10 ದಿನದಲ್ಲಿ 1,30,000 ಅಕೌಂಟ್ ಗಳನ್ನು ಬ್ಲಾಕ್ ಮಾಡಿದ ವಾಟ್ಸ್ ಆಪ್- ಕಾರಣ ಏನು ಗೊತ್ತಾ?
ಭಾರತವೂ ಸೇರಿದಂತೆ ವಿಶ್ವದ ಹಲವೆಡೆಗಳಲ್ಲಿ ವಾಟ್ಸ್ ಆಪ್ ನಲ್ಲಿ ಮಕ್ಕಳ ಅಶ್ಲೀಲತೆಯ ಬಗ್ಗೆ ವೀಡಿಯೋಗಳು ಮತ್ತು ಫೋಟೋಗಳು ಹರಿದಾಡುವ ಬಗ್ಗೆ ಪದೇ ಪದೇ ವರದಿಯಾದ ಹಿನ್ನೆಲೆಯಲ್ಲಿ ಇದೀಗ ವಾಟ್ಸ್ ಆಪ್ ದಿಟ್ಟ ಕ್ರಮವನ್ನು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.

1,30,000 ಖಾತೆಗಳು ಬ್ಲಾಕ್:
ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಫೋಟೋ ಮತ್ತು ಕ್ಲಿಪ್ಪಿಂಗ್ ಗಳನ್ನು ಹಂಚುತ್ತಿದ್ದ ಸುಮಾರು 1,30,000 ಅಕೌಂಟ್ ಗಳನ್ನು ಕೇವಲ 10 ದಿನಗಳಲ್ಲಿ ವಾಟ್ಸ್ ಆಪ್ ಬ್ಲಾಕ್ ಮಾಡುವುದು ಮತ್ತು ರಿಮೂವ್ ಮಾಡುವ ಮೂಲಕ ಕಠಿಣ ಕ್ರಮವನ್ನು ತೆಗೆದುಕೊಂಡಿದೆ.

ಎಐ ಟೂಲ್ ಬಳಸಿ ಖಾತೆಗಳ ಗುರುತಿಸುವಿಕೆ:
ಕಂಪೆನಿಯು ಎಐ ಟೂಲ್ ಬಳಸಿ ಇಂತಹ ಅಕೌಂಟ್ ಗಳನ್ನು ಗುರುತಿಸಿದ್ದು ಭಾಗಶಃ ಕಾನೂನುಬಾಹಿರ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಬಗ್ಗೆ ತಿಳಿದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಯಿತು.

ತನಿಖೆಗೆ ಸಹಾಯ ನೀಡಿದ ವಾಟ್ಸ್ ಆಪ್:
ಇದಿಷ್ಟೇ ಅಲ್ಲ ಅಕೌಂಟ್ ಗಳನ್ನು ಬ್ಲಾಕ್ ಮಾಡುವುದು ಮತ್ತು ರಿಮೂವ್ ಮಾಡುವುದರ ಜೊತೆಗೆ ವಾಟ್ಸ್ ಆಪ್ ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಯುಎಸ್ ನಲ್ಲಿರುವ ಶೋಷಿತ ಮತ್ತು ಕಾಣೆಯಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ ನೀಡಿದೆ. ಆ ಮೂಲಕ ಕಾನೂನು ಜಾರಿ ಸಂಸ್ಥೆಗಳಿಗೆ ಮಕ್ಕಳ ಅಶ್ಲೀಲತೆಯ ಕುರಿತಂತೆ ನಡೆಸುವ ತನಿಖೆಗೆ ಸಹಾಯವಾಗುವ ಸಾಧ್ಯತೆ ಇದೆ.

ಕೃತಕ ಬುದ್ಧಿಮತ್ತೆಯ ಬಳಕೆ:
ವಾಟ್ಸ್ ಆಪ್ ಮೆಸೇಜ್ ಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿರುತ್ತದೆ. ಅಂದರೆ ಜನರು ಏನನ್ನು ಹಂಚಿಕೊಳ್ಳುತ್ತಾರೆ ಎಂಬುದನ್ನು ಕಂಪೆನಿ ನೋಡುವುದಕ್ಕೆ ಸಾಧ್ಯವಿಲ್ಲ. ಆದರೆ ಇದೀಗ ಎಐ-ಆಧಾರಿತ ಟೂಲ್ ಗಳ ಇಂಜಿನಿಯರಿಂಗ್ ಆಪ್ಸ್ ಗಳ ಸಹಾಯದಿಂದಾಗಿ ಎನ್ಕ್ರಿಪ್ಟೆಡ್ ಮಾಹಿತಿಗಳು ಉದಾಹರಣೆಗೆ ಪ್ರೊಫೈಲ್ ಫೋಟೋಗಳು, ಗ್ರೂಪ್ ಪ್ರೊಫೈಲ್ ಫೋಟೋಗಳು ಮತ್ತು ಸಂಭಾವ್ಯವಾಗಿ ದುರುಪಯೋಗ ಮಾಡುತ್ತಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಫೋಟೋDNA:
ಫೋಟೋDNA ಅನ್ನುವ ಟೆಕ್ನಿಕ್ ನ್ನು ಕೂಡ ವಾಟ್ಸ್ ಆಪ್ ಬಳಸುತ್ತಿದೆ. ಇದನ್ನು ಫೇಸ್ ಬುಕ್ ಕೂಡ ಅಶ್ಲೀಲ ಮತ್ತು ನಿಂದನೀಯ ಚಿತ್ರಗಳ ಗುರುತಿಸುವಿಕೆಗಾಗಿ ಬಳಸಿದೆ. ಫೋಟೋDNA ಬಳಸಿ ಸಂಭಾವ್ಯವಾಗಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ಅಕೌಂಟ್ ಗಳ ಬಗ್ಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ.

ಅನುಕಂಪ ತೋರುವುದಿಲ್ಲ:
ಈ ವರದಿಯು ಹೊರಬಂದ ನಂತರ ವಾಟ್ಸ್ ಆಪ್ ಬಳಕೆದಾರರು ಮತ್ತು ಗುಂಪುಗಳೊಂದಿಗೆ ಅಪ್ಲಿಕೇಷನ್ ದುರುಪಯೋಗಪಡಿಸಿಕೊಂಡ ಜನರಿಗೆ ಶೂನ್ಯ ಸೈರಣೆ ನೀಡಲಾಗುತ್ತದೆ ಅರ್ಥಾತ್ ಯಾವುದೇ ಅನುಕಂಪವನ್ನು ವಾಟ್ಸ್ ಆಪ್ ತೋರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ವಾಟ್ಸ್ ಆಪ್ ವಕ್ತಾರರ ಹೇಳಿಕೆ:
ಮಕ್ಕಳ ಲೈಂಗಿಕ ದುರುಪಯೋಗದ ಸುತ್ತ ವಾಟ್ಸ್ ಆಪ್ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ನಾವು ಕೃತಕ ಬುದ್ಧಿಮತ್ತೆ ಬಳಸಿ ಬಹಳ ನೂತನವಾಗಿರುವ ತಂತ್ರಗಾರಿಕೆಯನ್ನು ಬಳಸಿ ಪ್ರೊಫೈಲ್ ಫೋಟೋ ಸ್ಕ್ಯಾನ್ ಮಾಡುವಿಕೆ ಮತ್ತು ಕೆಟ್ಟ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ವಾಟ್ಸ್ ಆಪ್ ಮುಂದಾಗಿದೆ. ವಿಶ್ವದಾದ್ಯಂತ ಮತ್ತು ಭಾರತದಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ನಾವು ಪ್ರತ್ಯುತ್ತರವನ್ನು ಕೂಡ ನೀಡಿದ್ದೇವೆ. ದುರಂತದ ವಿಚಾರವೇನೆಂದರೆ ಆಪ್ ಸ್ಟೋರ್ಸ್ ಮತ್ತು ಕಮ್ಯುನಿಕೇಷನ್ ಸೇವೆಗಳು ಎರಡನ್ನೂ ಕೂಡ ಕೆಟ್ಟ ಚಟುವಟಿಕೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಟೆಕ್ನಾಲಜಿ ಸಂಸ್ಥೆಗಳು ಒಟ್ಟಿಗೆ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ವಾಟ್ಸ್ ಆಪ್ ನ ವಕ್ತಾರರು ಅಭಿಪ್ರಾಯ ಪಟ್ಟಿದ್ದಾರೆ.

ಗೂಗಲ್ ಮತ್ತು ಆಪಲ್ ಜೊತೆಗೆ ಮಾತುಕತೆ:
ಜನರು ಅಥವಾ ಗುಂಪುಗಳು ಅಥವಾ ಯಾವುದೇ ಪಬ್ಲಿಕೇಷನ್ ಗಳಿಗೆ ಇನ್ವೈಟ್ ಲಿಂಕ್ ಗಳನ್ನು ಪ್ರೈವೇಟ್ ಗುಂಪುಗಳಿಗೆ ಕಳುಹಿಸುವುದಕ್ಕೆ ಕಂಪೆನಿ ಪ್ರೊತ್ಸಾಹ ನೀಡುವುದಿಲ್ಲ. ವಾಟ್ಸ್ ಆಪ್ ಈಗಾಗಲೇ ಗೂಗಲ್ ಮತ್ತು ಆಪಲ್ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದು ಥರ್ಡ್ ಪಾರ್ಟಿ ಆಪ್ ಗಳನ್ನು ವಾಟ್ಸ್ ಆಪ್ ಖಚಿತಪಡಿಸಿಕೊಳ್ಳುತ್ತಿದೆ ಅಥವಾ ಗ್ರೂಪ್ ಲಿಂಕ್ ನ್ನು ಐಓಎಸ್ ಅಥವಾ ಪ್ಲೇ ಸ್ಟೋರ್ ನಲ್ಲಿ ಯಾವುದೇ ಫೀಚರ್ ಮೂಲಕ ದೊರಕದಂತೆ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದೆ.

ಇನ್ನೊಂದು ದೂರು:
ಆದರೆ ವಾಟ್ಸ್ ಆಪ್ ಬಳಕೆದಾರರಿಂದ ಒಂದು ದೊಡ್ಡ ದೂರನ್ನು ಕೂಡ ವಾಟ್ಸ್ ಆಪ್ ಎದುರಿಸುತ್ತಿದೆ. ಒಂದು ವೇಳೆ ಯಾವುದೇ ವ್ಯಕ್ತಿಯ ಬಳಿ ಬಳಕೆದಾರರ ನಂಬರ್ ಇದ್ದಲ್ಲಿ ಬಳಕೆದಾರರ ಅನುಮತಿ ಇಲ್ಲದೆಯೇ ಒಬ್ಬ ವ್ಯಕ್ತಿ ಅವರನ್ನು ಒಂದು ಗುಂಪಿಗೆ ಸೇರಿಸುವುದಕ್ಕೆ ಅವಕಾಶವಿರುತ್ತದೆ ಮತ್ತು ಒಂದು ವೇಳೆ ಆ ಗುಂಪಿನ ಅಡ್ಮಿನ್ ಆಗಿದ್ದ ವ್ಯಕ್ತಿ ಗುಂಪನ್ನು ತೊರೆದರೆ ಸ್ವಯಂಚಾಲಿತವಾಗಿ ಗುಂಪಿನ ಇನ್ನೊಬ್ಬ ಸದಸ್ಯ ಅನುಮತಿ ಇಲ್ಲದೆಯೇ ಅಡ್ಮಿನ್ ಆಗಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಬಳಕೆದಾರರಿಗೆ ಆಕ್ಷೇಪವಿದೆ. ಈ ನಿಟ್ಟಿನಲ್ಲೂ ಕೂಡ ವಾಟ್ಸ್ ಆಪ್ ಕಾರ್ಯ ನಿರ್ವಹಿಸುತ್ತಿದೆ.


Click it and Unblock the Notifications








