ವಾಟ್ಸಾಪ್ ಪ್ಲಾಟ್‌ಫಾರ್ಮ್ ಸೇರಿದ ಹೊಸ ಟೂಲ್! ಏನೆಲ್ಲಾ ಉಪಯೋಗ!
ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ರೀತಿಯ ಅನುಕೂಲಗಳನ್ನು ಕಲ್ಪಿಸಿರುವ ವಾಟ್ಸಾಫ್ ಇದೀಗ ಹೊಸ ಪ್ರೈವೇಟ್ ನ್ಯೂಸ್‌ಲೆಟರ್ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ ಎನ್ನಲಾಗಿದೆ.
ಹೌದು, ವಾಟ್ಸಾಪ್ ಹೊಸ ಪ್ರೈವೇಟ್ ನ್ಯೂಸ್‌ಲೆಟರ್ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಮಾಹಿತಿಯನ್ನು ಪ್ರಸಾರ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ ಎನ್ನಲಾಗಿದೆ. ಹಾಗಾದ್ರೆ ಪ್ರೈವೇಟ್ ನ್ಯೂಸ್ ಲೆಟರ್ ಹೇಗೆ ಕಾರ್ಯನಿರ್ವಹಿಸಲಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಹೊಸದಾಗಿ ಪ್ರೈವೇಟ್ ನ್ಯೂಸ್‌ಲೆಟರ್ ಟೂಲ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದು ಜನರಿಗೆ ಉಪಯುಕ್ತ ಅಪ್ಡೇಟ್‌ಗಳನ್ನು ಪಡೆಯುವುದಕ್ಕೆ ಮಾರ್ಗದರ್ಶಿ ನೀಡಲಿದೆ ಎಂದು ಹೇಳಲಾಗಿದೆ. ಸ್ಟೇಟಸ್ ಪೇಜ್ ನ್ಯೂಸ್‌ಲೆಟರ್‌ಗಳಿಗಾಗಿ ಐಚ್ಛಿಕ ವಿಭಾಗವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಇದು ಪ್ರೈವೇಟ್ ಚಾಟ್‌ಗಳಿಂದ ಪ್ರತ್ಯೇಕವಾಗಿರಲಿದೆ. ಜೊತೆಗೆ ಪ್ರೈವೇಟ್ ಮೆಸೇಜ್ ಸೆಂಡಿಂಗ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ಗೆ ರಾಜಿಯಾಗುವುದಿಲ್ಲ ಎಂದು ವರದಿಯಾಗಿದೆ.
ಇದಲ್ಲದೆ, ವಾಟ್ಸಾಪ್ ಬಳಕೆದಾರರು ನ್ಯೂಸ್ ಲೆಟರ್ ಮೂಲಕ ತಾವು ಅನುಸರಿಸುವವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಬೇರೆ ಯಾರೂ ಕೂಡ ಅದನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಸದ್ಯ ವಾಬೇಟಾಇನ್ಫೋ ಮಾಡಿರುವ ವರದಿಯ ಪ್ರಕಾರ, ನ್ಯೂಸ್‌ಲೆಟರ್‌ಗಳು ಮಾಹಿತಿಯನ್ನು ಪ್ರಸಾರ ಮಾಡಲು ಒಂದರಿಂದ ಹಲವು ಡಿವೈಸ್‌ಗಳು ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಗುಂಪುಗಳಿಂದ ಅಪ್ಡೇಟ್‌ಗಳನ್ನು ಸುಲಭವಾಗಿ ಸ್ವಿಕರಿಸುವುದಕ್ಕೆ ಅವಕಾಶ ನೀಡಲಿದೆ. ನ್ಯೂಸ್ ಲೆಟರ್‌ನಿಂದ ಬಳಕೆದಾರರು ಅಂತಿಮವಾಗಿ ಅವರು ಯಾರಿಂದ ಸುದ್ದಿ ಕೇಳಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಬಹುದಾಗಿದೆ.

ಇನ್ನು ವಾಟ್ಸಾಪ್ ಇತ್ತೀಚಿಗೆ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೊಸ ಫೀಚರ್ಸ್‌ಗಳ ಸೇರ್ಪಡೆ ಮಾಡಿದೆ. ಬಳಕೆದಾರರಿಗೆ ಸ್ಟೇಟಸ್ ರಿಯಾಕ್ಷನ್, ಸ್ಟೇಟಸ್ ಅಪ್ಡೇಟ್ ವಿಭಾಗದಲ್ಲಿ ಹೊಸ ಆಯ್ಕೆಗಳನ್ನು ನೀಡಿದೆ. ಇದರಿಂದ ವಾಟ್ಸಾಫ್ ಸ್ಟೇಟಸ್ ಅಪ್ಡೇಟ್ ಮಾಡುವ ಬಳಕೆದಾರರು ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಅಪ್ಡೇಟ್ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಆವೃತ್ತಿಗಳಲ್ಲಿಯೂ ಕೂಡ ಲಭ್ಯವಾಗಲಿದೆ.
ವಾಟ್ಸಾಪ್ ಪರಿಚಯಿಸಿರುವ ಹೊಸ ಆಯ್ಕೆಗಳಲ್ಲಿ ನಿಮ್ಮ ಸ್ಟೇಟಸ್ ಅನ್ನು ಯಾರೆಲ್ಲಾ ನೋಡಬಹುದು ಎಂದು ಆಯ್ಕೆ ಮಾಡುವ ಆಯ್ಕೆ ನೀಡಲಾಗಿದೆ. ಇದರ ವಿಶೇಷತೆ ಏನೆಂದರೆ ಪ್ರತಿ ಸ್ಟೇಟಸ್‌ಗೀ ಕೂಡ ನೀವು ಪ್ರೈವೆಸಿ ಸ್ಟೆಟ್ಟಿಂಗ್ಸ್ ಅನ್ನು ಅಪ್ಡೇಟ್ ಮಾಡಬಹುದು. ಅಲ್ಲದೆ ಪರ್ಸನಲ್ ಸ್ಟೇಟಸ್ ಅನ್ನು ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಕಾಣುವಂಯೆ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.

ಇದಲ್ಲದೆ ವಾಟ್ಸಾಪ್ ಇದೇ ಮೊದಲ ಬಾರಿಗೆ ಬಳಕೆದಾರರಿಗೆ ಸ್ಟೇಟಸ್‌ನಲ್ಲಿ ವಾಯ್ಸ್ ನೋಟ್ ಅನ್ನು ಪೋಸ್ಟ್ ಮಾಡಲು ಅವಕಾಶ ನೀಡಿದೆ. ಅಂದರೆ ವಾಯ್ಸ್ ಸ್ಟೇಟಸ್ ಪೋಸ್ಟ್ ಮಾಡಲು ವಾಟ್ಸಾಪ್‌ನಲ್ಲಿ ಅವಕಾಶ ಲಭ್ಯವಿದೆ. ಅದರಂತೆ ವಾಟ್ಸಾಪ್‌ನಲ್ಲಿ ನೀವು 30 ಸೆಕೆಂಡುಗಳವರೆಗೆ ವಾಯ್ಸ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಬಹುದಾಗಿದೆ. ಅಲ್ಲದೆ ಬಳಕೆದಾರರು ವಾಯ್ಸ್ ಸ್ಟೇಟಸ್ ಅನ್ನು ಕೆಲವು ಆಯ್ದ ಕಂಟ್ಯಾಕ್ಟ್‌ಗಳೊಂದಿಗೆ ಮಾತ್ರ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.
ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡು ಆಯ್ಕೆಯಲ್ಲಿ ಹೊಸ ವಿಧಾನಗಳನ್ನು ಪರಿಚಯಿಸಲಾಗಿದೆ. ಅದರಂತೆ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡುವಾಗ ಎಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡಬಹುದು. ಇದರಲ್ಲಿ ಎಂಟು ಎಮೋಜಿಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇಲ್ಲವೇ ಟೆಕ್ಸ್ಟ್ ಮೆಸೇಜ್, ವಾಯ್ಸ್ ಮೆಸೇಜ್, ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ವಾಟ್ಸಾಪ್ ಸ್ಟೇಟಸ್‌ಗೆ ರಿಪ್ಲೇ ಮಾಡಬಹುದಾಗಿದೆ.


Click it and Unblock the Notifications








