WhatsApp:ವಾಟ್ಸಾಪ್‌ನ ಈ ಜನಪ್ರಿಯ ಫೀಚರ್ಸ್‌ನಲ್ಲಿ ಅಚ್ಚರಿಯ ಬದಲಾವಣೆ! ಇದರಿಂದ ನಿಮಗೇನು ಲಾಭ!
ವಾಟ್ಸಾಪ್ ತನ್ನ ಜನಪ್ರಿಯ ಫೀಚರ್ಸ್ ವ್ಯೂ ಒನ್ಸ್ (view once ) ಅನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ವೀಡಿಯೋ ಮತ್ತು ಇಮೇಜ್‌ಗಳನ್ನು ಒಮ್ಮೆ ವೀಕ್ಷಿಸಿದ ನಂತರ ಮರೆಯಾಗುವಂತೆ ಮಾಡುವ ಈ ಫೀಚರ್ಸ್ ಇದೀಗ ಆಡಿಯೋ ಸಂದೇಶಗಳಿಗೂ ಕೂಡ ಅನ್ವಯಿಸಲಿದೆ.
ಹೌದು, ವಾಟ್ಸಾಪ್ (WhatsApp) ಆಡಿಯೋ ಸಂದೇಶಗಳಿಗಾಗಿ "ವ್ಯೂ ಒನ್ಸ್" ಫೀಚರ್ಸ್ ಅನ್ನು ವಿಸ್ತರಿಸಿದೆ. ಇಂದಿನಿಂದಲೇ ಈ ಹೊಸ ಬದಲಾವಣೆಯು ಜಾಗತಿಕವಾಗಿ ಎಲ್ಲರಿಗೂ ಲಬ್ಯವಾಗಲಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ ವ್ಯೂ ಒನ್ಸ್ ಹೇಗೆ ಕಾರ್ಯನಿರ್ವಹಿಸಲಿದೆಯೋ ಅದೇ ಮಾದರಿಯಲ್ಲಿಯೇ ಆಡಿಯೋ ಸಂದೇಶಗಳಿಗೂ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಆಡಿಯೋ ಸಂದೇಶಗಳಿಗೆ ವ್ಯೂ ಒನ್ಸ್ ಅನ್ನು ಸೆಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ವ್ಯೂ ಒನ್ಸ್ ಫೀಚರ್ಸ್ ಇದೀಗ ಆಡಿಯೋ ಸಂದೇಶದಲ್ಲಿಯೂ ಕಾರ್ಯನಿರ್ವಹಿಸಲಿದೆ. ವ್ಯೂ ಒನ್ಸ್ ಆಯ್ಕೆಯನ್ನು ಆನ್ ಮಾಡಿದ್ದರೆ ನೀವು ಆಡಿಯೋ ಸಂದೇಶವನ್ನು ಕೇಳಿಸಿಕೊಂಡ ನಂತರ ಅದು ಕಣ್ಮರೆಯಾಗಲಿದೆ. ಇದು ಎಲ್ಲಾ ವೈಯಕ್ತಿಕ ಸಂದೇಶಗಳಿಗೂ ಅನ್ವಯಿಸಬಹುದಾಗಿದೆ. ಇನ್ನು ವ್ಯೂ ಒನ್ಸ್ ಆಡಿಯೋ ಸಂದೇಶಗಳು ಕೂಡ ಎಂಡ್ ಟು ಎಂಡ್ ಎನ್‌ಕ್ರಿಪ್ಯನ್ ಹೊಂದಿರಲಿದೆ ಎಂದು ವಾಟ್ಸಾಪ್ ಹೇಳಿದೆ.
ವಾಟ್ಸಾಪ್‌ನಲ್ಲಿ ವ್ಯೂ ಒನ್ಸ್ ಆಡಿಯೋ ಸಂದೇಶವನ್ನು ಸೆಂಡ್ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್‌ನಲ್ಲಿ ಪರ್ಸನಲ್ ಅಥವಾ ಗ್ರೂಪ್ ಚಾಟ್ ತೆರೆಯಿರಿ
* ನಂತರ ಮೈಕ್ರೊಫೋನ್ ಟ್ಯಾಪ್ ಮಾಡಿ
* ಇದರಲ್ಲಿ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಮೇಲಕ್ಕೆ ಸ್ವೈಪ್ ಮಾಡಿ
* ನಂತರ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ
* ಇದೀಗ ಬಟನ್ ಹಸಿರು ಬಣ್ಣಕ್ಕೆ ತಿರುಗಿದಾಗ, ವ್ಯೂ ಒನ್ಸ್ ಮೋಡ್ ಆನ್ ಆಗಲಿದೆ
* ನಂತರ ನೀವು ಸಂದೇಶವನ್ನು ಸೆಂಡ್ ಬಟನ್ ಟ್ಯಾಪ್ ಮಾಡಿ
* ಇದೀಗ ನೀವು ಕಳುಹಿಸುವ ಸಂದೇಶವನ್ನು ಸ್ವೀಕರಿಸುವವರು ಆಡಿಯೋ ಸಂದೇಶ ಪ್ಲೆ ಮಾಡಿದ ನಂತರ ಆಟೋಮ್ಯಾಟಿಕ್ ಕಣ್ಮರೆಯಾಗಲಿದೆ.

ವಾಟ್ಸಾಪ್‌ನಲ್ಲಿ ಆಡಿಯೋ ಸಂದೇಶಗಳಿಗೆ ವ್ಯೂ ಒನ್ಸ್ ಸೆಟ್ ಮಾಡುವ ಮುನ್ನ ಇಲ್ಲಿ ಗಮನಿಸಿ
ವ್ಯೂ ಒನ್ಸ್ ಸಂದೇಶವನ್ನು ಕಳುಹಿಸುವುದಕ್ಕೆ ಪ್ರತಿ ಬಾರಿ ವ್ಯೂ ಒನ್ಸ್ ಅನ್ನು ಆಯ್ಕೆಯನ್ನು ಆರಿಸಬೇಕಾಗುತ್ತದೆ. ಒನ್ಸ್ ವ್ಯೂ ನಲ್ಲಿ ನೀವು ಆಡಿಯೋ ಸಂದೇಶಗಳನ್ನು ವೀಕ್ಷಿಸಿದರೆ ಮತ್ತೊಮ್ಮೆ ನೋಡಲಾಗುವುದಿಲ್ಲ. ಅದನ್ನು ತೆರೆಯಲಾಗಿದೆಯೇ ಎಂದು ಪರಿಶೀಲಿಸಲು, ಸ್ವೀಕರಿಸುವವರು ರೀಡ್ ರೆಸಿಪ್ಟ್‌ಗಳನ್ನು ಓದಿರಬೇಕಾಗುತ್ತದೆ. ಇದಲ್ಲದೆ ಈ ವ್ಯೂ ಒನ್ಸ್ ಸಂದೇಶಗಳನ್ನು ನಿಮ್ಮ ಡಿವೈಸ್‌ನಲ್ಲಿ ಸೇವ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ರೆಕಾರ್ಡ್ ಮಾಡಲಾಗುವುದಿಲ್ಲ.
ನೀವು ವಾಯ್ಸ್ ಮೆಸೇಜ್ ಅನ್ನು ವ್ಯೂ ಒನ್ಸ್‌ನಲ್ಲಿ ಕಳುಹಿಸಿದ 14 ದಿನಗಳಲ್ಲಿ ತೆರೆಯಬೇಕು. ಒಂದು ವೇಳೆ ನೀವು ಆ ಸಂದೇಶವನ್ನು ಕೇಳದಿದ್ದರೆ ಸಂದೇಶದ ಅವಧಿ ಮೀರಲಿದ್ದು, ಚಾಟ್‌ನಿಂದ ಕಣ್ಮರೆಯಾಗುತ್ತದೆ. ಇದಲ್ಲದೆ ವ್ಯೂ ಒನ್ಸ್ ಸಂದೇಶದ ಮೀಡಿಯಾ ಅಥವಾ ಆಡಿಯೋ ಸಂದೇಶಗಳನ್ನು ಯಾರಿಗೂ ಕೂಡ ಫಾರ್ವರ್ಡ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ಸ್ವೀಕರಿಸುವ ಯಾವುದೇ ಮಿಡಿಯಾದ ಸ್ಕ್ರೀನ್‌ಶಾಟ್ ಅನ್ನು ನೀವು ತೆಗೆದುಕೊಳ್ಳಲು ಸಾಧ್ಯವಿಲ್ಲ.

ಇದಲ್ಲದೆ ವಾಟ್ಸಾಪ್ ಮತ್ತೊಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ಸ್ ನಿಮಗೆ ವಾಟ್ಸಾಪ್‌ನಲ್ಲಿ ಬಳಕೆದಾರ ಫೋನ್ ನಂಬರ್ ಇಲ್ಲದೆ ಅವರ ಹೆಸರಿನ ಮೂಲಕವೇ ಸರ್ಚ್ ಮಾಡುವುದಕ್ಕೆ ಅನುಮತಿಸಲಿದೆ ಎನ್ನಲಾಗಿದೆ. ಈ ಮೂಲಕ ಯಾರೆಲ್ಲಾ ತಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲವೋ ಅವರು ಬಳಕೆದಾರ ಹೆಸರನ್ನು ಕ್ರಿಯೇಟ್ ಮಾಡಿ ಈ ಮೂಲಕ ಇತರರೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ. ಈ ಫೀಚರ್ಸ್ ಮೇಲೆ ಬಳಕೆದಾರರಿಗೆ ಸಂಪೂರ್ಣ ನಿಯಂತ್ರಣವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.


Click it and Unblock the Notifications








