ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ ಘೋಷಣೆ ಮಾಡಿದ ವಾಟ್ಸಾಪ್‌!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸಧ್ಯ ಇದೀಗ ತನ್ನ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ ಪರಿಚಯಿಸಿದೆ. ಇನ್ನು ಈ ಫೀಚರ್ಸ್‌ ಅನ್ನು ಮೊದಲು ಪರೀಕ್ಷಾ ಹಂತದಲ್ಲಿ ಗುರುತಿಸಲಾಗಿದ್ದು, ಇದು ಗ್ರೂಪ್‌ಗಳ ಗ್ರೂಪ್‌ನಂತಿದೆ. ಇನ್ನು ವಾಟ್ಸಾಪ್‌ ಕಮ್ಯೂನಿಟಿ ವ್ಯಾಪ್ತಿಯು ಸಾಮಾನ್ಯ ವಾಟ್ಸಾಪ್‌ ಗ್ರೂಪ್‌ಗಳಿಗಿಂತ ತುಂಬಾ ಹೆಚ್ಚಿರಬಹುದು ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಕಮ್ಯೂನಿಟಿ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಈ ಪೀಚರ್ಸ್‌ ವಾಟ್ಸಾಪ್‌ ಗ್ರೂಪ್‌ಗಳ ಗ್ರೂಪ್‌ ಮಾದರಿಯಲ್ಲಿದ್ದು, ತುಂಬಾ ವಿಸ್ತರವಾದ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಕಮ್ಯೂನಿಟಿ ಫೀಚರ್ಸ್‌ ಮೂಲಕ ಪರಸ್ಪರ ತಿಳಿದಿರುವ ಮತ್ತು ತಮ್ಮ ಆಸಕ್ತಿಗೆ ಅನುಗುಣವಾಗಿ ಸುತ್ತಲೂ ಸಂಘಟಿತವಾಗಿರುವ ಸಂಪರ್ಕಗಳನ್ನು ಹೊಂದಿರುವ ಗುಂಪುಗಳ ಪ್ರಕಾರವಾಗಿದೆ. ಹಾಗಾದ್ರೆ ವಾಟ್ಸಾಪ್‌ ಕಮ್ಯೂನಿಟಿ ವಾಟ್ಸಾಪ್‌ ಗ್ರೂಪ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಕಮ್ಯೂನಿಟಿ ವಾಟ್ಸಾಪ್‌ ಗ್ರೂಪ್‌ಗಳಿಗಿಂತ ಹೇಗೆ ಭಿನ್ನವಾಗಿದೆ?

ವಾಟ್ಸಾಪ್‌ ಕಮ್ಯೂನಿಟಿ ವಾಟ್ಸಾಪ್‌ ಗ್ರೂಪ್‌ಗಳಿಗಿಂತ ಹೇಗೆ ಭಿನ್ನವಾಗಿದೆ?

ವಾಟ್ಸಾಪ್ ಕಮ್ಯೂನಿಟಿಗಳು ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಛತ್ರಿಯಡಿಯಲ್ಲಿ ತರಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದೆ. ಇದೇ ರೀತಿಯಲ್ಲಿ ಕಮ್ಯೂನಿಟಿ ಕಳುಹಿಸುವ ಕಂಪ್ಲೀಟ್‌ ಅಪ್ಡೇಟ್‌ಗಳನ್ನು ಜನರು ಸ್ವೀಕರಿಸಬಹುದು. ಜೊತೆಗೆ ಕಮ್ಯೂನಿಟಿ ಗ್ರೂಪ್‌ನಲ್ಲಿ ಮುಖ್ಯವಾದವುಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಬಹುದು.

ವಾಟ್ಸಾಪ್‌ ಕಮ್ಯೂನಿಟಿ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ ಕಮ್ಯೂನಿಟಿ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ ನಲ್ಲಿನ ಪ್ರತಿಯೊಂದು ಕಮ್ಯೂನಿಟಿ ಗುಂಪುಗಳ ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಅಲ್ಲದೆ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಅನ್ನೊದನ್ನ ಆಯ್ಕೆ ಮಾಡಬಹುದು. ವಾಟ್ಸಾಪ್ ಹೇಳುವಂತೆ ದೊಡ್ಡ ಮತ್ತು ಹೆಚ್ಚು ಸಂಕೀರ್ಣವಾದ ಗ್ರೂಪ್ಸ್‌ ನಡುವಿನ ಸಂಭಾಷಣೆಗಳಿಗೆ ರಚನೆ ಮತ್ತು ಸಂಘಟನೆಯನ್ನು ಒದಗಿಸುತ್ತದೆ. ಇದರಿಂದ ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಜನರಿಗೆ ಮುಖ್ಯವಾದುದನ್ನು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಕಮ್ಯೂನಿಟಿಯಲ್ಲಿ ಶಾಲೆಯ ಪ್ರಾಂಶುಪಾಲರಿಗೆ ಶಾಲೆಯ ಎಲ್ಲಾ ಪೋಷಕರನ್ನು ಒಟ್ಟಿಗೆ ಸೇರಿಸಲು, ಓದಲೇಬೇಕಾದ ಅಪ್ಡೇಟ್ಸ್‌ಗಳನ್ನು ಶೇರ್‌ಮಾಡಲು ಮತ್ತು ನಿರ್ದಿಷ್ಟ ತರಗತಿಗಳ ಬಗ್ಗೆ ಗ್ರೂಪ್ಸ್‌ಗಳನ್ನು ಸೆಟ್‌ ಮಾಡಲು ಸುಲಭಗೊಳಿಸುತ್ತದೆ.

ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಸುರಕ್ಷತೆಗಳು

ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಸುರಕ್ಷತೆಗಳು

ವಾಟ್ಸಾಪ್‌ ಕಮ್ಯೂನಿಟಿ ಅಡ್ಮಿನ್ಸ್‌ ಹೊಸ ಪರಿಕರಗಳನ್ನು ಒಳಗೊಂಡಿರುತ್ತದೆ. ಎಲ್ಲರಿಗೂ ಕಳುಹಿಸಲಾದ ಪ್ರಕಟಣೆ ಸಂದೇಶಗಳು ಮತ್ತು ಯಾವ ಗುಂಪುಗಳನ್ನು ಸೇರಿಸಬಹುದು ಎಂಬುದರ ಮೇಲೆ ಕಂಟ್ರೋಲ್‌ಗಳನ್ನು ಒಳಗೊಂಡಿರುತ್ತದೆ. ಅವರ ಪ್ರೈವೇಟ್‌ ಗ್ರೂಪ್ಸ್‌ ನಡುವೆ ಕಮ್ಯೂನಿಟಿಗಳ ಅಡ್ಮಿನ್ಸ್‌ ಟೂಲ್ಸ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದರಲ್ಲಿ ಬಳಕೆದಾರರು ನಿಂದನೆಯನ್ನು ವರದಿ ಮಾಡಲು, ಖಾತೆಗಳನ್ನು ನಿರ್ಬಂಧಿಸಲು, ಕಮ್ಯೂನಿಟಿಯನ್ನು ತೊರೆಯಲು ಸಾಧ್ಯವಾಗುತ್ತದೆ.

ಅನ್ನು

ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಅನ್ನು ಸಹ ಪಡೆಯುತ್ತವೆ. ಇದಲ್ಲದೆ, ಬಳಕೆದಾರರ ಪ್ರೈವೆಸಿಯನ್ನು ರಕ್ಷಿಸಲು ವಾಟ್ಸಾಪ್‌ ಕಮ್ಯೂನಿಟಿ ಫೋನ್ ಸಂಖ್ಯೆಗಳನ್ನು ಹೈಡ್‌ ಮಾಡುತ್ತದೆ. ಟೆಲಿಗ್ರಾಮ್ ಚಾನೆಲ್‌ಗಳ ಮಾದರಿಯಲ್ಲಿ ವಾಟ್ಸಾಪ್‌ ಗ್ರೂಪಿನ ವಿಸ್ತಾರವನ್ನು ಮಿತಿಗೊಳಿಸುತ್ತದೆ. ಅದು ಗ್ರೂಪ್‌ಗಳ ಸಂಖ್ಯೆ ಅಥವಾ ಸಮುದಾಯದಲ್ಲಿನ ಒಟ್ಟು ಬಳಕೆದಾರರ ಸಂಖ್ಯೆಯಾಗಿರಬಹುದು.

ಸಂದೇಶದ

ಇದಲ್ಲದೆ ಸಂದೇಶದ ಗಾತ್ರ, ಅನ್ವೇಷಣೆ ಮತ್ತು ಫಾರ್ವರ್ಡ್ ಮಾಡುವಿಕೆಯ ಮೇಲೆ ಸಂವೇದನಾಶೀಲ ಮಿತಿಗಳನ್ನು ಪರಿಚಯಿಸುವುದಾಗಿ ವಾಟ್ಸಾಪ್‌ ಹೇಳಿಕೊಂಡಿದೆ. ಜೊತೆಗೆ ಕಮ್ಯೂನಿಟಿಯಲ್ಲಿ ದುರುಪಯೋಗದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಮುದಾಯದ ಹೆಸರು, ವಿವರಣೆ ಮತ್ತು ಬಳಕೆದಾರರ ವರದಿಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಎನ್‌ಕ್ರಿಪ್ಟ್ ಮಾಡದ ಮಾಹಿತಿಯನ್ನು ವಾಟ್ಸಾಪ್‌ ಬಳಸಲಿದೆ ಎಂದು ವರದಿಯಾಗಿದೆ. ಇದರೊಂದಿಗೆ ಬಳಕೆದಾರರು ಹೊಸ ಅನುಭವವನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Every Community on WhatsApp will have a description and menu of groups that people can choose to join.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X