ಸಂತ್ರಸ್ಥರಿಂದ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಪಡೆದುಕೊಳ್ಳುವ ವಂಚಕರು ಮೋಸ ಮಾಡುವುದು ಸಾಮಾನ್ಯವಾಗಿದೆ.

ಇಂತಹ ದುರ್ಘಟನೆಗಳನ್ನು ತಡೆಯಲು, ವಾಟ್ಸಾಪ್ ಅಪರಿಚಿತ ಸಂಖ್ಯೆಗಳು ಮತ್ತು ಸಂಖ್ಯೆಯನ್ನು ವರದಿ ಮಾಡುವ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ವಾಟ್ಸಾಪ್ ಸಂಖ್ಯೆಗಳನ್ನು ವಿಶ್ಲೇಷಿಸಲಿದೆ ಹಾಗೂ ಪ್ಲಾಟ್‌ಫಾರ್ಮ್‌ನಿಂದ ಅಂತಹ ಅಕೌಂಟ್‌ಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲಿದೆ. ಅಂದರೆ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯು ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ತೆರೆಯದೆಯೇ ಅಪರಿಚಿತ ಸಂಖ್ಯೆಯ ಬರುವ ಸಂದೇಶವನ್ನು ನಿರ್ಬಂಧಿಸಲು ಅನುಮತಿಸಲಿದೆ.
ಇದಲ್ಲದೆ ವಾಟ್ಸಾಪ್ ಲಾಕ್ ಸ್ಕ್ರೀನ್‌ನೊಳಗೆ ಸಂದೇಶವನ್ನು ಬ್ಲಾಕ್ ಮಾಡುವುದಕ್ಕಾಗಿ ಎರಡು ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ ಪ್ರತ್ಯುತ್ತರ ನೀಡಿ ಮತ್ತು ಅವುಗಳನ್ನು ನಿಮ್ಮ ಸಂಪರ್ಕಕ್ಕೆ ಸೇರಿಸಿ ಅಥವಾ ನಿರ್ಬಂಧಿಸಿ ಮತ್ತು ಸಂಖ್ಯೆಯನ್ನು ವರದಿ ಮಾಡಿ ಆಯ್ಕೆಗಳು ಸೇರಿವೆ. ಇದರ ಮೇಲೆ, ಇದು ಸುರಕ್ಷತಾ ಡಿವೈಸ್‌ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ. ಇದರಿಂದ ವಾಟ್ಸಾಪ್ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದು ಬಳಕೆದಾರರು ಅನಗತ್ಯ ಸಂಪರ್ಕವನ್ನು ತ್ವರಿತವಾಗಿ ಗುರುತಿಸುವುದಕ್ಕೆ ಮತ್ತು ಬ್ಲಾಕ್ ಮಾಡುವುದಕ್ಕೆ ಅವಕಾಶ ಸಿಗಲಿದೆ.

ವಾಟ್ಸಾಪ್‌ನಲ್ಲಿ ಕಂಟ್ಯಾಕ್ಟ್ ಅನ್ನು ಯಾವಾಗ ಬ್ಲಾಕ್ ಮಾಡಬೇಕು?
ಅನಗತ್ಯ ಸಂದೇಶಗಳು ಬಂದಾಗ, ಕಿರುಕುಳ ನೀಡುವ ಸಂದೇಶಗಳನ್ನು ಸ್ವೀಕರಿಸಿದಾಗ ಬ್ಲಾಕ್ ಮಾಡುವುದು ಸಾಮಾನ್ಯವಾಗಿದೆ. ಸ್ಪ್ಯಾಮಿಂಗ್ ಅಥವಾ ಅನುಮಾನಾಸ್ಪದ ನಡವಳಿಕೆಯನ್ನು ಅನುಭವ ನೀಡುವ ಯಾವುದೇ ಸಂದೇಶ ಬಂದರೂ ಅದನ್ನು ಬ್ಲಾಕ್ ಮಾಡವುದು ಸೂಕ್ತ.
ವಾಟ್ಸಾಪ್ ಕಂಟ್ಯಾಕ್ಟ್ ಬ್ಲಾಕ್ ಮಾಡುವುದು ಹೇಗೆ?
ವೈಯಕ್ತಿಕ ಚಾಟ್ ನಲ್ಲಿ ಕಂಟ್ಯಾಕ್ಟ್‌ಗಳನ್ನು ಬ್ಲಾಕ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಅನಗತ್ಯ ಸಂಪರ್ಕದಿಂದ ಸಂದೇಶದ ಚಾಟ್ ತೆರೆಯಿರಿ
* ಚಾಟ್ ಮಾಹಿತಿ ಐಕಾನ್ ಮೇಲೆ ಟ್ಯಾಪ್ ಮಾಡಿ
* ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಬ್ಲಾಕ್ (Block) ಮೇಲೆ ಟ್ಯಾಪ್ ಮಾಡಿ
* Block ಅನ್ನು ಮತ್ತೊಮ್ಮೆ ಟ್ಯಾಪ್ ಮಾಡುವ ಮೂಲಕ ಕಂಟ್ಯಾಕ್ಟ್ ಅನ್ನು ಬ್ಲಾಕ್ ಮಾಡಬಹುದು


Click it and Unblock the Notifications








